10 ಕೋಟಿ ಹಣಕ್ಕಾಗಿ ನಡಿತಿದ್ಯಾ ಧನ್ವೀರ್ ಹಾಗೂ ವಿಜಯಲಕ್ಷ್ಮೀ ನಡುವೆ ಕೋಲಾಹಲ..?
ವಿಜಯಲಕ್ಷ್ಮಿ ಹಾಗೂ ಧನ್ವೀರ್ ನಡುವಿನ ಮುಸುಕಿನ ಗುದ್ದಾಟ ಬಯಲಿಗೆ ಬಂದಿದೆ.ಇಬ್ರ ನಡುವಿನ ಆರೋಪ ಪ್ರತ್ಯಾರೋಪಕ್ಕೆ ಕಾರಣ ಏನು ಅನ್ನೋದು ದೊಡ್ಡ ಪ್ರಶ್ನೆಯಾಗಿತ್ತು.ಆದ್ರೆ ಅದೂ ಕೂಡ ಈಗ ರಿವೀಲ್ ಆಗಿದೆ. ಇಬ್ಬರ ನಡುವಿನ ಕೋಲಾಹಲಕ್ಕೆ ಹತ್ತು ಕೋಟಿ ಹಣ ಕಾರಣನಾ ಅನ್ನೋ ಪ್ರಶ್ನೆ ಈಗ ಎದ್ದಿದೆ
ವಿಜಯಲಕ್ಷ್ಮಿ ಹಾಗೂ ಧನ್ವೀರ್ ನಡುವಿನ ಮುಸುಕಿನ ಗುದ್ದಾಟ ಬಯಲಿಗೆ ಬಂದಿದೆ.ಇಬ್ರ ನಡುವಿನ ಆರೋಪ ಪ್ರತ್ಯಾರೋಪಕ್ಕೆ ಕಾರಣ ಏನು ಅನ್ನೋದು ದೊಡ್ಡ ಪ್ರಶ್ನೆಯಾಗಿತ್ತು.ಆದ್ರೆ ಅದೂ ಕೂಡ ಈಗ ರಿವೀಲ್ ಆಗಿದೆ. ಇಬ್ಬರ ನಡುವಿನ ಕೋಲಾಹಲಕ್ಕೆ ಹತ್ತು ಕೋಟಿ ಹಣ ಕಾರಣನಾ ಅನ್ನೋ ಪ್ರಶ್ನೆ ಈಗ ಎದ್ದಿದೆ
ನಟ ಧನ್ವೀರ್ ಹಾಗೂ ದರ್ಶನ್..ಸ್ನೇಹಿತರು ಅಂದ್ರೆ ಹೀಗಿರಬೇಕು..ರಕ್ತ ಸಂಬಂಧಿಗಳಿಗಿಂತ ಹೆಚ್ಚು ಅನ್ನೋದು ಇಬ್ರನ್ನ ನೋಡ್ತಿದ್ದವರು ಆಡಿಕೊಳ್ತಿದ್ದ ಮಾತು.ಆದ್ರೆ ಕುರುಡು ಕಾಂಚಾಣ ಎಂತವರನ್ನು ದೂರ ಮಾಡಿಬಿಡುತ್ತೆ.ಇದ್ರಿಂದ ದರ್ಶನ್,ವಿಜಯಲಕ್ಷ್ಮೀ ಹಾಗೂ ಧನ್ವೀರ್ ಕೂಡ ಹೊರತಲ್ಲ ಅನ್ನೋದು ಸದ್ಯದ ಬೆಳವಣಿಗೆ ನೋಡ್ತಾ ಹೋದರೆ ಗೊತ್ತಾಗಿಬಿಡುತ್ತೆ
ಹೌದು..ಧನ್ವೀರ್ ಹಾಗೂ ದರ್ಶನ್ ಅತ್ಯಾಪ್ತ ಗೆಳೆಯರು.ವಿಜಯಲಕ್ಷ್ಮೀ ಜೊತೆಗೆ ಕೂಡ ಅಷ್ಟೇ ಆತ್ಮೀಯತೆಯಿಂದ ಇದ್ದ ಬಜಾರ್ ಹುಡುಗನನ್ನು ವಿಜಯಲಕ್ಷ್ಮೀ ಕೂಡ ಧನ್ವೀರ್ ನನ್ನ ತನ್ನ ಮನೆ ಸದಸ್ಯನಂತೆ ಕಾಣ್ತಿದ್ರು.ಆದ್ರೆ ಈಗ ಎಲ್ಲವು ಮೊದಲಿನಂತಿಲ್ಲ..ಆತ್ಮೀಯತೆ,ನಂಬಿಕೆ,ಪ್ರೀತಿ,ಕಾಳಜಿ ಅನ್ನೋದು ಮುಗಿದೋದ ಅಧ್ಯಾಯ.ಈಗೇನಿದ್ರು ಬರೀ ಕೋಪ,ಜಗಳ,ವೈಮನಸ್ಸು ಇಷ್ಟಕ್ಕೆಲ್ಲಾ ಕಾರಣ 10 ಕೋಟಿ ಹಣ ಅನ್ನೋ ವಿಚಾರ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿಸಿದೆ..
ಆಗಿದ್ದೇನಂದ್ರೆ ನಟ ದರ್ಶನ್ ಜೈಲು ಸೇರಿದ ಬಳಿಕ ದರ್ಶನ್ ಮನೆ ಪೊಲೀಸರ ಅತಿಥಿ ಗೃಹದಂತಾಗಿತ್ತು.ಮನೆ ಪರಿಶೀಲನೆ ಅಂತಾ ಆಗಾಗ ಹೋಗಿ ಬರ್ತಿದ್ರು.ಇದರಿಂದ ಹೆದರಿದ್ದ ವಿಜಯಲಕ್ಷ್ಮೀ ಮನೆಯಲ್ಲಿದ್ದ 10 ಕೋಟಿ ಹಣವನ್ನು ಧನ್ವೀರ್ ಗೆ ನೀಡಿದ್ದರಂತೆ..ಇದನ್ನು ಇಟ್ಟುಕೊ ಪೊಲೀಸರಿಗೆ ಹಣ ಇರೋ ಸಂಗತಿ ಗೊತ್ತಾದರೆ ಕಷ್ಟವಾಗುತ್ತೆ..ಎಲ್ಲಾ ಸರಿ ಆದಮೇಲೆ ತೆಗೆದುಕೊಳ್ತಿನಿ ಅಂತಾ ಹೇಳಿದ್ರಂತೆ..ಆದ್ರೆ ಹಣ ಪಡೆದ ಧನ್ವೀರ್ ವಾಪಸ್ಸು ಕೊಡೊ ಮನಸ್ಸು ಮಾಡಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ..ಕೇಳಿದ್ರೆ ಧಮ್ಕಿ ಹಾಕೋದು,ಫೋನ್ ರಿಸೀವ್ ಮಾಡದೇ ಇರೋದು ಮಾಡ್ತಿದ್ದನಂತೆ..ಅಲ್ಲದೆ ಅಣ್ಣ ಅಂದ್ರೆ ದರ್ಶನ್ ಹೇಳಿದ್ರೆ ಹಣ ಕೊಟ್ಟು ಬಿಡ್ತಿನಿ ಅಂದಿದ್ದನಂತೆ..ಹೇಗೆ ಹೇಳ್ತಾ ಕಾಲಾಹರಣ ಮಾಡುತ್ತಿದ್ದಿದ್ದಾಗಿ ಗೊತ್ತಾಗಿದೆ..ಇವನ ಈ ಆಟಾಟೋಪ ಯಾವಾಗ ಜಾಸ್ತಿ ಆಯ್ತು ಆಗ ಮತ್ತೆ ಎಂಟ್ರಿ ಆಗಿದ್ದೆ ಕೊಲೆ ಕೇಸ್ ನಲ್ಲಿ ಜೈಲು ಹಕ್ಕಿಯಾಗಿರೊ ದಾಸ ದರ್ಶನ್.
ದರ್ಶನ್ ಹಾಗೂ ಧನ್ವೀರ್ ತಂದೆಗೆ ಮ್ಯೂಚುಯಲ್ ಫ್ರೆಂಡ್ ಆಗಿರೊ ವೇಲು ನಾಯಕರ್ ಮೂಲಕ ಡೀಲ್ ನಡೆಸಲು ಪ್ಲಾನ್ ಆಗಿತ್ತು.ಅದ್ರಂತೆ ವಿಜಯಲಕ್ಷ್ಮೀ ಧನ್ವೀರ್ ಹಾಗೂ ವೇಲು ನಾಯಕರ್ ನನ್ನ ದರ್ಶನ್ ಎರಡು ತಿಂಗಳ ಹಿಂದೆ ಜೈಲಿಗೆ ಕರೆಸಿಕೊಂಡಿದ್ದ.ಧನ್ವೀರ್ ನನ್ನ ಚಿನ್ನ ವಿಜಯಲಕ್ಷ್ಮೀಗೆ ಹಣವನ್ನು ವೇಲು ನಾಯಕರ್ ಮೂಲಕ ತಲುಪಿಸಿಬಿಡು ಅಂದಿದ್ದರಂತೆ..ಅದ್ರಂತೆ ಧನ್ವೀರ್ ನಾಳೆನೆ ಹಣ ತಲುಪಿಸೋದಾಗಿ ಹೇಳಿದ್ದನಂತೆ.ಆದ್ರೆ ಹೊರಗೆ ಬಂದವನೇ ಮತ್ತೆ ತನ್ನ ವರಸೆ ಬದಲಿಸಿದ್ದ..ವೇಲು ನಾಯಕರ್ ಗೆ ಕರೆ ಮಾಡಿ ನಮ್ಮ ವಿಚಾರದಲ್ಲಿ ಮಧ್ಯೆ ಬರಬೇಡಿ ಅಂತಾ ಹೇಳಿದ್ದನಂತೆ.ಆದ್ರೆ ವೇಲು ನಾಯ್ಕರ್ ನೇರವಾಗಿ ಗೆಳೆಯನೂ ಆಗಿರೊ ಧನ್ವೀರ್ ತಂದೆ ಭೇಟಿಯಾಗಿ ಎಲ್ಲವನ್ನು ಪ್ರಸ್ತಾಪಿಸಿದ್ದಾರೆ.ಆದ್ರೆ ಅವರು ಕೂಡ ಸ್ಪಂದನೆ ನೀಡಲೇ ಇಲ್ಲ ಎಂದು ಆರೋಪಿಸಿದ್ದಾರೆ..
ಇದೇ ವಿಚಾರ ಪದೇ ಪದೇ ಪ್ರಸ್ತಾಪವಾಗಿದ್ದು ವಿಜಯದಶಮಿ ದಿನ ಧನ್ವೀರ್ ತಂದೆ ತಿಮ್ಮೇಗೌಡಗೆ ಮೆಸೆಜ್ ಮಾಡಿ ವಿಜಯಲಕ್ಷ್ಮೀ ಮನೆಗೆ ಬಂದು ಹಣ ಕೇಳಿದ್ದಾರೆ..ಈ ವೇಳೆ ಗಲಾಟೆ ತೆಗೆದಿದ್ದು,ಅವ್ರು ತೆರಳಿದ ಬಳಿಕ ಧನ್ವೀರ್ ವಿಜಯಲಕ್ಷ್ಮೀ ಮ್ಯಾನೆಜರ್ ನಾಗರಾಜ್ ಗೆ ಕರೆ ಮಾಡಿ ಮನ ಬಂದಂತೆ ನಿಂದಿಸಿದ್ದಾರೆ..ಇದು ಸರಿಯಾದ ನಡತೆ ಅಲ್ಲಾ ಅಂತಾ ವೇಲು ನಾಯ್ಕರ್ ಆರೋಪಿಸಿದ್ದು,ಧನ್ವೀರ್ ಸಾಕಷ್ಟು ಜನರಿಂದ ಹಣ ಪಡೆದುಕೊಂಡಿದ್ದಾನೆ..ವಾಪಸ್ಸು ಕೇಳಿದ್ರೆ ಕೇರಳಿಬಿಡ್ತಾನೆ ಅಂತಾ ಗಂಭೀರ ಆರೋಪವನ್ನೇ ವೇಲು ನಾಯಕರ್ ಮಾಡಿದ್ದಾರೆ.
ಅದೇನೇ ಹೇಳಿ 10 ಕೋಟಿ ಹಣಕ್ಕಾಗಿ ಇಷ್ಟೆಲ್ಲಾ ಹೈಡ್ರಾಮಾ ನಡಿತಾ ಇದ್ರು ದುಡ್ಡಿನ ವಿಚಾರ ಮಾತ್ರ ಎಲ್ಲು ಪ್ರಸ್ತಾಪವಾಗಿಲ್ಲ ಅದಕ್ಕೆ ಕಾರಣ ,ಆದಾಯದ ಮೂಲ ತೋರಿಸಬೇಕು ,ಐಟಿ ಪ್ರಾಬ್ಲಂ ಆಗಬಹುದು ಅನ್ನೋದು.ಹೇಗಾದ್ರು ಮಾಡಿ ಕೊಟ್ಟ ಹಾಗೆನೆ ತೆಗೆದುಕೊಳ್ಳಬೇಕು ಅಂತಾ ವಿಜಯಲಕ್ಷ್ಮೀ ಪ್ರಯತ್ನಿಸ್ತಿದ್ದು, ಹಣ ವಾಪಸ್ಸು ಕೊಡಲು ಮನಸ್ಸಿಲ್ಲದೆ ಧನ್ವೀರ್ ನಿರಾಕರಿಸುತ್ತಿದ್ದಾನೆ ಎನ್ನಲಾಗ್ತಿದ್ದು,ಬೆದರಿಕೆಗೆ ಸಂಬಂಧಬಪಟ್ಟಂತೆ ಅಷ್ಟೇ ದೂರು ಪ್ರತಿ ದೂರುಗಳ ಸರಣಿ ಮುಂದುವರೆದಿದೆ..ಇದು ಯಾವ ಹಂತಕ್ಕೆ ಹೋಗಿ ನಿಲ್ಲುತ್ತೆ ಅನ್ನೋದನ್ಮ ಕಾದು ನೋಡಬೇಕಿದೆ