SOCIAL MEDIA

Newsletter

PARTNER SITES
Select Language Select State

ಯಶಸ್ ಜೊತೆ ಫಿಕ್ಸ್ ಗೇಮ್ ಸೌಂದರ್ಯ ಅಸಲಿ ಬಣ್ಣ ಬಯಲು ಮಾಡಿದ್ರಾ ಕಿಚ್ಚ?

BBK 13 sudeep strict warning over soundarya unfair game : ಈ ವಾರದ ಕ್ಯಾಪ್ಟನ್ ಆಗಿದ್ದ ಸೌಂದರ್ಯಾ ಶೆಟ್ಟಿ ಇದೀಗ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವರನ ಹುಡುಕುವ ಟಾಸ್ಕ್‌ನಲ್ಲಿ ಯಶಸ್‌ಗೆ ಫೇವರ್ ಮಾಡಿ ಗಗನ್‌ಗೆ ಅನ್ಯಾಯ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

Written By Ramya. R. Gowda
Published: Oct 31, 2026, 05:40 PM IST | Updated: Oct 31, 2026, 05:45 PM IST
Join

Bigg boss kannada: ಬಿಗ್‌ಬಾಸ್ ಮನೆಯಲ್ಲಿ ಡ್ರಾಮಾ, ಗಲಾಟೆ, ಆರೋಪಗಳ ಆಟ ಮುಂದುವರಿದಿದೆ. ಈ ವಾರದ ಕ್ಯಾಪ್ಟನ್ ಆಗಿದ್ದ ಸೌಂದರ್ಯಾ ಶೆಟ್ಟಿ ಇದೀಗ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವರನ ಹುಡುಕುವ ಟಾಸ್ಕ್‌ನಲ್ಲಿ ಯಶಸ್‌ಗೆ ಫೇವರ್ ಮಾಡಿದ್ರಾ ಸೌಂದರ್ಯಾ? ಉತ್ತಮವಾಗಿ ಆಡಿದ್ರೂ ಗಗನ್‌ಗೆ ಸೋಲು ಯಾಕಾಯ್ತು? ಕ್ಯಾಪ್ಟನ್ ನಿರ್ಧಾರದ ವಿರುದ್ಧ ಬಿಗ್‌ಬಾಸ್ ಮನೆಯಲ್ಲಿ ಅಸಮಾಧಾನ ಭುಗಿಲೆದ್ದಿದ್ಯಾ? ಈ ವಿಚಾರಕ್ಕೆ ಕಿಚ್ಚ ಸುದೀಪ್ ವೀಕೆಂಡ್‌ನಲ್ಲಿ ಎಂಟ್ರಿ ಕೊಟ್ಟು ಕ್ಲಾಸ್ ತೆಗೆದುಕೊಳ್ತಾರಾ?

ಬಿಗ್‌ಬಾಸ್ ಮನೆಯಲ್ಲಿ ಡ್ರಾಮಾ, ಗಲಾಟೆ, ಆರೋಪಗಳ ಆಟ ಮುಂದುವರಿದಿದೆ. ಈ ವಾರದ ಕ್ಯಾಪ್ಟನ್ ಆಗಿದ್ದ ಸೌಂದರ್ಯಾ ಶೆಟ್ಟಿ ಇದೀಗ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವರನ ಹುಡುಕುವ ಟಾಸ್ಕ್‌ನಲ್ಲಿ ಯಶಸ್‌ಗೆ ಫೇವರ್ ಮಾಡಿದ್ರಾ ಸೌಂದರ್ಯಾ? ಉತ್ತಮವಾಗಿ ಆಡಿದ್ರೂ ಗಗನ್‌ಗೆ ಸೋಲು ಯಾಕಾಯ್ತು? ಕ್ಯಾಪ್ಟನ್ ನಿರ್ಧಾರದ ವಿರುದ್ಧ ಬಿಗ್‌ಬಾಸ್ ಮನೆಯಲ್ಲಿ ಅಸಮಾಧಾನ ಭುಗಿಲೆದ್ದಿದ್ಯಾ? ಈ ವಿಚಾರಕ್ಕೆ ಕಿಚ್ಚ ಸುದೀಪ್ ವೀಕೆಂಡ್‌ನಲ್ಲಿ ಎಂಟ್ರಿ ಕೊಟ್ಟು ಕ್ಲಾಸ್ ತೆಗೆದುಕೊಳ್ತಾರಾ ಅನ್ನೂ ಕುತೂಹಲ ಮೂಡಿದ್ದು, ಎಲ್ಲರ ಚಿತ್ತ ಇಂದಿನ ಕಿಚ್ಚನ ಪಂಚಾಯಿತ್‌ ಮೇಲೆ ನೆಟ್ಟಿದೆ.


 

 ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್ ಅಂದ್ರೆ ಪೈಪೋಟಿ ಇರಲೇಬೇಕು. ಗೆಲುವಿಗಾಗಿ ಸ್ಪರ್ಧಿಗಳು ತಮ್ಮದೇ ತಂತ್ರ ರೂಪಿಸೋದು ಸಹಜ. ಆದ್ರೆ ಈ ವಾರ ನಡೆದ ವರನ ಹುಡುಕುವ ಟಾಸ್ಕ್ ಮಾತ್ರ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಕ್ಯಾಪ್ಟನ್ ಆಗಿದ್ದ ಸೌಂದರ್ಯಾ ಶೆಟ್ಟಿ ಅವರ ನಿರ್ಧಾರ ಇದೀಗ ಪ್ರಶ್ನೆಗೊಳಗಾಗಿದೆ.ಹೌದು.. ಈ ಟಾಸ್ಕ್‌ನಲ್ಲಿ ಯಶಸ್‌ಗೆ ಸೌಂದರ್ಯಾ ಫೇವರ್ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಇನ್ನು ಡೇಟಿಂಗ್ ಟಾಸ್ಕ್‌ನಲ್ಲಿ ಗಗನ್ ಉತ್ತಮವಾಗಿ ಆಡಿದ್ದಾರೆ ಅನ್ನೋದನ್ನ ಸ್ವತಃ ಸೌಂದರ್ಯಾ ಅವರೇ ಒಪ್ಪಿಕೊಂಡಿದ್ದಾರೆ. ಆದ್ರೆ ಅಂತಿಮವಾಗಿ ಗೆಲುವು ಮಾತ್ರ ಗಗನ್ ಪಾಲಾಗಿಲ್ಲ. ಇದು ಸಹಜವಾಗಿಯೇ ಮನೆಯೊಳಗೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಗಗನ್ ಉತ್ತಮ ಪ್ರದರ್ಶನ ನೀಡಿದ್ರೂ ಸೋಲಬೇಕಾಯ್ತಾ? ಕ್ಯಾಪ್ಟನ್ ಆಗಿದ್ದ ಸೌಂದರ್ಯಾ ತೀರ್ಪಿನಲ್ಲಿ ತಾರತಮ್ಯ ಮಾಡಿದ್ರಾ? ಅಥವಾ ಟಾಸ್ಕ್‌ನ ನಿಯಮಗಳ ಪ್ರಕಾರವೇ ಫಲಿತಾಂಶ ಹೊರಬಂತಾ? ಹೀಗೆ ಹಲವು ಪ್ರಶ್ನೆಗಳು ವೀಕ್ಷಕರಲ್ಲಿ ಮೂಡಿವೆ. ಸೌಂದರ್ಯಾ ಅವರ ನಡೆಯನ್ನು ಕೆಲವರು ಮೋಸದಾಟ ಎಂದೇ ಟೀಕಿಸುತ್ತಿದ್ದಾರೆ.

ಇದೀಗ ಎಲ್ಲರ ಕುತೂಹಲ ಒಂದೇ ವಿಚಾರದ ಮೇಲಿದೆ. ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಈ ವಿಚಾರವನ್ನು ಪ್ರಸ್ತಾಪ ಮಾಡ್ತಾರಾ? ಸೌಂದರ್ಯಾ ಅವರ ನಿರ್ಧಾರದ ಬಗ್ಗೆ ನೇರವಾಗಿಯೇ ಪ್ರಶ್ನೆ ಮಾಡ್ತಾರಾ? ಗಗನ್‌ಗೆ ಆದ ಅನ್ಯಾಯದ ಬಗ್ಗೆ ಮಾತನಾಡ್ತಾರಾ? ತಪ್ಪು ನಡೆದಿದ್ದರೆ ಕ್ಯಾಪ್ಟನ್‌ಗೆ ಕಿಚ್ಚನ ಕ್ಲಾಸ್ ಫಿಕ್ಸ್ ಆಗಿದೆಯಾ? ಅನ್ನೋ ಚರ್ಚೆ ಜೋರಾಗಿದೆ.ಒಟ್ನಲ್ಲಿ ಬಿಗ್‌ಬಾಸ್ ಮನೆಯಲ್ಲಿ ವರನ ಹುಡುಕುವ ಟಾಸ್ಕ್‌ನಿಂದ ಶುರುವಾದ ವಿವಾದ ಇದೀಗ ವೀಕೆಂಡ್ ಸಂಚಿಕೆಯ ಹೈಲೈಟ್ ಆಗುವ ಸಾಧ್ಯತೆಯಿದೆ. ಸೌಂದರ್ಯಾ ಶೆಟ್ಟಿ ವಿರುದ್ಧದ ಆರೋಪಗಳಿಗೆ ಕಿಚ್ಚ ಸುದೀಪ್ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES