• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಬಿಗ್‌ ಬಾಸ್‌ ಇತಿಹಾಸದಲ್ಲೇ ಮಹಾ ಟ್ವಿಸ್ಟ್‌ : ಒಂದೇ ಬಾರಿಗೆ 3 ಸ್ಪರ್ಧಿಗಳು ಜೈಲಿಗೆ.. ಇದಕ್ಕೆ ಶಾಸ್ತ್ರಿಯೇ ಕಾರಣ..?

ಬಿಗ್‌ ಬಾಸ್‌ ಇತಿಹಾಸದಲ್ಲೇ ಮಹಾ ಟ್ವಿಸ್ಟ್‌ : ಒಂದೇ ಬಾರಿಗೆ 3 ಸ್ಪರ್ಧಿಗಳು ಜೈಲಿಗೆ.. ಇದಕ್ಕೆ ಶಾಸ್ತ್ರಿಯೇ ಕಾರಣ..?

ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ದಿನದಿಂದ ದಿನಕ್ಕೆ ಮತ್ತಷ್ಟು ಕುತೂಹಲ ಕೆರಳಿಸುತ್ತಿದೆ. ಸದ್ಯ ಬಿಡುಗಡೆಯಾಗಿರುವ ಬಿಗ್‌ ಬಾಸ್‌ನ ಹೊಸ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಬಿಗ್‌ ಬಾಸ್‌ ಇತಿಹಾಸದಲ್ಲೇ ಮೊದಲ ದೊಡ್ಮನೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.. ಹೆಚ್ಚಿನ ವಿವರ ಇಲ್ಲಿದೆ..

Written ByKrishna NK
Published: Nov 20, 2026, 19:17 IST|Updated: Nov 20, 2026, 19:22 IST
joinshare
ಬಿಗ್‌ ಬಾಸ್‌ ಇತಿಹಾಸದಲ್ಲೇ ಮಹಾ ಟ್ವಿಸ್ಟ್‌ : ಒಂದೇ ಬಾರಿಗೆ 3 ಸ್ಪರ್ಧಿಗಳು ಜೈಲಿಗೆ.. ಇದಕ್ಕೆ ಶಾಸ್ತ್ರಿಯೇ ಕಾರಣ..?
Image Credit: Bigg Boss Kannada 13

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಹಿರಿಯ ನಾಗರಿಕರಿಗೆ ಎಲ್ಲಿ ಹೆಚ್ಚು ಬಡ್ಡಿ ಆದಾಯ? SBI FD ಅಥವಾ SCSS; ₹10, ₹20, ₹30 ಲಕ್ಷಕ್ಕೆ ಇಲ್ಲಿದೆ ಲೆಕ್ಕಾಚಾರ!

ಹಿರಿಯ ನಾಗರಿಕರಿಗೆ ಎಲ್ಲಿ ಹೆಚ್ಚು ಬಡ್ಡಿ ಆದಾಯ? SBI FD ಅಥವಾ SCSS; ₹10, ₹20, ₹30 ಲಕ್ಷಕ್ಕೆ ಇಲ್ಲಿದೆ ಲೆಕ್ಕಾಚಾರ!

2

₹1,000 ಇದ್ದರೆ ಸಾಕು! ಈ ವಾರ ಲಾಂಚ್ ಆಗಲಿವೆ 4 ಹೊಸ ಮ್ಯೂಚುವಲ್ ಫಂಡ್‌ಗಳು; ಹೂಡಿಕೆಗೆ ಸಿದ್ಧರಾಗಿ!

3

ʻಐಶಿರ್ʼ ಜೋಡಿಯ ನಿಶ್ಚಿತಾರ್ಥ ಸಂಭ್ರಮ: ಉಂಗುರ ಬದಲಾಯಿಸಿಕೊಂಡ ಶಿಶಿರ್ ಶಾಸ್ತ್ರಿ - ಐಶ್ವರ್ಯಾ

4

ಘೋರ ದುರಂತ: ಪ್ರೀತಿಸಿ ಮದುವೆಯಾದ ಕೇವಲ 45 ದಿನದಲ್ಲೇ ನವದಂಪತಿ ದುರ್ಮರಣ!

5

ಟೊಮೆಟೊ ಜ್ಯೂಸ್ vs ಕಿತ್ತಳೆ ಜ್ಯೂಸ್.. ಸಕ್ಕರೆ ನಿಯಂತ್ರಿಸಲು ಬೆಳಿಗ್ಗೆ ಯಾವುದು ಕುಡಿಯುವುದು ಉತ್ತಮ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ದಿನದಿಂದ ದಿನಕ್ಕೆ ಹೊಸ ತಿರುವು ಮತ್ತು ರೋಚಕತೆ ಪಡೆದುಕೊಳ್ಳುತ್ತಿದೆ. ಸದ್ಯ ಬಿಡುಗಡೆಯಾಗಿರುವ ಬಿಗ್‌ ಬಾಸ್‌ನ ಹೊಸ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಮನೆಯೊಳಗಿನ ಬೆಳವಣಿಗೆಗಳು, ವಾಗ್ವಾದಗಳು ಮತ್ತು ಐತಿಹಾಸಿಕ ನಿರ್ಧಾರವೊಂದು ಈಗ ಎಲ್ಲರ ಗಮನ ಸೆಳೆದಿದೆ.

ಶಾಸ್ತ್ರಿ ಗುಡುಗು, ಒಮ್ಮತದ ತೀರ್ಮಾನ
ಹೊಸ ಪ್ರೋಮೋದಲ್ಲಿ ಮೂವರು ಸ್ಪರ್ಧಿಗಳಿಗೆ 'ಕಳಪೆ' ಪಟ್ಟ ನೀಡಿ ಅವರನ್ನು ನೇರವಾಗಿ ಜೈಲಿಗೆ ಕಳುಹಿಸಬೇಕು ಎಂದು ಕಿರಣ್‌ ಶಾಸ್ತ್ರಿ ತೀವ್ರವಾಗಿ ಕೂಗಾಡಿದ್ದಾರೆ. ಸೌಂದರ್ಯ, ಆಸಿಯಾ ಮತ್ತು ಗಾನವಿ ವಿರುದ್ಧ ಶಾಸ್ತ್ರಿ ಗುಡುಗಿದರು. ಈ ವೇಳೆ ಕ್ಯಾಪ್ಟನ್‌ ಗಗನ್‌ ಮನೆ ಮಂದಿಯ ಅಭಿಪ್ರಾಯ ಕೇಳಿದಾಗ ಬಹುತೇಕ ಎಲ್ಲರೂ ಒಮ್ಮತ ಸೂಚಿಸಿದ್ದಾರೆ. ಈ ದಿಢೀರ್ ಬೆಳವಣಿಗೆ ಮನೆಯ ವಾತಾವರಣವನ್ನು ಮತ್ತಷ್ಟು ಬಿಸಿಗೊಳಿಸಿತು.

ಜೈಲು ಹೋಗಲು ಗಾನವಿ ಹಠ, ಶಾಸ್ತ್ರಿ ವ್ಯಂಗ್ಯ
'ಕಳಪೆ' ಹಣೆಪಟ್ಟಿ ಸಿಗುತ್ತಿದ್ದಂತೆಯೇ ಗಾನವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಾನು ಯಾವುದೇ ಕಾರಣಕ್ಕೂ ಜೈಲಿಗೆ ಹೋಗುವುದಿಲ್ಲ" ಎಂದು ಪಟ್ಟು ಹಿಡಿದ ಗಾನವಿ, "ಮನೆಯೊಳಗೆ ಯಾರಿಗೂ ಸ್ವಂತ ಬುದ್ಧಿ ಇಲ್ಲ" ಎಂದು ಇತರ ಸ್ಪರ್ಧಿಗಳ ವಿರುದ್ಧ ಗರಂ ಆಗಿದ್ದಾರೆ.

ಇದೇ ವೇಳೆ ಶಾಸ್ತ್ರಿ ಅವರು ಗಾನವಿ ಅವರನ್ನು ವ್ಯಂಗ್ಯ ಮಾಡಿದ್ದು, "ಮಹಾರಾಣಿ ಜೈಲಿಗೆ ಹೋದರಂತೆ, ಹಾಗಾದರೆ ಈಗ ರಾಣಿ ಪಟ್ಟ ಇಲ್ವಾ?" ಎಂದು ಕಾಲೆಳೆದಿರುವ ದೃಶ್ಯ ಪ್ರೋಮೋದಲ್ಲಿ ಹೈಲೈಟ್‌ ಆಗಿದೆ. ಗಾನವಿ ಮತ್ತು ಶಾಸ್ತ್ರಿ ನಡುವಿನ ಈ ಮಾತಿನ ಚಕಮಕಿ ವೀಕ್ಷಕರ ಕುತೂಹಲವನ್ನು ಇಮ್ಮಡಿಗೊಳಿಸಿದೆ.

 

 

 

 

View this post on Instagram

 

 

 

 

 

 

 

 

 

 

 

A post shared by Colors Kannada Official (@colorskannadaofficial)

ಬಿಗ್‌ ಬಾಸ್‌ ಇತಿಹಾಸದಲ್ಲೇ ಮೊದಲು
ಬಿಗ್‌ ಬಾಸ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಒಂದೇ ಬಾರಿಗೆ ಮೂವರು ಸ್ಪರ್ಧಿಗಳು 'ಕಳಪೆ' ಪಟ್ಟ ಪಡೆದು ಜೈಲು ಸೇರಿರುವುದು ವಿಶೇಷವಾಗಿದೆ. ಗಾನವಿ, ಸೌಂದರ್ಯ ಮತ್ತು ಆಸಿಯಾ—ಈ ಮೂವರೂ ಜೈಲು ಪಾಲಾಗಿದ್ದಾರೆ. ಅದರಲ್ಲೂ ಇತ್ತೀಚೆಗಷ್ಟೇ ಮನೆಯ ಮಹಾರಾಣಿ ಹಾಗೂ ಕ್ಯಾಪ್ಟನ್‌ ಆಗಿ ಮೆರೆದಿದ್ದ ಗಾನವಿ ಅವರೇ 'ಕಳಪೆ' ಪಟ್ಟ ಪಡೆದು ಜೈಲಿಗೆ ಹೋಗಿರುವುದು ದೊಡ್ಡ ಅಚ್ಚರಿ ಮೂಡಿಸಿದೆ.

ಒಟ್ಟಿನಲ್ಲಿ, 'ಕಳಪೆ' ಆಯ್ಕೆ, ಜೈಲು ಶಿಕ್ಷೆ ಮತ್ತು ಸ್ಪರ್ಧಿಗಳ ನಡುವಿನ ಕಿತ್ತಾಟದಿಂದ ಬಿಗ್‌ ಬಾಸ್‌ ಸಂಚಿಕೆಗಳು ಮತ್ತಷ್ಟು ರಂಗೇರಿವೆ. ಹೊಸ ಪ್ರೋಮೋ ಸೃಷ್ಟಿಸಿರುವ ಸಂಚಲನದ ಬೆನ್ನಲ್ಲೇ, ಮುಂದಿನ ಸಂಚಿಕೆಗಳಲ್ಲಿ ಈ ಮೂವರು ಸ್ಪರ್ಧಿಗಳ ಜೈಲು ವಾಸ ಹೇಗಿರಲಿದೆ ಮತ್ತು ಮನೆಯೊಳಗೆ ಇನ್ನಾವ ತಿರುವುಗಳು ಸಿಗಲಿವೆ ಎಂಬುದನ್ನು ಕಾದು ನೋಡಬೇಕಿದೆ.

Add Zee News as a Preferred Source
TAGS:
Bigg Boss Kannada Season 13