SOCIAL MEDIA

Newsletter

PARTNER SITES
Select Language Select State

EPFO e-Nomination: ಪಿಎಫ್‌ ಖಾತೆಯಲ್ಲಿ ಇ-ನಾಮಿನಿ ಏಕೆ ಮುಖ್ಯ! ಇಪಿಎಫ್‌ಒ ಇ-ನಾಮನಿರ್ದೇಶನದ ಸುಲಭ ವಿಧಾನ..

ನೀವಿನ್ನೂ ನಿಮ್ಮ ಇಪಿಎಫ್‌ಒ ಖಾತೆಯಲ್ಲಿ ʼನಾಮನಿರ್ದೇಶನʼ ಪ್ರಕ್ರಿಯೆ ಪೂರ್ಣಗೊಳಿಸಿಲ್ವಾ? ಹಾಗಿದ್ದರೆ, ಈ ಸುದ್ದಿ ನಿಮಗೆ ಮಹತ್ವದ್ದಾಗಿದೆ.

Written By Yashaswini V
Published: Sep 25, 2026, 12:10 PM IST | Updated: Sep 25, 2026, 12:12 PM IST
Join

ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಸದಸ್ಯರಿಗೆ ಪಿಎಫ್‌ ನಿಧಿಯು ನಿವೃತ್ತಿಯ ನಂತರ ಒಂದು ದೊಡ್ಡ ಮೊತ್ತವನ್ನು ನೀಡುವ ಸುರಕ್ಷಿತ ಹಾಗೂ ದೀರ್ಘಕಾಲಿನ ಹಣಕಾಸು ವ್ಯವಸ್ಥೆ ಆಗಿದೆ. 2025-26ರ ವಿತ್ತೀಯ ವರ್ಷದಲ್ಲಿ ಪಿಎಫ್‌ ನಿಧಿಯ ಮೇಲೆ ವಾರ್ಷಿಕ 8.25% ಬಡ್ಡಿದರವನ್ನು ನಿಗದಿಪಡಿಸಲಾಗಿದೆ. ಇಪಿಎಫ್‌ಒ ಸದಸ್ಯರು ತಮ್ಮ ಪಿಎಫ್‌ ಖಾತೆಯಲ್ಲಿ ಇ-ನಾಮನಿರ್ದೇಶನ ಎಂದರೆ ಇ-ನಾಮಿನಿ ಪೂರ್ಣಗೊಳಿಸುವುದು ಅತ್ಯಗತ್ಯವಾಗಿದೆ. ಪಿಎಫ್‌ ಖಾತೆಯಲ್ಲಿ ಇ-ನಾಮಿನಿ ಏಕೆ ಅಗತ್ಯ? ಇ-ನಾಮನಿರ್ದೇಶನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಹೇಗೆ? ಎಂಬ ಪ್ರಮುಖ ಮಾಹಿತಿ ಇಲ್ಲಿದೆ.

ಇಪಿಎಫ್‌ಒ ಖಾತೆಯಲ್ಲಿ ಇ-ನಾಮಿನಿ ಏಕೆ ಮುಖ್ಯ?
ಡಿಜಿಟಲ್‌ ಯುಗದಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO)ಯ ಸಾಕಷ್ಟು ಕೆಲಸಗಳು ಆನ್‌ಲೈನ್‌ ಮೂಲಕವೇ ಪೂರ್ಣಗೊಳ್ಳುತ್ತವೆ. ಇಪಿಎಫ್‌ಒದಲ್ಲಿ ಆನ್‌ಲೈನ್ ಕ್ಲೈಮ್‌ಗಳನ್ನು ಸಲ್ಲಿಸುವುದು ಮತ್ತು ಪಾಸ್‌ಬುಕ್ ಬ್ಯಾಲೆನ್ಸ್ ಪರಿಶೀಲಿಸುವಂತಹ ವಿವಿಧ ಇಪಿಎಫ್‌ಒ ಸೇವೆಗಳನ್ನು ಪಡೆಯಲು, ಸದಸ್ಯರು ತಮ್ಮ KYC ಮತ್ತು ನಾಮಿನೇಷನ್ ವಿವರಗಳನ್ನು ನವೀಕರಿಸಿಕೊಂಡಿರುವುದು ತುಂಬಾ ಅಗತ್ಯವಾಗಿದೆ. ಹಾಗಾಗಿ, ನೀವಿನ್ನೂ ಪಿಎಫ್‌ ಖಾತೆಯಲ್ಲಿ ಇ-ನಾಮನಿರ್ದೇಶನ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ಕೂಡಲೇ ಈ ಕೆಲಸವನ್ನು ಪೂರ್ಣಗೊಳಿಸುವುದು ಅತ್ಯಗತ್ಯವಾಗಿದೆ.

ಇ-ನಾಮಿನಿ ಸೌಲಭ್ಯವನ್ನು ಯಾರು ಪಡೆಯಬಹುದು?
ಇಪಿಎಫ್‌ಒದ ಇ-ನಾಮಿನಿ ಸೌಲಭ್ಯ ಎಲ್ಲಾ ಪಿಎಫ್‌ ಸದಸ್ಯರಿಗೂ ಲಭ್ಯವಿರುತ್ತದೆ. ಆದರೆ, ತಮ್ಮ ಯುಎಎನ್‌ ನಂಬರ್‌ ಅನ್ನು ಆಧಾರ್‌ನೊಂದಿಗೆ ಲಿಂಕ್‌ ಮಾಡಿರುವ ಸದಸ್ಯರು ಮಾತ್ರವೇ ಆನ್‌ಲೈನ್‌ ಮೂಲಕ ಇಪಿಎಫ್‌ಒ ಇ-ನಾಮಿನಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.

ಇಪಿಎಫ್‌ಒ ಇ-ನಾಮಿನಿಗೆ ಯುಎಎನ್‌ ಆಧಾರ್‌ ಲಿಂಕ್‌ ಏಕೆ ಮುಖ್ಯ?
ಇಪಿಎಫ್‌ಒ ಇ-ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡ ನಂತರ, ಅದನ್ನು ಆಧಾರ್ ಆಧಾರಿತ 'ಇ-ಸೈನ್' (e-Sign) ಮೂಲಕ ದೃಢೀಕರಿಸಬೇಕಾಗುತ್ತದೆ; ಇದಕ್ಕಾಗಿ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ಹಾಗಾಗಿ, ಯುಎಎನ್‌ - ಆಧಾರ್‌ ಲಿಂಕ್‌ ಆಗಿರುವುದು ತುಂಬಾ ಅಗತ್ಯವಾಗಿದೆ.

ಆನ್‌ಲೈನ್‌ ಮೂಲಕ ಇಪಿಎಫ್‌ಒ ಇ-ನಾಮಿನಿ ಪ್ರಕ್ರಿಯೆ ಪೂರ್ಣಗೊಳಿಸುವುದು ಹೇಗೆ?
ಒಂದು ವೇಳೆ ನೌಕರರ ಭವಿಷ್ಯ ನಿಧಿ ಸಂಸ್ಥೆಯ ಸದಸ್ಯರು ಆನ್‌ಲೈನ್‌ ಮೂಲಕ ಇಪಿಎಫ್‌ಒ ಇ-ನಾಮಿನಿ ಪ್ರಕ್ರಿಯೆ ಪೂರ್ಣಗೊಳಿಸಲು ಬಯಸಿದರೆ, ಇದಕ್ಕಾಗಿ ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ.

ಆನ್‌ಲೈನ್‌ನಲ್ಲಿ  ಇಪಿಎಫ್‌ಒ ಇ-ನಾಮಿನೇಷನ್‌ಗಾಗಿ ಹಂತ-ಹಂತದ ಪ್ರಕ್ರಿಯೆ:
ಹಂತ -1 : ಮೊದಲಿಗೆ ಇಪಿಎಫ್‌ಒ ಸದಸ್ಯರು ತಮ್ಮ ಯುಎಎನ್‌ ಸಂಖ್ಯೆ ಮತ್ತು ಪಾಸ್‌ವರ್ಡ್‌ ಬಳಸಿ ಅಧಿಕೃತವಾಗಿ ಇಪಿಎಫ್‌ಒ ಪೋರ್ಟಲ್‌ಗೆ ಲಾಗಿನ್‌ ಆಗಬೇಕು.
ಹಂತ -2 : ಬಳಿಕ 'Manage' ವಿಭಾಗಕ್ಕೆ ಹೋಗಿ, 'e-Nomination' ಆಯ್ಕೆಯನ್ನು ಆರಿಸಿ ಮತ್ತು 'Enter new nomination' ಎಂಬ ಆಯ್ಕೆಯನ್ನು ಆರಿಸಿ.
ಹಂತ -3 : ಪರದೆಯ ಮೇಲೆ ಕಾಣಿಸಿಕೊಳ್ಳುವ 'Provide Details' ಆಯ್ಕೆಯನ್ನು ಆರಿಸಿ, ನಿಮ್ಮ ಕುಟುಂಬದವರ ಹೆಸರನ್ನು ನವೀಕರಿಸಲು ‘Proceed’ ಮೇಲೆ ಕ್ಲಿಕ್ ಮಾಡಿ ಮತ್ತು ‘Yes’ ಆಯ್ಕೆಮಾಡಿ.
ಹಂತ -4 : ನಂತರ, ‘Add Family Details’ ಮೇಲೆ ಕ್ಲಿಕ್ ಮಾಡಿ. ನಾಮಿನಿ ವಿವರಗಳನ್ನು ಭರ್ತಿ ಮಾಡಿ. ಒಂದೊಮ್ಮೆ ನೀವು ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಸೇರಿಸಲು ಬಯಸಿದರೆ ‘Add now’ ಆಯ್ಕೆಯನ್ನು ಆರಿಸಿ, ಎಲ್ಲಾ ಸದಸ್ಯರ ಹೆಸರುಗಳನ್ನು ನಮೂದಿಸಿ.
ಹಂತ -5 : ನಾಮಿನಿಯ ಆಧಾರ್ ಸಂಖ್ಯೆ, ಹೆಸರು, ಲಿಂಗ, ಹುಟ್ಟಿದ ದಿನಾಂಕ, ಸಂಬಂಧ, ವಿಳಾಸ ಮತ್ತು ಭಾವಚಿತ್ರದಂತಹ ವಿವರಗಳನ್ನು ನೀವು ನಮೂದಿಸಬೇಕಾಗುತ್ತದೆ.
ಹಂತ -6 : ನಾಮಿನಿ ಅಪ್ರಾಪ್ತರಾಗಿದ್ದರೆ, ಅವರ ಪಾಲಕರ ವಿವರಗಳನ್ನು ಸಹ ಒದಗಿಸಬೇಕು. ಬ್ಯಾಂಕ್ ಖಾತೆಯ ವಿವರಗಳನ್ನು ನೀಡುವುದು ಐಚ್ಛಿಕವಾಗಿರುತ್ತದೆ. ಭಾವಚಿತ್ರದ ಗಾತ್ರವು 100KB ಮೀರಬಾರದು.
ಹಂತ -7 : ನಂತರ, ಪ್ರತಿ ನಾಮಿನಿಗೆ ನಿಗದಿಪಡಿಸಿದ ಪಾಲಿನ (ಶೇಕಡಾವಾರು) ಪ್ರಮಾಣವನ್ನು ನಮೂದಿಸಿ. ಒಂದಕ್ಕಿಂತ ಹೆಚ್ಚು ನಾಮಿನಿಗಳಿದ್ದಲ್ಲಿ, ಎಲ್ಲಾ ನಾಮಿನಿಗಳ ಒಟ್ಟು ಪಾಲಿನ ಶೇಕಡಾವಾರು ಪ್ರಮಾಣವು 100% ಆಗಿರಬೇಕು. ಮಾಹಿತಿಗಳನ್ನು ನಮೂದಿಸಿದ ಬಳಿಕ ಅದನ್ನು ಸೇವೆ ಮಾಡಲು ‘Save EPF Nomination’ ಮೇಲೆ ಕ್ಲಿಕ್ ಮಾಡಿ.
ಹಂತ -8 : ಅಂತಿಮವಾಗಿ, ‘e-Sign’ ಮೇಲೆ ಕ್ಲಿಕ್ ಮಾಡಿ, ನಿಮ್ಮ ಆಧಾರ್ ಅಥವಾ ವರ್ಚುವಲ್ ಐಡಿ (Virtual ID) ಅನ್ನು ನಮೂದಿಸಿ ಮತ್ತು ‘Get OTP’ ಆಯ್ಕೆಮಾಡಿ.
ಹಂತ -9 : ನಿಮ್ಮ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬಂದಿರುವ OTP ಅನ್ನು ನಮೂದಿಸಿ, ನಿಮ್ಮ ಒಪ್ಪಿಗೆಯನ್ನು ನೀಡಿ ಮತ್ತು ‘Submit’ ಮೇಲೆ ಕ್ಲಿಕ್ ಮಾಡಿ.
ನಂತರ, ‘Nomination History’ ಗೆ ಹೋಗಿ ಮತ್ತು ಅಲ್ಲಿನ ಸ್ಥಿತಿಯು (status) ‘Nomination Successful’ ಎಂದು ತೋರಿಸುತ್ತಿದೆಯೇ ಎಂದು ಪರಿಶೀಲಿಸಿ. ಈ ಸ್ಥಿತಿಯು ಕಂಡುಬಂದರೆ, ನಿಮ್ಮ ಇ-ನಾಮಿನೇಷನ್ (e-Nomination) ಪ್ರಕ್ರಿಯೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದರ್ಥ.

ಆಫ್‌ಲೈನ್‌ ಮೂಲಕವೂ ಸಾಧ್ಯ ನಾಮಿನೇಷನ್‌ ಪ್ರಕ್ರಿಯೆ:
ಒಂದೊಮ್ಮೆ ಇಪಿಎಫ್‌ಒ ಸದಸ್ಯರು ಆನ್‌ಲೈನ್‌ನಲ್ಲಿ ನಾಮಿನೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಯಸದಿದ್ದರೆ, ಆಫ್‌ಲೈನ್ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕಾಗಿ ಹತ್ತಿರದ ಇಪಿಎಫ್‌ಒ (EPFO) ಕಚೇರಿಗೆ ಭೇಟಿ ನೀಡಿ, 'ಫಾರ್ಮ್-2' ಅನ್ನು ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ. ಈ ಫಾರ್ಮ್ ಮೂಲಕ ನೀವು ಇಪಿಎಫ್‌, ಉದ್ಯೋಗಿಗಳ ಪಿಂಚಣಿ ಯೋಜನೆ (EPS) ಮತ್ತು ಉದ್ಯೋಗಿಗಳ ಠೇವಣಿ-ಸಂಯೋಜಿತ ವಿಮಾ ಯೋಜನೆ (EDLI)ಗೆ ಸಂಬಂಧಿಸಿದ ಕುಟುಂಬ ಮತ್ತು ನಾಮಿನಿ ವಿವರಗಳನ್ನು ಒದಗಿಸಬಹುದು.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES