SOCIAL MEDIA

Newsletter

PARTNER SITES
Select Language Select State

"ಇಂಥ ವರ್ಸ್ಟ್‌ ಸ್ಪರ್ಧಿಗಳನ್ನು ಯಾವ ಸೀಸನ್‌ನಲ್ಲೂ ನೋಡಿಲ್ಲ"! ಅಗ್ನಿ ಬಾಯ್ಸ್‌ ಅತಿರೇಖದ ವರ್ತನೆ ವಿರುದ್ಧ Bigg boss ಫ್ಯಾನ್ಸ್‌ ಕೆಂಡಾಮಂಡಲ..

BBK 13: ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರ ಮನೆಯಲ್ಲಿ ಜಗಳ, ಟಾಂಟ್‌, ಗಲಾಟೆ ಜೋರಾಗಿದೆ.. ಅದರಲ್ಲೂ "ಅಗ್ನಿ ಬಾಯ್ಸ್‌" ನಡೆ-ನುಡಿ ಈಗ ಪ್ರೇಕ್ಷಕರ ತಾಳ್ಮೆಯ ಗಡಿಯನ್ನೇ ದಾಟಿದೆಯಾ ಅನ್ನೋ ಪ್ರಶ್ನೆ ಶುರುವಾಗಿದೆ. ಈ ರೀತಿಯ ವಸ್ಟ್‌ ಸ್ಪರ್ಧಿಗಳನ್ನು ಯಾವ ಸೀಸನ್‌ನಲ್ಲೂ ನೋಡಿಲ್ಲ ಅಂತಾ ಅಗ್ನಿ ಬಾಯ್ಸ್‌ʼ ವಿರುದ್ದವೇ ʻಬಿಗ್‌ ಬಾಸ್‌ʼ ಫ್ಯಾನ್ಸ್ ರೊಚ್ಚಿಗೆದ್ದಾರೆ.

Written By Ramya. R. Gowda
Published: Sep 18, 2026, 12:14 PM IST | Updated: Sep 18, 2026, 01:28 PM IST
Join

ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರ ಮನೆಯಲ್ಲಿ ಜಗಳ, ಟಾಂಟ್‌, ಗಲಾಟೆ ಜೋರಾಗಿದೆ.. ಅದರಲ್ಲೂ "ಅಗ್ನಿ ಬಾಯ್ಸ್‌"  ನಡೆ-ನುಡಿ ಈಗ ಪ್ರೇಕ್ಷಕರ ತಾಳ್ಮೆಯ ಗಡಿಯನ್ನೇ ದಾಟಿದೆಯಾ ಅನ್ನೋ ಪ್ರಶ್ನೆ ಶುರುವಾಗಿದೆ. 
 

ದಿನಬೆಳಗಾದ್ರೆ ಜಗಳ.. ಮಾತಿಗೆ ಮಾತು.. ಟಾಂಟ್‌.. ಅತಿರೇಕದ ವರ್ತನೆ ಇದರಿಂದ ಬೇಸತ್ತ ನಟ ಅವಿನಾಶ್‌ ಶೋ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ.ಬಿಗ್‌ ಬಾಸ್‌ ಮನೆಗೆ ಕಾಲಿಟ್ಟು ಎರಡನೇ ವಾರಕ್ಕೆ ಎಂಟ್ರಿ ಕೊಟ್ಟಾಗಿದೆ..ಆದ್ರೆ ಮನೆಯಲ್ಲಿ ಮಾತ್ರ ನೆಮ್ಮದಿ ಅನ್ನೋ ಪದವೇ ಕಾಣ್ತಿಲ್ಲ ಇದೀಗ ಅವಿನಾಶ್‌ ಬೆಂಬಲಕ್ಕೆ ನಿಂತಿರುವ ನೆಟ್ಟಿಗರು, ಬಿಗ್‌ ಬಾಸ್‌ ಹಾಗೂ ಕಾಮನ್‌ ಸ್ಪರ್ಧಿಗಳ ವಿರುದ್ಧವೇ ಗರಂ ಆಗಿದ್ದಾರೆ. 

ಪ್ರೆಕ್ಷಕರು ಈ ಅಗ್ನಿಪರೀಕ್ಷೆಯ ಸ್ಪರ್ಧಿಗಳಿಂದ ಬಿಗ್‌ಬಾಸ್‌ ನೋಡುವುದಕ್ಕೆ ಕಿರಿಕಿರಿ ಆಗ್ತಿದೆ. ಹೇಳುವುದಕ್ಕೂ ನಡೆದುಕೊಳ್ಳುವುದಕ್ಕೂ ತಲೆಬುಡವೇ ಇಲ್ಲದಂತಾಗಿದೆ. ಈ ಅಗ್ನಿಪರೀಕ್ಷೆಯ ಜಡ್ಜ್‌ಗಳಾದ ಸಂಗೀತಾ ಶೃಂಗೇರಿ, ಶೃತಿ, ಚಂದನ್‌ ಶೆಟ್ಟಿ, ವಿನಯ್‌ ಗೌಡ, ಹಾಗೂ ನಿರೂಪಕ ನಿರಂಜನ್‌ ಹಾಗೂ ಇವರನ್ನ ಸೆಲೆಕ್ಟ್‌ ಮಾಡಿರೋ ಜನಗಳಿಗೆ ಅವಮಾನ ಆಗುವಂತೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಸ್ಪರ್ಧಿಗಳ ನಡುವೆ ದಿನದಿಂದ ದಿನಕ್ಕೆ ಜಗಳ ಹೆಚ್ಚಾಗ್ತಿದ್ದು, ಅದರಲ್ಲೂ ಮಂಜು ಅವರ ಮಾತು, ಟಾಂಟ್‌ ಹಾಗೂ ವರ್ತನೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
 

ಟಾರ್ಗೆಟ್‌ 

ಒಬ್ಬರನ್ನೊಬ್ಬರು ಟಾರ್ಗೆಟ್‌ ಮಾಡೋದು..ವೈಯಕ್ತಿಕ ವಿಚಾರಗಳನ್ನ ಎಳೆದು ತಂದು ಮಾತಾಡೋದು.. ಸಣ್ಣ ವಿಚಾರಕ್ಕೂ ಗಲಾಟೆ ಮಾಡೋದೆ ಬಿಗ್‌ಬಾಸ್‌ ಆಗಿದೆ. ಈ ಅಗ್ನಿಪರೀಕ್ಷೆಯಲ್ಲಿ ಏನಂಥ ಸ್ಪರ್ಧಿಗಳನ್ನ ಸೆಲೆಕ್ಟ್‌ ಮಾಡಿದಿರೋ ಅಂತಾ ಭಾರೀ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇವೆಲ್ಲವೂ ಬಿಗ್‌ ಬಾಸ್‌ ಮನೆಯ ವಾತಾವರಣವನ್ನು ಮತ್ತಷ್ಟು ಕಾವೇರಿಸಿದೆ.ಇದೇ ಟಾಂಟ್‌ಗಳಿಂದ ಬೇಸತ್ತ ನಟ ಅವಿನಾಶ್‌ ಕೊನೆಗೂ ತಾಳ್ಮೆ ಕಳೆದುಕೊಂಡಿದ್ದಾರೆ.“ಇಂಥ ದರಿದ್ರದವರ ಜೊತೆಗೆ ನಾನು ಇರಲ್ಲ” ಎಂದು ಆಕ್ರೋಶ ಹೊರಹಾಕಿದ ಅವಿನಾಶ್‌, ತಮ್ಮ ಬ್ಯಾಗ್‌ ಪ್ಯಾಕ್ ಮಾಡಿಕೊಂಡು ಶೋ ತೊರೆಯುವ ನಿರ್ಧಾರ ಮಾಡಿದ್ದಾರೆ. ಮಂಜು ಅವರ ಪದಬಳಕೆ ಹಾಗೂ ವೈಯಕ್ತಿಕ ಟೀಕೆಗಳಿಂದ ಬೇಸತ್ತಿರುವುದಾಗಿ ಅವಿನಾಶ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಶಿಯಲ್‌ ಮೀಡಿಯಾದ ರಿಯಾಕ್ಷನ್‌ 
ಅವಿನಾಶ್‌ ಈ ರೀತಿ ರೊಚ್ಚಿಗೆದ್ದ ಬೆನ್ನಲ್ಲೇ ಸೋಶಿಯಲ್‌ ಮೀಡಿಯಾದಲ್ಲೂ ಚರ್ಚೆ ಶುರುವಾಗಿದೆ. “ಅವಿನಾಶ್ ಕೊನೆಗೂ ಸರಿಯಾಗಿ ಹೇಳಿದ್ದಾರೆ. ಸೆಲೆಕ್ಟ್ ಮಾಡಿದ ಜಡ್ಜ್‌ಗೆ ಅವಮಾನ, ಹೋಸ್ಟ್‌ಗೆ ಅವಮಾನ, ಸೆಲೆಕ್ಟ್ ಮಾಡಿದ ಜನರಿಗೆ ಅವಮಾನ.” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು,“ಕಂಟೆಂಟ್‌ಗೋಸ್ಕರ ಈ ರೀತಿ ವರ್ತಿಸುವುದನ್ನು ಇದೇ ಮೊದಲು ನೋಡುತ್ತಿದ್ದೇನೆ. ಈ ಸಲ ಕಾಮನ್‌ ಸ್ಪರ್ಧಿಗಳಿಗಿಂತ ಸೆಲೆಬ್ರಿಟಿಗಳೇ ಪಾಪ ಅನಿಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.

 

ವಸ್ಟ್‌ ಅಗ್ನಿಪರೀಕ್ಷೆ ಸ್ಪರ್ಧಿಗಳು
 

ಈ ಸ್ಪರ್ಧಿಗಳ ನಡುವೆ ಸೌಜನ್ಯ, ಸಂಯಮ ಎನ್ನುವುದೇ ಇಲ್ಲದಂತಾಗಿದೆ. ಅದರಲ್ಲೂ, ಮುಖ್ಯವಾಗಿ ಮಾಡ್ರನ್‌ ಮಹಾಕವಿ ಮಂಜ ನಡವಳಿಕೆ ಹಾಗೂ ಟಾಂಟ್‌ಗಳ ವಿರುದ್ಧ ಈಗ ಪ್ರೇಕ್ಷಕರು ಮತ್ತು ನೆಟ್ಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಸಾಮಾನ್ಯವಾಗಿ ಹೊಟ್ಟೆ ಹಸಿವಾದಾಗ ತಿನ್ನೋರನ್ನ ನೋಡಿದ್ದೀನಿ ಈ ಅಗ್ನಿಪರೀಕ್ಷೆಯಲ್ಲಿ ಸೆಲೆಕ್ಟ್‌ ಆದವರು ಕಂಟೆಂಟ್‌ಗೋಸ್ಕರ ತಿನ್ನೋರನ್ನ ಇದೆ ಮೊದಲ ಬಾರಿಗೆ ನೋಡ್ತಿರೋದು".. ಪ್ರತಿ ಬಾರಿ ಬಿಗ್‌ಬಾಸ್‌ನಲ್ಲಿ ಜನಸಾಮಾನ್ಯರು ಅಂದ್ರೆ ಸಿಂಪಥಿ ಇರುತಿತ್ತು.. ಆದರೇ ಈ ಸಲ ಪಾಪಾ ಸೆಲೆಬ್ರಿಟಿಗಳನ್ನ ನೋಡಿದರೆ ಪಾಪಾ ಅನ್ಸ್ತಿದೆ. ಅದೇನು ಅಂತ ಸೆಲೆಕ್ಟ್‌ ಮಾಡಿ ಕಳ್ಸಿದಿರೋ ಒಂದೊಂದು ಮುತ್ತು ಕಣ್ರೀ ಅಂತಾ ಬಿಗ್‌ಬಾಸ್‌ ಫ್ಯಾನ್ಸ್‌ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಾರಿ ಬಿಗ್‌ಬಾಸ್‌ಗಾಗಿ ಕಾದುಕುಳಿತ ಅಭಿಮಾನಿಗಳಿಗೆ ಈ ಅಗ್ನಿಪರೀಕ್ಷೆಯ ಸ್ಪರ್ಧಿಗಳಿಂದ ಭಾರೀ ಬೇಸರ ಉಂಟಾಗಿರೋದಂತು ಸತ್ಯ.  


ಇನ್ನು ಕೆಲ ನೆಟ್ಟಿಗರು ಕಾಮನ್‌ ಸ್ಪರ್ಧಿಗಳ ವರ್ತನೆಯನ್ನೇ ಪ್ರಶ್ನಿಸಿದ್ದಾರೆ.“ಕನ್ನಡ ಬಿಗ್‌ ಬಾಸ್‌ನ ಇಷ್ಟು ಸೀಸನ್‌ಗಳಲ್ಲಿ ಇಂಥ ಕಂಟೆಸ್ಟೆಂಟ್‌ಗಳನ್ನ ನೋಡಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಗೆಲ್ಲಬೇಕು.. ಆಟ ಆಡಬೇಕು.. ಕಂಟೆಂಟ್‌ ಕೊಡಬೇಕು..ಅದೆಲ್ಲ ಸರಿ.. ಆದರೆ ಸಹ-ಸ್ಪರ್ಧಿಗಳಿಗೆ ಕನಿಷ್ಠ ಗೌರವ ನೀಡದೇ ವೈಯಕ್ತಿಕವಾಗಿ ಟೀಕೆ ಮಾಡೋದು ಎಷ್ಟು ಸರಿ ಅನ್ನೋ ಪ್ರಶ್ನೆಯನ್ನೂ ವೀಕ್ಷಕರು ಕೇಳುತ್ತಿದ್ದಾರೆ.
ಇದೀಗ ಎಲ್ಲರ ಚಿತ್ತ ವಾರಾಂತ್ಯದ ಎಪಿಸೋಡ್‌ನತ್ತ ನೆಟ್ಟಿದೆ.ಕಿಚ್ಚ ಸುದೀಪ್‌ ಅವರು ಈ ಜಗಳ, ಟಾಂಟ್‌ ಹಾಗೂ ಅತಿರೇಕದ ವರ್ತನೆ ಬಗ್ಗೆ ಏನು ಹೇಳ್ತಾರೆ?ಅಗ್ನಿ ಬಾಯ್ಸ್‌ಗೆ ಕ್ಲಾಸ್‌ ತಗೋತಾರಾ?ಅಥವಾ ಇದೇ ಆಟದ ಭಾಗ ಅಂತ ಸುಮ್ಮನಿರ್ತಾರಾ? ಎಂಬ ಕುತೂಹಲ ವೀಕ್ಷಕರಲ್ಲಿದೆ.


ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರ ಮನೆಯಲ್ಲಿ ಆಟಕ್ಕಿಂತ ಜಗಳವೇ ಹೆಚ್ಚಾಗ್ತಿದೆಯಾ ಅನ್ನೋ ಚರ್ಚೆ ಶುರುವಾಗಿದೆ. ಅವಿನಾಶ್‌ ಅವರ ಆಕ್ರೋಶದ ಬಳಿಕ ಈ ವಿವಾದ ಮತ್ತಷ್ಟು ತಾರಕಕ್ಕೇರಿದೆ.
ಮುಂದಿನ ದಿನಗಳಲ್ಲಿ ಸ್ಪರ್ಧಿಗಳ ನಡೆ-ನುಡಿ ಬದಲಾಗುತ್ತಾ?ಅಥವಾ ಬಿಗ್‌ ಬಾಸ್‌ ಮನೆಯಲ್ಲಿ ಜಗಳದ ಕಿಚ್ಚು ಮತ್ತಷ್ಟು ಹೊತ್ತಿಕೊಳ್ಳುತ್ತಾ? ಕಾದು ನೋಡಬೇಕಿದೆ.

ಒಟ್ಟಾರೆ ಬಿಗ್‌ಬಾಸ್‌ ಕನ್ನಡದಲ್ಲಿ ಅಗ್ನಿಪರೀಕ್ಷೆಯಿಂದ ಬಂದ ಕಾಮನ್‌ ಸ್ಪರ್ದಿಗಳ ಅತಿರೇಖದ ವರ್ತನೆ ಮಾತು ಮಾತಿಗೂ ಜಗಳ ಎಲ್ಲವೂ ಬಿಗ್‌ಬಾಸ್‌ ಅಭಿಮಾನಿಗಳಿಗೆ ಹಾಗೂ ವೀಕ್ಷಕರಿಗೆ ಕಿರಿಕಿರಿ ಉಂಟುಮಾಡಿದೆ. ಸೋಶಿಯಲ್‌ ಮೀಡಿಯಾದಲ್ಲಿ ಬಿಗ್‌ಬಾಸ್‌ ಅಭಿಮಾನಿಗಳ ಅಭಿಪ್ರಾಯ ಹಾಗೂ ಮನೆಯಲ್ಲಿ  ಅಗ್ನಿಪರೀಕ್ಷೆಯಿಂದ ಬಂದ ಕಾಮನ್‌ ಸ್ಪರ್ದಿಗಳ ನಡೆದುಕೊಂಡ ರೀತಿಗೆ ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ತಕ್ಕ ಪಾಠ ಕಲಿಸುತ್ತಾರ ಇಲ್ವಾ ಅನ್ನೋದೇ ಎಲ್ಲರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಿಂದ ನಾನು ಹೊರಗೆ ಹೋಗ್ತಿನಿ.. ಆ ಸ್ಪರ್ಧಿಯಿಂದ ಕಂಟೆಸ್ಟೆಂಟ್ಸ್‌ಗಳಿಗೆ

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES