• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ದರ್ಶನ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ : ನಟನ ಬೆನ್ನು ನೋವಿಗೆ ಸಂಬಂಧಿಸಿ ಕೋರ್ಟ್‌ ಮಹತ್ವದ ಸೂಚನೆ..!

ದರ್ಶನ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ : ನಟನ ಬೆನ್ನು ನೋವಿಗೆ ಸಂಬಂಧಿಸಿ ಕೋರ್ಟ್‌ ಮಹತ್ವದ ಸೂಚನೆ..!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಅವರ ಬೆನ್ನು ನೋವಿನ ಚಿಕಿತ್ಸೆ ಸಂಬಂಧ ಮುಖ್ಯ ವೈದ್ಯಾಧಿಕಾರಿಗಳು 59ನೇ ಸಿಸಿಹೆಚ್ ಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ. ದರ್ಶನ್ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಕೋರ್ಟ್ ಸೂಚನೆ ನೀಡಿದ್ದು, ಆಕ್ಷೇಪಣೆ ಸಲ್ಲಿಕೆ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Nov 26, 2026, 19:41 IST|Updated: Nov 26, 2026, 19:47 IST
joinshare
ದರ್ಶನ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ : ನಟನ ಬೆನ್ನು ನೋವಿಗೆ ಸಂಬಂಧಿಸಿ ಕೋರ್ಟ್‌ ಮಹತ್ವದ ಸೂಚನೆ..!
Image Credit: Darshan News

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಮಕ್ಕಳ ಬಿಸಿಯೂಟದಲ್ಲೂ ಲಂಚ : 15 ಸಾವಿರ ಪಡೆಯುವಾಗ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಅಧಿಕಾರಿ

ಮಕ್ಕಳ ಬಿಸಿಯೂಟದಲ್ಲೂ ಲಂಚ : 15 ಸಾವಿರ ಪಡೆಯುವಾಗ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಅಧಿಕಾರಿ

2

ಪೋಸ್ಟ್ ಆಫೀಸ್‌ನಲ್ಲಿ ₹1,000 ಹೂಡಿಕೆ ಸಾಕು; ಬರೋಬ್ಬರಿ ₹4.40 ಲಕ್ಷ ಪಡೆಯುವ ಅವಕಾಶ!

3

ದರ್ಶನ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ : ನಟನ ಬೆನ್ನು ನೋವಿಗೆ ಸಂಬಂಧಿಸಿ ಕೋರ್ಟ್‌ ಮಹತ್ವದ ಸೂಚನೆ..!

4

ಮೈಸೂರು ಸಂವಿಧಾನ ದಿನಾಚರಣೆ: ಹೊರಗೆ ಬಿಜೆಪಿ ವಿರುದ್ಧ ಸಮರ, ಒಳಗೆ ಕಾಂಗ್ರೆಸ್ ನಾಯಕತ್ವದ ಲೆಕ್ಕಾಚಾರ

5

UP Polls: ನಿರುದ್ಯೋಗಿಗಳಿಗೆ ₹5,000 ಭತ್ಯೆ, 25 ಲಕ್ಷ ಉದ್ಯೋಗದ ಭರವಸೆ! ಪ್ರತ್ಯೇಕ ಪ್ರಣಾಳಿಕೆಯಿಂದ SP-Congress ಮೈತ್ರಿಯಲ್ಲಿ ಬಿರುಕು?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೈಲು ಸೇರಿರುವ ನಟ ದರ್ಶನ್ ಅವರ ಬೆನ್ನು ನೋವು ಹಾಗೂ ವೈದ್ಯಕೀಯ ಚಿಕಿತ್ಸೆಯ ವಿವರಗಳ ಕುರಿತು ಮುಖ್ಯ ವೈದ್ಯಾಧಿಕಾರಿಗಳು 59ನೇ ಸಿಸಿಹೆಚ್ (CCH) ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ದರ್ಶನ್ ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ ಮತ್ತು ತಪಾಸಣೆಯ ಸಮಗ್ರ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಈ ಹಿಂದೆ ನೀಡಿದ್ದ ಸೂಚನೆಯ ಮೇರೆಗೆ ಈ ವರದಿ ಸಲ್ಲಿಕೆಯಾಗಿದೆ.

ವರದಿ ಸ್ವೀಕಾರ ಹಾಗೂ ಪ್ರಾಸಿಕ್ಯೂಷನ್ ಮನವಿ
ವಿಚಾರಣೆ ವೇಳೆ ಜೈಲಾಧಿಕಾರಿಗಳ ವರದಿ ಇನ್ನೂ ತಮ್ಮ ಕೈ ಸೇರಿಲ್ಲ ಎಂದು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ (ASPP) ಸಚಿನ್ ಅವರು ವಿಡಿಯೋ ಕಾನ್ಫರೆನ್ಸ್ (VC) ಮೂಲಕ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ವಿಶೇಷ ಸರ್ಕಾರಿ ಅಭಿಯೋಜಕರು (SPP) ಮನೆಯಲ್ಲಿ ಕಾರ್ಯಕ್ರಮ ಇರುವ ಕಾರಣ ರಜೆಯಲ್ಲಿದ್ದಾರೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು, ವರದಿಯನ್ನು ಸ್ವೀಕರಿಸಲು ಸಂಬಂಧಪಟ್ಟವರು ಖುದ್ದಾಗಿ ಹಾಜರಾಗಬೇಕು ಎಂದು ಸೂಚಿಸಿತು. ತಮ್ಮ ಸಹೋದ್ಯೋಗಿಗಳನ್ನು ಕಳುಹಿಸಿ ವರದಿ ಪಡೆದುಕೊಳ್ಳುವುದಾಗಿ ಸಚಿನ್ ತಿಳಿಸಿದರು. ಅಲ್ಲದೆ, ಎಸ್‌ಪಿಪಿ ರಜೆಯಲ್ಲಿರುವ ಹಿನ್ನೆಲೆಯಲ್ಲಿ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಶನಿವಾರ ಅಥವಾ ಸೋಮವಾರ ಆಕ್ಷೇಪಣೆ ಸಲ್ಲಿಸುವುದಾಗಿ ಕೋರಿದ ಹಿನ್ನೆಲೆಯಲ್ಲಿ, ಸೋಮವಾರದೊಳಗೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ಸೂಚನೆ ನೀಡಿತು.

ದರ್ಶನ್ ಪರ ವಕೀಲರ ವಾದವೇನು?
ವೈದ್ಯಕೀಯ ವರದಿ ಸಲ್ಲಿಕೆಯ ಬೆನ್ನಲ್ಲೇ ದರ್ಶನ್ ಪರ ವಕೀಲ ಹಾಷ್ಮತ್ ಪಾಷ ಅವರು ನ್ಯಾಯಾಲಯದಲ್ಲಿ ತೀವ್ರ ವಾದ ಮಂಡಿಸಿದರು. ವೈದ್ಯಕೀಯ ವರದಿಯ ಪ್ರಕಾರ ದರ್ಶನ್ ಅವರಿಗೆ ಬೆನ್ನುಮೂಳೆಯ ನಡುವಿನ ಡಿಸ್ಕ್ ಜಾರುವಿಕೆ (Lumbar Intervertebral Disc Prolapse) ಸಮಸ್ಯೆ ಇದೆ ಎಂಬುದು ಸ್ಪಷ್ಟವಾಗಿದೆ. ಅವರು ಕಳೆದ 12 ವರ್ಷಗಳಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದು, ನೋವು ಶಮನಕ್ಕಾಗಿ ಕಾಲಕಾಲಕ್ಕೆ ಎಪಿಡ್ಯೂರಲ್ ಇಂಜೆಕ್ಷನ್ (Epidural Injection) ಪಡೆಯುತ್ತಿದ್ದರು ಎಂದು ವಕೀಲರು ವಿವರಿಸಿದರು.

ಜೈಲಿಗೆ ದಾಖಲಾದಾಗಿನಿಂದ ಅವರಿಗೆ ಎಪಿಡ್ಯೂರಲ್ ಇಂಜೆಕ್ಷನ್ ನೀಡಿಲ್ಲ ಹಾಗೂ ಅಗತ್ಯ ಫಿಸಿಯೋಥೆರಪಿ ಚಿಕಿತ್ಸೆಯೂ ಸರಿಯಾಗಿ ದೊರೆತಿಲ್ಲ, ಇದರಿಂದ ಬೆನ್ನು ನೋವು ತೀವ್ರಗೊಂಡಿದೆ ಎಂದು ಹಾಷ್ಮತ್ ಪಾಷ ಆತಂಕ ವ್ಯಕ್ತಪಡಿಸಿದರು. ಪ್ರಕರಣದ ವಿವರಗಳ ಪ್ರಕಾರ, ಇದುವರೆಗೆ ಕೇವಲ ಎರಡು ಬಾರಿ ಮಾತ್ರ ಫಿಸಿಯೋಥೆರಪಿ ಸೆಷನ್‌ಗಳನ್ನು ನೀಡಲಾಗಿದ್ದು, ಒಟ್ಟಾರೆ ಸುಮಾರು 3 ಗಂಟೆಗಳ ಫಿಸಿಯೋಥೆರಪಿ ಮಾತ್ರ ನಡೆದಿದೆ. ನವೆಂಬರ್ 7ರಿಂದ ನವೆಂಬರ್ 28ರವರೆಗೆ ಫಿಸಿಯೋಥೆರಪಿ ನೀಡಲು ಸಾಧ್ಯವಾಗುವುದಿಲ್ಲ ಎಂಬ ಮಾಹಿತಿಯಿದ್ದು, ಇದರಿಂದ ನೋವು ಮತ್ತಷ್ಟು ಹೆಚ್ಚಾಗುವ ಅಪಾಯವಿದೆ. ನಿರಂತರ ಫಿಸಿಯೋಥೆರಪಿ ದೊರೆತರೆ ಮಾತ್ರ ನೋವನ್ನು ನಿಯಂತ್ರಣದಲ್ಲಿಡಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

ಅಲ್ಲದೆ, ದರ್ಶನ್ ಅವರಿಗೆ ಚಿಕಿತ್ಸೆ ನೀಡಲು ಬರುತ್ತಿರುವ ಸಿಬ್ಬಂದಿ ಪರಿಣತಿ ಹೊಂದಿದ ಅನುಭವಿ ತಜ್ಞರಲ್ಲ, ಬದಲಿಗೆ ಫಿಸಿಯೋಥೆರಪಿ ಸಹಾಯಕರನನ್ನು ಕಳುಹಿಸಲಾಗುತ್ತಿದೆ ಎಂಬ ಅಂಶವನ್ನು ಅವರು ಗಮನಕ್ಕೆ ತಂದರು. ಆದ್ದರಿಂದ ತಜ್ಞ ಫಿಸಿಯೋಥೆರಪಿಸ್ಟ್‌ ಅಗತ್ಯವಿದೆ ಹಾಗೂ ಲೇಜರ್ ಥೆರಪಿ ಮತ್ತು ಅಲ್ಟ್ರಾ ಸೌಂಡ್ ಥೆರಪಿಯಂತಹ ಆಧುನಿಕ ಚಿಕಿತ್ಸೆಗಳು ನೋವು ಕಡಿಮೆ ಮಾಡಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು. ಎಪಿಡ್ಯೂರಲ್ ಇಂಜೆಕ್ಷನ್ ಅನ್ನು ಆಪರೇಷನ್ ಥಿಯೇಟರ್‌ನಲ್ಲಿ ಮಾತ್ರ ನೀಡಲು ಸಾಧ್ಯವಾಗುವುದರಿಂದ, ಅಗತ್ಯ ವೈದ್ಯಕೀಯ ಸೌಲಭ್ಯ ಹಾಗೂ ಯಂತ್ರೋಪಕರಣಗಳು ಇರುವ ವಿಕ್ಟೋರಿಯಾ ಆಸ್ಪತ್ರೆ, ಬಿಜಿಎಸ್ ಆಸ್ಪತ್ರೆ ಅಥವಾ ಓಸ್ಮಾಟ್ ಆಸ್ಪತ್ರೆ — ಈ ಮೂರು ಆಸ್ಪತ್ರೆಗಳಲ್ಲಿ ಯಾವುದಾದರೂ ಒಂದರಲ್ಲಿ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು. ನ್ಯಾಯಾಲಯದ ಸ್ಪಷ್ಟ ನಿರ್ದೇಶನ ಇಲ್ಲದಿದ್ದರೆ ಈ ಸಮಸ್ಯೆಗಳಿಗೆ ಯಾರೂ ಗಮನ ಹರಿಸುವುದಿಲ್ಲ ಎಂದೂ ಅವರು ಹೇಳಿದರು.

ಕೋರ್ಟ್ ನಿರ್ದೇಶನ ಹಾಗೂ ಮುಂದೂಡಿಕೆ
ವಾದ-ಪ್ರತಿವಾದ ಆಲಿಸಿದ 59ನೇ ಸಿಸಿಹೆಚ್ ನ್ಯಾಯಾಲಯವು, ದರ್ಶನ್ ಅವರ ನೋವನ್ನು ಕಡಿಮೆ ಮಾಡಲು ಸೂಕ್ತ ಚಿಕಿತ್ಸೆ ಒದಗಿಸುವಂತೆ ಮುಖ್ಯ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿತು. ಅಗತ್ಯಬಿದ್ದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡುವಂತೆಯೂ ಆದೇಶಿಸಿತು. ಈ ಆದೇಶವನ್ನು ತಕ್ಷಣವೇ ಇ-ಮೇಲ್ ಮೂಲಕ ಜೈಲು ಅಧಿಕಾರಿಗಳಿಗೆ ತಲುಪಿಸಲು ಕೋರ್ಟ್ ಸೂಚಿಸಿತು. ಇದೇ ವೇಳೆ, ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಯಿತು.

Add Zee News as a Preferred Source
TAGS:
Cinema