SOCIAL MEDIA

Newsletter

PARTNER SITES
Select Language Select State

BBK 13 : ಡೈಮಂಡ್ ಹೈಸ್ಟ್ ಟಾಸ್ಕ್‌ನಲ್ಲಿ ಲೂಟಿಕೋರರ ಅಧಿಪತ್ಯ, ಕಾವಲುಗಾರರು ಕಂಗಾಲು

ಬಿಗ್ ಬಾಸ್ ಕನ್ನಡ 13 ಹೊಸ ಹೊಸ ಟಾಸ್ಕ್‌ಗಳ ಮೂಲಕ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಇತ್ತೀಚಿನ ಎಪಿಸೋಡ್‌ನಲ್ಲಿ ನಡೆದ ಹೈ-ವೋಲ್ಟೇಜ್ 'ಡೈಮಂಡ್ ಹೈಸ್ಟ್' ಟಾಸ್ಕ್ ಮನೆಯಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಎದುರಾಳಿಗಳಿಗೆ ಚಾನ್ಸ್ ನೀಡದೆ, ಮಾಸ್ಟರ್ ಪ್ಲ್ಯಾನ್ ಮೂಲಕ ಲೂಟಿಕೋರರ ತಂಡ ಆಡಿದ ಆಟದ ವೈಖರಿಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

Written By Krishna NK
Published: Oct 23, 2026, 03:12 PM IST | Updated: Oct 23, 2026, 03:14 PM IST
Image Credit: Bigg Boss Kannada season 13
Join

Bigg Boss Kannada 13 : ಬಿಗ್ ಬಾಸ್ ಕನ್ನಡ ಸೀಸನ್ 13 ಈಗ ರೋಚಕ ಹಂತ ತಲುಪಿದೆ. ದಿನದಿಂದ ದಿನಕ್ಕೆ ಆಟದ ರಂಗು ಕಾವೇರುತ್ತಿದ್ದು, ಸ್ಪರ್ಧಿಗಳು ತಮ್ಮ ಬುದ್ಧಿವಂತಿಕೆ ಹಾಗೂ ಆಟದ ವೈಖರಿಯಿಂದ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ಎಪಿಸೋಡ್‌ನಲ್ಲಿ ನಡೆದ 'ಡೈಮಂಡ್ ಹೈಸ್ಟ್' ಟಾಸ್ಕ್ ಭಾರೀ ಸಂಚಲನ ಸೃಷ್ಟಿಸಿದ್ದು, ಈ ಟಾಸ್ಕ್‌ನಲ್ಲಿ ಲೂಟಿಕೋರರ ತಂಡದ ಆಟ ವಿಧಾನ ಮತ್ತು ಪರ್ಫೆಕ್ಟ್ ಕೋ ಆರ್ಡಿನೇಷನ್ ಸದ್ಯ ಎಲ್ಲೆಡೆ ಹಾಟ್‌ ಟಾಪಿಕ್ ಆಗಿದೆ.

ಹೌದು.. ಟಾಸ್ಕ್ ಆರಂಭವಾದಾಗಿನಿಂದಲೂ ಕಾವಲುಗಾರರು ತಂಡಕ್ಕಿಂತ ಲೂಟಿಕೋರ ತಂಡದ ಸದಸ್ಯರು ತೋರಿದ ಚಾಣಾಕ್ಷತನ ಮತ್ತು ಮಾಸ್ಟರ್ ಪ್ಲ್ಯಾನ್ ನಿಜಕ್ಕೂ ಅದ್ಭುತವಾಗಿತ್ತು. ಡೈಮಂಡ್ ಕದಿಯುವ ಈ ಸವಾಲಿನ ಆಟದಲ್ಲಿ ಲಕ್ಷ್ಮೀ, ಆಸಿಯಾ ಮತ್ತು ಸೌಂದರ್ಯ ತಮ್ಮ ಗೇಮ್‌ಪ್ಲೇ ಮೂಲಕ ಎದುರಾಳಿಗಳಿಗೆ ಶಾಕ್‌ ನೀಡಿದರು. ಕೇವಲ ಪ್ಲ್ಯಾನ್ ಮಾಡುವುದಷ್ಟೇ ಅಲ್ಲದೆ, ಪ್ರತಿಯೊಂದು ಹಂತದಲ್ಲೂ ಅವರು ಜಾಗರೂಕತೆಯಿಂದ ಹೆಜ್ಜೆ ಇಟ್ಟರು. ಇತ್ತ ತಾಂಡವ್ ತಮ್ಮ ಮಾತುಗಾರಿಕೆಯಿಂದಲೇ ಕಾವಲುಗಾರರ ತಂಡವನ್ನು ಸಂಪೂರ್ಣವಾಗಿ ಮ್ಯಾನಿಪುಲೇಟ್ ಮಾಡಿದರು. ಸೆಕ್ಯುರಿಟಿ ಟೀಮ್‌ನೊಳಗೆ ಗೊಂದಲ ಸೃಷ್ಟಿಸಿ, ಅವರ ಗಮನವನ್ನು ಬೇರೆಡೆಗೆ ಸೆಳೆಯುವಲ್ಲಿ ಯಶಸ್ವಿಯಾದರು.

ಸೌಂದರ್ಯ ಡೈಮಂಡ್ ಅಡಗಿಸಿಟ್ಟ ರೀತಿ ಈ ಆಟದ ಪ್ರಮುಖ ಹೈಲೈಟ್‌ಗಳಲ್ಲಿ ಒಂದು ಅಂತ ಹೇಳಬಹುರು. ಯಾರೂ ಊಹಿಸದ ರೀತಿಯಲ್ಲಿ ಕ್ರೀಮ್ ಬಾಕ್ಸ್‌ನಲ್ಲಿ ಡೈಮಂಡ್ ಅನ್ನು ಬಚ್ಚಿಟ್ಟಿದ್ದು ವೀಕ್ಷಕರ ಹುಬ್ಬೇರಿಸುವಂತೆ ಮಾಡಿತು. ಇಷ್ಟು ಮಾತ್ರವಲ್ಲದೆ, ಡೈಮಂಡ್ ಕಳ್ಳತನವಾಗಿರುವುದು ಸೆಕ್ಯುರಿಟಿ ತಂಡಕ್ಕೆ ಗೊತ್ತಾದ ಮೇಲೂ, ಲೂಟಿಕೋರರು ಆತಂಕಗೊಳ್ಳದೆ ಪರಿಸ್ಥಿತಿಯನ್ನು ಅತ್ಯಂತ ಚತುರತೆಯಿಂದ ಹ್ಯಾಂಡಲ್ ಮಾಡಿದರು. ಎದುರಾಳಿಗಳ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಟಿಸಿ, ಅಸಲಿ ವಿಷಯದಿಂದ ಅವರ ಗಮನವನ್ನು ಬೇರೆ ಕಡೆಗೆ ತಿರುಗಿಸುವಲ್ಲಿ ಲೂಟಿಕೋರರು ತೋರಿದ ಜಾಣ್ಮೆ ಪ್ರೇಕ್ಷಕರಿಗೆ ಬಲು ಇಷ್ಟವಾಯಿತು.

ಇನ್ನು ಕೆಲವೇ ಸೆಕೆಂಡ್‌ಗಳ ಅಂತರದಲ್ಲಿ ಕ್ರೌನ್ (ಕಿರೀಟ) ಬದಲಾಯಿಸಿದ ಕ್ಷಣವಂತೂ ಇಡೀ ಎಪಿಸೋಡ್‌ನ ರೋಚಕ ಕ್ಷಣಗಳಲ್ಲಿ ಒಂದಾಗಿತ್ತು. ಇಲ್ಲಿ ತಂಡದ ವೇಗ, ಸಮಯಪ್ರಜ್ಞೆ ಮತ್ತು ಒಗ್ಗಟ್ಟು ಎದ್ದು ಕಾಣುತ್ತಿತ್ತು. ತಮ್ಮ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯಗಳು ಹಾಗೂ ಮನಸ್ತಾಪಗಳನ್ನು ಸಂಪೂರ್ಣವಾಗಿ ಬದಿಗೊತ್ತಿ, ಕೇವಲ ಟಾಸ್ಕ್ ಗೆಲ್ಲುವುದೊಂದೇ ಗುರಿಯಾಗಿ ಇಟ್ಟುಕೊಂಡು ಈ ತಂಡ ಆಡಿದ ಆಟ ಮೆಚ್ಚುಗೆಗೆ ಪಾತ್ರವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ವಾರದ ಡೈಮಂಡ್ ಹೈಸ್ಟ್ ಟಾಸ್ಕ್‌ನಲ್ಲಿ ತಾಂಡವ್, ಸೌಂದರ್ಯ ಮತ್ತು ಆಸಿಯಾ ತಮ್ಮ ಸ್ಮಾರ್ಟ್ ಗೇಮ್‌ಪ್ಲೇಯಿಂದ ಮಿಂಚಿದರೆ, ಲಕ್ಷ್ಮೀ ಕೂಡ ತಮ್ಮದೇ ಆದ ಅತ್ಯುತ್ತಮ ಕೊಡುಗೆಯನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಲೂಟಿಕೋರರ ಈ ಪ್ಲ್ಯಾನಿಂಗ್, ಟೀಮ್‌ವರ್ಕ್ ಮತ್ತು ಮನರಂಜನಾತ್ಮಕ ಧಾಟಿಯನ್ನು ನೋಡುತ್ತಿದ್ದರೆ, "ಈ ವಾರ BBK13 ಮನೆಯಲ್ಲಿ ಪೂರ್ತಿ ಲೂಟಿಕೋರರದ್ದೇ ಹವಾ" ಎಂದು ಬಲವಾಗಿ ಹೇಳಬಹುದು. ಮುಂದಿನ ದಿನಗಳಲ್ಲಿ ಈ ಆಟ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES