• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /ಕಮಾಡಿಟಿ ಮಾರುಕಟ್ಟೆ ಮತ್ತು ಹೂಡಿಕೆಯಲ್ಲಿ AI ತಂತ್ರಜ್ಞಾನದ ಹೊಸ ಕ್ರಾಂತಿ ತರುತ್ತಾ..? Kwala Intel ಹೇಳೋದೇನು ಗೊತ್ತೆ?

ಕಮಾಡಿಟಿ ಮಾರುಕಟ್ಟೆ ಮತ್ತು ಹೂಡಿಕೆಯಲ್ಲಿ AI ತಂತ್ರಜ್ಞಾನದ ಹೊಸ ಕ್ರಾಂತಿ ತರುತ್ತಾ..? Kwala Intel ಹೇಳೋದೇನು ಗೊತ್ತೆ?

ಸಂಕೀರ್ಣವಾದ ಸರಕು (ಕಮಾಡಿಟಿ - Commodity Market) ಮಾರುಕಟ್ಟೆಯ ದತ್ತಾಂಶಗಳನ್ನು ಸರಳೀಕರಿಸುವ ಮೂಲಕ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಇಂದು ಹೂಡಿಕೆದಾರರಿಗೆ ಹೊಸ ಅವಕಾಶಗಳನ್ನು ತೆರೆದಿಡುತ್ತಿದೆ. ಜಾಗತಿಕ ಮಾಹಿತಿ ಮತ್ತು ಬ್ಯಾಲನ್ಸ್ ಶೀಟ್‌ಗಳನ್ನು ವಿಶ್ಲೇಷಿಸುವ ಮೂಲಕ, ಈವರೆಗೆ ಗಮನಕ್ಕೆ ಬಾರದ ಹೂಡಿಕೆ ಅವಕಾಶಗಳನ್ನು ಗುರುತಿಸಲು ಮತ್ತು ಅಪಾಯಗಳನ್ನು ಕಡಿಮೆ ಮಾಡಿಕೊಂಡು ಉತ್ತಮ ಲಾಭ ಗಳಿಸಲು AI ನೆರವಾಗುತ್ತಿದೆ.

Written ByKrishna NK
Published: Oct 20, 2026, 07:45 AM IST|Updated: Oct 20, 2026, 07:59 AM IST
joinshare
ಕಮಾಡಿಟಿ ಮಾರುಕಟ್ಟೆ ಮತ್ತು ಹೂಡಿಕೆಯಲ್ಲಿ AI ತಂತ್ರಜ್ಞಾನದ ಹೊಸ ಕ್ರಾಂತಿ ತರುತ್ತಾ..? Kwala Intel ಹೇಳೋದೇನು ಗೊತ್ತೆ?
Image Credit: kwala intel updates

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಸುಮಾರು 475 ಕೋಟಿ ಮೌಲ್ಯದ "ಫ್ಯಾಂಟಸಿ ಬ್ರಾ" ತೊಟ್ಟು ಮಿಂಚಿದ ಕೈಲೀ ಜೆನ್ನರ್‌.! ಏನಿದರ ವಿಶೇಷತೆ?

ಸುಮಾರು 475 ಕೋಟಿ ಮೌಲ್ಯದ "ಫ್ಯಾಂಟಸಿ ಬ್ರಾ" ತೊಟ್ಟು ಮಿಂಚಿದ ಕೈಲೀ ಜೆನ್ನರ್‌.! ಏನಿದರ ವಿಶೇಷತೆ?

2

ಹೊಸ ಎಲ್​ಪಿಜಿ ಸಂಪರ್ಕ ಪಡೆಯಲು ಸಾಧ್ಯವಾಗದೇ ಜನರ ಪರದಾಟ: ಕೇಂದ್ರಕ್ಕೆ ಸಚಿವ ರಿಜ್ವಾನ್ ಅರ್ಷದ್‌ ಪತ್ರ

3

ಕಮಾಡಿಟಿ ಮಾರುಕಟ್ಟೆ ಮತ್ತು ಹೂಡಿಕೆಯಲ್ಲಿ AI ತಂತ್ರಜ್ಞಾನದ ಹೊಸ ಕ್ರಾಂತಿ ತರುತ್ತಾ..? Kwala Intel ಹೇಳೋದೇನು ಗೊತ್ತೆ?

4

ಉದ್ಯೋಗಾಕಾಂಕ್ಷಿಗಳ ಗಮನಕ್ಕೆ..! KPSC ಅಧಿಕೃತ ವೆಬ್‌ಸೈಟ್ ವಿಳಾಸ ಬದಲಾವಣೆ.. ಇಲ್ಲಿದೆ ಮಾಹಿತಿ

5

ಹೊಸ ವರ್ಷಕ್ಕೂ ಮುನ್ನವೇ ಈ 5 ನಕ್ಷತ್ರದವರಿಗೆ ಕಾದಿದೆ ಜಾಕ್‌ಪಾಟ್! ಹಣದ ಹೊಳೆ, ಸಮೃದ್ಧಿ ಮಳೆ.. ಬದುಕು ಬಂಗಾರ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Kwala Intel on Commodity Market : ಷೇರು ಮಾರುಕಟ್ಟೆ (Equities) ಕ್ಷೇತ್ರದಲ್ಲಿ ಭಾರತೀಯ ಹೂಡಿಕೆದಾರರು ಹಲವು ದಶಕಗಳಿಂದ ತಂತ್ರಜ್ಞಾನದ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ, ಕಮಾಡಿಟಿ ಮಾರುಕಟ್ಟೆಯ ಮೂಲಭೂತ ಮಾಹಿತಿ (Fundamentals) ಒಂದೇ ಕಡೆ ಸಿಗದೆ ವಿವಿಧೆಡೆ ಹಂಚಿಹೋಗಿರುವುದರಿಂದ, ಈ ಕ್ಷೇತ್ರದ ಬಗ್ಗೆ ಇಂದಿಗೂ ಹಲವಾರು ಜನರಿಗೆ ಗೊತ್ತಿಲ್ಲ. ಆದರೆ ಪ್ರಸ್ತುತ ಉತ್ಪಾದನೆ, ಬಳಕೆ, ದಾಸ್ತಾನು (Inventories), ಆಮದು-ರಫ್ತು ಮತ್ತು ಮಾರುಕಟ್ಟೆಯ ಟ್ರೆಂಡ್‌ಗಳನ್ನು ಒಂದೇ ಸೂರಿನಡಿ ತಂದು ಕೊಡುವ ಮೂಲಕ AI ಈ ಪರಿಸ್ಥಿತಿಯನ್ನು ಬದಲಾಯಿಸುತ್ತಿದೆ.

'ಕ್ವಾಲಾ ಇಂಟೆಲ್' (Kwala Intel) ಪರಿಚಯ
ಕ್ವಾಲಾ ಇಂಟೆಲ್ ಎಂಬುದು AI ಚಾಲಿತ ಮಾರುಕಟ್ಟೆ ಮಾಹಿತಿಯ ಒಂದು ವೇದಿಕೆಯಾಗಿದೆ (Platform). ಇದು ಚಿನ್ನ, ಬೆಳ್ಳಿ, ಕಚ್ಚಾ ತೈಲ (Crude Oil) ಮತ್ತು ತಾಮ್ರ (Dr Copper) ದಂತಹ ಪ್ರಮುಖ ಸರಕುಗಳ ಮಾರುಕಟ್ಟೆ ಟ್ರೆಂಡ್‌ಗಳನ್ನು ವಿಶ್ಲೇಷಿಸುತ್ತದೆ. ಜೊತೆಗೆ, ಕಮಾಡಿಟಿ ಬೆಲೆಗಳಿಗೆ ಅನುಗುಣವಾಗಿ ಬದಲಾಗುವ NSE ಮತ್ತು BSE ಷೇರುಗಳ ಮೇಲಿನ ಪ್ರಭಾವವನ್ನೂ ತಿಳಿಸುತ್ತದೆ.

ಉದಾಹರಣೆಗೆ, ಕಚ್ಚಾ ತೈಲದ ಬೆಲೆಯಲ್ಲಿ ಬದಲಾವಣೆಯಾದರೆ ಅದು ವಿಮಾನಯಾನ ಸಂಸ್ಥೆಗಳು (Airlines) ಅಥವಾ ಪೇಂಟ್ ಕಂಪನಿಗಳ ಮೇಲೆ ಒಂದು ರೀತಿಯ ಪರಿಣಾಮ ಬೀರಿದರೆ, ತೈಲ ಉತ್ಪಾದನಾ ಕಂಪನಿಗಳ ಮೇಲೆ ಮತ್ತೊಂದು ರೀತಿಯ ಪರಿಮಾಣ ಬೀರುತ್ತದೆ. ಕ್ವಾಲಾ ಇಂಟೆಲ್ ಈ ಎಲ್ಲಾ ಪ್ರಭಾವಗಳನ್ನು ನೈಜ ಸಮಯದಲ್ಲಿ (Real-time) ವಿಶ್ಲೇಷಿಸಿ, ಸರಳ ಭಾಷೆಯಲ್ಲಿ ಹೂಡಿಕೆದಾರರಿಗೆ ತಲುಪಿಸುತ್ತದೆ.

ನಂಬಿಕೆಯ ಹೂಡಿಕೆಯತ್ತ...
ಬ್ಯಾಲನ್ಸ್ ಶೀಟ್, ಈಟಿವಿ, P/E ರೇಶಿಯೋ ಮತ್ತು ROE ಯಂತಹ ನೂರಾರು ಆರ್ಥಿಕ ಅಂಕಿ-ಅಂಶಗಳು ಸಾಮಾನ್ಯ ಹೂಡಿಕೆದಾರರಲ್ಲಿ ಗೊಂದಲ ಮೂಡಿಸುವುದು ಸಹಜ. ಪ್ರತಿದಿನ ಸ್ವಂತ ಉದ್ಯೋಗ ಅಥವಾ ಕೆಲಸದ ಜೊತೆಗೆ ಈ ಎಲ್ಲಾ ಮಾಹಿತಿಯನ್ನು ವಿಶ್ಲೇಷಿಸುವುದು ಸುಲಭದ ಮಾತಲ್ಲ.

ಆದರೂ, ಕಳೆದ ಎರಡು ದಶಕಗಳಲ್ಲಿ ಡಿಜಿಟಲ್ ಬ್ರೋಕರೇಜ್ ಮತ್ತು ಆನ್‌ಲೈನ್ ರಿಸರ್ಚ್ ವೇದಿಕೆಗಳಿಂದಾಗಿ ಭಾರತದಲ್ಲಿ ಷೇರು ಮಾರುಕಟ್ಟೆ ಹೂಡಿಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. SEBI ಯ 2025 ರ ಸಮೀಕ್ಷೆಯ ಪ್ರಕಾರ, ಭಾರತದ ಸುಮಾರು 3.21 ಕೋಟಿ ಕುಟುಂಬಗಳು (ಸುಮಾರು 9.5%) ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿವೆ. ಮಾಹಿತಿ ಸರಳವಾಗಿ ಸಿಕ್ಕಾಗ ಹೂಡಿಕೆದಾರರಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂಬುದಕ್ಕೆ ಇದೇ ಸಾಕ್ಷಿ. ಈಗ ಅದೇ ರೀತಿಯ ಬದಲಾವಣೆಯನ್ನು AI ಕಮಾಡಿಟಿ ಮಾರುಕಟ್ಟೆಯಲ್ಲೂ ತರುತ್ತಿದೆ.

ಕಾಮೋಡಿಟಿ ಮಾರುಕಟ್ಟೆಯಲ್ಲಿ AI ಗೇಮ್ ಚೇಂಜರ್..?
ಸಾಮಾನ್ಯ ಕಂಪನಿಗಳ ವರದಿಗಳಂತೆ ಕಾಮೋಡಿಟಿ ಮಾಹಿತಿ ಒಂದೇ ಕಡೆ ಸುಲಭವಾಗಿ ಸಿಗುವುದಿಲ್ಲ. AI ಪ್ರಮುಖವಾಗಿ ಮೂರು ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ಪರಿಹರಿಸುತ್ತದೆ.. 
ಮಾಹಿತಿ ಸಂಗ್ರಹಣೆ (Data Collection)
ಮಾಹಿತಿ ಜೋಡಣೆ (Data Organisation)
ಮಾಹಿತಿ ವಿಶ್ಲೇಷಣೆ (Data Interpretation)

ಉದಾಹರಣೆಗೆ, ಕಚ್ಚಾ ತೈಲದ ಬೆಲೆಯನ್ನು ವಿಶ್ಲೇಷಿಸಬೇಕೆಂದರೆ ಜಾಗತಿಕ ಉತ್ಪಾದನೆ, ತೈಲ ಒಕ್ಕೂಟಗಳ ನಿರ್ಧಾರ, ಜಿಯೋಪೊಲಿಟಿಕ್ಸ್ ಮತ್ತು ಕರೆನ್ಸಿ ಮೌಲ್ಯಗಳನ್ನು ಗಮನಿಸಬೇಕಾಗುತ್ತದೆ. ಮಾನವ ಸಹಜವಾಗಿ ಈ ಎಲ್ಲಾ ಮಾಹಿತಿಯನ್ನು ತಕ್ಷಣವೇ ಕನೆಕ್ಟ್ ಮಾಡುವುದು ಕಷ್ಟ. ಆದರೆ ಕ್ವಾಲಾ ಇಂಟೆಲ್ ನಂತಹ AI ಉಪಕರಣಗಳು ಪ್ರಪಂಚದಾದ್ಯಂತದ ವರದಿಗಳನ್ನು ಕಲೆಹಾಕಿ, ಚಾರ್ಟ್‌ಗಳು ಮತ್ತು ಸ್ಪಷ್ಟ ಸೂಚನೆಗಳ ಮೂಲಕ ಹೂಡಿಕೆದಾರರಿಗೆ ನಿರ್ಧಾರ ತೆಗೆದುಕೊಳ್ಳಲು ನೆರವಾಗುತ್ತವೆ.

ಕೃಷಿ ಉತ್ಪನ್ನಗಳ ವಿವರವಾದ ವಿಶ್ಲೇಷಣೆ (Agri Commodities)
ಅರಿಶಿನ, ಮೆಣಸಿನಕಾಯಿ, ಜೀರಿಗೆ ಅಥವಾ ಗ್ವಾರ್‌ನಂತಹ ಕೃಷಿ ಉತ್ಪನ್ನಗಳ ನೂರಾರು ಪುಟಗಳ ದತ್ತಾಂಶವನ್ನು ಕ್ವಾಲಾ ಇಂಟೆಲ್ ತಕ್ಷಣವೇ ವಿಶ್ಲೇಷಿಸುತ್ತದೆ. ಹವಾಮಾನ, ಬಿತ್ತನೆ ವಿಸ್ತೀರ್ಣ, ಮಾರುಕಟ್ಟೆಗೆ ಬರುವ ಸರಕಿನ ಪ್ರಮಾಣ (Arrivals) ಮತ್ತು ರಫ್ತು ಮಾಹಿತಿಯನ್ನು ಪ್ರಸ್ತುತ ಫ್ಯೂಚರ್ಸ್ ಮತ್ತು ಸ್ಪಾಟ್ ಬೆಲೆಗಳೊಂದಿಗೆ ಜೋಡಿಸಿ ಸಮಗ್ರವಾದ ಬ್ಯಾಲನ್ಸ್ ಶೀಟ್ ತಯಾರಿಸಿ ನೀಡುತ್ತದೆ.

ಹೂಡಿಕೆಯಲ್ಲಿ ಉತ್ತಮ ಲಾಭ 
ನಂಬಲರ್ಹ ಮಾಹಿತಿ ಸಿಕ್ಕ ನಂತರ, ಭವಿಷ್ಯದ ಬೆಲೆಗಳು, ಸೀಸನಲ್ ಟ್ರೆಂಡ್‌ಗಳು ಮತ್ತು ಮಾರುಕಟ್ಟೆಯ ವೈಪರೀತ್ಯಗಳನ್ನು ಗುರುತಿಸಲು AI ಸಹಾಯ ಮಾಡುತ್ತದೆ. ಕೇವಲ ಬೆಲೆ ಏರಿಳಿತ ಮಾತ್ರವಲ್ಲದೆ, ಮಾರುಕಟ್ಟೆಯಲ್ಲಿರುವ ರಿಸ್ಕ್ ಮತ್ತು ವೆಚ್ಚಗಳನ್ನು ಲೆಕ್ಕಹಾಕಿ ಉತ್ತಮ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ದಾರಿ ಮಾಡಿಕೊಡುತ್ತದೆ.

ಸ್ಥಳೀಯ ಭಾಷೆಯಲ್ಲಿ ಮಾಹಿತಿ
ಕ್ವಾಲಾ ಇಂಟೆಲ್‌ನ ದೊಡ್ಡ ಅನುಕೂಲವೆಂದರೆ ಇದು ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಸೇರಿದಂತೆ 12ಕ್ಕೂ ಹೆಚ್ಚು ಪ್ರಾದೇಶಿಕ ಭಾಷೆಗಳಲ್ಲಿ ಕಾಂಪ್ಲೆಕ್ಸ್ ಮಾರುಕಟ್ಟೆ ಮಾಹಿತಿಯನ್ನು ಸರಳವಾಗಿ ಒದಗಿಸುತ್ತದೆ. ಇದರಿಂದಾಗಿ ಸಾಮಾನ್ಯ ಭಾರತೀಯ ಕುಟುಂಬಗಳೂ ಸಹ ಮಲ್ಟಿ-ಅಸೆಟ್ ಹೂಡಿಕೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.

ಚಂದಾದಾರಿಕೆ ವಿವರಗಳು (Pricing & Access)
ಕ್ವಾಲಾ ಇಂಟೆಲ್ ಪ್ರೋ (Kwala Intel Pro): ತಿಂಗಳಿಗೆ ₹199 ಅಥವಾ ವರ್ಷಕ್ಕೆ ₹1,999 (GST ಸೇರಿ).
ವಾರ್ಷಿಕ ಪ್ಲಾನ್‌ನಲ್ಲಿ ದಿನಕ್ಕೆ ₹5.5 ಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ಈ ಎಲ್ಲಾ ಸೇವೆಯನ್ನು ಪಡೆಯಬಹುದು.

ಒಟ್ಟಾರೆಯಾಗಿ.. ಇಂದಿನ ತಂತ್ರಜ್ಞಾನ ಆಧಾರಿತ ಮಾರುಕಟ್ಟೆಯಲ್ಲಿ ಸರಿಯಾದ ಸಮಯಕ್ಕೆ ಸರಿಯಾದ ಮಾಹಿತಿ ಪಡೆಯುವುದು ಅತ್ಯಂತ ಅಗತ್ಯ. ಇಂತಹ ಸಂದರ್ಭದಲ್ಲಿ AI ಆಧಾರಿತ ಉಪಕರಣಗಳು ಹೂಡಿಕೆದಾರರಿಗೆ ಅತ್ಯುತ್ತಮ ಮಾರ್ಗದರ್ಶಿಯಾಗಿ ಹೊರಹೊಮ್ಮುತ್ತಿರುವುದಂತೂ ಖಡಿಂತ..

Add Zee News as a Preferred Source
TAGS:
Business