• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಗುಡ್‌ನ್ಯೂಸ್‌.. ನನ್ನ ಗಂಡನಿಗಿಂತ ಮೊದಲು "ಜೀ ಕನ್ನಡ"ಕ್ಕೆ ಗೊತ್ತಾಗುತ್ತೆ : ಆ್ಯಂಕರ್ ಅನುಶ್ರೀ

ಗುಡ್‌ನ್ಯೂಸ್‌.. ನನ್ನ ಗಂಡನಿಗಿಂತ ಮೊದಲು "ಜೀ ಕನ್ನಡ"ಕ್ಕೆ ಗೊತ್ತಾಗುತ್ತೆ : ಆ್ಯಂಕರ್ ಅನುಶ್ರೀ

ಮದುವೆ ನಂತರ ಇನ್‌ಸ್ಟಾಗ್ರಾಮ್ ಲೈವ್‌ಗೆ ಬಂದ ಜನಪ್ರಿಯ ನಿರೂಪಕಿ ಅನುಶ್ರೀ, ಅಭಿಮಾನಿಯೊಬ್ಬರು ಕೇಳಿದ ‘ಗುಡ್‌ನ್ಯೂಸ್’ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಸಂವಾದದ ವೇಳೆ ತಮ್ಮ ವೈವಾಹಿಕ ಜೀವನದ ಸಂತಸ ಹಂಚಿಕೊಂಡ ಅವರು, ತಮ್ಮ ಮನೆಯ ಮುದ್ದಿನ ಶ್ವಾನಗಳನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ...

Written ByKrishna NK
Published: Oct 09, 2026, 08:26 PM IST|Updated: Oct 09, 2026, 08:29 PM IST
joinshare
ಗುಡ್‌ನ್ಯೂಸ್‌.. ನನ್ನ ಗಂಡನಿಗಿಂತ ಮೊದಲು "ಜೀ ಕನ್ನಡ"ಕ್ಕೆ ಗೊತ್ತಾಗುತ್ತೆ : ಆ್ಯಂಕರ್ ಅನುಶ್ರೀ
Image Credit: Anchor Anushree news

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
42ರ ಹರೆಯದಲ್ಲೂ ಎಬಿಡಿ ಅಬ್ಬರ: 37 ಎಸೆತಗಳಲ್ಲಿ ಭರ್ಜರಿ ಶತಕ, ಆಸ್ಟ್ರೇಲಿಯಾ ವಿರುದ್ಧ ಸ್ಫೋಟಕ ಆಟ!

42ರ ಹರೆಯದಲ್ಲೂ ಎಬಿಡಿ ಅಬ್ಬರ: 37 ಎಸೆತಗಳಲ್ಲಿ ಭರ್ಜರಿ ಶತಕ, ಆಸ್ಟ್ರೇಲಿಯಾ ವಿರುದ್ಧ ಸ್ಫೋಟಕ ಆಟ!

2

ಸತತ ವೈಫಲ್ಯಕ್ಕೆ ಬ್ಯಾಟ್‌ನಲ್ಲೇ ಉತ್ತರ ಕೊಟ್ಟ ಸಂಜು ಸ್ಯಾಮ್ಸನ್: 21 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ!

3

ಗುಡ್‌ನ್ಯೂಸ್‌.. ನನ್ನ ಗಂಡನಿಗಿಂತ ಮೊದಲು "ಜೀ ಕನ್ನಡ"ಕ್ಕೆ ಗೊತ್ತಾಗುತ್ತೆ : ಆ್ಯಂಕರ್ ಅನುಶ್ರೀ

4

ಸ್ಟಿಂಗ್ ಆಪರೇಷನ್‌ಗಳ ಪಿತಾಮಹ ಯಾರು ಅಂತ ಎಲ್ಲರಿಗೂ ಗೊತ್ತು : ಬಿವೈವಿ ಕಿಡಿ

5

ಬೆಂಗಳೂರು ವಾಹನ ಸವಾರರೇ ಗಮನಿಸಿ: ಅ.10ರಿಂದ ಈ ಪ್ರಮುಖ ರಸ್ತೆಗಳು 20 ದಿನ ಬಂದ್‌!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಅವರು ಸುದೀರ್ಘ ವಿರಾಮದ ನಂತರ ಇನ್‌ಸ್ಟಾಗ್ರಾಮ್‌ ಲೈವ್‌ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಲೈವ್‌ ಸಮಯದಲ್ಲಿ ಅಭಿಮಾನಿಯೊಬ್ಬರು ಕೇಳಿದ ‘ಗುಡ್‌ನ್ಯೂಸ್‌’ ಪ್ರಶ್ನೆಗೆ ತಮ್ಮದೇ ಶೈಲಿಯಲ್ಲಿ ತಮಾಷೆಯಾಗಿ ಉತ್ತರಿಸಿರುವ ಅವರು, ತಮ್ಮ ವೈವಾಹಿಕ ಜೀವನ ಹಾಗೂ ಮುದ್ದಿನ ಶ್ವಾನಗಳ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

‘ಜೀ ಕನ್ನಡಕ್ಕೆ ಗೊತ್ತಿಲ್ಲದೆ ಯಾವ ಗುಡ್‌ನ್ಯೂಸ್ ಹೇಳಲಿ?’
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಮುಂಬರುವ 'ಬೃಂದಾವಿಹಾರಿ' ಚಿತ್ರದ ಕಾರ್ಯಕ್ರಮಕ್ಕಾಗಿ ಹುಬ್ಬಳ್ಳಿಗೆ ಪ್ರಯಾಣಿಸುತ್ತಿರುವುದಾಗಿ ತಿಳಿಸಿದ ಅನುಶ್ರೀ, ಅಲ್ಲಿಯೂ ಅಭಿಮಾನಿಗಳನ್ನು ಭೇಟಿಯಾಗುವುದಾಗಿ ಹೇಳಿದರು. ಈ ವೇಳೆ ಅನಿಲ್ ಕುಮಾರ್ ಎಂಬ ಅಭಿಮಾನಿ, "ಮೇಡಮ್, ಏನಾದರೂ ಗುಡ್‌ನ್ಯೂಸ್ ಇಲ್ವಾ?" ಎಂದು ಪ್ರಶ್ನಿಸಿದರು. ಇದಕ್ಕೆ ತಮಾಷೆಯಾಗಿ ಉತ್ತರಿಸಿದ ಅನುಶ್ರೀ, "ಜೀ ಕನ್ನಡ ವಾಹಿನಿಗೆ ಗೊತ್ತಿಲ್ಲದೆ ನಾನು ಯಾವ ಗುಡ್‌ನ್ಯೂಸ್‌ ತಾನೇ ಹೇಳಲು ಸಾಧ್ಯ ಅನಿಲ್‌ ಅವರೇ? ಬಹುಶಃ ನನ್ನ ಗಂಡ ಅಥವಾ ಕುಟುಂಬಕ್ಕಿಂತಲೂ ಮೊದಲು ಜೀ ಕನ್ನಡಕ್ಕೇ ಆ ವಿಷಯ ಗೊತ್ತಾಗುತ್ತೆ ಅನಿಸುತ್ತೆ!" ಎಂದು ಹಾಸ್ಯ ಚಟಾಕಿ ಹಾರಿಸಿದರು.

ಸರಳ ವೈವಾಹಿಕ ಜೀವನ
ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ ಅವರು, "ಮದುವೆಯಾದ ನಂತರ ಜೀವನ ತುಂಬಾ ಸರಳವಾಗಿ, ಚೆನ್ನಾಗಿ ಸಾಗುತ್ತಿದೆ. ಮುಂದೆಯೂ ನನ್ನ ಜೀವನ ಹೀಗೆಯೇ ಇರಲಿ ಎಂಬುವುದೇ ಆಸೆ. ನಿಮ್ಮೆಲ್ಲರ ಆಶೀರ್ವಾದ ಸದಾ ನಮ್ಮ ಮೇಲಿರಲಿ" ಎಂದು ಕೋರಿದರು. ಅನುಶ್ರೀ ಅವರು 2025ರ ಆಗಸ್ಟ್ 28ರಂದು ಉದ್ಯಮಿ ರೋಶನ್ ಅವರನ್ನು ವಿವಾಹವಾಗಿದ್ದು, ಇತ್ತೀಚೆಗಷ್ಟೇ ಪ್ರಥಮ ಮದುವೆಯ ವಾರ್ಷಿಕೋತ್ಸವಕ್ಕಾಗಿ ಕೀನ್ಯಾದ ಮಸಾಯಿ ಮಾರಾಗೆ ಪ್ರವಾಸ ಕೈಗೊಂಡು ಬಂದಿದ್ದರು.

 

 

 

 

View this post on Instagram

 

 

 

 

 

 

 

 

 

 

 

A post shared by ಅನುಶ್ರೀ Anchor APPU FAN (@anchor_anushreeofficial)

ಇನ್ಮುಂದೆ ವಾರಕ್ಕೊಮ್ಮೆ ಲೈವ್‌!
"ಹಿಂದೆ ನಾನು ಹೆಚ್ಚಾಗಿ ಇನ್‌ಸ್ಟಾಗ್ರಾಮ್ ಲೈವ್ ಬರ್ತಿದ್ದೆ, ಆದರೆ ಇತ್ತೀಚೆಗೆ ಕಾರಣಾಂತರಗಳಿಂದ ಅದು ಕಡಿಮೆಯಾಗಿತ್ತು. ಇನ್ಮುಂದೆ ಹಾಗಾಗುವುದಿಲ್ಲ. ಕನಿಷ್ಠ ವಾರಕ್ಕೊಮ್ಮೆಯಾದರೂ ಅಥವಾ 10 ದಿನಕ್ಕೊಮ್ಮೆಯಾದರೂ ಖಂಡಿತ ಲೈವ್ ಬಂದು ನಿಮ್ಮೊಂದಿಗೆ ಕನೆಕ್ಟ್ ಆಗಿರುತ್ತೇನೆ" ಎಂದು ಅಭಿಮಾನಿಗಳಿಗೆ ಮಾತು ನೀಡಿದರು.

ಶ್ವಾನಗಳ ಪರಿಚಯಿಸಿದ ನಿರೂಪಕಿ
ಸಂವಾದದ ನಡುವೆ ತಮ್ಮ ಮನೆಯ ಎರಡು ಮುದ್ದಿನ ನಾಯಿಗಳನ್ನು ಅಭಿಮಾನಿಗಳಿಗೆ ಪರಿಚಯಿಸಲು ಅನುಶ್ರೀ ಮುಂದಾದರು. ಆದರೆ ಅವರು ಎಷ್ಟೇ ಕರೆದರೂ ಶ್ವಾನಗಳು ಜಾಗದಿಂದ ಕದಲಲಿಲ್ಲ. ಇದನ್ನು ತಮಾಷೆಯಾಗಿ ಪ್ರಸ್ತಾಪಿಸಿದ ಅವರು, "ಈ ಮನೆಯ ಯಜಮಾನಿ ನಾನೋ ಅಥವಾ ಇವೋ ಗೊತ್ತಾಗುತ್ತಿಲ್ಲ, ಮರ್ಯಾದೆಯೇ ಕೊಡುತ್ತಿಲ್ಲ!" ಎನ್ನುತ್ತಾ, ಉಪಾಯವಾಗಿ ಕೈಯಲ್ಲಿ ಬಿಸ್ಕೇಟ್ ಹಿಡಿದು ಕರೆದು ಕೊನೆಗೂ ತಮ್ಮ ಮುದ್ದಿನ ಶ್ವಾನಗಳನ್ನು ಅಭಿಮಾನಿಗಳಿಗೆ ತೋರಿಸಿದರು.

Add Zee News as a Preferred Source
TAGS:
Cinema