• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಬಿಗ್‌ಬಾಸ್‌ ಕನ್ನಡ 13ಕ್ಕೆ ರಕ್ಷಿತಾ ಶೆಟ್ಟಿ ಎಂಟ್ರಿ; ಗಿಲ್ಲಿ ನಟನನ್ನೂ ಕರೆಸಿ ಅಂತ ಫ್ಯಾನ್ಸ್‌ ಡಿಮ್ಯಾಂಡ್‌!

ಬಿಗ್‌ಬಾಸ್‌ ಕನ್ನಡ 13ಕ್ಕೆ ರಕ್ಷಿತಾ ಶೆಟ್ಟಿ ಎಂಟ್ರಿ; ಗಿಲ್ಲಿ ನಟನನ್ನೂ ಕರೆಸಿ ಅಂತ ಫ್ಯಾನ್ಸ್‌ ಡಿಮ್ಯಾಂಡ್‌!

BBK: ಬಿಗ್‌ಬಾಸ್‌ ಕನ್ನಡ ಸೀಸನ್‌ 13ರಲ್ಲಿ ಟಿಆರ್‌ಪಿ ಹೆಚ್ಚಿಸಲು ಒಂದಾದ ಮೇಲೊಂದು ಪ್ರಯೋಗಗಳು ನಡೆಯುತ್ತಿವೆ. ಈ ನಡುವೆ ಬಿಗ್‌ಬಾಸ್‌ ಕನ್ನಡ ಸೀಸನ್‌ 12ರ ರನ್ನರ್‌ ಅಪ್‌ ರಕ್ಷಿತಾ ಶೆಟ್ಟಿ ಮತ್ತೆ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ನಡುವೆ ಕಳೆದ ಸೀಸನ ವಿನ್ನರ್‌ ಗಿಲ್ಲಿ ನಟ ಅವರನ್ನು ಕರೆಸುವಂತೆ ಅಭಿಮಾನಿಗಳು ಡಿಮ್ಯಾಂಡ್‌ ಕ್ರಿಯೇಟ್‌ ಮಾಡಿದ್ದಾರೆ.

Written ByRamya. R. Gowda
Published: Oct 28, 2026, 01:45 PM IST|Updated: Oct 28, 2026, 02:03 PM IST
joinshare
ಬಿಗ್‌ಬಾಸ್‌ ಕನ್ನಡ 13ಕ್ಕೆ ರಕ್ಷಿತಾ ಶೆಟ್ಟಿ ಎಂಟ್ರಿ; ಗಿಲ್ಲಿ ನಟನನ್ನೂ ಕರೆಸಿ ಅಂತ ಫ್ಯಾನ್ಸ್‌ ಡಿಮ್ಯಾಂಡ್‌!

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
‘ಹಳೆಯ ನೆನಪುಗಳು ನನ್ನನ್ನು ಬಿಡುತ್ತಿಲ್ಲ’: ಚಂದನ್ ಶೆಟ್ಟಿಯ ಹಾಡಿನ ಬೆನ್ನಲ್ಲೇ ನಿವೇದಿತಾ ಗೌಡ ಪೋಸ್ಟ್ ವೈರಲ್

‘ಹಳೆಯ ನೆನಪುಗಳು ನನ್ನನ್ನು ಬಿಡುತ್ತಿಲ್ಲ’: ಚಂದನ್ ಶೆಟ್ಟಿಯ ಹಾಡಿನ ಬೆನ್ನಲ್ಲೇ ನಿವೇದಿತಾ ಗೌಡ ಪೋಸ್ಟ್ ವೈರಲ್

2

ಬಿಗ್‌ಬಾಸ್‌ ಕನ್ನಡ 13ಕ್ಕೆ ರಕ್ಷಿತಾ ಶೆಟ್ಟಿ ಎಂಟ್ರಿ; ಗಿಲ್ಲಿ ನಟನನ್ನೂ ಕರೆಸಿ ಅಂತ ಫ್ಯಾನ್ಸ್‌ ಡಿಮ್ಯಾಂಡ್‌!

3

10,000mAh ಬ್ಯಾಟರಿ, 165Hz ಡಿಸ್‌ಪ್ಲೇಯೊಂದಿಗೆ Redmi K100 ಬಿಡುಗಡೆ! ಬೆಲೆ, ಫೀಚರ್ಸ್ ಇಲ್ಲಿವೆ

4

ಎಂಎಲ್‌ಸಿ ಚುನಾವಣೆ ಸೋಲಿಗೆ ನಮ್ಮವರೇ ಸರಿಯಾಗಿ ಕೆಲಸ ಮಾಡಿಲ್ಲ: ಕೆಎನ್ ರಾಜಣ್ಣ

5

ಸ್ಟಿಂಗ್ ಆಪರೇಷನ್ ತನಿಖೆ ವಿಳಂಬಕ್ಕೆ ಸಿದ್ದರಾಮಯ್ಯ ಗರಂ! ಸಿಸಿಬಿ ಅಧಿಕಾರಿಗಳಿಗೆ ಫುಲ್ ಕ್ಲಾಸ್!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

BBK : ಬಿಗ್‌ಬಾಸ್‌ ಕನ್ನಡ ಸೀಸನ್‌ 13ರಲ್ಲಿ ಟಿಆರ್‌ಪಿ ಹೆಚ್ಚಿಸಲು ಒಂದಾದ ಮೇಲೊಂದು ಪ್ರಯೋಗಗಳು ನಡೆಯುತ್ತಿವೆ. ವೈಲ್ಡ್‌ ಕಾರ್ಡ್‌ ಎಂಟ್ರಿ, ರೋಚಕ ಟಾಸ್ಕ್‌ಗಳ ನಡುವೆಯೂ ಶೋಗೆ ಹೊಸ ಕಳೆ ಬರಬೇಕಿದೆ. ಈ ನಡುವೆ ಬಿಗ್‌ಬಾಸ್‌ ಕನ್ನಡ ಸೀಸನ್‌ 12ರ ರನ್ನರ್‌ ಅಪ್‌ ರಕ್ಷಿತಾ ಶೆಟ್ಟಿ ಮತ್ತೆ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕೈಯಲ್ಲಿ ಸೂಟ್‌ಕೇಸ್‌ ಹಿಡಿದು ಬಂದಿರುವ ರಕ್ಷಿತಾ, ಮನೆಯೊಳಗೆ ಹೊಸ ಟ್ವಿಸ್ಟ್‌ ತಂದಿದ್ದಾರೆ. ಇದರ ಬೆನ್ನಲ್ಲೇ ವೀಕ್ಷಕರು ಗಿಲ್ಲಿ ನಟನನ್ನೂ ಮತ್ತೆ ಬಿಗ್‌ಬಾಸ್‌ ಮನೆಗೆ ಕರೆಸಿ ಅಂತ ಡಿಮ್ಯಾಂಡ್‌ ಮಾಡ್ತಿದ್ದಾರೆ. ಹಾಗಾದ್ರೆ, ರಕ್ಷಿತಾ ಎಂಟ್ರಿ ಹಿಂದಿನ ಕಥೆಯೇನು? ಗಿಲ್ಲಿ ನಟನ ಎಂಟ್ರಿಗೆ ಅವಕಾಶ ಇದೆಯಾ? ಈ ಕುರಿತ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

ಬಿಗ್‌ಬಾಸ್‌ ಮನೆಗೆ ರಕ್ಷಿತಾ ರೀ ಎಂಟ್ರಿ!
ಬಿಗ್‌ಬಾಸ್‌ ಕನ್ನಡ ಸೀಸನ್‌ 13ರಲ್ಲಿ ಈಗ ಹೊಸ ಸಂಚಲನ ಶುರುವಾಗಿದೆ. ಸೀಸನ್‌ 12ರಲ್ಲಿ ತಮ್ಮದೇ ಆದ ಮಾತಿನ ಶೈಲಿ, ಮುಗ್ಧ ವರ್ತನೆ ಮತ್ತು ಪ್ರಬುದ್ಧ ಮಾತುಗಳಿಂದ ವೀಕ್ಷಕರ ಮನ ಗೆದ್ದಿದ್ದ ರಕ್ಷಿತಾ ಶೆಟ್ಟಿ, ಇದೀಗ ಮತ್ತೆ ಬಿಗ್‌ಬಾಸ್‌ ಮನೆಗೆ ಕಾಲಿಟ್ಟಿದ್ದಾರೆ. ಕೈಯಲ್ಲಿ ಸೂಟ್‌ಕೇಸ್‌ ಹಿಡಿದು ಬಂದಿರುವ ರಕ್ಷಿತಾ, ಈ ಬಾರಿ ಎಷ್ಟು ದಿನ ಮನೆಯಲ್ಲಿರ್ತಾರೆ ಅನ್ನೋ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.

ಮದುವೆ ಟಾಸ್ಕ್‌ನಲ್ಲಿ ಹೊಸ ಟ್ವಿಸ್ಟ್‌!
ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ಮದುವೆ ಟಾಸ್ಕ್‌ ನಡೆಯುತ್ತಿದೆ. ಸೌಂದರ್ಯಾ ಶೆಟ್ಟಿ ಮದುವೆ ಹುಡುಗಿಯಾಗಿದ್ದು, ಅವರ ಮನವೊಲಿಸಿ ಮದುವೆ ಮಾಡಿಸುವ ಜವಾಬ್ದಾರಿ ಸ್ಪರ್ಧಿಗಳ ಮೇಲಿದೆ. ಈ ಟಾಸ್ಕ್‌ಗೆ ರಕ್ಷಿತಾ ಶೆಟ್ಟಿ ಕೂಡ ಎಂಟ್ರಿ ಕೊಟ್ಟಿದ್ದಾರೆ. ಟಾಸ್ಕ್‌ನ ಕಥೆಯಲ್ಲಿ ಪ್ರಶಾಂತಿ ಮತ್ತು ತಾಂಡವ್‌ ಅವರ ಮಗಳಾಗಿ ಸೌಂದರ್ಯಾ ಕಾಣಿಸಿಕೊಂಡರೆ, ರಕ್ಷಿತಾ ಕೂಡ ಮಗಳ ಪಾತ್ರದಲ್ಲಿ ಬಂದಿದ್ದಾರೆ. ಪ್ರಶಾಂತಿ ಹಿಂದೆ ಎಂಬಿಎ ಓದುವಾಗ ಪ್ರೀತಿಯಲ್ಲಿದ್ದ ವ್ಯಕ್ತಿಯಿಂದ ಹುಟ್ಟಿದ ಮಗು ರಕ್ಷಿತಾ ಎಂಬಂತೆ ಕಥೆಯಲ್ಲಿ ಟ್ವಿಸ್ಟ್‌ ನೀಡಲಾಗಿದೆ. ಹೀಗಾಗಿ ಈ ವಾರದ ಮದುವೆ ಟಾಸ್ಕ್‌ ಮತ್ತಷ್ಟು ರಂಗೇರೋ ನಿರೀಕ್ಷೆಯಿದೆ.

ಗಿಲ್ಲಿ ನಟನನ್ನೂ ಕರೆಸಿ ಅಂತ ಫ್ಯಾನ್ಸ್‌ ಡಿಮ್ಯಾಂಡ್‌!
ಇನ್ನು ರಕ್ಷಿತಾ ಶೆಟ್ಟಿ ಎಂಟ್ರಿಯಿಂದ ಖುಷಿಯಾಗಿರುವ ಅಭಿಮಾನಿಗಳು, ಗಿಲ್ಲಿ ನಟನನ್ನೂ ಬಿಗ್‌ಬಾಸ್‌ ಮನೆಗೆ ಕರೆಸಿ ಅಂತ ಒತ್ತಾಯಿಸುತ್ತಿದ್ದಾರೆ. ಕಳೆದ ಸೀಸನ್‌ನಲ್ಲಿ ಗಿಲ್ಲಿ ನಟ ತಮ್ಮ ಹಾಸ್ಯ ಮತ್ತು ವಿಶಿಷ್ಟ ಶೈಲಿಯಿಂದ ದೊಡ್ಡ ಮಟ್ಟದ ಅಭಿಮಾನಿ ಬಳಗ ಸಂಪಾದಿಸಿದ್ದರು. ಅವರ ಜೊತೆ ರಕ್ಷಿತಾ ಶೆಟ್ಟಿ ಕೂಡ ಪ್ರೇಕ್ಷಕರ ಗಮನ ಸೆಳೆದಿದ್ದರು. ಇದೀಗ ಸೀಸನ್‌ 13ರಲ್ಲಿ ರಕ್ಷಿತಾ ಮತ್ತೆ ಕಾಣಿಸಿಕೊಂಡ ಬೆನ್ನಲ್ಲೇ ಗಿಲ್ಲಿ ನಟನ ಎಂಟ್ರಿ ಬಗ್ಗೆಯೂ ಚರ್ಚೆ ಜೋರಾಗಿದೆ. ಆದರೆ ಗಿಲ್ಲಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದರಿಂದ ಅವರ ಆಗಮನದ ಬಗ್ಗೆ ಸದ್ಯಕ್ಕೆ ಖಚಿತ ಮಾಹಿತಿ ಇಲ್ಲ.

ಈ ವಾರ ಮನೆಯಿಂದ ಗೇಟ್‌ ಪಾಸ್‌ ಯಾರಿಗೆ?
ಇನ್ನೊಂದೆಡೆ, ಬಿಗ್‌ಬಾಸ್‌ ಮನೆಯೊಳಗೆ ಜಗಳ ಮತ್ತು ಪೈಪೋಟಿ ಮುಂದುವರಿದಿದೆ. ಯಶಸ್‌ ಮತ್ತು ಗಗನ್‌ ನಡುವಿನ ಕಿತ್ತಾಟವೂ ಚರ್ಚೆಯಲ್ಲಿದೆ. ಕಳೆದ ವಾರ ಲಕ್ಷ್ಮೀ ಗೌಡ ಮನೆಯಿಂದ ಎಲಿಮಿನೇಟ್‌ ಆಗಿದ್ದರು. ಈಗ ಈ ವಾರ ಯಾರು ಹೊರಹೋಗಬಹುದು ಅನ್ನೋ ಕುತೂಹಲ ಹೆಚ್ಚಾಗಿದೆ. ಜಗದೀಶ್‌ ಎಲಿಮಿನೇಷನ್‌ ಅಪಾಯದಲ್ಲಿರಬಹುದು ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ ಅಂತಿಮವಾಗಿ ಯಾರು ಮನೆಯಿಂದ ಹೊರಹೋಗುತ್ತಾರೆ ಅನ್ನೋದು ಬಿಗ್‌ಬಾಸ್‌ ಘೋಷಣೆಯ ಬಳಿಕವಷ್ಟೇ ಸ್ಪಷ್ಟವಾಗಲಿದೆ.

ಒಟ್ಟಿನಲ್ಲಿ, ರಕ್ಷಿತಾ ಶೆಟ್ಟಿ ಎಂಟ್ರಿಯಿಂದ ಬಿಗ್‌ಬಾಸ್‌ ಕನ್ನಡ ಸೀಸನ್‌ 13ಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದೆ. ಈಗ ಅಭಿಮಾನಿಗಳ ಕಣ್ಣು ಗಿಲ್ಲಿ ನಟನ ಎಂಟ್ರಿ ಮೇಲಿದೆ. ರಕ್ಷಿತಾ ಬಂದಾಗಿದೆ, ಗಿಲ್ಲಿ ಕೂಡ ಬರ್ತಾರಾ? ಅಥವಾ ಈ ಸೀಸನ್‌ನ ಸ್ಪರ್ಧಿಗಳೇ ಆಟದಲ್ಲಿ ಹೊಸ ದಾಖಲೆ ಬರೆಯುತ್ತಾರಾ? ಕಾದು ನೋಡಬೇಕಿದೆ.

 

 

Add Zee News as a Preferred Source
TAGS:
Bigg Boss Kannada Season 13