• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಹೊಸಪೇಟೆಯಲ್ಲಿ ಕಲರ್ಸ್ ಕನ್ನಡದ ‘ಅಗ್ನಿಸಾಕ್ಷಿ’ ಸೀರಿಯಲ್ ಸಂಭ್ರಮ:

ಹೊಸಪೇಟೆಯಲ್ಲಿ ಕಲರ್ಸ್ ಕನ್ನಡದ ‘ಅಗ್ನಿಸಾಕ್ಷಿ’ ಸೀರಿಯಲ್ ಸಂಭ್ರಮ:

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಕಲರ್ಸ್ ಕನ್ನಡದ ‘ಅಗ್ನಿಸಾಕ್ಷಿ’ ತನ್ನ 100 ಸಂಚಿಕೆಗಳ ಯಶಸ್ಸಿನ ಸಂಭ್ರಮವನ್ನು ಹೊಸಪೇಟೆಯ ಅಭಿಮಾನಿಗಳೊಂದಿಗೆ ಹಂಚಿಕೊಂಡಿತು.

Written ByRamya. R. Gowda
Published: Oct 07, 2026, 09:14 AM IST|Updated: Oct 07, 2026, 09:23 AM IST
joinshare
ಹೊಸಪೇಟೆಯಲ್ಲಿ ಕಲರ್ಸ್  ಕನ್ನಡದ ‘ಅಗ್ನಿಸಾಕ್ಷಿ’ ಸೀರಿಯಲ್ ಸಂಭ್ರಮ:

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಗುರು ಮಂಗಳ ಯುತಿಯಿಂದ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ.. ಭೂಮಿ ಖರೀದಿ ಯೋಗ

ಗುರು ಮಂಗಳ ಯುತಿಯಿಂದ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ.. ಭೂಮಿ ಖರೀದಿ ಯೋಗ

2

ದೀಪಾವಳಿಗೆ ಚಿನ್ನ ಕೊಳ್ಳುವವರಿಗೆ ಗುಡ್‌ನ್ಯೂಸ್? ₹10 ಸಾವಿರ ಅಗ್ಗವಾಗುವ ಸಾಧ್ಯತೆ, 1 ತೊಲ ಬೆಲೆ ಎಷ್ಟು?

3

ಹೊಸಪೇಟೆಯಲ್ಲಿ ಕಲರ್ಸ್ ಕನ್ನಡದ ‘ಅಗ್ನಿಸಾಕ್ಷಿ’ ಸೀರಿಯಲ್ ಸಂಭ್ರಮ:

4

ದಿನ ಭವಿಷ್ಯ 07-10-2026: ಬುಧವಾರದಂದು ಮಘಾ ನಕ್ಷತ್ರದಲ್ಲಿ ಶುಭ ಯೋಗ.. ಈ ರಾಶಿಯವರಿಗೆ ಹಠಾತ್‌ ಧನ ಲಾಭ

5

ಟಿ20 ಕ್ರಿಕೆಟ್‌ನಲ್ಲಿ ಶ್ರೇಯಸ್ ಅಯ್ಯರ್ ಐತಿಹಾಸಿಕ ಶತಕ..! ವೆಸ್ಟ್ ಇಂಡೀಸ್ ವಿರುದ್ಧ ದಾಖಲೆ ಬರೆದ ‘ಶ್ರೇಯಸ್’

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಕಲರ್ಸ್ ಕನ್ನಡದ ‘ಅಗ್ನಿಸಾಕ್ಷಿ’ ತನ್ನ 100 ಸಂಚಿಕೆಗಳ ಯಶಸ್ಸಿನ ಸಂಭ್ರಮವನ್ನು ಹೊಸಪೇಟೆಯ ಅಭಿಮಾನಿಗಳೊಂದಿಗೆ ಹಂಚಿಕೊಂಡಿತು. ಈ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ‘ಅಗ್ನಿಸಾಕ್ಷಿ ಸೀರಿಯಲ್ ಸಂಭ್ರಮ’ ಕಾರ್ಯಕ್ರಮದಲ್ಲಿ 1000ಕ್ಕೂ ಹೆಚ್ಚು ಅಭಿಮಾನಿಗಳು ಭಾಗವಹಿಸಿ ಧಾರಾವಾಹಿಯ ತಾರೆಯರೊಂದಿಗೆ ಸಂಭ್ರಮಿಸಿದರು.
ಕಾರ್ಯಕ್ರಮಕ್ಕೆ ಆಗಮಿಸುವ ಮುನ್ನ ಅಗ್ನಿ, ಸಾಕ್ಷಿ ಹಾಗೂ ಅಗ್ನಿಯ ಸಹೋದರಿ ಅದಿತಿ ಸೇರಿದಂತೆ ಧಾರಾವಾಹಿಯ ತಾರೆಯರು ನಟ ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಸೀರಿಯಲ್ ಸಂಭ್ರಮಕ್ಕೆ ಆಗಮಿಸಿದ ತಾರೆಯರಿಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ದೊರೆಯಿತು.

ವೇದಿಕೆಯಲ್ಲಿ ಕೇಕ್ ಕತ್ತರಿಸುವ ಮೂಲಕ ‘ಅಗ್ನಿಸಾಕ್ಷಿ’ಯ 100 ಸಂಚಿಕೆಗಳ ಸಂಭ್ರಮವನ್ನು ಆಚರಿಸಿದ ತಾರೆಯರು, ಈ ಸಂತಸವನ್ನು ಹೊಸಪೇಟೆಯ ಜನತೆಯೊಂದಿಗೆ ಹಂಚಿಕೊಂಡರು. ಧಾರಾವಾಹಿಗೆ ನಿರಂತರ ಪ್ರೀತಿ ಮತ್ತು ಬೆಂಬಲ ನೀಡುತ್ತಿರುವ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದ ಕಲಾವಿದರು, ಅಭಿಮಾನಿಗಳೊಂದಿಗೆ ಹಲವು ಖುಷಿಯ ಕ್ಷಣಗಳನ್ನು ಹಂಚಿಕೊಂಡರು.ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದು, ‘ಅಗ್ನಿಸಾಕ್ಷಿ’ಯ ಎರಡು ಗಂಟೆಗಳ ವಿಶೇಷ ಸಂಚಿಕೆಯನ್ನು ಧಾರಾವಾಹಿಯ ತಾರೆಯರೊಂದಿಗೆ ಪ್ರೇಕ್ಷಕರು ಒಟ್ಟಾಗಿ ವೀಕ್ಷಿಸಿದ್ದು. ತಮ್ಮ ನೆಚ್ಚಿನ ಪಾತ್ರಗಳನ್ನು ತೆರೆ ಮೇಲೆ ನೋಡುತ್ತಲೇ, ಆ ಪಾತ್ರಗಳಿಗೆ ಜೀವ ತುಂಬುವ ಕಲಾವಿದರು ತಮ್ಮೊಂದಿಗೆ ಇರುವ ಅನುಭವ ಪ್ರೇಕ್ಷಕರಿಗೆ ವಿಶೇಷವಾಗಿತ್ತು.

ಇದರ ಜೊತೆಗೆ ಕ್ಯಾಂಡಿಡ್ ಸಂವಾದ, ಮನರಂಜನಾ ಚಟುವಟಿಕೆಗಳು, ಅಭಿಮಾನಿಗಳೊಂದಿಗೆ ನೇರ ಮಾತುಕತೆ ಹಾಗೂ ಹಲವು ಮನರಂಜನೆಯ ಕ್ಷಣಗಳು ಕಾರ್ಯಕ್ರಮವನ್ನು ಮತ್ತಷ್ಟು ರಂಗೇರಿಸಿದವು. ಅಗ್ನಿ, ಸಾಕ್ಷಿ ಮತ್ತು ಅದಿತಿಯೊಂದಿಗೆ ಅಭಿಮಾನಿಗಳು ಮುಕ್ತವಾಗಿ ಬೆರೆತು ತಮ್ಮ ನೆಚ್ಚಿನ ಪಾತ್ರಗಳು ಮತ್ತು ಧಾರಾವಾಹಿಯ ಕುರಿತಾಗಿ ಮಾತನಾಡಿದರು. ಕಿರುತೆರೆಯ ಕಥೆ ಮತ್ತು ಪಾತ್ರಗಳನ್ನು ನೇರವಾಗಿ ಪ್ರೇಕ್ಷಕರ ಬಳಿಗೆ ಕೊಂಡೊಯ್ಯುವ ಉದ್ದೇಶದಿಂದ ಆಯೋಜಿಸಲಾದ ‘ಸೀರಿಯಲ್ ಸಂಭ್ರಮ’, ‘ಅಗ್ನಿಸಾಕ್ಷಿ’ ತಂಡ ಮತ್ತು ಪ್ರೇಕ್ಷಕರ ನಡುವಿನ ನಂಟಿಗೆ ಮತ್ತಷ್ಟು ಆತ್ಮೀಯತೆಯನ್ನು ನೀಡಿತು.

ತಾರೆಯರ ಸಾನ್ನಿಧ್ಯ, ಅಭಿಮಾನಿಗಳ ಉತ್ಸಾಹ, ವಿಶೇಷ ಸಂಚಿಕೆಯ ಸಾಮೂಹಿಕ ವೀಕ್ಷಣೆ ಹಾಗೂ ಮನರಂಜನೆಯ ಕ್ಷಣಗಳೊಂದಿಗೆ ಹೊಸಪೇಟೆಯ ‘ಅಗ್ನಿಸಾಕ್ಷಿ ಸೀರಿಯಲ್ ಸಂಭ್ರಮ’ ಒಂದು ಆತ್ಮೀಯ ಹಾಗೂ ನೆನಪಿನಲ್ಲಿ ಉಳಿಯುವ ಸಂಜೆಯಾಗಿ ಮೂಡಿಬಂತು.
 

Add Zee News as a Preferred Source
TAGS:
Sandalwood