• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /ಸುಕನ್ಯಾ ಸಮೃದ್ಧಿ ಯೋಜನೆ: ತಿಂಗಳಿಗೆ ₹1,000 ಹೂಡಿಕೆ ಮಾಡಿದರೆ 21 ವರ್ಷಕ್ಕೆ ಸಿಗುವ ಮೊತ್ತವೆಷ್ಟು?

ಸುಕನ್ಯಾ ಸಮೃದ್ಧಿ ಯೋಜನೆ: ತಿಂಗಳಿಗೆ ₹1,000 ಹೂಡಿಕೆ ಮಾಡಿದರೆ 21 ವರ್ಷಕ್ಕೆ ಸಿಗುವ ಮೊತ್ತವೆಷ್ಟು?

ಸುಕನ್ಯಾ ಸಮೃದ್ಧಿ ಯೋಜನೆಯಡಿ ತಿಂಗಳಿಗೆ ₹1,000ರಿಂದ ₹12,500ವರೆಗೆ ಹೂಡಿಕೆ ಮಾಡಬಹುದು. 15 ವರ್ಷಗಳ ಕಾಲ ಹಣ ಠೇವಣಿ ಮಾಡಿ, 21 ವರ್ಷಗಳ ನಂತರ ಬಡ್ಡಿ ಸಹಿತ ಮೆಚ್ಯೂರಿಟಿ ಮೊತ್ತ ಪಡೆಯಬಹುದು. ಶೇ.8.2ರ ಬಡ್ಡಿದರದ ಆಧಾರದ ಮೇಲೆ ತಿಂಗಳಿಗೆ ₹1,000 ಹೂಡಿಕೆ ಮಾಡಿದರೆ ಅಂದಾಜು ₹5.55 ಲಕ್ಷ, ₹5,000 ಹೂಡಿಕೆ ಮಾಡಿದರೆ ₹27.73 ಲಕ್ಷ ಹಾಗೂ ₹12,500 ಹೂಡಿಕೆ ಮಾಡಿದರೆ ₹69.33 ಲಕ್ಷ ಸಿಗಬಹುದು. ಬಡ್ಡಿದರ ಬದಲಾದಂತೆ ಅಂತಿಮ ಮೊತ್ತವೂ ಬದಲಾಗಬಹುದು.

Written ByPuttaraj K Alur
Published: Nov 22, 2026, 15:17 IST|Updated: Nov 22, 2026, 15:27 IST
joinshare
ಸುಕನ್ಯಾ ಸಮೃದ್ಧಿ ಯೋಜನೆ: ತಿಂಗಳಿಗೆ ₹1,000 ಹೂಡಿಕೆ ಮಾಡಿದರೆ 21 ವರ್ಷಕ್ಕೆ ಸಿಗುವ ಮೊತ್ತವೆಷ್ಟು?
Image Credit: SSY Scheme

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಹಿರಿಯ ನಾಗರಿಕರಿಗೆ ಎಲ್ಲಿ ಹೆಚ್ಚು ಬಡ್ಡಿ ಆದಾಯ? SBI FD ಅಥವಾ SCSS; ₹10, ₹20, ₹30 ಲಕ್ಷಕ್ಕೆ ಇಲ್ಲಿದೆ ಲೆಕ್ಕಾಚಾರ!

ಹಿರಿಯ ನಾಗರಿಕರಿಗೆ ಎಲ್ಲಿ ಹೆಚ್ಚು ಬಡ್ಡಿ ಆದಾಯ? SBI FD ಅಥವಾ SCSS; ₹10, ₹20, ₹30 ಲಕ್ಷಕ್ಕೆ ಇಲ್ಲಿದೆ ಲೆಕ್ಕಾಚಾರ!

2

₹1,000 ಇದ್ದರೆ ಸಾಕು! ಈ ವಾರ ಲಾಂಚ್ ಆಗಲಿವೆ 4 ಹೊಸ ಮ್ಯೂಚುವಲ್ ಫಂಡ್‌ಗಳು; ಹೂಡಿಕೆಗೆ ಸಿದ್ಧರಾಗಿ!

3

ʻಐಶಿರ್ʼ ಜೋಡಿಯ ನಿಶ್ಚಿತಾರ್ಥ ಸಂಭ್ರಮ: ಉಂಗುರ ಬದಲಾಯಿಸಿಕೊಂಡ ಶಿಶಿರ್ ಶಾಸ್ತ್ರಿ - ಐಶ್ವರ್ಯಾ

4

ಘೋರ ದುರಂತ: ಪ್ರೀತಿಸಿ ಮದುವೆಯಾದ ಕೇವಲ 45 ದಿನದಲ್ಲೇ ನವದಂಪತಿ ದುರ್ಮರಣ!

5

ಟೊಮೆಟೊ ಜ್ಯೂಸ್ vs ಕಿತ್ತಳೆ ಜ್ಯೂಸ್.. ಸಕ್ಕರೆ ನಿಯಂತ್ರಿಸಲು ಬೆಳಿಗ್ಗೆ ಯಾವುದು ಕುಡಿಯುವುದು ಉತ್ತಮ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Sukanya Samriddhi Yojana: ಹೆಣ್ಣುಮಕ್ಕಳ ಭವಿಷ್ಯದ ಆರ್ಥಿಕ ಭದ್ರತೆಯನ್ನ ಗಮನದಲ್ಲಿಟ್ಟುಕೊಂಡು ರೂಪಿಸಲಾಗಿರುವ ಪ್ರಮುಖ ಉಳಿತಾಯ ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana - SSY) ಕೂಡ ಒಂದು. ಅಂಚೆ ಇಲಾಖೆಯ ಮೂಲಕ ಲಭ್ಯವಿರುವ ಈ ಯೋಜನೆಯಲ್ಲಿ ಮಗಳ ಹೆಸರಿನಲ್ಲಿ ನಿಯಮಿತವಾಗಿ ಹಣ ಹೂಡಿಕೆ ಮಾಡುವ ಮೂಲಕ ದೀರ್ಘಾವಧಿಯ ಉಳಿತಾಯಕ್ಕೆ ಅವಕಾಶವಿದೆ. ತಿಂಗಳಿಗೆ ₹1,000, ₹2,000, ₹5,000, ₹10,000 ಅಥವಾ ₹12,500 ಹೂಡಿಕೆ ಮಾಡಿದರೆ 21 ವರ್ಷಗಳ ಅವಧಿಯಲ್ಲಿ ಎಷ್ಟು ಮೊತ್ತ ಸಂಗ್ರಹವಾಗಬಹುದು ಎಂಬ ಕುತೂಹಲ ಅನೇಕರಲ್ಲಿದೆ.

2026-27ನೇ ಸಾಲಿನ ಮಾಹಿತಿಯ ಪ್ರಕಾರ, ಸುಕನ್ಯಾ ಸಮೃದ್ಧಿ ಯೋಜನೆಗೆ ಶೇ.8.2ರಷ್ಟು ಬಡ್ಡಿದರವನ್ನ ನೀಡಲಾಗಿದೆ. ಈ ಯೋಜನೆಯ ಪ್ರಮುಖ ವೈಶಿಷ್ಟ್ಯವೆಂದರೆ, ಹೂಡಿಕೆದಾರರು 15 ವರ್ಷಗಳವರೆಗೆ ಹಣವನ್ನ ಠೇವಣಿ ಮಾಡಬಹುದು. ನಂತರದ ಅವಧಿಯಲ್ಲಿ ಬಡ್ಡಿ ಲೆಕ್ಕಾಚಾರ ಮುಂದುವರಿದು, ಖಾತೆ ಆರಂಭಿಸಿದ 21 ವರ್ಷಗಳ ಬಳಿಕ ಮೆಚ್ಯೂರಿಟಿ ಮೊತ್ತವನ್ನ ಪಡೆಯಬಹುದು.

ತಿಂಗಳಿಗೆ ₹1,000 ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತದೆ?

ಒಂದು ವೇಳೆ ಪೋಷಕರು ತಮ್ಮ ಮಗಳ ಹೆಸರಿನಲ್ಲಿ ಪ್ರತಿತಿಂಗಳು ₹1,000 ಹೂಡಿಕೆ ಮಾಡಿದರೆ, 15 ವರ್ಷಗಳ ಅವಧಿಯಲ್ಲಿ ಒಟ್ಟು ₹1.80 ಲಕ್ಷ ಠೇವಣಿಯಾಗುತ್ತದೆ. ಈ ಮೊತ್ತಕ್ಕೆ ಬಡ್ಡಿ ಸೇರಿ 21 ವರ್ಷಗಳ ನಂತರ ಅಂದಾಜು ₹5.55 ಲಕ್ಷ ಮೆಚ್ಯೂರಿಟಿ ಮೊತ್ತ ದೊರೆಯಬಹುದು. ಇದರಲ್ಲಿ ₹3.75 ಲಕ್ಷದಷ್ಟು ಬಡ್ಡಿ ಆದಾಯ ಒಳಗೊಂಡಿರುತ್ತದೆ.

₹2,000 ಹೂಡಿಕೆಗೆ ಸಿಗುವ ಲಾಭವೆಷ್ಟು?

ಪ್ರತಿತಿಂಗಳು ₹2,000 ಉಳಿತಾಯ ಮಾಡಿದರೆ 15 ವರ್ಷಗಳಲ್ಲಿ ಒಟ್ಟು ₹3.60 ಲಕ್ಷ ಹೂಡಿಕೆಯಾಗುತ್ತದೆ. 21 ವರ್ಷಗಳ ನಂತರ ಅಂದಾಜು ₹7.49 ಲಕ್ಷ ಬಡ್ಡಿ ಮೊತ್ತದೊಂದಿಗೆ ಒಟ್ಟು ₹11.09 ಲಕ್ಷ ಸಂಗ್ರಹವಾಗಬಹುದು. ನಿಯಮಿತವಾಗಿ ಸಣ್ಣ ಮೊತ್ತವನ್ನ ಉಳಿಸುವ ಮೂಲಕ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತವನ್ನ ರೂಪಿಸಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ.

₹5,000 ಹೂಡಿಕೆ ಮಾಡಿದರೆ ₹27 ಲಕ್ಷಕ್ಕೂ ಅಧಿಕ ಮೊತ್ತ!

ಪ್ರತಿತಿಂಗಳು ₹5,000 ಹೂಡಿಕೆ ಮಾಡುವ ಪೋಷಕರಿಗೆ 15 ವರ್ಷಗಳ ಅವಧಿಯಲ್ಲಿ ಒಟ್ಟು ₹9 ಲಕ್ಷ ಠೇವಣಿಯಾಗುತ್ತದೆ. ಇದಕ್ಕೆ ಅಂದಾಜು ₹18.73 ಲಕ್ಷ ಬಡ್ಡಿ ಸೇರ್ಪಡೆಯಾಗುತ್ತದೆ. ಹೀಗಾಗಿ 21 ವರ್ಷಗಳ ನಂತರ ಒಟ್ಟು ₹27.73 ಲಕ್ಷ ಮೆಚ್ಯೂರಿಟಿ ಮೊತ್ತ ದೊರೆಯಬಹುದು.

₹10,000 ಹೂಡಿಕೆ ಮಾಡಿದರೆ ₹55.46 ಲಕ್ಷ!

ತಮ್ಮ ಮಗಳ ಭವಿಷ್ಯಕ್ಕಾಗಿ ಪ್ರತಿತಿಂಗಳು ₹10,000 ಉಳಿಸುವವರು 15 ವರ್ಷಗಳಲ್ಲಿ ಒಟ್ಟು ₹18 ಲಕ್ಷ ಹೂಡಿಕೆ ಮಾಡುತ್ತಾರೆ. ಈ ಮೊತ್ತಕ್ಕೆ ಅಂದಾಜು ₹37.46 ಲಕ್ಷ ಬಡ್ಡಿ ಸೇರ್ಪಡೆಯಾಗಿ, 21 ವರ್ಷಗಳ ನಂತರ ಒಟ್ಟು ₹55.46 ಲಕ್ಷ ಮೆಚ್ಯೂರಿಟಿ ಮೊತ್ತವಾಗಬಹುದು.

₹12,500 ಹೂಡಿಕೆ ಮಾಡಿದರೆ ₹69.33 ಲಕ್ಷ!

ಪ್ರತಿತಿಂಗಳು ₹12,500 ಹೂಡಿಕೆ ಮಾಡುವ ಲೆಕ್ಕಾಚಾರದ ಪ್ರಕಾರ, 15 ವರ್ಷಗಳ ಅವಧಿಯಲ್ಲಿ ಒಟ್ಟು ₹22.50 ಲಕ್ಷ ಠೇವಣಿಯಾಗುತ್ತದೆ. ಇದಕ್ಕೆ ಅಂದಾಜು ₹46.83 ಲಕ್ಷ ಬಡ್ಡಿ ಸೇರಿ, 21 ವರ್ಷಗಳ ನಂತರ ಒಟ್ಟು ₹69.33 ಲಕ್ಷ ಮೆಚ್ಯೂರಿಟಿ ಮೊತ್ತ ಸಿಗಬಹುದು ಎಂದು ನೀಡಿರುವ ಮಾಹಿತಿ ತಿಳಿಸುತ್ತದೆ.

ಗಮನಿಸಬೇಕಾದ ಪ್ರಮುಖ ಅಂಶಗಳು

ಸುಕನ್ಯಾ ಸಮೃದ್ಧಿ ಯೋಜನೆಯ ಈ ಲೆಕ್ಕಾಚಾರದಲ್ಲಿ ಶೇ.8.2ರ ಬಡ್ಡಿದರವನ್ನ ಆಧಾರವಾಗಿ ಪರಿಗಣಿಸಲಾಗಿದೆ. ಆದರೆ ಬಡ್ಡಿದರವು ಕಾಲಕಾಲಕ್ಕೆ ಬದಲಾಗುವ ಸಾಧ್ಯತೆಯಿರುವುದರಿಂದ ಅಂತಿಮವಾಗಿ ಸಿಗುವ ಮೆಚ್ಯೂರಿಟಿ ಮೊತ್ತದಲ್ಲಿಯೂ ವ್ಯತ್ಯಾಸ ಉಂಟಾಗಬಹುದು. ಇಲ್ಲಿ ನೀಡಿರುವ ಮೊತ್ತಗಳು ಪ್ರಸ್ತುತ ಬಡ್ಡಿದರದ ಆಧಾರದ ಮೇಲಿನ ಅಂದಾಜು ಲೆಕ್ಕಾಚಾರಗಳಾಗಿವೆ.

ಒಟ್ನಲ್ಲಿ ಮಗಳ ಭವಿಷ್ಯದ ಶಿಕ್ಷಣ, ಉನ್ನತ ವ್ಯಾಸಂಗ ಸೇರಿದಂತೆ ಮುಂದಿನ ಜೀವನದ ಆರ್ಥಿಕ ಅಗತ್ಯಗಳಿಗಾಗಿ ದೀರ್ಘಾವಧಿಯ ಉಳಿತಾಯ ರೂಪಿಸಲು ಸುಕನ್ಯಾ ಸಮೃದ್ಧಿ ಯೋಜನೆ ಗಮನ ಸೆಳೆಯುತ್ತಿದೆ. ತಿಂಗಳಿಗೆ ಎಷ್ಟು ಹಣ ಉಳಿಸುತ್ತೇವೆ ಎಂಬುದರ ಆಧಾರದ ಮೇಲೆ 21 ವರ್ಷಗಳ ನಂತರ ಸಂಗ್ರಹವಾಗುವ ಮೊತ್ತವೂ ಬದಲಾಗುತ್ತದೆ.

(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.)

Add Zee News as a Preferred Source
TAGS:
Personal Finance
Kannada News