• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /SBI FD: ಕೇವಲ 180 ದಿನ ಹಣ ಇಟ್ಟರೆ ಎಷ್ಟು ಬಡ್ಡಿ ಸಿಗುತ್ತೆ? ₹1 ಲಕ್ಷ, ₹5 ಲಕ್ಷ ಠೇವಣಿಗೆ ಎಷ್ಟು ಲಾಭ?

SBI FD: ಕೇವಲ 180 ದಿನ ಹಣ ಇಟ್ಟರೆ ಎಷ್ಟು ಬಡ್ಡಿ ಸಿಗುತ್ತೆ? ₹1 ಲಕ್ಷ, ₹5 ಲಕ್ಷ ಠೇವಣಿಗೆ ಎಷ್ಟು ಲಾಭ?

ಎಸ್‌ಬಿಐ 180 ದಿನಗಳ ಎಫ್‌ಡಿಗೆ ಸಾಮಾನ್ಯ ಗ್ರಾಹಕರಿಗೆ ವಾರ್ಷಿಕ ಶೇ.5.65 ಮತ್ತು ಹಿರಿಯ ನಾಗರಿಕರಿಗೆ ಶೇ.6.15ರಷ್ಟು ಬಡ್ಡಿ ನೀಡುತ್ತಿದೆ. ₹1 ಲಕ್ಷ ಠೇವಣಿಗೆ ಸರಳ ಬಡ್ಡಿ ಲೆಕ್ಕಾಚಾರದ ಪ್ರಕಾರ ಕ್ರಮವಾಗಿ ಸುಮಾರು ₹2,786 ಮತ್ತು ₹3,033 ಬಡ್ಡಿ ದೊರೆಯಬಹುದು. ₹5 ಲಕ್ಷ ಠೇವಣಿಗೆ ಸುಮಾರು ₹13,932 ಮತ್ತು ₹15,164 ಬಡ್ಡಿ ಸಿಗುವ ಅಂದಾಜಿದೆ.

Written ByPuttaraj K Alur
Published: Oct 11, 2026, 04:59 PM IST|Updated: Oct 11, 2026, 05:09 PM IST
joinshare
SBI FD: ಕೇವಲ 180 ದಿನ ಹಣ ಇಟ್ಟರೆ ಎಷ್ಟು ಬಡ್ಡಿ ಸಿಗುತ್ತೆ? ₹1 ಲಕ್ಷ, ₹5 ಲಕ್ಷ ಠೇವಣಿಗೆ ಎಷ್ಟು ಲಾಭ?
Image Credit: SBI FD Interest Rates

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ರಿಕ್ಷಾ ತುಳಿದು ಪತ್ನಿಯನ್ನ ಪೊಲೀಸ್‌ ಮಾಡಿದ ಗಂಡನಿಗೆ ಶಾಕ್‌! ಖಾಕಿ ತೊಟ್ಟ ಬಳಿಕ ಕೈಕೊಟ್ಟ ಪತ್ನಿ...

ರಿಕ್ಷಾ ತುಳಿದು ಪತ್ನಿಯನ್ನ ಪೊಲೀಸ್‌ ಮಾಡಿದ ಗಂಡನಿಗೆ ಶಾಕ್‌! ಖಾಕಿ ತೊಟ್ಟ ಬಳಿಕ ಕೈಕೊಟ್ಟ ಪತ್ನಿ...

2

ರಾಯಚೂರು PWD ಕಚೇರಿಯಲ್ಲಿ ಕಪ್ಪು ಗೊಂಬೆ ಪ್ರತ್ಯಕ್ಷ! ವಾಮಾಚಾರದ ಶಂಕೆ, ಇದರ ಹಿಂದಿರುವರ್ಯಾರು?

3

ಸಿಜೆಪಿ ಪ್ರತಿಭಟನೆ ನಟ ಇಮ್ರಾನ್ ಖಾನ್ ಸೇರಿ 400 ಕ್ಕೂ ಹೆಚ್ಚು ಜನರ ಬಂಧನ

4

ನಮ್ಮ ಮೆಟ್ರೋದಲ್ಲಿ ಯುವತಿಯ ಪುಲ್ ಅಪ್ ಸ್ಟಂಟ್ : BMRCL ಮೌನ, ವಿಡಿಯೋ ವೈರಲ್‌

5

ನವರಾತ್ರಿಯ 9 ದಿನ.. ದೇವಿಗೆ 9 ಬಗೆಯ ನೈವೇದ್ಯ ಮನೆಯಲ್ಲೇ ಮಾಡಿ, ಅಮ್ಮನ ಆಶೀರ್ವಾದ ಪಡೆಯಿರಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

SBI FD Interest Rates 2026: ಸುರಕ್ಷಿತ ಹೂಡಿಕೆಯ ಮೂಲಕ ನಿಗದಿತ ಆದಾಯ ಗಳಿಸಲು ಬಯಸುವವರಿಗೆ ಬ್ಯಾಂಕ್‌ಗಳ ಫಿಕ್ಸೆಡ್ ಡೆಪಾಸಿಟ್ (FD) ಯೋಜನೆಗಳು ಜನಪ್ರಿಯ ಆಯ್ಕೆಯಾಗಿವೆ. ವಿಶೇಷವಾಗಿ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೀಡುವ ನಿಶ್ಚಿತ ಠೇವಣಿ ಯೋಜನೆಗಳ ಬಗ್ಗೆ ಗ್ರಾಹಕರಲ್ಲಿ ಆಸಕ್ತಿ ಹೆಚ್ಚಿದೆ. ದೀರ್ಘಾವಧಿಗೆ ಹಣ ಹೂಡಿಕೆ ಮಾಡಲು ಇಷ್ಟಪಡದವರು ಕೇವಲ 180 ದಿನಗಳ ಅವಧಿಗೂ ಎಫ್‌ಡಿ ತೆರೆಯಬಹುದು. ಹಾಗಾದರೆ ಎಸ್‌ಬಿಐನಲ್ಲಿ 180 ದಿನಗಳ ಕಾಲ ₹1 ಲಕ್ಷ ಅಥವಾ ₹5 ಲಕ್ಷ ಠೇವಣಿ ಇಟ್ಟರೆ ಎಷ್ಟು ಬಡ್ಡಿ ಸಿಗುತ್ತದೆ? ಹಿರಿಯ ನಾಗರಿಕರಿಗೆ ಎಷ್ಟು ಹೆಚ್ಚುವರಿ ಲಾಭ ದೊರೆಯುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಎಸ್‌ಬಿಐ 180 ದಿನಗಳ ಎಫ್‌ಡಿಗೆ ಎಷ್ಟು ಬಡ್ಡಿ?

ಎಸ್‌ಬಿಐ ಪ್ರಕಟಿಸಿರುವ ಬಡ್ಡಿದರಗಳ ಪ್ರಕಾರ, ₹3 ಕೋಟಿಗಿಂತ ಕಡಿಮೆ ಮೊತ್ತದ ಸಾಮಾನ್ಯ ರಿಟೇಲ್‌ ಠೇವಣಿಗಳಲ್ಲಿ 180ರಿಂದ 210 ದಿನಗಳ ಅವಧಿಗೆ ಸಾಮಾನ್ಯ ಗ್ರಾಹಕರಿಗೆ ವಾರ್ಷಿಕ ಶೇ.5.65ರಷ್ಟು ಬಡ್ಡಿ ನೀಡಲಾಗುತ್ತದೆ. ಇದೇ ಅವಧಿಗೆ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ವಾರ್ಷಿಕ ಶೇ.6.15ರಷ್ಟು ಬಡ್ಡಿ ಲಭ್ಯವಿದೆ. ಅಂದರೆ ಸಾಮಾನ್ಯ ಗ್ರಾಹಕರಿಗಿಂತ ಹಿರಿಯ ನಾಗರಿಕರಿಗೆ ಶೇ.0.50ರಷ್ಟು ಹೆಚ್ಚುವರಿ ವಾರ್ಷಿಕ ಬಡ್ಡಿದರ ದೊರೆಯುತ್ತದೆ. ಆದರೆ ಇದು ವಾರ್ಷಿಕ ಬಡ್ಡಿದರವಾಗಿದ್ದು, ಕೇವಲ 180 ದಿನಗಳ ಹೂಡಿಕೆಗೆ ಪೂರ್ಣ ವರ್ಷದ ಬಡ್ಡಿ ಸಿಗುವುದಿಲ್ಲ.

₹1 ಲಕ್ಷ ಠೇವಣಿ ಇಟ್ಟರೆ ಎಷ್ಟು ಲಾಭ?

ಒಬ್ಬ ಸಾಮಾನ್ಯ ಗ್ರಾಹಕ ಎಸ್‌ಬಿಐನಲ್ಲಿ ₹1 ಲಕ್ಷವನ್ನ 180 ದಿನಗಳ ಅವಧಿಗೆ ಠೇವಣಿ ಇಟ್ಟರೆ, ವಾರ್ಷಿಕ ಶೇ.5.65ರ ಬಡ್ಡಿದರದ ಆಧಾರದಲ್ಲಿ ಸರಳ ಬಡ್ಡಿ ಲೆಕ್ಕಾಚಾರದ ಪ್ರಕಾರ ಸುಮಾರು ₹2,786 ಬಡ್ಡಿ ಸಿಗುತ್ತದೆ. ಹೀಗಾಗಿ ಅವಧಿ ಮುಗಿದಾಗ ಒಟ್ಟು ಸುಮಾರು ₹1,02,786 ದೊರೆಯಬಹುದು. ಇದೇ ₹1 ಲಕ್ಷವನ್ನ ಹಿರಿಯ ನಾಗರಿಕರು ಠೇವಣಿ ಇಟ್ಟರೆ ವಾರ್ಷಿಕ ಶೇ.6.15ರ ಬಡ್ಡಿದರದ ಆಧಾರದಲ್ಲಿ ಸುಮಾರು ₹3,033 ಬಡ್ಡಿ ಸಿಗುತ್ತದೆ. ಅಂದರೆ ಒಟ್ಟು ಸುಮಾರು ₹1,03,033 ದೊರೆಯಬಹುದು. ಈ ಲೆಕ್ಕಾಚಾರಗಳು ಅಂದಾಜು ಮಾತ್ರ. ಬ್ಯಾಂಕ್‌ನ ಬಡ್ಡಿ ಸಂಯೋಜನೆ ವಿಧಾನ, ಠೇವಣಿಯ ವಿಧ ಮತ್ತು ತೆರಿಗೆ ಕಡಿತದ ಆಧಾರದಲ್ಲಿ ಅಂತಿಮ ಮೊತ್ತದಲ್ಲಿ ವ್ಯತ್ಯಾಸವಾಗಬಹುದು.

₹5 ಲಕ್ಷ ಹೂಡಿಕೆ ಮಾಡಿದರೆ ಎಷ್ಟು ಹಣ ಸಿಗುತ್ತದೆ?

ಎಸ್‌ಬಿಐನಲ್ಲಿ ₹5 ಲಕ್ಷವನ್ನ 180 ದಿನಗಳ ಅವಧಿಗೆ ಠೇವಣಿ ಇಡುವ ಸಾಮಾನ್ಯ ಗ್ರಾಹಕರಿಗೆ ಸರಳ ಬಡ್ಡಿ ಲೆಕ್ಕಾಚಾರದ ಪ್ರಕಾರ ಸುಮಾರು ₹13,932 ಬಡ್ಡಿ ದೊರೆಯಬಹುದು. ಇದರಿಂದ ಒಟ್ಟು ಮೊತ್ತ ಸುಮಾರು ₹5,13,932 ಆಗುತ್ತದೆ. ಹಿರಿಯ ನಾಗರಿಕರು ಇದೇ ಮೊತ್ತವನ್ನ ಹೂಡಿಕೆ ಮಾಡಿದರೆ ಸುಮಾರು ₹15,164 ಬಡ್ಡಿ ಸಿಗುವ ಅಂದಾಜಿದೆ. ಹೀಗಾಗಿ ಒಟ್ಟು ಮೊತ್ತ ಸುಮಾರು ₹5,15,164 ಆಗಬಹುದು. ಸಾಮಾನ್ಯ ಗ್ರಾಹಕರಿಗಿಂತ ಹಿರಿಯ ನಾಗರಿಕರಿಗೆ ಸುಮಾರು ₹1,233 ಹೆಚ್ಚುವರಿ ಬಡ್ಡಿ ದೊರೆಯುವ ಸಾಧ್ಯತೆಯಿದೆ.

ವಿವಿಧ ಮೊತ್ತಗಳ ಮೇಲೆ 180 ದಿನಗಳ ಅಂದಾಜು ಬಡ್ಡಿ

ಠೇವಣಿ ಮೊತ್ತಸಾಮಾನ್ಯ ಗ್ರಾಹಕರುಹಿರಿಯ ನಾಗರಿಕರು
₹50,000₹1,393₹1,516
₹1,00,000  ₹2,786    ₹3,033 
₹2,00,000   ₹5,573 ₹6,066    
₹5,00,000  ₹13,932  ₹15,164 
 ₹10,00,000 ₹27,863  ₹30,329 

(ಗಮನಿಸಿ: ಮೇಲಿನ ಮೊತ್ತಗಳು 365 ದಿನಗಳ ವರ್ಷವನ್ನ ಆಧರಿಸಿದ ಸರಳ ಬಡ್ಡಿಯ ಅಂದಾಜುಗಳಾಗಿವೆ. ಇವು ಬ್ಯಾಂಕ್‌ನ ಅಧಿಕೃತ ಮೆಚ್ಯೂರಿಟಿ ಮೊತ್ತಗಳಲ್ಲ.)

180 ದಿನಗಳ ಎಫ್‌ಡಿ ಯಾರಿಗೆ ಸೂಕ್ತ?

ಕಡಿಮೆ ಅವಧಿಗೆ ಹಣವನ್ನ ಸುರಕ್ಷಿತವಾಗಿ ಇರಿಸಲು ಬಯಸುವವರಿಗೆ 180 ದಿನಗಳ ಎಫ್‌ಡಿ ಒಂದು ಆಯ್ಕೆಯಾಗಿದೆ. ಮುಂದಿನ ಆರು ತಿಂಗಳಲ್ಲಿ ಶಿಕ್ಷಣ, ಮನೆ ಖರ್ಚು, ವಾಹನ ಖರೀದಿ ಅಥವಾ ಇತರ ಅಗತ್ಯಗಳಿಗೆ ಹಣ ಬೇಕಾಗುವವರು ಇಂತಹ ಠೇವಣಿಗಳನ್ನ ಪರಿಗಣಿಸಬಹುದು. ಆದರೆ ಅವಧಿ ಪೂರ್ಣಗೊಳ್ಳುವ ಮೊದಲು ಹಣ ಹಿಂಪಡೆದರೆ ಬ್ಯಾಂಕ್‌ನ ನಿಯಮಗಳ ಪ್ರಕಾರ ಬಡ್ಡಿದರ ಕಡಿಮೆಯಾಗಬಹುದು ಅಥವಾ ದಂಡ ಅನ್ವಯಿಸಬಹುದು. ಅಲ್ಲದೆ ಎಫ್‌ಡಿಯಿಂದ ಬರುವ ಬಡ್ಡಿಯು ಅನ್ವಯಿಸುವ ಆದಾಯ ತೆರಿಗೆ ನಿಯಮಗಳಿಗೆ ಒಳಪಟ್ಟಿರುತ್ತದೆ.

ಎಫ್‌ಡಿ ತೆರೆಯುವ ಮೊದಲು ಇದನ್ನ ಗಮನಿಸಿ

ಎಸ್‌ಬಿಐ ಗ್ರಾಹಕರು ಬ್ಯಾಂಕ್ ಶಾಖೆ, ಇಂಟರ್‌ನೆಟ್ ಬ್ಯಾಂಕಿಂಗ್ ಅಥವಾ YONO SBI ಮೂಲಕ ಎಫ್‌ಡಿ ತೆರೆಯಬಹುದು. ಹೂಡಿಕೆ ಮಾಡುವ ಮೊದಲು ಅನ್ವಯಿಸುವ ಬಡ್ಡಿದರ, ಅವಧಿ, ಮೆಚ್ಯೂರಿಟಿ ಮೊತ್ತ ಹಾಗೂ ಅವಧಿಪೂರ್ವ ಹಣ ಹಿಂಪಡೆಯುವ ನಿಯಮಗಳನ್ನ ಪರಿಶೀಲಿಸುವುದು ಮುಖ್ಯ. ಒಟ್ನಲ್ಲಿ ಕೇವಲ 180 ದಿನಗಳ ಅವಧಿಗೆ ನಿಗದಿತ ಬಡ್ಡಿ ಆದಾಯ ಬಯಸುವವರಿಗೆ ಎಸ್‌ಬಿಐ ಎಫ್‌ಡಿ ಉಪಯುಕ್ತ ಆಯ್ಕೆಯಾಗಬಹುದು. ವಿಶೇಷವಾಗಿ ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿದರ ಲಭ್ಯವಿರುವುದು ಈ ಯೋಜನೆಯ ಪ್ರಮುಖ ಆಕರ್ಷಣೆಯಾಗಿದೆ.

(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.)

Add Zee News as a Preferred Source
TAGS:
Business
Kannada News