ಜಗ್ಗ ಮಮ್ಮಿಗೆ ಕಿಚ್ಚ ಸುದೀಪ್ ವಾರ್ನಿಂಗ್ : ಸೂಟ್ಕೇಸ್ ಪ್ಯಾಕ್ ಆಗಿದೆ, ಎಲಿಮಿನೇಟ್ ಪಕ್ಕನಾ..?
ಬಿಗ್ಬಾಸ್ ಕನ್ನಡ 13 ಮನೆಯಲ್ಲಿ ಆಟದ ರೂಲ್ಸ್ ಅರ್ಥಮಾಡಿಕೊಳ್ಳದ ಸ್ಪರ್ಧಿಗಳ ಮೇಲೆ ಕಿಚ್ಚ ಸುದೀಪ್ ಗರಂ ಆಗಿದ್ದಾರೆ. "ಗೇಮ್ ಅರ್ಥ ಆಗಿಲ್ಲ ಅಂದ್ರೆ ಈಗಲೇ ಸೂಟ್ಕೇಸ್ ಪ್ಯಾಕ್ ಮಾಡಿ ಹೊರಡಿ" ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.. ಇದರ ಬೆನ್ನಲ್ಲೇ ಇಂದು ಜಗ್ಗ ಮಮ್ಮಿ ಮೇಲೆ ಎಲಿಮಿನೇಟ್ ತೂಗುಗತ್ತಿ ತೂಗಾಡುತ್ತಿದ್ದು.. ಇಂದಿನ ಕಿಚ್ಚನ ಪಂಚಾಯ್ತಿಯಲ್ಲಿ ಏನಾಗುತ್ತೆ ಅನ್ನೋ ಕುತೂಹಲ ಮೂಡಿದೆ..
Bigg Boss Kannada 13 today elimination : ಬಿಗ್ ಬಾಸ್ ಮನೆಯಲ್ಲಿ ಆಟದ ರೂಲ್ಸ್ ಅರ್ಥ ಮಾಡಿಕೊಳ್ಳದೇ ಇರೋರು ಹಾಗೂ ಟಾಸ್ಕ್ ಹಾಳು ಮಾಡೋ ಸ್ಪರ್ಧಿಗಳ ಮೇಲೆ ಕಿಚ್ಚ ಸುದೀಪ್ ಗರಂ ಆಗಿದ್ದಾರೆ. ಈ ಶನಿವಾರದ ಸಂಚಿಕೆಯಲ್ಲಿ ಸುದೀಪ್ ಅವರ ಕೋಪ ನೆತ್ತಿಗೇರಿತ್ತು. ಕಳೆದ ವಾರ 'ಮಾಡರ್ನ್ ಕವಿ' ಮಂಜು ಮನೆಯಿಂದ ಹೊರಬಂದಿದ್ದರು. ಆದ್ರೆ, ಈವರೆಗೆ ಸ್ಪರ್ಧಿಗಳನ್ನು ಎಲಿಮಿನೇಟ್ ಮಾಡೋ ಅಧಿಕಾರ ತನಗಿಲ್ಲ ಅಂತಾ ಹೇಳ್ತಿದ್ದ ಸುದೀಪ್, ಈ ಬಾರಿ ಮಾತ್ರ "ನನಗೂ ಆ ಪವರ್ ಇದೆ, ಬೇಕಿದ್ರೆ ಗೇಟ್ ಓಪನ್ ಮಾಡಿ ನಾನೇ ಹೊರಹಾಕ್ತೀನಿ" ಅಂತಾ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ.
ಗೇಮ್ ಅರ್ಥ ಆಗಿಲ್ಲ ಅಂದ್ರೆ ಈಗಲೇ ಸೂಟ್ಕೇಸ್ ಪ್ಯಾಕ್ ಮಾಡಿ!
ಶನಿವಾರದ ಎಪಿಸೋಡ್ನಲ್ಲಿ ಟಾಸ್ಕ್ ಮತ್ತು ಆಟದ ನಿಯಮಗಳ ಬಗ್ಗೆ ಸುದೀಪ್ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ್ರು. ಕೆಲವರು ಸರಿಯಾಗಿ ಆಡದೆ ಟಾಸ್ಕ್ ರದ್ದಾಗುವಂತೆ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದರು. ಈ ವೇಳೆ ಜಗ್ಗ ಮಮ್ಮಿ ಕಡೆ ತಿರುಗಿ ಪ್ರಶ್ನೆ ಕೇಳಿದಾಗ, ಜಗ್ಗ ಮಮ್ಮಿಗೆ ವಿಷಯವೇ ಸರಿಯಾಗಿ ಅರ್ಥವಾಗಿಲ್ಲ. ತಮಗೆ ತೋಚಿದ ಉತ್ತರ ಕೊಟ್ಟ ಅವರು, "ನನಗೆ ಇನ್ನು ಗೇಮ್ ಸರಿಯಾಗಿ ಅರ್ಥ ಆಗಿಲ್ಲ ಸರ್" ಅಂದ್ರು. ಇದನ್ನು ಕೇಳಿ ಸುದೀಪ್ಗೆ ಸಿಟ್ಟು ನೆತ್ತಿಗೇರಿತು.
ಕೋಪಗೊಂಡ ಸುದೀಪ್, "ಇಷ್ಟು ವಾರಗಳಾದ್ರೂ ಆಟ ಅರ್ಥ ಆಗಿಲ್ವಾ? ಹಾಗಾದ್ರೆ ಇನ್ಯಾಕೆ ಅಲ್ಲಿರೋದು? ಕೂಡಲೇ ಹೋಗಿ ಸೂಟ್ಕೇಸ್ ರೆಡಿ ಮಾಡಿಕೊಳ್ಳಿ, ಐದು ನಿಮಿಷದಲ್ಲಿ ಮನೆಯಿಂದ ಹೊರಗೆ ಬನ್ನಿ" ಅಂತಾ ಶಾಕ್ ಕೊಟ್ಟರು. ಸುದೀಪ್ ಮಾತು ಕೇಳಿ ಜಗ್ಗ ಮಮ್ಮಿ ಹಾಗೂ ಇಡೀ ಮನೆ ದಂಗಾಗಿ ಹೋಯ್ತು.
"ನನಗೂ ಗೇಟ್ ಓಪನ್ ಮಾಡೋ ಪವರ್ ಇದೆ"
ಸ್ಪರ್ಧಿಗಳ ಬಳಿ ಮಾತಾಡುತ್ತಾ ಸುದೀಪ್, "ಯಾರಿಗೆ ಆಟ ಅರ್ಥ ಆಗಿಲ್ಲವೋ ಅವರು ಈ ಕೂಡಲೇ ಹೊರಗೆ ಬನ್ನಿ, ನಂಗೆ ಯಾವುದೇ ಬೇಸರ ಇಲ್ಲ. ಈ ಬಾರಿ ನನಗಂತೂ ಇಬ್ಬರು ಮೂವರನ್ನು ಹೊರಗೆ ಕಳಿಸಬೇಕು ಅನಿಸುತ್ತಿದೆ. ಹೊರಗೆ ಕಳಿಸುವ ಅಧಿಕಾರ ನನಗೂ ಇದೆ, ನಾನೂ ಗೇಟ್ ತೆರೆಯಬಲ್ಲೆ" ಎಂದು ಹೇಳುವ ಮೂಲಕ ಎಲ್ಲರಿಗೂ ಖಡಕ್ ಎಚ್ಚರಿಕೆ ನೀಡಿದರು.
ಜಗ್ಗ ಮಮ್ಮಿ ಮನೆಯಿಂದ ಹೊರಬಂದ್ರರಾ?
ಸುದೀಪ್ ಹೇಳಿದ ತಕ್ಷಣ ಜಗ್ಗ ಮಮ್ಮಿ ತಮ್ಮ ಸೂಟ್ಕೇಸ್ ರೆಡಿ ಮಾಡಿಕೊಂಡು ಬಾಗಿಲು ಬಳಿ ಬಂದರು. ಆದರೂ, ಸುದೀಪ್ ಕೊನೆಗೆ ಅವರನ್ನು ಆಟದಿಂದ ಹೊರಹಾಕಲಿಲ್ಲ. ಸದ್ಯ ಜಗ್ಗ ಮಮ್ಮಿ ಈ ವಾರ ನಾಮಿನೇಷನ್ನಲ್ಲಿದ್ದಾರೆ. ಅವರ ಜೊತೆಗೆ ಇನ್ನು ಕೆಲವು ಪ್ರಮುಖ ಸ್ಪರ್ಧಿಗಳು ಕೂಡ ಡೇಂಜರ್ ಜೋನ್ನಲ್ಲಿದ್ದು, ಈ ವಾರ ಮನೆಯಿಂದ ಯಾರು ಹೊರನಡೆಯಲಿದ್ದಾರೆ ಎಂಬುದು ಇಂದಿನ ಎಪಿಸೋಡ್ನಲ್ಲಿ ತಿಳಿಯಲಿದೆ.