• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /ಹುಟ್ಟಿದ 28 ದಿನಕ್ಕೇ ಷೇರು ಮಾರುಕಟ್ಟೆ ಪ್ರವೇಶ! ಅಂಬೆಗಾಲಿಡುವ ಮುನ್ನವೇ ‘ಇನ್ವೆಸ್ಟರ್’ ಆದ ಕಂದಮ್ಮ

ಹುಟ್ಟಿದ 28 ದಿನಕ್ಕೇ ಷೇರು ಮಾರುಕಟ್ಟೆ ಪ್ರವೇಶ! ಅಂಬೆಗಾಲಿಡುವ ಮುನ್ನವೇ ‘ಇನ್ವೆಸ್ಟರ್’ ಆದ ಕಂದಮ್ಮ

ಮಗು ಇನ್ನೂ ಅಂಬೆಗಾಲಿಡುವ ವಯಸ್ಸಿಗೂ ಬಂದಿಲ್ಲ. ಮಾತನಾಡುವುದಿರಲಿ, ತನ್ನದೇ ಹೆಸರಿನಲ್ಲಿ ಯಾವುದೇ ಹಣಕಾಸಿನ ನಿರ್ಧಾರ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಆದರೆ ಅದರ ಹೆಸರಿನಲ್ಲಿ ಡಿಮ್ಯಾಟ್ ಖಾತೆ ತೆರೆಯಲು ಕಾನೂನುಬದ್ಧ ವ್ಯವಸ್ಥೆ ಇದೆ. ಇದನ್ನೇ ಬಳಸಿಕೊಂಡು ಪೋಷಕರು ತಮ್ಮ ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಹೂಡಿಕೆ ಖಾತೆ ತೆರೆಯಬಹುದು.

Written ByPuttaraj K Alur
Published: Oct 08, 2026, 02:40 PM IST|Updated: Oct 08, 2026, 03:50 PM IST
joinshare
ಹುಟ್ಟಿದ 28 ದಿನಕ್ಕೇ ಷೇರು ಮಾರುಕಟ್ಟೆ ಪ್ರವೇಶ! ಅಂಬೆಗಾಲಿಡುವ ಮುನ್ನವೇ ‘ಇನ್ವೆಸ್ಟರ್’ ಆದ ಕಂದಮ್ಮ
Image Credit: Zerodha Minor Demat Account

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಪೆಟ್ರೋಲ್ ಬಂಕ್‌ಗೆ ನುಗ್ಗಿದ ಜಾಗ್ವಾರ್ ಕಾರು, ಧಗಧಗ.. ಯುವಕ ಕುಡಿದ ಮತ್ತಿನಲ್ಲಿ ಸ್ಟೆರಿಂಗ್ ಹಿಡಿದ್ರೆ ಏನಾಗುತ್ತೆ..

ಪೆಟ್ರೋಲ್ ಬಂಕ್‌ಗೆ ನುಗ್ಗಿದ ಜಾಗ್ವಾರ್ ಕಾರು, ಧಗಧಗ.. ಯುವಕ ಕುಡಿದ ಮತ್ತಿನಲ್ಲಿ ಸ್ಟೆರಿಂಗ್ ಹಿಡಿದ್ರೆ ಏನಾಗುತ್ತೆ..

2

ಹಣ್ಣು ಮಾತ್ರವಲ್ಲ, ಎಲೆಗಳೂ ಸೂಪರ್! ಸೀತಾಫಲದ ಎಲೆಗಳಲ್ಲಿರುವ ಆರೋಗ್ಯಕಾರಿ ಗುಣಗಳೇನು?

3

ಬೆಂಗಳೂರಲ್ಲಿ 5 ನಗರ ಪೊಲೀಸ್ ಕಮಿಷನರೇಟ್‌ಗಳ ರಚನೆಗೆ ಸಿಬ್ಬಂದಿ ಕೊರತೆ

4

ಈ 5 ಪ್ಲೇಯರ್ಸ್‌ ಟೀಮ್‌ ಇಂಡಿಯಾಗೆ ಕಮ್‌ಬ್ಯಾಕ್..‌ ರಜತ್‌ ಪಾಟೀದಾರ್‌ ಸೇರಿ ಈ ನಾಲ್ವರು..

5

ವಿಬಿಜಿ-ರಾಮ್-ಜಿ ಯೋಜನೆಯಡಿ ಅಳತೆಗೆ ತಕ್ಕಂತೆ ಕೂಲಿ ಪಡೆಯಿರಿ! ಡಿಐಇಸಿ ವೀರಭದ್ರಪ್ಪ ಸಜ್ಜನ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Zerodha Minor Demat Account: ಸಾಮಾನ್ಯವಾಗಿ ಮಗು ಹುಟ್ಟಿದ ನಂತರ ಪೋಷಕರು ಅದರ ಭವಿಷ್ಯ, ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಯೋಜನೆ ರೂಪಿಸಲು ಆರಂಭಿಸುತ್ತಾರೆ. ಆದರೆ ಇಲ್ಲೊಂದು ಕುಟುಂಬ ತನ್ನ ಮಗುವಿನ ಆರ್ಥಿಕ ಭವಿಷ್ಯದ ವಿಚಾರದಲ್ಲೂ ಅಷ್ಟೇ ಬೇಗ ಹೆಜ್ಜೆ ಇಟ್ಟಿದೆ. ಹುಟ್ಟಿ ಕೇವಲ 28 ದಿನಗಳಾಗಿದ್ದ ಮಗುವಿನ ಹೆಸರಿನಲ್ಲಿ Zerodhaದಲ್ಲಿ Minor Demat Account ತೆರೆಯಲಾಗಿದ್ದು, ಈ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. Zerodha ಸಹ-ಸಂಸ್ಥಾಪಕ ನಿತಿನ್ ಕಾಮತ್ ಅವರು ಈ ಬೆಳವಣಿಗೆಯನ್ನ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದು, ಹಣಕಾಸು ಯೋಜನೆ ಮತ್ತು ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುವ ಕುರಿತು ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.

ಅಂಬೆಗಾಲಿಡುವ ಮುನ್ನವೇ ಡಿಮ್ಯಾಟ್ ಖಾತೆ!

ಮಗು ಇನ್ನೂ ಅಂಬೆಗಾಲಿಡುವ ವಯಸ್ಸಿಗೂ ಬಂದಿಲ್ಲ. ಮಾತನಾಡುವುದಿರಲಿ, ತನ್ನದೇ ಹೆಸರಿನಲ್ಲಿ ಯಾವುದೇ ಹಣಕಾಸಿನ ನಿರ್ಧಾರ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಆದರೆ ಅದರ ಹೆಸರಿನಲ್ಲಿ ಡಿಮ್ಯಾಟ್ ಖಾತೆ ತೆರೆಯಲು ಕಾನೂನುಬದ್ಧ ವ್ಯವಸ್ಥೆ ಇದೆ. ಇದನ್ನೇ ಬಳಸಿಕೊಂಡು ಪೋಷಕರು ತಮ್ಮ ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಹೂಡಿಕೆ ಖಾತೆ ತೆರೆಯಬಹುದು. Zerodha ಕೂಡ ಮಕ್ಕಳಿಗಾಗಿ ಪ್ರತ್ಯೇಕ Minor Account ವ್ಯವಸ್ಥೆಯನ್ನ ಒದಗಿಸುತ್ತಿದ್ದು, guardian ಈ ಖಾತೆಯನ್ನ ನಿರ್ವಹಿಸುತ್ತಾರೆ. ಹೀಗಾಗಿ ಈ 28 ದಿನದ ಕಂದಮ್ಮನನ್ನ ನೇರವಾಗಿ ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿರುವ ‘ಟ್ರೇಡರ್’ ಎಂದು ಅರ್ಥೈಸುವುದು ಸರಿಯಲ್ಲ. ಖಾತೆ ಮಗುವಿನ ಹೆಸರಿನಲ್ಲಿದ್ದರೂ, ಅದರ ನಿರ್ವಹಣೆ ಸಂಪೂರ್ಣವಾಗಿ ಪೋಷಕರು ಅಥವಾ ಕಾನೂನುಬದ್ಧ ಪಾಲಕರ ನಿಯಂತ್ರಣದಲ್ಲಿರುತ್ತದೆ.

 

https://t.co/aCXlIBmlqL

— Nithin Kamath (@Nithin0dha) October 6, 2026

Minor Accountನಲ್ಲಿ ಏನು ಮಾಡಬಹುದು?

 

Zerodhaಯ ಅಧಿಕೃತ ಮಾಹಿತಿಯ ಪ್ರಕಾರ, Minor Account ಮೂಲಕ Mutual Fundsನಲ್ಲಿ ಹೂಡಿಕೆ ಮಾಡಬಹುದು. IPO, buyback ಮತ್ತು takeoverಗಳಲ್ಲಿ ಅರ್ಜಿ ಸಲ್ಲಿಸುವ ಅವಕಾಶವೂ ಇದೆ. ಕುಟುಂಬದವರು stocks ಅಥವಾ government securities ಅನ್ನ ಮಗುವಿನ ಖಾತೆಗೆ gift ಅಥವಾ transfer ಮಾಡಬಹುದು. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, minor ಖಾತೆಯಿಂದ ನೇರವಾಗಿ ಷೇರುಗಳನ್ನ ಖರೀದಿಸಲು ಸಾಧ್ಯವಿಲ್ಲ. 

ಪೋಷಕರು ಅಥವಾ guardian ತಮ್ಮ ಖಾತೆಯಿಂದ securities ಖರೀದಿಸಿ, ನಿಯಮಾನುಸಾರ ಮಗುವಿನ ಖಾತೆಗೆ ವರ್ಗಾಯಿಸಬಹುದು. ಅಸ್ತಿತ್ವದಲ್ಲಿರುವ equity holdingsಅನ್ನ minor accountನಲ್ಲಿ ಮಾರಾಟ ಮಾಡಲು ಅವಕಾಶವಿದೆ. ಅದೇ ರೀತಿ Intraday Trading ಮತ್ತು Futures & Options (F&O) ವಹಿವಾಟಿಗೆ Minor Accountನಲ್ಲಿ ಅವಕಾಶವಿಲ್ಲ. ಅಂದರೆ ಇದು ವೇಗದ ಟ್ರೇಡಿಂಗ್‌ಗಿಂತ ದೀರ್ಘಕಾಲೀನ ಹೂಡಿಕೆ ಮತ್ತು ಭವಿಷ್ಯದ ಹಣಕಾಸು ಯೋಜನೆಗೆ ಹೆಚ್ಚು ಸಂಬಂಧಿಸಿದ ವ್ಯವಸ್ಥೆಯಾಗಿದೆ.

ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುವ ಆಸಕ್ತಿ ಏಕೆ?

ಕಳೆದ ಕೆಲವು ವರ್ಷಗಳಲ್ಲಿ ಮಕ್ಕಳ ಭವಿಷ್ಯಕ್ಕಾಗಿ ಚಿಕ್ಕ ವಯಸ್ಸಿನಿಂದಲೇ ಹಣಕಾಸು ಯೋಜನೆ ರೂಪಿಸುವ ಬಗ್ಗೆ ಪೋಷಕರಲ್ಲಿ ಆಸಕ್ತಿ ಹೆಚ್ಚಾಗಿದೆ. ಶಿಕ್ಷಣದ ವೆಚ್ಚ, ಉನ್ನತ ಶಿಕ್ಷಣ, ವಿದೇಶಿ ಶಿಕ್ಷಣ ಅಥವಾ ಭವಿಷ್ಯದ ಇತರ ಅಗತ್ಯಗಳಿಗೆ ದೀರ್ಘಕಾಲೀನ ಹೂಡಿಕೆ ಮಾಡುವ ಉದ್ದೇಶದಿಂದ ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯುವ ಪದ್ಧತಿ ಇದೆ. Zerodha ಕೂಡ Minor Account ವ್ಯವಸ್ಥೆಯನ್ನ ಮಕ್ಕಳಿಗೆ ಹಣಕಾಸಿನ ಅರಿವು ಮೂಡಿಸುವ ಒಂದು ಮಾರ್ಗವಾಗಿ ವಿವರಿಸಿದೆ. ಪೋಷಕರು ಮಕ್ಕಳೊಂದಿಗೆ ಹೂಡಿಕೆ ಮತ್ತು ಹಣ ನಿರ್ವಹಣೆಯ ಮೂಲಭೂತ ವಿಚಾರಗಳನ್ನ ಕಲಿಯಲು ಇದು ಸಹಾಯ ಮಾಡಬಹುದು ಎಂದು ಸಂಸ್ಥೆ ಹೇಳಿದೆ.  

18 ವರ್ಷ ತುಂಬಿದ ಬಳಿಕ ಏನಾಗುತ್ತದೆ?

ಮಗು 18 ವರ್ಷಕ್ಕೆ ತಲುಪಿದ ಬಳಿಕ Minor Accountಅನ್ನ ಸಾಮಾನ್ಯ Individual Account ಆಗಿ ಪರಿವರ್ತಿಸಬೇಕಾಗುತ್ತದೆ. ಇದಕ್ಕಾಗಿ ಹೊಸ KYC ಪ್ರಕ್ರಿಯೆ ಪೂರ್ಣಗೊಳಿಸಬೇಕು. Zerodha ಪ್ರಕಾರ, ಈ ಪರಿವರ್ತನೆಗೆ ಪ್ರತ್ಯೇಕ ಶುಲ್ಕವಿಲ್ಲ ಮತ್ತು ಖಾತೆಯಲ್ಲಿರುವ ಹೂಡಿಕೆಗಳು ಸುರಕ್ಷಿತವಾಗಿ ಮುಂದುವರಿಯುತ್ತವೆ. ಇದರರ್ಥ ಇಂದು ಪೋಷಕರು ಮಗುವಿನ ಹೆಸರಿನಲ್ಲಿ ಆರಂಭಿಸುವ ಹೂಡಿಕೆ ಖಾತೆ ಮುಂದೆ ಆ ಮಗು ವಯಸ್ಕನಾದಾಗ ತನ್ನದೇ ಹಣಕಾಸಿನ ಖಾತೆಯಾಗಿ ರೂಪಾಂತರಗೊಳ್ಳಬಹುದು.

‘ಇನ್ವೆಸ್ಟರ್’ ಎಂಬ ಪದದ ಹಿಂದಿರುವ ಕುತೂಹಲ

ಹುಟ್ಟಿ 28 ದಿನಕ್ಕೇ ಡಿಮ್ಯಾಟ್ ಖಾತೆ ಎಂಬ ವಿಚಾರವೇ ಈ ಘಟನೆಯನ್ನ ವಿಶೇಷವಾಗಿಸಿದೆ. ಮಗುವಿಗೆ ಷೇರು ಮಾರುಕಟ್ಟೆಯ ಬಗ್ಗೆ ಯಾವುದೇ ಅರಿವು ಇರುವ ಪ್ರಶ್ನೆಯೇ ಇಲ್ಲ. ಆದರೂ ಅದರ ಹೆಸರಿನಲ್ಲಿ ಹೂಡಿಕೆಯ ಖಾತೆ ತೆರೆದಿರುವುದು, ಇಂದಿನ ಡಿಜಿಟಲ್ ಹಣಕಾಸು ವ್ಯವಸ್ಥೆ ಎಷ್ಟು ಬೇಗ ಮತ್ತು ಸುಲಭವಾಗಿ ಕುಟುಂಬಗಳ ಭವಿಷ್ಯದ ಯೋಜನೆಗಳ ಭಾಗವಾಗುತ್ತಿದೆ ಎಂಬುದನ್ನು ತೋರಿಸುತ್ತದೆ.

ಆದರೆ ಇಂತಹ ಖಾತೆಗಳನ್ನ ತೆರೆಯುವಾಗ ಪೋಷಕರು ಹೂಡಿಕೆಯ ಅಪಾಯ, ತೆರಿಗೆ ನಿಯಮಗಳು, KYC ಮತ್ತು Minor Accountಗೆ ಅನ್ವಯಿಸುವ ನಿಯಮಗಳನ್ನ ಅರ್ಥಮಾಡಿಕೊಳ್ಳುವುದು ಅಗತ್ಯ. Zerodha ಪ್ರಕಾರ, minorನ ಹೂಡಿಕೆಗಳಿಂದ ಬರುವ ಆದಾಯದ ತೆರಿಗೆ ಸಾಮಾನ್ಯವಾಗಿ ಹೆಚ್ಚಿನ ಆದಾಯ ಹೊಂದಿರುವ ಪೋಷಕರ ಆದಾಯಕ್ಕೆ club ಆಗಬಹುದು; ನಿರ್ದಿಷ್ಟ ಸಂದರ್ಭಗಳಲ್ಲಿ ತೆರಿಗೆ ತಜ್ಞರ ಸಲಹೆ ಪಡೆಯುವುದು ಸೂಕ್ತ.  

ಹೀಗಾಗಿ, 28 ದಿನದ ಮಗು ನಿಜವಾಗಿ ಷೇರುಗಳನ್ನ ಖರೀದಿಸಿ ಟ್ರೇಡಿಂಗ್ ಮಾಡುತ್ತಿದೆ ಎಂಬುದಕ್ಕಿಂತ, ಅದರ ಹೆಸರಿನಲ್ಲಿ guardian ನಿರ್ವಹಿಸುವ Minor Demat Account ತೆರೆಯಲಾಗಿದೆ ಎಂಬುದೇ ಈ ಘಟನೆಯ ನಿಜವಾದ ಅರ್ಥ. ಅಂಬೆಗಾಲಿಡುವ ಮುನ್ನವೇ ಮಗುವಿನ ಭವಿಷ್ಯಕ್ಕಾಗಿ ಹೂಡಿಕೆ ಆರಂಭಿಸಿರುವ ಈ ಘಟನೆ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಕುತೂಹಲಕ್ಕೆ ಕಾರಣವಾಗಿದೆ.

Add Zee News as a Preferred Source
TAGS:
Business
Kannada News