SOCIAL MEDIA

Newsletter

PARTNER SITES
Select Language Select State

ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ 474 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ; ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಸುವರ್ಣಾವಕಾಶ!

474 Vacancies in Karnataka Fire & Emergency Services; Applications Open Nov 23 : ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ 474 ಹುದ್ದೆಗಳ ನೇಮಕಾತಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವ 460 ಅಗ್ನಿಶಾಮಕ ಹಾಗೂ 14 ಠಾಣಾಧಿಕಾರಿ ಸೇರಿದಂತೆ ಒಟ್ಟು 474 ಹುದ್ದೆಗಳ ನೇರ ನೇಮಕಾತಿಗೆ KEA ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

Written By Ramya. R. Gowda
Published: Nov 21, 2026, 17:19 IST | Updated: Nov 21, 2026, 17:25 IST
Join

ಬೆಂಗಳೂರು : ರಾಜ್ಯ ಸರ್ಕಾರಿ ಉದ್ಯೋಗದ ನೀರಿಕ್ಷೆಯಲ್ಲಿರುವ ಯುವಕರಿಗೆ ಕರ್ನಾಟಕ ರಾಜ್ಯ ಅಗ್ನಿ ಶಾಮಕ  ಮತ್ತು ತುರ್ತು ಸೇವೆಗಳ ಇಲಾಖೆಯು ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 474 ಅಗ್ನಿ ಶಾಮಕ ಮತ್ತು ಅಗ್ನಿಶಾಮಕಠಾಣಾಧಿಕಾರಿ ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಆನ್‌ಲೈನ್‌ ಅರ್ಜಿ  ಆಹ್ವಾನಿಸಲಾಗಿದೆ. ನವೆಂಬರ್ 23ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಆಸಕ್ತ ಪುರುಷ ಅಭ್ಯರ್ಥಿಗಳು ಡಿಸೆಂಬರ್ 22ರೊಳಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ:
ಒಟ್ಟು 474 ಹುದ್ದೆಗಳ ಪೈಕಿ 460 ಅಗ್ನಿಶಾಮಕ ಹುದ್ದೆಗಳು ಹಾಗೂ 14 ಅಗ್ನಿಶಾಮಕ ಠಾಣಾಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದೆ. (ಉಳಿದ 2 ಠಾಣಾಧಿಕಾರಿ ಹುದ್ದೆಗಳು ಇಲಾಖಾ ಸಿಬ್ಬಂದಿಗೆ ಮೀಸಲಾಗಿವೆ.
•ಅಭ್ಯರ್ಥಿಗಳು ಕನ್ನಡವನ್ನು ಒಂದು ವಿಷಯವಾಗಿ ಹೊಂದಿರುವ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

•ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರ ವಿಷಯದೊಂದಿಗೆ ವಿಜ್ಙಾನ ಪದವಿ ಪಡೆದಿರಬೇಕು. ಕೊನೆಯ ದಿನಾಂಕದೊಳಗೆ ಅಂಕಪಟ್ಟಿ ಹೊಂದಿರುವುದು ಕಡ್ಡಾಯವಾಗಿದ್ದು, ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅಗ್ನಿಶಾಮಕ ಹುದ್ದೆಗೆ ಕನಿಷ್ಠ 18 ವರ್ಷ ಹಾಗೂ ಠಾಣಾಧಿಕಾರಿ ಹುದ್ದೆಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಸರ್ಕಾರದ ಒಂದು ಬಾರಿಯ 5 ವರ್ಷಗಳ ಸಡಿಲಿಕೆಯೊಂದಿಗೆ ಸಾಮಾನ್ಯ ವರ್ಗದವರಿಗೆ ಗರಿಷ್ಠ 31 ವರ್ಷ ಹಾಗೂ ಎಸ್‌ಸಿ, ಎಸ್‌ಟಿ, ಪ್ರವರ್ಗ-1, 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 33 ವರ್ಷ ನಿಗದಿಪಡಿಸಲಾಗಿದೆ.

ಅಗ್ನಿಶಾಮಕ ಹುದ್ದೆಗೆ ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ 500 ರೂ. ಹಾಗೂ ಎಸ್‌ಸಿ/ಎಸ್‌ಟಿ/ಪ್ರವರ್ಗ-1/ಮಾಜಿ ಸೈನಿಕರಿಗೆ 300 ರೂ. ನಿಗದಿಯಾಗಿದೆ. ಠಾಣಾಧಿಕಾರಿ ಹುದ್ದೆಗೆ ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ 750 ರೂ. ಹಾಗೂ ಮೀಸಲಾತಿ ಅಭ್ಯರ್ಥಿಗಳಿಗೆ 500 ರೂ. ಶುಲ್ಕವಿದೆ.

ಎರಡೂ ಹುದ್ದೆಗಳಿಗೆ ದೈಹಿಕ ಪರೀಕ್ಷೆ ನಿರ್ಣಾಯಕವಾಗಿದೆ. ಅಭ್ಯರ್ಥಿಗಳು ಕನಿಷ್ಠ 168 ಸೆಂ.ಮೀ ಎತ್ತರ, 50 ಕೆ.ಜಿ ತೂಕ ಹಾಗೂ 81 ಸೆಂ.ಮೀ ಎದೆ ಸುತ್ತಳತೆ (5 ಸೆಂ.ಮೀ ವಿಸ್ತರಣೆ ಸಹಿತ) ಹೊಂದಿರಬೇಕು. ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ 100 ಮೀಟರ್ ಓಟ, 22 ಕೆ.ಜಿ ಭಾರ ಹೊತ್ತು 100 ಮೀ. ಓಟ, 22 ಕೆ.ಜಿ ಭಾರ ಹೊತ್ತು 20 ಅಡಿ ಏಣಿ ಏರುವುದು, ಗುಂಡು ಎಸೆತ ಹಾಗೂ 800 ಮೀ. ಓಟದ ಸ್ಪರ್ಧೆಗಳಿದ್ದು, ಕನಿಷ್ಠ ಮೂರರಲ್ಲಿ ಉತ್ತೀರ್ಣರಾಗುವುದು ಕಡ್ಡಾಯ.

ಅಗ್ನಿಶಾಮಕ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆಗೆ ಕರೆಯಲಾಗುವುದು. ನಂತರ ಎರಡೂ ಹಂತಗಳ ಅಂಕಗಳನ್ನು ಪರಿಗಣಿಸಿ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಇನ್ನು ಠಾಣಾಧಿಕಾರಿ ಹುದ್ದೆಗೆ ದೈಹಿಕ ಪರೀಕ್ಷೆಯಲ್ಲಿ ಪಾಸಾದವರಿಗೆ ಬೆಂಗಳೂರಿನಲ್ಲಿ ತಲಾ 100 ಅಂಕಗಳ ಎರಡು ಲಿಖಿತ ಪರೀಕ್ಷೆಗಳನ್ನು (ಪತ್ರಿಕೆ-1 ಸಾಮಾನ್ಯ ಜ್ಞಾನ, ಪತ್ರಿಕೆ-2 ವಿಜ್ಞಾನ ಮತ್ತು ಆಪ್ಟಿಟ್ಯೂಡ್) ನಡೆಸಿ ಆಯ್ಕೆ ಮಾಡಲಾಗುತ್ತದೆ.

ಆಯ್ಕೆಯಾದ ಅಗ್ನಿಶಾಮಕರಿಗೆ ಮಾಸಿಕ 37,500 ರೂ.ನಿಂದ 76,100 ರೂ.ವರೆಗೆ ಹಾಗೂ ಅಗ್ನಿಶಾಮಕ ಠಾಣಾಧಿಕಾರಿಗಳಿಗೆ 54,175 ರೂ.ನಿಂದ 99,400 ರೂ.ವರೆಗೆ ಆಕರ್ಷಕ ವೇತನ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES