• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /ಅವಧಿಪೂರ್ವ ನಿವೃತ್ತಿ ಹೊಂದುವವರಿಗೆ ಇಪಿಎಫ್‌ಒ ನಿಯಮಗಳೇನು? ಫುಲ್‌ ಪಿಎಫ್‌ ಪಡೆಯಲು ಎಷ್ಟು ಸಮಯ ಬೇಕು!

ಅವಧಿಪೂರ್ವ ನಿವೃತ್ತಿ ಹೊಂದುವವರಿಗೆ ಇಪಿಎಫ್‌ಒ ನಿಯಮಗಳೇನು? ಫುಲ್‌ ಪಿಎಫ್‌ ಪಡೆಯಲು ಎಷ್ಟು ಸಮಯ ಬೇಕು!

ಅವಧಿಪೂರ್ವ ನಿವೃತ್ತಿ ಹೊಂದುವವರಿಗೆ ಪಿಎಫ್‌ ಹಣ ಹಿಂಪಡೆಯುವ ಸಂಬಂಧ ಕೇಂದ್ರ ಟ್ರಸ್ಟಿಗಳ ಮಂಡಳಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

Written ByYashaswini V
Published: Sep 29, 2026, 10:30 AM IST|Updated: Sep 29, 2026, 10:32 AM IST
joinshare
ಅವಧಿಪೂರ್ವ ನಿವೃತ್ತಿ ಹೊಂದುವವರಿಗೆ ಇಪಿಎಫ್‌ಒ ನಿಯಮಗಳೇನು? ಫುಲ್‌ ಪಿಎಫ್‌ ಪಡೆಯಲು ಎಷ್ಟು ಸಮಯ ಬೇಕು!

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಅವಧಿಪೂರ್ವ ನಿವೃತ್ತಿ ಹೊಂದುವವರಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇದರ ನೇರ ಪರಿಣಾಮ ಇಪಿಎಫ್‌ಒ ಸದಸ್ಯರು ತಮ್ಮ ಪೂರ್ಣ ಇಪಿಎಫ್‌ ಹಣವನ್ನು ಹಿಂಪಡೆಯುವುದರ ಮೇಲೆ ಕಂಡು ಬರಲಿದೆ. ಏನು ಈ ಹೊಸ ಇಪಿಎಫ್‌ಒ ನಿಯಮ? ಇದು ಅವಧಿಪೂರ್ವ ನಿವೃತ್ತಿ ಹೊಂದುವವರಿಗೆ ಹೇಗೆ ಪರಿಣಾಮ ಬೀರಲಿದೆ ಎಂಬ ಮಹತ್ವದ ಮಾಹಿತಿ ಇಲ್ಲಿದೆ.

ಅವಧಿಪೂರ್ವ ನಿವೃತ್ತಿ ಎಂದರೆ ಏನು?
ಯಾವುದೇ ಉದ್ಯೋಗಿಯೂ 55 ವರ್ಷ ವಯಸ್ಸಾಗುವ ಮೊದಲೇ ತಮ್ಮ ಕೆಲಸವನ್ನು ತ್ಯಜಿಸುವ ಅಥವಾ ನಿವೃತ್ತಿಯನ್ನು ತೆಗೆದುಕೊಳ್ಳಲು ನಿರ್ಧರಿಸಿದರೆ ಅದನ್ನು ಅವಧಿಪೂರ್ವ ನಿವೃತ್ತಿ ಎಂದು ಹೇಳಲಾಗುತ್ತದೆ.

ಅವಧಿಪೂರ್ವ ನಿವೃತ್ತಿ ಹೊಂದಿದವರಿಗೆ ಇಪಿಎಫ್‌ ನಿಯಮಗಳೇನು?
ಕೇಂದ್ರ ಟ್ರಸ್ಟಿಗಳ ಮಂಡಳಿ (CBT) ಅವಧಿಪೂರ್ವ ನಿವೃತ್ತಿ ಹೊಂದಿದವರಿಗೆ ಇಪಿಎಫ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದು ಈ ಕುರಿತಂತೆ ಜೂನ್ 29, 2026 ರಂದು ಹೊಸ ಅಧಿಸೂಚನೆಯನ್ನು ಹೊರಡಿಸಿತು. ವಾಸ್ತವವಾಗಿ, ಹಲವು ಇಪಿಎಫ್‌ ಸದಸ್ಯರು ತಮ್ಮ ಇಪಿಎಫ್‌ಒ ಖಾತೆಯಿಂದ ಹಣ ಹಿಂಪಡೆಯುವಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸಿದ್ದ ಹಿನ್ನಲೆಯಲ್ಲಿ ಕೇಂದ್ರ ಟ್ರಸ್ಟಿಗಳ ಮಂಡಳಿಯ ಈ ಮಹತ್ವದ ಅಧಿಸೂಚನೆ ಹೊರಬಿದ್ದಿತ್ತು.

ಕೇಂದ್ರ ಟ್ರಸ್ಟಿಗಳ ಮಂಡಳಿ (CBT) ಗೆಜೆಟ್ ಅಧಿಸೂಚನೆ ಇಪಿಎಫ್‌ ನಿಧಿಯ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದ್ದು, ಯಾವುದೇ ಉದ್ಯೋಗಿಯೂ  55 ವರ್ಷ ವಯಸ್ಸಾಗುವ ಮೊದಲು ನಿವೃತ್ತಿ ಪಡೆದರೆ ಅವರು 12 ತಿಂಗಳೊಳಗೆ ತಮ್ಮ ಇಪಿಎಫ್ ಬಾಕಿಯ 75 ಪ್ರತಿಶತವನ್ನು ಹಿಂಪಡೆಯಬಹುದು.  ಉದ್ಯೋಗಿಯು 55 ವರ್ಷವಿದ್ದಾಗ ನಿವೃತ್ತಿ ಹೊಂದಿದಲ್ಲಿ ಸೇವೆಯಿಂದ ಹೊರಬಂದ 10 ದಿನಗಳ ಒಳಗೆ ತಮ್ಮ ಸಂಪೂರ್ಣ ಬಾಕಿ ಮೊತ್ತವನ್ನು ಹಿಂಪಡೆಯಬಹುದು ಎಂದು ತಿಳಿಸಿದೆ.

ಕೇಂದ್ರ ಟ್ರಸ್ಟಿಗಳ ಮಂಡಳಿಗೆ ಸಲ್ಲಿಸಿದ್ದ ದೂರಿನಲ್ಲಿ ಇಪಿಎಫ್‌ಒ ಸದಸ್ಯರೊಬ್ಬರು, "ನಾನು 58 ನೇ ವಯಸ್ಸಿನಲ್ಲಿ ನಿವೃತ್ತಿ ಪಡೆದೆ. ಆದಾಗ್ಯೂ, ನಾನು ಕ್ಲೇಮ್‌ಗಳ ಇತ್ಯರ್ಥಕ್ಕಾಗಿ ಅರ್ಜಿ ಸಲ್ಲಿಸಲು ಪ್ರಯತ್ನಿಸಿದಾಗ 'ಸದಸ್ಯರು ಪ್ರಸ್ತುತ ಪಿಎಫ್ ಅಂತಿಮ ಇತ್ಯರ್ಥ (ಫಾರ್ಮ್ 19) ಕ್ಲೇಮ್ ಅನ್ನು ಸಲ್ಲಿಸಲು ಅರ್ಹರಲ್ಲ, ಏಕೆಂದರೆ ನಿರ್ಗಮನದ ದಿನಾಂಕದಿಂದ 12 ತಿಂಗಳ ಕಡ್ಡಾಯ ಕಾಯುವ ಅವಧಿ ಪೂರ್ಣಗೊಂಡಿಲ್ಲ' ಎಂಬ ಸಂದೇಶ ಬಂದಿದೆ ಎಂದು ಉಲ್ಲೇಖಿಸಿದ್ದರು.

ವಾಸ್ತವವಾಗಿ, ಇಪಿಎಫ್‌ಒದ ಈ ಸಂದೇಶವು ಜೂನ್ 29, 2026 ರಂದು ಕೇಂದ್ರ ಟ್ರಸ್ಟಿಗಳ ಮಂಡಳಿ (CBT) ಗೆಜೆಟ್ ಅಧಿಸೂಚನೆಗೆ ವಿರುದ್ಧವಾಗಿದೆ. ಇಂತಹ ಸಂದರ್ಭದಲ್ಲಿ ಆಗುವ ಸಾಮಾನ್ಯ ತಪ್ಪುಗಳ ಬಗ್ಗೆ ಇಪಿಎಫ್‌ಒ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಪಿಎಫ್‌ಒ ಸದಸ್ಯರು 55 ವರ್ಷ ವಯಸ್ಸನ್ನು ತಲುಪಿದ ನಂತರ ಸೇವೆಯಿಂದ ನಿವೃತ್ತರಾದಾಗ ನಿಧಿಯಲ್ಲಿನ ತನ್ನ ಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಆದರೆ, ಇದಕ್ಕಾಗಿ ಅರ್ಜಿ ಸಲ್ಲಿಸುವಾಗ ಇಪಿಎಫ್‌ಒ ಸಂಸ್ಥೆಯು, 'ನಿವೃತ್ತಿ' ಮತ್ತು '55 ವರ್ಷಗಳ ನಂತರ ನಿವೃತ್ತಿ' ಎಂಬ ಎರಡು ವಿಂಡೋಗಳನ್ನು ರಚಿಸಿದೆ. ನೀವು ಇಪಿಎಫ್‌ ಮೊತ್ತಕ್ಕಾಗಿ ಅರ್ಜಿ ಸಲ್ಲಿಸುವಾಗ "55 ವರ್ಷಗಳ ನಂತರ ನಿವೃತ್ತರಾಗುವವರು ಹಕ್ಕು ಸಲ್ಲಿಸುವಾಗ ಡ್ರಾಪ್ ಡೌನ್ ಮೆನುವಿನಲ್ಲಿ '55 ವರ್ಷಗಳ ನಂತರ ನಿವೃತ್ತಿ' ಆಯ್ಕೆ ಮಾಡಿಕೊಳ್ಳಬೇಕು. ಇತರರು 'ನಿವೃತ್ತಿ' ಆಯ್ಕೆಯ ಅಡಿಯಲ್ಲಿ ಸಲ್ಲಿಸಬಹುದು". ಇದು ಇಪಿಎಫ್‌ ಮೊತ್ತವನ್ನು ಹಿಂಪಡೆಯಲು ಇರುವ ಅರ್ಹತಾ ಮಾನದಂಡಗಳಲ್ಲಿನ ಗೊಂದಲವನ್ನು ನಿವಾರಿಸುತ್ತದೆ ಎಂದು ಇಪಿಎಫ್‌ಒ ಅಧಿಕಾರಿಗಳು ತಿಳಿಸಿದ್ದಾರೆ.

ಮೂರೇ ದಿನಗಳಲ್ಲಿ ಕೈ ಸೇರುತ್ತೆ ಇಪಿಎಫ್‌ ಸಂಪೂರ್ಣ ಹಣ:
55 ವರ್ಷ ವಯಸ್ಸಿನ ಸದಸ್ಯರು ₹5 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಹೊಂದಿದ್ದರೆ, ಏಳರಿಂದ 10 ದಿನಗಳಲ್ಲಿ ತಮ್ಮ ಪಿಎಫ್‌ ಹಣವನ್ನು ಸ್ವೀಕರಿಸುತ್ತಾರೆ. ₹ 5 ಲಕ್ಷಕ್ಕಿಂತ ಕಡಿಮೆ ಮೊತ್ತವನ್ನು ಹೊಂದಿದ್ದರೆ, ಮೂರು ದಿನಗಳಲ್ಲಿ ಹಣವನ್ನು ವಿತರಿಸಲಾಗುತ್ತದೆ. "55 ವರ್ಷ ತುಂಬಿದ ಮತ್ತು 'ನಿವೃತ್ತಿ' ವಿಂಡೋ ಅಡಿಯಲ್ಲಿ ಹಕ್ಕು ಸಲ್ಲಿಸುತ್ತಿರುವ ಕೆಲವು ಜನರಿಗೆ 12 ತಿಂಗಳ ಕಾಯುವ ಅವಧಿಯ ಸಂದೇಶ ಬರುತ್ತಿದೆ. ನಾವು ಇದನ್ನು FAQ ವಿಭಾಗದಲ್ಲಿ ಸ್ಪಷ್ಟಪಡಿಸಿದ್ದೇವೆ. ನಾವು ಇದನ್ನು ಸಾಮಾಜಿಕ ಮಾಧ್ಯಮದ ಮೂಲಕವೂ ಪ್ರಚಾರ ಮಾಡುತ್ತೇವೆ" ಎಂದು ಇಪಿಎಫ್‌ಒ ಅಧಿಕಾರಿಗಳು ತಿಳಿಸಿದ್ದಾರೆ.

ಇಂತಹವರಿಗೆ 12 ತಿಂಗಳ ಕಾಯುವ ಅವಧಿ ಪರಿಚಯ:
ಇದೇ ಸಂದರ್ಭದಲ್ಲಿ ಇಪಿಎಫ್‌ಒ ಹಣ ಪಡೆಯಲು ಕಾಯುವ ಅವಧಿ ಬಗ್ಗೆಯೂ ಮಾಹಿತಿ ನೀಡಿರುವ ಇಪಿಎಫ್‌ಒ ಅಧಿಕಾರಿ, ಯಾವುದೇ ನೌಕರರು ಉದ್ಯೋಗ ಬದಲಾಯಿಸುವಾಗ ಅಥವಾ ನಿರುದ್ಯೋಗದಂತಹ ಸಂದರ್ಭದಲ್ಲಿ ಭವಿಷ್ಯ ನಿಧಿಯಲ್ಲಿರುವ ತಮ್ಮ ಪೂರ್ಣ ಬಾಕಿ ಹಣವನ್ನು ಹಿಂಪಡೆಯುವುದನ್ನು ತಡೆಯಲು 12 ತಿಂಗಳ ಕಾಯುವ ಅವಧಿಯನ್ನು ಪರಿಚಯಿಸಲಾಗಿದೆ ಎಂದು ತಿಳಿಸಿದರು. ಇದರ ಹಿಂದಿನ ಕಾರಣವನ್ನೂ ಬಿಚ್ಚಿಟ್ಟ ಅವರು, ಸಾಮಾನ್ಯವಾಗಿ ನೌಕರರು ಕೆಲಸ ಬದಲಾಯಿಸುವಾಗ ತಮ್ಮ ಪಿಎಫ್‌ ಹಣವನ್ನು ಸಂಪೂರ್ಣವಾಗಿ ಹಿಂಪಡೆಯುತ್ತಾರೆ. ಈ ರೀತಿ ಮಾಡುವುದರಿಂದ ಅವರ ನಿವೃತ್ತಿ ನಿಧಿ ಕಡಿಮೆ ಆಗುತ್ತದೆ. ಇದನ್ನು ತಪ್ಪಿಸಲು ಪಿಎಫ್‌ ಹಣ ಹಿಂಪಡೆಯಲು ಒಂದು ವರ್ಷಗಳ ಕಾಯುವಿಕೆಯನ್ನು ಪರಿಚಯಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇಪಿಎಫ್‌ಒ ದತ್ತಾಂಶದ ಪ್ರಕಾರ, 2024-25ರಲ್ಲಿ ಒಟ್ಟು 52,95,281 ಸದಸ್ಯರು ಕ್ಲೇಮ್‌ಗಳ ಅಂತಿಮ ಇತ್ಯರ್ಥವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಸದಸ್ಯರಲ್ಲಿ ಶೇಕಡಾ 75 ಕ್ಕಿಂತ ಹೆಚ್ಚು ಸದಸ್ಯರು ₹ 50,000 ಕ್ಕಿಂತ ಕಡಿಮೆ ನಿಧಿಯನ್ನು ಪಡೆದಿದ್ದಾರೆ. 2024-25ರಲ್ಲಿ ಅಂತಿಮ ಇತ್ಯರ್ಥಕ್ಕೆ ಆಯ್ಕೆ ಮಾಡಿಕೊಂಡ ಶೇ. 48.73 ರಷ್ಟು ಸದಸ್ಯರು ₹ 20,000 ಕ್ಕಿಂತ ಕಡಿಮೆ ಹಣವನ್ನು ಪಡೆದಿದ್ದಾರೆ ಎಂದು ದತ್ತಾಂಶವು ತೋರಿಸುತ್ತದೆ. ಶೇ. 1.29 ರಷ್ಟು ಜನರು ₹ 5 ಲಕ್ಷದಿಂದ ₹ 10 ಲಕ್ಷದವರೆಗೆ ಪಡೆದರೆ, ಶೇ. 1.01 ರಷ್ಟು ಜನರು ₹ 10 ಲಕ್ಷದಿಂದ ₹ 25 ಲಕ್ಷದವರೆಗೆ ಪಡೆದಿದ್ದಾರೆ ಮತ್ತು ಶೇ. 0.62 ರಷ್ಟು ಜನರು ಮಾತ್ರ ₹ 25 ಲಕ್ಷಕ್ಕಿಂತ ಹೆಚ್ಚು ಪಡೆದಿದ್ದಾರೆ ಎಂದು ಅಂಕಿ ಅಂಶಗಳಿಂದ 
 

Add Zee News as a Preferred Source
TAGS:
EPFO
EPFO News
Personal Finance