SOCIAL MEDIA

Newsletter

PARTNER SITES
Select Language Select State

ಬಿಗ್‌ಬಾಸ್‌ ಮನೆಯಲ್ಲಿ ಮಹಾರಾಣಿ ಪಟ್ಟಕ್ಕೆ ಭಾರಿ ಪೈಪೋಟಿ : ಯುವರಾಣಿ ಆಗೇ ಉಳಿತಾರಾ ಸೌಂದರ್ಯ?

ಬಿಗ್‌ ಬಾಸ್‌ಮನೆಯಲ್ಲಿ ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ರಾಜ ಮನೆತನದ ರೀತಿಯಲ್ಲಿ ಬಿಗ್‌ ಬಾಸ್‌ ಟಾಸ್ಕ್‌ ನೀಡಿದ್ದು, ಮುಹಾರಾಣಿ ಪಟ್ಟಕ್ಕಾಗಿ ಸೌಂದರ್ಯ ಶೆಟ್ಟಿ , ಗಾನವಿ ಗೌಡ ಮತ್ತು ಆಸಿಯಾ ಮಧ್ಯೆ ಭಾರೀ ಪೈಪೋಟಿ ನಡೆಯುತ್ತಿದೆ. ಈ ಪೈಕಿ ಅನರ್ಹರಾದವರ ಮುಂದೆ 'ರೆಡ್ ಫ್ಲಾಗ್' ಇಡುಲು ಇತರೆ ಅಭ್ಯರ್ಥಿಗಳಿಗೆ ತಿಳಿಸಲಾಗಿದೆ. ಹೀಗಾಗಿ ಮನೆಯ ಬಹುತೇಕ ಸ್ಪರ್ಧಿಗಳು ಸೌಂದರ್ಯ ಅವರ ಭಾವಚಿತ್ರದ ಮುಂದೆ ಸಾಲು ಸಾಲಾಗಿ ಕೆಂಪು ಬಾವುಟವನ್ನು ಇಟ್ಟದ್ದು, ಇದರಿಂದ ಶೆಟ್ಟಿ ಡಾನ್‌ ಯುವ ರಾಣಿಯಾಗಿಯೇ ಉಳಿತಾರಾ ಎಂಬ ಪ್ರಶ್ನೆ ಮೂಡಿದೆ.

Written By Yashaswini V
Published: Nov 16, 2026, 10:18 IST | Updated: Nov 16, 2026, 10:21 IST
Join

ಬೆಂಗಳೂರು : ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರಲ್ಲಿ ದಿನದಿಂದ ದಿನಕ್ಕೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಸಿಕ್ತಾ ಇದೆ. ಸ್ಪರ್ಧಿಗಳ ನಡುವಿನ ಪೈಪೋಟಿ ಮತ್ತು ಜಟಾಪಟಿ ತೀವ್ರ ಸ್ವರೂಪ ಪಡೆದುಕೊಳ್ತಾ ಇದೆ. ಇತ್ತ ಮನೆ ಒಳಗೆ ನಡೆಯುತ್ತಿರುವ ಪ್ರತಿಯೊಂದು ಬೆಳವಣಿಗೆಯೂ ವೀಕ್ಷಕರಿಗೆ ಭಾರೀ ಮನರಂಜನೆ ನೀಡುತ್ತಿದ್ದರೆ, ಅತ್ತ ಸ್ಪರ್ಧಿಗಳ ನಡುವೆ ಮಾತ್ರ ಅಸಮಾಧಾನದ ಹೊಗೆ ಎಬ್ಬಿಸುತ್ತಿದೆ.

ಸದ್ಯ ಬಿಗ್ ಬಾಸ್ ಮನೆಯಲ್ಲಿ ರಾಜ ಮನೆತನದ ಪರಿಕಲ್ಪನೆಯ ಟಾಸ್ಕ್ ನಡೆಯುತ್ತಿದ್ದು, ಗಾನವಿ ಗೌಡ,  ಸೌಂದರ್ಯ ಶೆಟ್ಟಿ ಮತ್ತು ಆಸಿಯಾ ಅವರು ಯುವ ರಾಣಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ಮೂವರು ಯುವ ರಾಣಿಯರ ಪೈಕಿ ಮುಂದಿನ ಹಂತದಲ್ಲಿ ಮಹಾ ರಾಣಿಯಾಗಲು ಯಾರು ಅರ್ಹರಲ್ಲ ಎಂದು ಭಾವಿಸುತ್ತೀರೋ, ಅಂತಹ ಸ್ಪರ್ಧಿಯ ಭಾವ ಚಿತ್ರದ ಮುಂದೆ ರೆಡ್‌ ಪ್ಲ್ಯಾಗ್‌ ಇಡುವಂತೆ ಬಿಗ್ ಬಾಸ್ ಮನೆಯ ಇತರ ಸದಸ್ಯರಿಗೆ ಹೊಸ ಸವಾಲನ್ನು ನೀಡಿದರು. ಮೇಲ್ನೋಟಕ್ಕೆ ಇದು ಕೇವಲ ಒಂದು ಅಭಿಪ್ರಾಯ ಹಂಚಿಕೊಳ್ಳುವ ಪ್ರಕ್ರಿಯೆಯಂತೆ ಕಂಡರೂ, ಇದರ ಹಿಂದೆ ಮನೆಯ ದಿನಸಿ ಸಾಮಗ್ರಿಗಳನ್ನು ಪಡೆಯುವ ಮಹತ್ವದ ಉದ್ದೇಶ ಅಡಗಿದೆ ಎಂಬುದು ಸ್ಪಷ್ಟವಾಗಿದೆ.

ಬಿಗ್ ಬಾಸ್ ಆದೇಶದಂತೆ ಟಾಸ್ಕ್ ಆರಂಭವಾಗುತ್ತಿದ್ದಂತೆಯೇ ಮನೆಯ ಬಹುತೇಕ ಸ್ಪರ್ಧಿಗಳು ಶೆಟ್ಟಿ ಡಾನ್‌ ಭಾವ ಚಿತ್ರದ ಮುಂದೆ ಸಾಲು ಸಾಲಾಗಿ ಕೆಂಪು ಬಾವುಟಗಳನ್ನು ಇಡಲು ಆರಂಭಿಸಿದರು. ಗಾನವಿ, ಆಸಿಯಾ ಅವರಿಗೆ ಹೋಲಿಸಿದರೆ ಸೌಂದರ್ಯ ಅವರೇ ಮಹಾ ರಾಣಿಯಾಗಲು ಅನರ್ಹರು ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದರು. ಒಬ್ಬರ ಹಿಂದೆ ಒಬ್ಬರಂತೆ ಬಂದು ತಮ್ಮ ಭಾವ ಚಿತ್ರದ ಮುಂದೆ ರೆಡ್ ಫ್ಲಾಗ್ ಇಡುತ್ತಿರುವುದನ್ನು ಕಂಡು ಸೌಂದರ್ಯ ತೀವ್ರ ಅಸಮಾಧಾನಗೊಂಡರು. ಸಹಜವಾಗಿಯೇ ಇದರಿಂದ ಮನೆಯ ಒಳಗಿನ ಪರಿಸ್ಥಿತಿ ವಿಕೋಪಕ್ಕೆ ತಿರುಗಿರುವುದು ಪ್ರೋಮೋದಲ್ಲಿ ಕಂಡುಬಂದಿದೆ.

ತಮ್ಮ ವಿರುದ್ಧ ಮನೆ ಮಂದಿಯೆಲ್ಲಾ ಒಂದಾಗಿರುವುದನ್ನು ಕಂಡ ಸೌಂದರ್ಯ ತಾಳ್ಮೆ ಕಳೆದುಕೊಂಡಿದ್ದಾರೆ. ತಮಗೆ ರೆಡ್‌ ಫ್ಲ್ಯಾಗ್‌ ನೀಡಿದ ಪ್ರತಿಯೊಬ್ಬ ಸ್ಪರ್ಧಿಯನ್ನೂ ನೇರವಾಗಿ ತರಾಟೆಗೆ ತೆಗೆದುಕೊಂಡ ಅವರು, ನನಗೆ ಏಕೆ ರೆಡ್ ಫ್ಲಾಗ್ ಕೊಟ್ಟಿದ್ದೀರಿ? ನನ್ನಲ್ಲಿರುವ ಪ್ರಾಬ್ಲಮ್‌ ಏನು? ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. ಸೌಂದರ್ಯ ಅವರ ಈ ನೇರ ಪ್ರಶ್ನೆಗೆ ಉತ್ತರಿಸಲು ಮುಂದಾದ ಇತರ ಸ್ಪರ್ಧಿಗಳು ತಮ್ಮದೇ ಆದ ಕಾರಣಗಳನ್ನು ನೀಡಲು ಪ್ರಯತ್ನಿಸಿದರು. ಆದರೆ, ಆ ಕಾರಣಗಳನ್ನು ಒಪ್ಪಲು ಸೌಂದರ್ಯ ಸಿದ್ಧರಿರಲಿಲ್ಲ. ಇದು ಸೌಂದರ್ಯ ಮತ್ತು ಇತರ ಸ್ಪರ್ಧಿಗಳ ನಡುವೆ ದೊಡ್ಡ ಮಟ್ಟದ ವಾಕ್ಸಮರಕ್ಕೆ ನಾಂದಿ ಹಾಡಿತು.

ಮನೆಯ ದಿನನಿತ್ಯದ ಅಗತ್ಯ ವಸ್ತುಗಳಾದ ಗ್ರೋಸರಿ ಪಡೆಯಲು ಈ ಟಾಸ್ಕ್ ಅತ್ಯಂತ ನಿರ್ಣಾಯಕವಾಗಿತ್ತು. ಹೀಗಾಗಿ ಪ್ರತಿಯೊಬ್ಬರೂ ತಮ್ಮದೇ ಆದ ಲೆಕ್ಕಾಚಾರದೊಂದಿಗೆ ಆಟವಾಡಲು ಮುಂದಾಗಿದ್ದರು. ಆದರೆ, ಈ ಆಟವು ಸ್ಪರ್ಧಿಗಳ ನಡುವಿನ ನೈಜ ಮುಖವಾಡಗಳನ್ನು ಕಳಚುವಂತೆ ಮಾಡಿದೆ. ಸ್ನೇಹಿತರಂತೆ ಇದ್ದವರೇ ತಮ್ಮ ವಿರುದ್ಧ ಬಾವುಟ ಹಿಡಿದಿದ್ದು ಸೌಂದರ್ಯ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಗಾನವಿ, ಆಸಿಯಾಗಿಂತ ಸೌಂದರ್ಯ ಶೆಟ್ಟಿ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುತ್ತಾ ಮನೆ ಮಂದಿಯ ವಿರುದ್ಧ ಸಿಡಿದೆದ್ದಿದ್ದಾರೆ.

ಒಟ್ಟಾರೆಯಾಗಿ, ಮಹಾ ರಾಣಿ ಪಟ್ಟದ ಆಯ್ಕೆ ಮತ್ತು ಗ್ರೋಸರಿ ಗಳಿಕೆಯ ಈ ಟಾಸ್ಕ್ ಬಿಗ್ ಬಾಸ್ ಮನೆಯಲ್ಲಿ ಹೊಸ ಕಿಚ್ಚು ಹೊತ್ತಿಸಿದೆ. ಈ ಜಟಾಪಟಿ ಮುಂದಿನ ದಿನಗಳಲ್ಲಿ ಮನೆಯ ವಾತವರಣವನ್ನು ಹೇಗೆ ಬದಲಾಯಿಸಲಿದೆ ಮತ್ತು ಸೌಂದರ್ಯ ಈ ಬಗ್ಗೆ ಹೇಗೆ ರಿಯಾಕ್ಟ್‌ ಮಾಡಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ZEENEWS TRENDING STORIES