SOCIAL MEDIA

Newsletter

PARTNER SITES
Select Language Select State

ಬಿಗ್‌ ಬಾಸ್‌ ಮನೆಯಲ್ಲಿ ದ್ರೋಹದ ಆಟ : ಗಗನ್‌ - ಗಾನವಿ ನಿರ್ಧಾರಕ್ಕೆ ಈ ಸ್ಪರ್ಧಿಗೆ ಸೀಸನ್‌ ಪೂರ್ತಿ ನಾಮಿನೇಷನ್‌ ಶಾಕ್‌!

ಬಿಗ್‌ ಬಾಸ್‌ ಕನ್ನಡ 13ನೇ ಸೀಸನ್‌ ಫಿನಾಲೆ ಹಂತದತ್ತ ಸಾಗುತ್ತಿದ್ದಂತೆ ಮನೆಯೊಳಗಿನ ಸ್ಪರ್ಧೆ ಮತ್ತಷ್ಟು ರೋಚಕವಾಗುತ್ತಿದೆ. ಗೆಲುವಿನ ಗುರಿ ಇಟ್ಟುಕೊಂಡಿರುವ ಸ್ಪರ್ಧಿಗಳು ಸ್ನೇಹಕ್ಕಿಂತ ಆಟದ ತಂತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

Written By Chetana Devarmani
Published: Nov 23, 2026, 14:17 IST | Updated: Nov 23, 2026, 14:21 IST
Join

ಬಿಗ್‌ ಬಾಸ್‌ ಕನ್ನಡ 13ನೇ ಸೀಸನ್‌ ಫಿನಾಲೆ ಹಂತದತ್ತ ಸಾಗುತ್ತಿದ್ದಂತೆ ಮನೆಯೊಳಗಿನ ಸ್ಪರ್ಧೆ ಮತ್ತಷ್ಟು ರೋಚಕವಾಗುತ್ತಿದೆ. ಗೆಲುವಿನ ಗುರಿ ಇಟ್ಟುಕೊಂಡಿರುವ ಸ್ಪರ್ಧಿಗಳು ಸ್ನೇಹಕ್ಕಿಂತ ಆಟದ ತಂತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದರ ನಡುವೆ ಗಗನ್‌ ಚಿನ್ನಪ್ಪ ಮತ್ತು ಗಾನವಿ ಗೌಡ ಕೈಯಲ್ಲಿರುವ ವಿಶೇಷ ಅಧಿಕಾರ ಮನೆಯ ಸದಸ್ಯರಲ್ಲಿ ಆತಂಕ ಮೂಡಿಸಿದೆ. ಇವರಿಬ್ಬರ ನಿರ್ಧಾರದಿಂದ ಒಬ್ಬ ಸ್ಪರ್ಧಿಯ ಆಟಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ.

ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಗಾನವಿ ಗೌಡ ಕ್ವೀನ್‌ ಆಗಿದ್ದರೆ, ಗಗನ್‌ ಚಿನ್ನಪ್ಪ ಕ್ವೀನ್‌ ಮೇಕರ್‌ ಸ್ಥಾನದಲ್ಲಿದ್ದಾರೆ. ಈ ಜವಾಬ್ದಾರಿಯೊಂದಿಗೆ ಇಬ್ಬರಿಗೂ ಮನೆಯ ಆಟದ ಮೇಲೆ ಪ್ರಭಾವ ಬೀರುವಂತಹ ಅಧಿಕಾರ ನೀಡಲಾಗಿದೆ. ಮುಂದಿನ ವಾರವೂ ಕ್ಯಾಪ್ಟನ್‌ ಆಗುವ ಅವಕಾಶಕ್ಕಾಗಿ ಸ್ಪರ್ಧೆ ನಡೆಯಲಿದ್ದು, ಅದಕ್ಕೂ ಮುನ್ನ ಒಬ್ಬ ಸದಸ್ಯರನ್ನು ಕ್ಯಾಪ್ಟನ್ಸಿ ರೇಸ್‌ನಿಂದ ಸಂಪೂರ್ಣವಾಗಿ ಹೊರಗಿಡುವ ಟಾಸ್ಕ್‌ ನೀಡಲಾಗಿದೆ.

ಮನೆಯಲ್ಲಿರುವ ಸ್ಪರ್ಧಿಗಳ ಪೈಕಿ ಕ್ಯಾಪ್ಟನ್‌ ಆಗಲು ಸೂಕ್ತವಲ್ಲದ ಒಬ್ಬರನ್ನು ಆಯ್ಕೆ ಮಾಡಬೇಕೆಂಬುದು ಬಿಗ್‌ ಬಾಸ್‌ ನೀಡಿರುವ ಸೂಚನೆ. ಆದರೆ ಈ ಆಯ್ಕೆಗೆ ಒಂದು ವಿಶೇಷ ನಿಯಮವಿದೆ. ಗಾನವಿ ಮತ್ತು ಗಗನ್‌ ಇಬ್ಬರಲ್ಲಿ ಯಾರು ಮೊದಲು ಬಜರ್‌ ಒತ್ತುತ್ತಾರೋ ಅವರಿಗೆ ಸದಸ್ಯರ ಹೆಸರನ್ನು ಸೂಚಿಸುವ ಅವಕಾಶ ಸಿಗಲಿದೆ. ಹೀಗಾಗಿ ಯಾರು ಮೊದಲು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲವೂ ಹೆಚ್ಚಾಗಿದೆ.

ಒಬ್ಬ ಸ್ಪರ್ಧಿಗೆ ಸೀಸನ್‌ ಮುಗಿಯುವವರೆಗೂ ನಾಮಿನೇಷನ್‌ ಸಂಕಷ್ಟ!

ಈ ಟಾಸ್ಕ್‌ನಲ್ಲಿ ಆಯ್ಕೆಯಾಗುವ ಸ್ಪರ್ಧಿಗೆ ಮತ್ತೊಂದು ದೊಡ್ಡ ಆಘಾತ ಕಾದಿದೆ. ಕ್ಯಾಪ್ಟನ್ಸಿಗೆ ಅನರ್ಹ ಎಂದು ಗುರುತಿಸಲ್ಪಡುವ ಸದಸ್ಯರು ಉಳಿದ ಸೀಸನ್‌ನ ಎಲ್ಲಾ ನಾಮಿನೇಷನ್‌ ಪ್ರಕ್ರಿಯೆಗಳಲ್ಲಿ ಸ್ಥಾನ ಪಡೆಯಬೇಕಾಗುತ್ತದೆ ಎಂಬ ಕಠಿಣ ನಿಯಮವನ್ನು ಬಿಗ್‌ ಬಾಸ್‌ ಮುಂದಿಟ್ಟಿದ್ದಾರೆ. ಅಂದರೆ, ಒಮ್ಮೆ ಆಯ್ಕೆಯಾದರೆ ಫಿನಾಲೆವರೆಗೂ ನಾಮಿನೇಷನ್‌ ಅಪಾಯದಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ.

ಈ ಬೆಳವಣಿಗೆ ಮನೆಯ ಇತರ ಸದಸ್ಯರಲ್ಲೂ ಆತಂಕಕ್ಕೆ ಕಾರಣವಾಗಿದೆ. ಯಾರನ್ನು ಆಯ್ಕೆ ಮಾಡಬೇಕು ಎಂಬ ವಿಚಾರದಲ್ಲಿ ಗಾನವಿ ಮತ್ತು ಗಗನ್‌ ಯಾವ ಮಾನದಂಡ ಅನುಸರಿಸಲಿದ್ದಾರೆ ಎಂಬುದು ಮುಖ್ಯವಾಗಿದೆ. ಈ ನಿರ್ಧಾರವು ಸ್ಪರ್ಧಿಯ ಮುಂದಿನ ಆಟದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ.

ದ್ರೋಹದ ಹಣೆಪಟ್ಟಿ ಯಾರಿಗೆ?

ಇದರ ಜೊತೆಗೆ ಮನೆಯ ಸದಸ್ಯರಿಗೆ ವಿವಿಧ ಹಣೆಪಟ್ಟಿಗಳನ್ನು ನೀಡುವ ಪ್ರಕ್ರಿಯೆಯೂ ಕುತೂಹಲ ಮೂಡಿಸಿದೆ. ‘ಮಿತ್ರದ್ರೋಹಿ’, ‘ಮುಖವಾಡ’, ‘ದ್ರೋಹಿ’, ‘ಆರದ ಗಾಯ’ ಸೇರಿದಂತೆ ಹಲವು ಟ್ಯಾಗ್‌ಗಳನ್ನು ನೀಡಲಾಗಿದ್ದು, ಈ ಹೆಸರುಗಳಿಗೆ ಯಾವ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಪ್ರಶ್ನೆ ಎದುರಾಗಿದೆ.

ಮನೆಯೊಳಗೆ ಈಗಾಗಲೇ ಮೊದಲ ದ್ರೋಹ ನಡೆದಿದೆ ಎಂಬ ಬಿಗ್‌ ಬಾಸ್‌ ಮಾತು ಸ್ಪರ್ಧಿಗಳಲ್ಲಿ ಅಚ್ಚರಿ ಮೂಡಿಸಿದೆ. ಯಾರು ಯಾರಿಗೆ ನಂಬಿಕೆ ದ್ರೋಹ ಮಾಡಿದ್ದಾರೆ? ಸ್ನೇಹದ ಹೆಸರಿನಲ್ಲಿ ಆಟ ನಡೆಯುತ್ತಿದೆಯೇ ಅಥವಾ ಗೆಲುವಿಗಾಗಿ ಹೊಸ ತಂತ್ರಗಳು ರೂಪುಗೊಳ್ಳುತ್ತಿವೆಯೇ ಎಂಬ ಚರ್ಚೆ ಶುರುವಾಗಿದೆ.

ಫಿನಾಲೆಗೆ ದಿನಗಳು ಹತ್ತಿರವಾಗುತ್ತಿರುವಂತೆ ಸ್ಪರ್ಧಿಗಳ ನಡುವಿನ ನಂಬಿಕೆ, ಸ್ನೇಹ ಮತ್ತು ವೈಯಕ್ತಿಕ ತಂತ್ರಗಾರಿಕೆಗಳು ಪರೀಕ್ಷೆಗೆ ಒಳಗಾಗುತ್ತಿವೆ. ಗಗನ್‌ ಮತ್ತು ಗಾನವಿ ತೆಗೆದುಕೊಳ್ಳುವ ಅಂತಿಮ ನಿರ್ಧಾರ ಯಾರಿಗೆ ಸಂಕಷ್ಟ ತಂದೊಡ್ಡಲಿದೆ ಹಾಗೂ ಈ ದ್ರೋಹದ ಆಟದಲ್ಲಿ ಮುಂದಿನ ಬಲಿ ಯಾರು ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ. 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

ZEENEWS TRENDING STORIES