• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /PNB FD: 665 ದಿನ ಹಣ ಇಟ್ಟರೆ ಎಷ್ಟು ಲಾಭ? ₹1 ಲಕ್ಷದಿಂದ ₹10 ಲಕ್ಷದವರೆಗೆ ಬಡ್ಡಿ ಲೆಕ್ಕ ಇಲ್ಲಿದೆ

PNB FD: 665 ದಿನ ಹಣ ಇಟ್ಟರೆ ಎಷ್ಟು ಲಾಭ? ₹1 ಲಕ್ಷದಿಂದ ₹10 ಲಕ್ಷದವರೆಗೆ ಬಡ್ಡಿ ಲೆಕ್ಕ ಇಲ್ಲಿದೆ

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ 665 ದಿನಗಳ ಎಫ್‌ಡಿಗೆ ಸಾಮಾನ್ಯ ಗ್ರಾಹಕರಿಗೆ ವಾರ್ಷಿಕ ಶೇ.6.30, ಹಿರಿಯ ನಾಗರಿಕರಿಗೆ ಶೇ.6.80 ಮತ್ತು 80 ವರ್ಷ ಮೇಲ್ಪಟ್ಟವರಿಗೆ ಶೇ.7.10ರಷ್ಟು ಬಡ್ಡಿದರ ಅನ್ವಯಿಸುತ್ತದೆ. ವಿಶೇಷವೆಂದರೆ 666 ದಿನಗಳ ಎಫ್‌ಡಿಗೆ ಇನ್ನಷ್ಟು ಹೆಚ್ಚಿನ ಬಡ್ಡಿದರ ಲಭ್ಯವಿದೆ.

Written ByPuttaraj K Alur
Published: Oct 12, 2026, 07:06 AM IST|Updated: Oct 12, 2026, 07:13 AM IST
joinshare
PNB FD: 665 ದಿನ ಹಣ ಇಟ್ಟರೆ ಎಷ್ಟು ಲಾಭ? ₹1 ಲಕ್ಷದಿಂದ ₹10 ಲಕ್ಷದವರೆಗೆ ಬಡ್ಡಿ ಲೆಕ್ಕ ಇಲ್ಲಿದೆ
Image Credit: PNB 665 Days FD

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ರಾಯಚೂರು PWD ಕಚೇರಿಯಲ್ಲಿ ಕಪ್ಪು ಗೊಂಬೆ ಪ್ರತ್ಯಕ್ಷ! ವಾಮಾಚಾರದ ಶಂಕೆ, ಇದರ ಹಿಂದಿರುವರ್ಯಾರು?

ರಾಯಚೂರು PWD ಕಚೇರಿಯಲ್ಲಿ ಕಪ್ಪು ಗೊಂಬೆ ಪ್ರತ್ಯಕ್ಷ! ವಾಮಾಚಾರದ ಶಂಕೆ, ಇದರ ಹಿಂದಿರುವರ್ಯಾರು?

2

ರಿಕ್ಷಾ ತುಳಿದು ಪತ್ನಿಯನ್ನ ಪೊಲೀಸ್‌ ಮಾಡಿದ ಗಂಡನಿಗೆ ಶಾಕ್‌! ಖಾಕಿ ತೊಟ್ಟ ಬಳಿಕ ಕೈಕೊಟ್ಟ ಪತ್ನಿ...

3

ಬಸ್‌ನಲ್ಲಿ ಮೊಬೈಲ್‌ನಲ್ಲಿ ಜೋರಾಗಿ ಹಾಡು, ರೀಲ್ಸ್ ನೋಡಿದ್ರೆ ಹುಷಾರ್! ವಾರ್ನಿಂಗ್‌ಗೂ ಬಗ್ಗದಿದ್ರೆ ಬಸ್‌ನಿಂದಲೇ ಔಟ್! ‌

4

ಬೆಂಗಳೂರು ಟ್ರಾಫಿಕ್‌ನಿಂದ 21 ದಿನಗಳ ದುಡಿಮೆಯೇ ನಷ್ಟ! ಸಮೀಕ್ಷೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ!

5

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿಂದರೆ ಏನಾಗುತ್ತೆ? ಜೀರ್ಣಕ್ರಿಯೆಯಿಂದ ತ್ವಚೆಯ ಆರೋಗ್ಯದವರೆಗೆ...

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

PNB FD Interest Rates 2026: ಬ್ಯಾಂಕ್‌ನಲ್ಲಿ ಹಣವನ್ನ ಸುರಕ್ಷಿತವಾಗಿ ಹೂಡಿಕೆ ಮಾಡಿ ನಿಗದಿತ ಆದಾಯ ಗಳಿಸಲು ಬಯಸುವವರಿಗೆ ಫಿಕ್ಸೆಡ್ ಡೆಪಾಸಿಟ್ (FD) ಜನಪ್ರಿಯ ಆಯ್ಕೆಯಾಗಿದೆ. ವಿಶೇಷವಾಗಿ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ನೀಡುವ ನಿಶ್ಚಿತ ಠೇವಣಿ ಯೋಜನೆಗಳು ಸಾಮಾನ್ಯ ಗ್ರಾಹಕರು ಮತ್ತು ಹಿರಿಯ ನಾಗರಿಕರ ಗಮನ ಸೆಳೆಯುತ್ತಿವೆ. ಸುಮಾರು ಒಂದು ವರ್ಷ ಹತ್ತು ತಿಂಗಳ ಅವಧಿಗೆ ಹಣ ಹೂಡಿಕೆ ಮಾಡಲು ಯೋಜಿಸುತ್ತಿರುವವರಿಗೆ ಪಿಎನ್‌ಬಿಯ 665 ದಿನಗಳ ಎಫ್‌ಡಿ ಒಂದು ಆಯ್ಕೆಯಾಗಿದೆ. ಹಾಗಾದರೆ ₹1 ಲಕ್ಷ, ₹5 ಲಕ್ಷ ಅಥವಾ ₹10 ಲಕ್ಷ ಠೇವಣಿ ಇಟ್ಟರೆ ಎಷ್ಟು ಬಡ್ಡಿ ಸಿಗುತ್ತದೆ? ಹಿರಿಯ ನಾಗರಿಕರಿಗೆ ಎಷ್ಟು ಹೆಚ್ಚುವರಿ ಆದಾಯ ದೊರೆಯುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ...

PNB 665 ದಿನಗಳ ಎಫ್‌ಡಿಗೆ ಎಷ್ಟು ಬಡ್ಡಿ?

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಅಧಿಕೃತ ಬಡ್ಡಿದರ ಪಟ್ಟಿಯ ಪ್ರಕಾರ, ₹3 ಕೋಟಿಗಿಂತ ಕಡಿಮೆ ಮೊತ್ತದ ಸಾಮಾನ್ಯ ದೇಶೀಯ ನಿಶ್ಚಿತ ಠೇವಣಿಗಳಲ್ಲಿ 445ರಿಂದ 665 ದಿನಗಳ ಅವಧಿಗೆ ಸಾಮಾನ್ಯ ಗ್ರಾಹಕರಿಗೆ ವಾರ್ಷಿಕ ಶೇ.6.30ರಷ್ಟು ಬಡ್ಡಿ ನೀಡಲಾಗುತ್ತದೆ. ಇದೇ ಅವಧಿಗೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ವಾರ್ಷಿಕ ಶೇ.6.80ರಷ್ಟು ಬಡ್ಡಿ ಲಭ್ಯವಿದೆ. 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ವಾರ್ಷಿಕ ಶೇ.7.10ರಷ್ಟು ಬಡ್ಡಿದರ ಅನ್ವಯಿಸುತ್ತದೆ. ಅಂದರೆ ಸಾಮಾನ್ಯ ಗ್ರಾಹಕರಿಗಿಂತ ಹಿರಿಯ ನಾಗರಿಕರಿಗೆ ಶೇ.0.50 ಮತ್ತು ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಶೇ.0.80ರಷ್ಟು ಹೆಚ್ಚುವರಿ ವಾರ್ಷಿಕ ಬಡ್ಡಿದರದ ಪ್ರಯೋಜನ ಸಿಗುತ್ತದೆ.

₹1 ಲಕ್ಷ ಠೇವಣಿ ಇಟ್ಟರೆ ಎಷ್ಟು ಹಣ ಸಿಗುತ್ತದೆ?

ಒಬ್ಬ ಸಾಮಾನ್ಯ ಗ್ರಾಹಕ ಪಿಎನ್‌ಬಿಯಲ್ಲಿ ₹1 ಲಕ್ಷವನ್ನ 665 ದಿನಗಳ ಕಾಲ ಹೂಡಿಕೆ ಮಾಡಿದರೆ, ವಾರ್ಷಿಕ ಶೇ.6.30ರ ಬಡ್ಡಿದರದಲ್ಲಿ ತ್ರೈಮಾಸಿಕ ಚಕ್ರಬಡ್ಡಿ ಲೆಕ್ಕಾಚಾರದ ಪ್ರಕಾರ ಸುಮಾರು ₹12 ಸಾವಿರ ಬಡ್ಡಿ ದೊರೆಯಬಹುದು. ಹೀಗಾಗಿ ಮೆಚ್ಯೂರಿಟಿ ವೇಳೆಗೆ ಒಟ್ಟು ಮೊತ್ತ ಸುಮಾರು ₹1.12 ಲಕ್ಷವಾಗುವ ಸಾಧ್ಯತೆಯಿದೆ. ಇದೇ ಮೊತ್ತವನ್ನ ಹಿರಿಯ ನಾಗರಿಕರು ಹೂಡಿಕೆ ಮಾಡಿದರೆ ವಾರ್ಷಿಕ ಶೇ.6.80ರ ಬಡ್ಡಿದರದ ಆಧಾರದಲ್ಲಿ ಸುಮಾರು ₹13 ಸಾವಿರ ಬಡ್ಡಿ ದೊರೆಯಬಹುದು. 80 ವರ್ಷ ಮೇಲ್ಪಟ್ಟವರಿಗೆ ಶೇ.7.10ರ ಬಡ್ಡಿದರ ಅನ್ವಯಿಸುವುದರಿಂದ ಆದಾಯ ಮತ್ತಷ್ಟು ಹೆಚ್ಚಾಗುತ್ತದೆ. ಆದರೆ ನಿಖರ ಮೆಚ್ಯೂರಿಟಿ ಮೊತ್ತವು ಬ್ಯಾಂಕ್‌ನ ಬಡ್ಡಿ ಲೆಕ್ಕಾಚಾರ, ಠೇವಣಿ ಆರಂಭದ ದಿನಾಂಕ ಮತ್ತು ಆಯ್ಕೆ ಮಾಡಿಕೊಂಡ ಎಫ್‌ಡಿ ವಿಧವನ್ನ ಅವಲಂಬಿಸಿರುತ್ತದೆ.

₹5 ಲಕ್ಷ ಮತ್ತು ₹10 ಲಕ್ಷ ಠೇವಣಿಗೆ ಎಷ್ಟು ಲಾಭ?

ಹೆಚ್ಚಿನ ಮೊತ್ತವನ್ನ ನಿಶ್ಚಿತ ಠೇವಣಿಯಲ್ಲಿ ಇರಿಸುವವರಿಗೆ ಬಡ್ಡಿ ಆದಾಯವೂ ಹೆಚ್ಚಾಗುತ್ತದೆ. ಉದಾಹರಣೆಗೆ ₹5 ಲಕ್ಷವನ್ನ 665 ದಿನಗಳ ಕಾಲ ಹೂಡಿಕೆ ಮಾಡಿದರೆ ಸಾಮಾನ್ಯ ಗ್ರಾಹಕರಿಗೆ ಸುಮಾರು ₹60 ಸಾವಿರದಷ್ಟು ಬಡ್ಡಿ ದೊರೆಯಬಹುದು. ಹಿರಿಯ ನಾಗರಿಕರಿಗೆ ಇದಕ್ಕಿಂತ ಹೆಚ್ಚಿನ ಆದಾಯ ಸಿಗುವ ಸಾಧ್ಯತೆಯಿದೆ. ಅದೇ ರೀತಿ ₹10 ಲಕ್ಷ ಠೇವಣಿ ಇಟ್ಟರೆ ಸಾಮಾನ್ಯ ಗ್ರಾಹಕರಿಗೆ ಸುಮಾರು ₹1.20 ಲಕ್ಷದಷ್ಟು ಬಡ್ಡಿ ದೊರೆಯಬಹುದು. ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿದರ ಇರುವುದರಿಂದ ಮೆಚ್ಯೂರಿಟಿ ಮೊತ್ತ ಮತ್ತಷ್ಟು ಹೆಚ್ಚಾಗುತ್ತದೆ. ಈ ಮೊತ್ತಗಳು ಅಂದಾಜುಗಳಾಗಿದ್ದು, ಬ್ಯಾಂಕ್ ನೀಡುವ ಅಂತಿಮ ಲೆಕ್ಕಾಚಾರದಲ್ಲಿ ಸಣ್ಣ ವ್ಯತ್ಯಾಸಗಳಿರಬಹುದು.

665 ದಿನ ಮತ್ತು 666 ದಿನಗಳ ಎಫ್‌ಡಿಗೆ ವ್ಯತ್ಯಾಸವಿದೆ!

ಪಿಎನ್‌ಬಿಯ ಠೇವಣಿ ಯೋಜನೆಯಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ 665 ದಿನಗಳು ಮತ್ತು 666 ದಿನಗಳ ಅವಧಿಗೆ ಅನ್ವಯಿಸುವ ಬಡ್ಡಿದರಗಳು ಒಂದೇ ಆಗಿಲ್ಲ. 665 ದಿನಗಳ ಠೇವಣಿಗೆ ಸಾಮಾನ್ಯ ಗ್ರಾಹಕರಿಗೆ ಶೇ.6.30ರಷ್ಟು ಬಡ್ಡಿ ದೊರೆಯುತ್ತಿದ್ದರೆ, 666 ದಿನಗಳ ವಿಶೇಷ ಅವಧಿಗೆ ಶೇ.6.50ರಷ್ಟು ಬಡ್ಡಿದರ ಅನ್ವಯಿಸುತ್ತದೆ. ಹಿರಿಯ ನಾಗರಿಕರಿಗೆ ಕ್ರಮವಾಗಿ ಶೇ.6.80 ಮತ್ತು ಶೇ.7.00ರಷ್ಟು ಬಡ್ಡಿ ಲಭ್ಯವಿದೆ. ಹೀಗಾಗಿ ಕೇವಲ ಒಂದು ದಿನ ಹೆಚ್ಚುವರಿ ಅವಧಿಗೆ ಠೇವಣಿ ಇಡುವುದರಿಂದ ಹೆಚ್ಚಿನ ವಾರ್ಷಿಕ ಬಡ್ಡಿದರದ ಪ್ರಯೋಜನ ಪಡೆಯುವ ಅವಕಾಶವಿದೆ. ಹೂಡಿಕೆ ಮಾಡುವ ಮೊದಲು ಈ ವ್ಯತ್ಯಾಸವನ್ನ ಪರಿಶೀಲಿಸುವುದು ಮುಖ್ಯ.

ಹಿರಿಯ ನಾಗರಿಕರಿಗೆ ಎಫ್‌ಡಿ ಏಕೆ ಉಪಯುಕ್ತ?

ನಿವೃತ್ತಿಯ ನಂತರ ನಿಯಮಿತ ಆದಾಯ ಮತ್ತು ಬಂಡವಾಳದ ಸುರಕ್ಷತೆಗೆ ಆದ್ಯತೆ ನೀಡುವ ಹಿರಿಯ ನಾಗರಿಕರು ಬ್ಯಾಂಕ್ ಎಫ್‌ಡಿಗಳನ್ನ ಪರಿಗಣಿಸಬಹುದು. ಪಿಎನ್‌ಬಿಯಲ್ಲಿ ಸಾಮಾನ್ಯ ಗ್ರಾಹಕರಿಗಿಂತ ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿದರ ನೀಡುತ್ತಿರುವುದು ಪ್ರಮುಖ ಪ್ರಯೋಜನವಾಗಿದೆ. ಆದರೆ ಎಫ್‌ಡಿ ಅವಧಿ ಮುಗಿಯುವ ಮೊದಲು ಹಣ ಹಿಂಪಡೆದರೆ ಬ್ಯಾಂಕ್ ನಿಯಮಗಳ ಪ್ರಕಾರ ದಂಡ ಅಥವಾ ಕಡಿಮೆ ಬಡ್ಡಿದರ ಅನ್ವಯಿಸಬಹುದು. ಎಫ್‌ಡಿ ಬಡ್ಡಿ ಆದಾಯಕ್ಕೆ ಅನ್ವಯಿಸುವ ತೆರಿಗೆ ನಿಯಮಗಳೂ ಇರುತ್ತವೆ.

ಹೂಡಿಕೆಗೂ ಮೊದಲು ಈ ಮಾಹಿತಿ ತಿಳಿದುಕೊಳ್ಳಿ

ಪಿಎನ್‌ಬಿ ಗ್ರಾಹಕರು ಬ್ಯಾಂಕ್ ಶಾಖೆ ಅಥವಾ ಲಭ್ಯವಿರುವ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ಮೂಲಕ ಎಫ್‌ಡಿ ತೆರೆಯಬಹುದು. ಠೇವಣಿ ಮಾಡುವ ದಿನದ ಬಡ್ಡಿದರ, ಮೆಚ್ಯೂರಿಟಿ ಮೊತ್ತ, ಅವಧಿಪೂರ್ವ ಹಣ ಹಿಂಪಡೆಯುವ ನಿಯಮ ಮತ್ತು ತೆರಿಗೆ ವಿವರಗಳನ್ನ ಖಚಿತಪಡಿಸಿಕೊಳ್ಳಬೇಕು. ಒಟ್ನಲ್ಲಿ ಮಧ್ಯಮ ಅವಧಿಗೆ ಹಣ ಹೂಡಿಕೆ ಮಾಡಲು ಬಯಸುವವರಿಗೆ ಪಿಎನ್‌ಬಿಯ 665 ದಿನಗಳ ಎಫ್‌ಡಿ ಒಂದು ಆಯ್ಕೆಯಾಗಿದೆ. ಆದರೆ 666 ದಿನಗಳ ಅವಧಿಗೆ ಹೆಚ್ಚಿನ ಬಡ್ಡಿದರ ಇರುವುದರಿಂದ ಎರಡೂ ಆಯ್ಕೆಗಳನ್ನ ಹೋಲಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.

(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.)

Add Zee News as a Preferred Source
TAGS:
Business
Kannada News