SOCIAL MEDIA

Newsletter

PARTNER SITES
Select Language Select State

ಬಿಗ್‌ಬಾಸ್ ಮನೆಯಲ್ಲಿ ರಾಕ್ಷಸರ ಅಟ್ಟಹಾಸ..! ಮಂಜು-ಯಶಸ್‌ ನಡುವೆ ವಾಕ್ಸಮರ.. ಆಸಿಯಾ ಬಳಿ ದೂರು ಕೊಟ್ಟ ಮಂಜು!

BBK13: ಬಿಗ್‌ಬಾಸ್ ಮನೆಯಲ್ಲಿ ರಾಕ್ಷಸರು ವರ್ಸಸ್ ಗಂಧರ್ವರ ಆಟ ಜೋರಾಗಿದೆ. ಟಾಸ್ಕ್‌ ವಿಚಾರದಲ್ಲಿ ಶುರುವಾದ ಕಿರಿಕ್‌ ಇದೀಗ ವೈಯಕ್ತಿಕ ಆರೋಪ-ಪ್ರತ್ಯಾರೋಪದ ಹಂತಕ್ಕೆ ಬಂದು ನಿಂತಿದೆ.

Written By Ramya. R. Gowda
Published: Oct 07, 2026, 06:50 AM IST | Updated: Oct 07, 2026, 06:58 AM IST
Join

ಬಿಗ್‌ಬಾಸ್ ಮನೆಯಲ್ಲಿ ರಾಕ್ಷಸರು ವರ್ಸಸ್ ಗಂಧರ್ವರ ಆಟ ಜೋರಾಗಿದೆ. ಟಾಸ್ಕ್‌ ವಿಚಾರದಲ್ಲಿ ಶುರುವಾದ ಕಿರಿಕ್‌ ಇದೀಗ ವೈಯಕ್ತಿಕ ಆರೋಪ-ಪ್ರತ್ಯಾರೋಪದ ಹಂತಕ್ಕೆ ಬಂದು ನಿಂತಿದೆ.ಗಂಧರ್ವ ತಂಡದ ಯಶಸ್‌ ಕೃಷ್ಣ ವಿರುದ್ಧ ರಾಕ್ಷಸ ತಂಡದ ಮಂಜು ಕೆಂಡಾಮಂಡಲವಾಗಿದ್ದಾರೆ. ‘ಕಾರ್ನರ್ ಸೀಟ್‌’, ‘ಬಿಳಿ ಮೂಲಂಗಿ’, ‘ಹೆಣ್ಣು ವ್ಯಾಮೋಹಿ’ ಸೇರಿದಂತೆ ಹಲವು ಪದಗಳನ್ನ ಬಳಸಿ ಯಶಸ್‌ ವಿರುದ್ಧ ಮಂಜು ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ದೂರು ಹಿಡಿದು ಉಸ್ತುವಾರಿ ಆಸಿಯಾ ಫಿರ್ದೋಸ್‌ ಬಳಿಗೂ ಹೋಗಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಇದೀಗ ರಾಕ್ಷಸರು ಮತ್ತು ಗಂಧರ್ವರದ್ದೇ ಹವಾ..! ಎರಡು ತಂಡಗಳಾಗಿ ಮನೆಯ ಸದಸ್ಯರನ್ನು ವಿಂಗಡಿಸಲಾಗಿದ್ದು, ವಾರದ ಟಾಸ್ಕ್‌ನಲ್ಲಿ ಗೆಲ್ಲುವ ತಂಡಕ್ಕೆ ವಿಶೇಷ ಅಡ್ವಾಂಟೇಜ್‌ ಕೂಡ ಸಿಗಲಿದೆ.

ಒಂದು ಕಡೆ ರಾಕ್ಷಸರ ತಂಡಕ್ಕೆ ಮಂಜುನಾಥ್ ನಾಯಕ. ಜಗದೀಶ್‌, ಗಗನ್‌, ಸಂಗೀತಾ, ಸೌಂದರ್ಯ ಹಾಗೂ ಪ್ರಶಾಂತ್‌ ಅವರ ತಂಡದಲ್ಲಿದ್ದಾರೆ.ಇತ್ತ ಗಂಧರ್ವರ ತಂಡಕ್ಕೆ ಗೌನವಿ ನಾಯಕಿ. ಯಶಸ್‌, ಕಿರಣ್‌, ಸೋನಿಕಾ, ಕಾವ್ಯ, ತಾಂಡವ್‌ ಹಾಗೂ ಧನುಷ್‌ ತಂಡದಲ್ಲಿದ್ದಾರೆ.ಈ ಎರಡು ತಂಡಗಳ ಚಟುವಟಿಕೆಗಳ ಮೇಲೆ ನಿಗಾ ಇಡಲು ಆಸಿಯಾ ಫಿರ್ದೋಸ್‌ ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ.ಆದ್ರೆ, ಟಾಸ್ಕ್‌ಗಿಂತಲೂ ಮನೆಯೊಳಗಿನ ಮಾತಿನ ಸಮರವೇ ಇದೀಗ ಹೈಲೈಟ್‌ ಆಗಿದೆ.

ಯಶಸ್‌ ಕೃಷ್ಣ ಮತ್ತು ಮಂಜು ನಡುವೆ ಮಾತಿನ ಚಕಮಕಿ ಜೋರಾಗಿದೆ. ಯಶಸ್‌ ಮಾತಿನಿಂದ ತೀವ್ರವಾಗಿ ಕೆರಳಿರುವ ಮಂಜು, ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.“ಇವನು ಕಪಟ ಕಳ್ಳ... ನನಗೆ ಹೆಣ್ಣು ಮೋಹ ಇದೆ ಅಂತ ಹೇಳುತ್ತಿದ್ದವನು, ಈಗ ಗಂಡು ಮೋಹ ಇದೆಯಾ ಅಂತ ಪ್ರಶ್ನೆ ಮಾಡ್ತಿದ್ದಾನೆ” ಎಂದು ಮಂಜು ಆಕ್ರೋಶ ಹೊರಹಾಕಿದ್ದಾರೆ.ಇಷ್ಟಕ್ಕೇ ಮಂಜು ಸುಮ್ಮನಾಗಿಲ್ಲ“ಕಾರ್ನರ್ ಸೀಟ್‌ನಲ್ಲಿ ಕುಳಿತುಕೊಂಡು ಗೊಂದಲ ಸೃಷ್ಟಿಸುವುದೇ ಇವನ ಕೆಲಸ. ಬಿಳಿ ಮೂಲಂಗಿ... ಮಾಡುವುದೆಲ್ಲಾ ಹಲ್ಕಾ ಕೆಲಸ” ಎಂದು ಯಶಸ್‌ ವಿರುದ್ಧ ಕಟು ಮಾತುಗಳನ್ನಾಡಿದ್ದಾರೆ.ತಮ್ಮ ಮಾತಿಗೆ ಬೆಲೆ ಕೊಡದೇ ಯಶಸ್‌ ನಿಂದಿಸಿದ್ದಾರೆ ಅನ್ನೋ ಆರೋಪವನ್ನೂ ಮಂಜು ಮಾಡಿದ್ದಾರೆ.

ಇನ್ನು ಯಶಸ್‌ ತಮ್ಮನ್ನೇ “ಗಂಡು ವ್ಯಾಮೋಹಿ” ಎಂದು ಪ್ರಶ್ನಿಸಿದ್ದಾರೆ ಅನ್ನೋ ಆರೋಪ ಮಂಜು ಮಾಡಿದ್ದಾರೆ. ಇದು ಸರಿಯಲ್ಲ...ನನ್ನ ಮಾತನ್ನ ಯಶಸ್‌ ಕೇಳಬೇಕು ನನ್ನ ವಿರುದ್ಧ ಈ ರೀತಿ ಮಾತನಾಡಬಾರದು ಅಂತ ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಷ್ಟೇ ಅಲ್ಲ, ಈ ವಿಚಾರವನ್ನ ಉಸ್ತುವಾರಿ ಆಸಿಯಾ ಫಿರ್ದೋಸ್‌ ಅವರ ಗಮನಕ್ಕೂ ತಂದಿದ್ದಾರೆ. ಹರಟೆ ಕಟ್ಟೆಯಲ್ಲಿ ಮನೆಯ ಹೆಣ್ಮಕ್ಕಳ ಜೊತೆ ಯಶಸ್‌ ಹೆಚ್ಚು ಸಮಯ ಕಳೆಯುತ್ತಾರೆ ಅನ್ನೋ ವಿಚಾರವೂ ಇದೀಗ ಮಾತಿನ ಮಧ್ಯೆ ಬಂದಿದೆ. ಯಶಸ್‌ ವಿರುದ್ಧ ಮಂಜು ‘ಕಾರ್ನರ್ ಸೀಟ್‌’, ‘ಹೆಣ್ಣು ವ್ಯಾಮೋಹಿ’ ಎಂಬ ಪದಗಳ ಬಾಣವನ್ನೇ ಬಿಟ್ಟಿದ್ದಾರೆ.
ಹಾಗಾದ್ರೆ ಈ ಆರೋಪಗಳಿಗೆ ಯಶಸ್‌ ಉತ್ತರ ಏನು?

ತಾಳ್ಮೆಯಿಂದ ಇರುವ ಗಂಧರ್ವ ಯಶಸ್‌...ರಾಕ್ಷಸನ ಆಕ್ರೋಶಕ್ಕೆ ತಿರುಗೇಟು ಕೊಡ್ತಾರಾ? ಮಂಜು ಮಾಡಿದ ಆರೋಪಗಳಿಗೆ ಯಶಸ್‌ ಕೃಷ್ಣ ಯಾವ ರೀತಿ ಪ್ರತಿಕ್ರಿಯೆ ನೀಡ್ತಾರೆ ಅನ್ನೋದೇ ಸದ್ಯದ ಕುತೂಹಲ.

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES