SOCIAL MEDIA

Newsletter

PARTNER SITES
Select Language Select State

ಮಂಜನನ್ನೇ ನಾಮಿನೇಟ್ ಮಾಡಿ ತಲೆ ಮೇಲೆ ಸಗಣಿ ನೀರು ಸುರಿದ ಗಾನವಿ! ಬಿಗ್‌ ಬಾಸ್‌ ಮನೆಯಲ್ಲಿ ಭಾರೀ ಟ್ವಿಸ್ಟ್‌!

ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರಲ್ಲಿ ಯುವ ರಾಣಿ ಗಾನವಿ ವಿಶೇಷ ನಾಮಿನೇಷನ್‌ ಅಧಿಕಾರ ಬಳಸಿ ತಮ್ಮ ಆಪ್ತ ಸ್ನೇಹಿತ ಮಂಜನನ್ನೇ ನಾಮಿನೇಟ್‌ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವರ ತಲೆಯ ಮೇಲೆ ಸಗಣಿ ನೀರು ಸುರಿದಿರುವುದು ಮನೆಯೊಳಗೆ ಅಚ್ಚರಿ ಮೂಡಿಸಿದೆ. ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್‌ ಕೂಡ ಗಾನವಿ ಮತ್ತು ಮಂಜನ ಸ್ನೇಹದ ಬಗ್ಗೆ ತಮಾಷೆ ಮಾಡಿದ್ದರು. ಇದೀಗ ಗಾನವಿಯ ಈ ನಿರ್ಧಾರದಿಂದ ಇಬ್ಬರ ಸ್ನೇಹದಲ್ಲಿ ಬಿರುಕು ಮೂಡಲಿದೆಯೇ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.

Written By Puttaraj K Alur
Published: Nov 17, 2026, 17:11 IST | Updated: Nov 17, 2026, 17:30 IST
Image Credit: Bigg Boss Kannada 13
Join

Bigg Boss Kannada 13: ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರಲ್ಲಿ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್‌ ಸಿಗುತ್ತಿವೆ. ಮನೆಯೊಳಗಿನ ಸ್ಪರ್ಧಿಗಳ ಸ್ನೇಹ, ಜಗಳ, ಮನಸ್ತಾಪ ಮತ್ತು ನಾಮಿನೇಷನ್‌ ಪ್ರಕ್ರಿಯೆಗಳು ವೀಕ್ಷಕರ ಕುತೂಹಲ ಹೆಚ್ಚಿಸಿವೆ. ಇದೀಗ ನಾಮಿನೇಷನ್‌ ವಿಚಾರದಲ್ಲಿ ಮತ್ತೊಂದು ಅಚ್ಚರಿಯ ಬೆಳವಣಿಗೆ ನಡೆದಿದೆ. ಯುವ ರಾಣಿ ಪಟ್ಟ ಅಲಂಕರಿಸಿರುವ ಗಾನವಿ, ತಮಗೆ ಸಿಕ್ಕ ವಿಶೇಷ ಅಧಿಕಾರವನ್ನ ಬಳಸಿಕೊಂಡು ತಮ್ಮ ಆಪ್ತ ಸ್ನೇಹಿತ ಮಂಜನನ್ನೇ ನಾಮಿನೇಟ್‌ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವರ ತಲೆಯ ಮೇಲೆ ಸಗಣಿ ನೀರು ಸುರಿದು ನಾಮಿನೇಟ್‌ ಮಾಡಿರುವುದು ಮನೆಯೊಳಗೆ ಹೊಸ ಚರ್ಚೆಗೆ ಕಾರಣವಾಗಿದೆ.

ಮೂವರು ಯುವ ರಾಣಿಯರಿಗೆ ವಿಶೇಷ ಅಧಿಕಾರ!

ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರಲ್ಲಿ ನಾಮಿನೇಷನ್‌ ಪ್ರಕ್ರಿಯೆಗೆ ಈ ಬಾರಿ ವಿಶೇಷ ತಿರುವು ನೀಡಲಾಗಿದೆ. ಮನೆಯ ಮೂವರು ಯುವ ರಾಣಿಯರಾದ ಆಸಿಯಾ, ಸೌಂದರ್ಯ ಮತ್ತು ಗಾನವಿ ಅವರಿಗೆ ಬಿಗ್‌ ಬಾಸ್‌ ವಿಶೇಷ ಅಧಿಕಾರ ನೀಡಿದ್ದಾರೆ. ಈ ಅಧಿಕಾರದ ಮೂಲಕ ಕೆಲವು ಸ್ಪರ್ಧಿಗಳನ್ನ ನೇರವಾಗಿ ನಾಮಿನೇಟ್‌ ಮಾಡುವ ಅವಕಾಶ ಅವರಿಗೆ ಸಿಕ್ಕಿದೆ. ಈ ವಿಶೇಷ ಅಧಿಕಾರವನ್ನ ಯಾರು ಹೇಗೆ ಬಳಸಿಕೊಳ್ಳುತ್ತಾರೆ ಎಂಬ ಕುತೂಹಲ ಮನೆಯ ಇತರ ಸ್ಪರ್ಧಿಗಳಲ್ಲಿತ್ತು. ಅದರಲ್ಲೂ ನಾಮಿನೇಷನ್‌ ಅಧಿಕಾರ ಪಡೆದ ಗಾನವಿ ಯಾರ ಹೆಸರನ್ನ ಆಯ್ಕೆ ಮಾಡಲಿದ್ದಾರೆ ಎಂಬ ಪ್ರಶ್ನೆ ಎಲ್ಲರ ಗಮನ ಸೆಳೆದಿತ್ತು. ಆದರೆ ಗಾನವಿ ತೆಗೆದುಕೊಂಡ ನಿರ್ಧಾರ ಮಾತ್ರ ಅನೇಕರಿಗೆ ಅಚ್ಚರಿ ಮೂಡಿಸಿದೆ. ತಮ್ಮೊಂದಿಗೆ ಹೆಚ್ಚು ಆತ್ಮೀಯವಾಗಿರುವ ಮಂಜನನ್ನೇ ಅವರು ನಾಮಿನೇಷನ್‌ಗೆ ಆಯ್ಕೆ ಮಾಡಿಕೊಂಡಿದ್ದಾರೆ.

 

ಮಂಜನನ್ನೇ ನಾಮಿನೇಟ್‌ ಮಾಡಿದ ಮಂಜಿ!

 

ಬಿಗ್‌ ಬಾಸ್‌ ಮನೆಯಲ್ಲಿ ಗಾನವಿ ಮತ್ತು ಮಂಜನ ನಡುವಿನ ಆತ್ಮೀಯತೆ ಹಲವು ಸಂದರ್ಭಗಳಲ್ಲಿ ಗಮನ ಸೆಳೆದಿದೆ. ಇಬ್ಬರೂ ಉತ್ತಮ ಬಾಂಧವ್ಯ ಹೊಂದಿದ್ದು, ಮನೆಯೊಳಗಿನ ಅವರ ಸ್ನೇಹದ ಬಗ್ಗೆ ವೀಕ್ಷಕರಲ್ಲಿಯೂ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಮಂಜನಿಗೆ ಗಾನವಿ ಆತ್ಮೀಯರಾಗಿದ್ದರೆ, ಗಾನವಿಗೂ ಮಂಜನೊಂದಿಗೆ ಉತ್ತಮ ಸ್ನೇಹವಿದೆ ಎಂಬುದು ಮನೆಯ ಹಲವು ಸಂದರ್ಭಗಳಲ್ಲಿ ಕಂಡುಬಂದಿತ್ತು. ಹೀಗಿರುವಾಗ ನಾಮಿನೇಷನ್‌ ಅಧಿಕಾರ ಗಾನವಿಗೆ ಸಿಕ್ಕಾಗ ಅವರು ಮಂಜನ ಹೆಸರನ್ನ ಆಯ್ಕೆ ಮಾಡುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ತಮ್ಮ ನಿರ್ಧಾರದಲ್ಲಿ ಗಾನವಿ ಯಾವುದೇ ಹಿಂಜರಿಕೆ ತೋರದೆ ಮಂಜನನ್ನೇ ನೇರವಾಗಿ ನಾಮಿನೇಟ್‌ ಮಾಡಿದ್ದಾರೆ. ವಿಶೇಷವೆಂದರೆ ನಾಮಿನೇಷನ್‌ ಪ್ರಕ್ರಿಯೆಯ ವೇಳೆ ಮಂಜನ ತಲೆಯ ಮೇಲೆ ಸಗಣಿ ನೀರು ಸುರಿದಿದ್ದಾರೆ. ಈ ಮೂಲಕ ಅವರ ನಾಮಿನೇಷನ್‌ ಮನೆಯೊಳಗೆ ಮತ್ತೊಂದು ಗಮನಾರ್ಹ ಸಂಗತಿಯಾಗಿದೆ.

ಸ್ನೇಹಕ್ಕಿಂತ ಆಟಕ್ಕೆ ಆದ್ಯತೆ ನೀಡಿದರಾ ಗಾನವಿ?

ಗಾನವಿ ಮತ್ತು ಮಂಜನ ನಡುವಿನ ಸ್ನೇಹ ಬಿಗ್‌ ಬಾಸ್‌ ಮನೆಯ ಪ್ರಮುಖ ಚರ್ಚೆಯ ವಿಷಯಗಳಲ್ಲಿ ಒಂದಾಗಿದೆ. ಇಬ್ಬರ ಆತ್ಮೀಯತೆಯನ್ನ ವೀಕ್ಷಕರು ಗಮನಿಸುತ್ತಲೇ ಬಂದಿದ್ದಾರೆ. ಆದರೆ ನಾಮಿನೇಷನ್‌ ವಿಚಾರ ಬಂದಾಗ ಗಾನವಿ ತಮ್ಮ ಸ್ನೇಹಕ್ಕಿಂತ ಆಟಕ್ಕೆ ಹೆಚ್ಚಿನ ಆದ್ಯತೆ ನೀಡಿದಂತೆ ಕಂಡುಬಂದಿದೆ. ವಿಶೇಷ ಅಧಿಕಾರ ಸಿಕ್ಕ ತಕ್ಷಣ ಮಂಜನ ಹೆಸರನ್ನೇ ಆಯ್ಕೆ ಮಾಡಿಕೊಂಡಿರುವುದು ಈ ಬೆಳವಣಿಗೆಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಮಂಜನ ತಲೆಯ ಮೇಲೆ ಸಗಣಿ ನೀರು ಸುರಿದು ನಾಮಿನೇಟ್‌ ಮಾಡಿರುವ ದೃಶ್ಯವೂ ಈ ಘಟನೆಯ ಪ್ರಮುಖ ಭಾಗವಾಗಿದೆ. ಈ ನಿರ್ಧಾರವನ್ನ ಮಂಜ ಹೇಗೆ ಸ್ವೀಕರಿಸಲಿದ್ದಾರೆ ಎಂಬ ಪ್ರಶ್ನೆ ಇದೀಗ ವೀಕ್ಷಕರಲ್ಲಿ ಮೂಡಿದೆ. ಇಬ್ಬರ ನಡುವಿನ ಆತ್ಮೀಯತೆ ಮುಂದಿನ ದಿನಗಳಲ್ಲಿಯೂ ಇದೇ ರೀತಿ ಮುಂದುವರಿಯಲಿದೆಯೇ ಎಂಬ ಕುತೂಹಲವೂ ಹೆಚ್ಚಾಗಿದೆ.

ಗಾನವಿ-ಮಂಜ ಸ್ನೇಹದ ಬಗ್ಗೆ ಕಿಚ್ಚ ಸುದೀಪ್‌ ತಮಾಷೆ

ಇನ್ನು ಭಾನುವಾರದ ಸಂಚಿಕೆಯಲ್ಲಿಯೂ ಗಾನವಿ ಮತ್ತು ಮಂಜನ ಸ್ನೇಹದ ವಿಚಾರ ಮುನ್ನೆಲೆಗೆ ಬಂದಿತ್ತು. ಈ ಸಂದರ್ಭದಲ್ಲಿ ನಿರೂಪಕ ಕಿಚ್ಚ ಸುದೀಪ್‌ ಅವರು ಗಾನವಿಯನ್ನ 'ಮಂಜಿ' ಎಂದು ಕರೆದು ತಮಾಷೆ ಮಾಡಿದ್ದರು. ಈ ಮೂಲಕ ಮನೆಯೊಳಗಿನ ಇಬ್ಬರ ಆತ್ಮೀಯತೆಯ ಬಗ್ಗೆ ಪರೋಕ್ಷವಾಗಿ ಕಾಲೆಳೆದಿದ್ದರು. ಇದೀಗ ಅದೇ ಆಪ್ತ ಸ್ನೇಹಿತನನ್ನ ಗಾನವಿ ನಾಮಿನೇಟ್‌ ಮಾಡಿರುವುದು ಮತ್ತೊಂದು ತಿರುವು ನೀಡಿದೆ. ಈ ಬೆಳವಣಿಗೆಯಿಂದ ಮನೆಯೊಳಗಿನ ಸ್ನೇಹ ಮತ್ತು ಆಟದ ನಡುವಿನ ಸಂಬಂಧ ಮತ್ತೆ ಚರ್ಚೆಗೆ ಬಂದಿದೆ.

ಮಂಜ-ಗಾನವಿ ಸ್ನೇಹದಲ್ಲಿ ಬಿರುಕು ಮೂಡಲಿದೆಯೇ?

ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ಸ್ನೇಹ ಮತ್ತು ಆಟದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಸವಾಲಿನ ಸಂಗತಿಯಾಗಿದೆ. ಆರಂಭದಿಂದಲೂ ಆತ್ಮೀಯರಾಗಿರುವ ಸ್ಪರ್ಧಿಗಳೇ ನಾಮಿನೇಷನ್‌ ಸಂದರ್ಭದಲ್ಲಿ ಪರಸ್ಪರ ಎದುರಾಳಿಗಳಾಗುವ ಸಂದರ್ಭಗಳೂ ಇರುತ್ತವೆ. ಗಾನವಿ ಕೂಡ ಆಟದ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದಾರೆಯೇ ಅಥವಾ ಮಂಜನನ್ನ ನಾಮಿನೇಟ್‌ ಮಾಡಲು ಬೇರೆ ಕಾರಣಗಳಿವೆಯೇ ಎಂಬುದು ಮುಂದಿನ ಬೆಳವಣಿಗೆಗಳಿಂದ ತಿಳಿಯಬೇಕಿದೆ.

ಒಟ್ನಲ್ಲಿ ತಮ್ಮ ಆಪ್ತ ಸ್ನೇಹಿತ ಮಂಜನನ್ನೇ ಗಾನವಿ ನಾಮಿನೇಟ್‌ ಮಾಡಿರುವುದು ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರ ಪ್ರಮುಖ ಚರ್ಚೆಯ ವಿಷಯವಾಗಿದೆ. ಅದರಲ್ಲೂ ಮಂಜನ ತಲೆಯ ಮೇಲೆ ಸಗಣಿ ನೀರು ಸುರಿದು ನಾಮಿನೇಟ್‌ ಮಾಡಿರುವುದು ಈ ಘಟನೆಯ ವಿಶೇಷ ಗಮನ ಸೆಳೆದಿದೆ. ಗಾನವಿಯ ಈ ನಿರ್ಧಾರವನ್ನ ಮಂಜ ಹೇಗೆ ಸ್ವೀಕರಿಸಲಿದ್ದಾರೆ? ಇವರಿಬ್ಬರ ಸ್ನೇಹದಲ್ಲಿ ಬಿರುಕು ಮೂಡಲಿದೆಯೇ ಅಥವಾ ಆಟದ ಕಾರಣಕ್ಕೆ ಈ ಬೆಳವಣಿಗೆಯನ್ನ ಸಹಜವಾಗಿ ಸ್ವೀಕರಿಸಲಿದ್ದಾರೆಯೇ ಎಂಬುದನ್ನ ಮುಂದಿನ ಸಂಚಿಕೆಗಳಲ್ಲಿ ನೋಡಬೇಕಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES