SOCIAL MEDIA

Newsletter

PARTNER SITES
Select Language Select State

ಬಿಗ್‌ಬಾಸ್‌ನಿಂದ ಹೊರಬಂದ ಮಂಜ.. ಕೇವಲ 5 ವಾರಗಳ ಆಟಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತೇ?

manja bigg boss remuneration: ಬಿಗ್‌ ಬಾಸ್‌ ಕನ್ನಡ ಸೀಸನ್ 13 ರ ಮನೆಯಿಂದ ಹೊರಬಂದಿರುವ ಮಂಜ ರೆಡ್‌ ಕಾರ್ಡ್‌ ಪಡೆದ ಕಾರಣ 5 ವಾರಕ್ಕೆ ತಮ್ಮ ಆಟವನ್ನು ಕೊನೆಗೊಳಿಸಿದ್ದಾರೆ. ಇದರ ನಡುವೆ ಮಂಜ ಅವರ ಸಂಭಾವನೆ ಕುರಿತ ಚರ್ಚೆ ಶುರುವಾಗಿದೆ. ಈ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ..

Written By Chetana Devarmani
Published: Oct 11, 2026, 11:22 PM IST | Updated: Oct 11, 2026, 11:23 PM IST
Join

Bigg Boss Manja Remuneration: ಬಿಗ್‌ಬಾಸ್ ಕನ್ನಡ ಸೀಸನ್ 13ರ ಮನೆಯಿಂದ ಹೊರಬಂದಿರುವ ಮಂಜ ರೆಡ್‌ ಕಾರ್ಡ್‌ ಪಡೆದ ಕಾರಣ ಐದು ವಾರಗಳಲ್ಲೇ ತಮ್ಮ ಆಟವನ್ನು ಕೊನೆಗೊಳಿಸಿದ್ದಾರೆ. ಟಾಸ್ಕ್‌ ವೇಳೆ ತಾಂಡವ್‌ ರಾಮ್‌ ಅವರೊಂದಿಗೆ ನಡೆದ ಸಂಘರ್ಷ ಹಾಗೂ ಕಾಲಿನಿಂದ ಒದ್ದ ಘಟನೆ ಮಂಜ ಅವರ ಎಲಿಮಿನೇಷನ್‌ಗೆ ಪ್ರಮುಖ ಕಾರಣವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಮಂಜ ಅವರ ಸಂಭಾವನೆ ಕುರಿತ ಚರ್ಚೆ ಶುರುವಾಗಿದೆ. ಈ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ತಮ್ಮದೇ ಶೈಲಿಯಿಂದ ಗಮನ ಸೆಳೆದಿರುವ ಮಂಜ ಅವರ ಸಂಭಾವನೆ ಎಷ್ಟು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳು ಪಡೆಯುವ ಸಂಭಾವನೆ, ಬಹುಮಾನ ಮತ್ತು ಇತರ ಸೌಲಭ್ಯಗಳ ಬಗ್ಗೆ ಪ್ರೇಕ್ಷಕರು ಆಸಕ್ತಿ ತೋರಿಸುತ್ತಿದ್ದಾರೆ. ಈ ನಡುವೆ ಮಂಜ ಅವರಿಗೆ ವಾರದ ಸಂಭಾವನೆಯ ಜೊತೆಗೆ ಪ್ರಾಯೋಜಕರಿಂದ 3 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕರೆ ಅವರ ಒಟ್ಟು ಗಳಿಕೆ ಎಷ್ಟಾಗಬಹುದು ಎಂಬ ಲೆಕ್ಕಾಚಾರವೂ ಇಲ್ಲಿದೆ.

ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಸಾಮಾನ್ಯವಾಗಿ ಅವರು ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಸಂಭಾವನೆ ನೀಡಲಾಗುತ್ತದೆ. ಸ್ಪರ್ಧಿಯ ಜನಪ್ರಿಯತೆ, ಕಾರ್ಯಕ್ರಮದಲ್ಲಿ ಉಳಿಯುವ ಅವಧಿ ಮತ್ತು ಒಪ್ಪಂದದ ಷರತ್ತುಗಳನ್ನು ಆಧರಿಸಿ ಈ ಮೊತ್ತ ಬದಲಾಗಬಹುದು.

ಒಂದು ವೇಳೆ ಮಂಜ ಅವರಿಗೆ ವಾರಕ್ಕೆ 40 ಸಾವಿರ ರೂಪಾಯಿವರೆಗೆ ಸಂಭಾವನೆ ನಿಗದಿಯಾಗಿದ್ದರೆ, ಐದು ವಾರಗಳ ಕಾಲ ಬಿಗ್‌ಬಾಸ್ ಮನೆಯಲ್ಲಿ ಉಳಿದಿದ್ದಕ್ಕೆ ಒಟ್ಟು ಸುಮಾರು 2 ಲಕ್ಷ ರೂಪಾಯಿವರೆಗೆ ಸಂಭಾವನೆ ಸಿಗಬಹುದು.

ಇನ್ನು ಪ್ರಾಯೋಜಕರಿಂದ ದೊರೆಯುವ 3 ಲಕ್ಷ ರೂಪಾಯಿ ನಗದು ಬಹುಮಾನವನ್ನು ಸೇರಿಸಿದರೆ, ಮಂಜ ಅವರಿಗೆ ಬಿಗ್‌ಬಾಸ್ ಮನೆಯಿಂದ ಒಟ್ಟು 5 ಲಕ್ಷ ರೂಪಾಯಿ ಹಣ ಸಿಗಬಹುದು ಎಂದು ಅಂದಾಜಿಸಬಹುದಾಗಿದೆ. ಆದರೆ, ಈ ಸಂಭಾವನೆ ಮತ್ತು ಬಹುಮಾನದ ಮೊತ್ತ ಅಧಿಕೃತವಾಗಿ ದೃಢಪಟ್ಟಿಲ್ಲ.

ಮಂಜಗೆ ರೆಡ್‌ ಕಾರ್ಡ್‌ ನೀಡಿದ್ದೇಕೆ?

ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್‌ ನಡೆಯುವ ಸಂದರ್ಭದಲ್ಲಿ ಮಂಜ ಹಾಗೂ ತಾಂಡವ್‌ ರಾಮ್‌ ನಡುವೆ ಸಂಘರ್ಷ ನಡೆದಿತ್ತು. ಈ ವೇಳೆ ಮಂಜ ತಾಂಡವ್‌ ರಾಮ್‌ ಅವರನ್ನು ಕಾಲಿನಿಂದ ಒದ್ದಿದ್ದಾರೆ ಎನ್ನಲಾದ ಘಟನೆ ವಿವಾದಕ್ಕೆ ಕಾರಣವಾಯಿತು. ಮನೆಯೊಳಗಿನ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಮಂಜಗೆ ರೆಡ್‌ ಕಾರ್ಡ್‌ ನೀಡಲಾಗಿದ್ದು, ಅವರು ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ಹೀಗಾಗಿ ಕಡಿಮೆ ವೋಟ್‌ಗಳಿಂದ ಎಲಿಮಿನೇಟ್‌ ಆಗುವ ಬದಲು, ರೆಡ್‌ ಕಾರ್ಡ್‌ನೊಂದಿಗೆ ಅವರ ಆಟ ಅಂತ್ಯಗೊಂಡಿದೆ.

ಬಿಗ್‌ಬಾಸ್ ಕನ್ನಡ 13ರಲ್ಲಿ ಮಂಜ ಉತ್ತಮ ಸ್ಪರ್ಧಿಯಾಗಿದ್ದರು. ಆದರೆ, ತಮ್ಮ ವರ್ತನೆ ಹಾಗೂ ವಿವಾದಾತ್ಮಕ ಘಟನೆಯಿಂದಾಗಿ ಐದು ವಾರಗಳಲ್ಲೇ ಬಿಗ್‌ಬಾಸ್ ಪಯಣ ಮುಗಿಸಿದ್ದಾರೆ. ಇದೀಗ ಅವರ ಸಂಭಾವನೆ ಹಾಗೂ ಒಟ್ಟು ಗಳಿಕೆಯ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮುಂದುವರಿದಿದೆ.

ಗಮನಿಸಿ : ಈ ವರದಿಯಲ್ಲಿ ಉಲ್ಲೇಖಿಸಲಾಗಿರುವ ಮಂಜಾ ಅವರ ಸಂಭಾವನೆ ಸಂಪೂರ್ಣವಾಗಿ ಸಾಮಾಜಿಕ ಜಾಲತಾಣಗಳು ಮತ್ತು ವಿವಿಧ ಆನ್‌ಲೈನ್ ಮೂಲಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳು ಹಾಗೂ ವರದಿಗಳನ್ನು ಆಧರಿಸಿದೆ. ಈ ಮಾಹಿತಿಗೆ ಸಂಬಂಧಿಸಿದಂತೆ ಬಿಗ್‌ಬಾಸ್ ಆಯೋಜಕರು, ವಾಹಿನಿ ಅಥವಾ ಸ್ಪರ್ಧಿ ಯಾವುದೇ ಅಧಿಕೃತ ಸ್ಪಷ್ಟನೆ ಅಥವಾ ದೃಢೀಕರಣ ನೀಡಿಲ್ಲ. Zee Kannada news ಇದನ್ನು ದೃಡೀಕರಿಸುವುದಿಲ್ಲ.

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."

ZEENEWS TRENDING STORIES