ದಿನ ಭವಿಷ್ಯ 26-10-2026: ಹುಣ್ಣಿಯಂದು ವಜ್ರ ಯೋಗ.. ಈ ರಾಶಿಯವರಿಗೆ ಜಾಕ್ಪಾಟ್
Today Horoscope 26th October 2026: 26 ಅಕ್ಟೋಬರ್ 2026ರಂದು ಸೋಮವಾರ ಹುಣ್ಣಿಮೆ ತಿಥಿ ಇರಲಿದ್ದು, ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Somavara 26th October 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷ, ಹುಣ್ಣಿಮೆ ತಿಥಿ, ಸೋಮವಾರದ ಈ ದಿನ ಅಶ್ವಿನಿ ನಕ್ಷತ್ರ, ವಜ್ರ ಯೋಗ, ಬಾಲವ ಕರಣ ಇರಲಿದೆ.
ಮೇಷ ರಾಶಿ:
ಮೇಷ ರಾಶಿಯವರಿಗೆ ವಜ್ರ ಯೋಗವು ಮಿಶ್ರ ಫಲಗಳನ್ನು ನೀಡಲಿದೆ. ಇಂದು ಕೆಲಸಗಳಲ್ಲಿ ಅಡೆತಡೆಗಳು ಎದುರಾಗುವ ನಿರೀಕ್ಷೆ ಇದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳು ಸಿಗಬಹುದು. ಸಮಾಜದಲ್ಲಿ ನಿಮ್ಮ ಕೀರ್ತಿ, ಗೌರವ ಹೆಚ್ಚಾಗುವ ನಿರೀಕ್ಷೆ ಇದೆ. ಮಕ್ಕಳಿಂದ ಶುಭ ಸಮಾಚಾರ ನಿರೀಕ್ಷಿಸಬಹುದು.
ವೃಷಭ ರಾಶಿ:
ವೃಷಭ ರಾಶಿಯ ಜನರು ಇಂದು ಶತ್ರುಗಳ ಬಗ್ಗೆ ಜಾಗರೂಕರಾಗಿರಬೇಕು. ಸಮಾಜದಲ್ಲಿ ನಿಮ್ಮ ಗೌರವವನ್ನು ಕಾಪಾಡಿಕೊಳ್ಳಲು ಹೆಚ್ಚು ಶ್ರಮಿಸಬೇಕಾಗುತ್ತದೆ. ಆದಾಗ್ಯೂ, ಇಂದು ಕೆಲಸಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ನೀವು ಉತ್ತಮ ಫಲಿತಾಂಶವನ್ನು ಪಡೆಯಬಹುದು. ಹಣಕಾಸಿನ ಪರಿಸ್ಥಿತಿಯೂ ಉತ್ತಮವಾಗಿರಲಿದೆ.
ಮಿಥುನ ರಾಶಿ:
ಮಿಥುನ ರಾಶಿಯವರಿಗೆ ಇಂದು ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೇ ಇರಬಹುದು. ಅನಗತ್ಯ ದ್ವೇಷದಂದಾಗಿ ನೀವು ಆತಂಕವನ್ನು ಎದುರಿಸಬೇಕಾಗಬಹುದು. ಉದ್ಯಮಿಗಳು ಇಂದು ಜಾಗರೂಕರಾಗಿ ಇರಬೇಕಾದ ದಿನ. ಪ್ರಯಾಣದ ವೇಳೆ ನಿಮ್ಮ ಬೆಲೆಬಾಳುವ ವಸ್ತುಗಳ ಬಗ್ಗೆ ಹುಷಾರಾಗಿರಿ.
ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯ ಜನರಿಗೆ ಇಂದು ಎಲ್ಲಾ ಆಯಾಮಗಳಲ್ಲೂ ಶುಭ ಸೂಚನೆಗಳಿವೆ. ಮನಸ್ಸಿನ ಸಂತೋಷ ಹೆಚ್ಚಾಗಲಿದೆ. ದೀರ್ಘಾವಧಿಯ ಒತ್ತಡಗಳಿಂದ ಪರಿಹಾರ ದೊರೆಯುವ ನಿರೀಕ್ಷೆ ಇದೆ. ಆರೋಗ್ಯದಲ್ಲೂ ಸುಧಾರಣೆಯನ್ನು ಕಾಣುವಿರಿ. ಕುಟುಂಬದಲ್ಲಿ ಅನುಕೂಲಕರ ವಾತಾವರಣ ಇರಲಿದೆ.
ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಉತ್ತಮ ಲಾಭಾಂಶಗಳ ಸೂಚನೆ ಇದೆ. ನೀವು ಪ್ರಮುಖ ವಿಚಾರಗಳಲ್ಲಿ ಒಳ್ಳೆಯ ಸುದ್ದಿಯನ್ನು ಕೇಳುವಿರಿ. ಶುಭ ಸಮಾರಂಭಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕೌಟುಂಬಿಕ ಜೀವನವು ಆಹ್ಲಾದಕರವಾಗಿರುತ್ತದೆ. ಮದುವೆ ಮಾತುಕತೆಗಳು ಮುಂದುವರೆಯಲಿವೆ.
ಕನ್ಯಾ ರಾಶಿ:
ಕನ್ಯಾ ರಾಶಿಯ ಜನರಿಗೆ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಸಂಗಾತಿ ಬಗೆಗಿನ ಚಿಂತೆ ದೂರವಾಗಲಿದೆ. ಉದ್ಯಮಿಗಳಿಗೆ ಲಾಭ ಉತ್ತಮವಾಗಿರಲಿದ್ದು, ಹಣಕಾಸಿನ ಪರಿಸ್ಥಿತಿ ಬಲಗೊಳ್ಳಲಿದೆ. ಕೆಲಸದಲ್ಲಿ ನಿಮ್ಮ ನೈತಿಕತೆ ಹೆಚ್ಚಾಗಲಿದೆ. ಉದ್ಯೋಗಸ್ಥರಿಗೆ ಬಡ್ತಿ ಅವಕಾಶಗಳಿವೆ.
ತುಲಾ ರಾಶಿ:
ತುಲಾ ರಾಶಿಯ ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಇಂದು ಉತ್ತಮವಾದ ದಿನ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಿಲದೆ. ಉದ್ಯಮಿಗಳು ವ್ಯವಹಾರ ವಿಸ್ತರಣೆ ಯೋಚಿಸಲು ಇಂದಿನ ದಿನ ತುಂಬಾ ಪ್ರಾಶಸ್ತ್ಯವಾಗಿದೆ. ಮಕ್ಕಳಿಂದ ಶುಭ ಸುದ್ದಿಯನ್ನು ಕೇಳುವಿರಿ.
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯ ಜನರಿಗೆ ಇಂದು ಎಲ್ಲಾ ರೀತಿಯಲ್ಲೂ ಧನಾತ್ಮಕ ಫಲಿತಾಂಶಗಳು ಹೆಚ್ಚಾಗಲಿವೆ. ಕೆಲಸದಲ್ಲಿ ಒತ್ತಡ ಕಡಿಮ ಆಗಲಿದೆ. ಪ್ರಮುಖ ವ್ಯವಹಾರಗಳಲ್ಲಿ ನೀವು ಬುದ್ದಿವಂತಿಕೆಯಿಂದ ವರ್ತಿಸುವುದನ್ನು ಖಚಿತಪಡಿಸಿಕೊಳ್ಳಿ. ಆರೋಗ್ಯದಲ್ಲೂ ಸುಧಾರಣೆ ಕಂಡು ಬರಲಿದೆ. ಕುಟುಂಬದಲ್ಲಿ ವಾತಾವರಣ ಅನುಕೂಲಕರವಾಗಿರಲಿದೆ.
ಧನು ರಾಶಿ:
ವಜ್ರ ಯೋಗವು ಧನು ರಾಶಿಯವರಿಗೆ ಶುಭ ಫಲಗಳನ್ನು ಹೆಚ್ಚಿಸಲಿದೆ. ಇಂದು ವೈವಾಹಿಕ ಬದುಕಿನಲ್ಲಿ ಸುಖ-ಸಂತೋಷ ಹೆಚ್ಚಾಗಲಿದೆ. ಕುಟುಂಬದಲ್ಲಿ ಅನುಕೂಲಕರ ವಾತಾವರಣ ಇರಲಿದೆ. ದೂರದ ಊರಿಗೆ ಪ್ರಯಾಣ ಕೈಗೊಳ್ಳುವ ನಿರೀಕ್ಷೆ ಇದೆ. ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ.
ಮಕರ ರಾಶಿ:
ಮಕರ ರಾಶಿಯ ಜನರಿಗೆ ಇಂದಿನ ದಿನ ಶುಭದಾಯಕವಾಗಿರುತ್ತದೆ. ಉದ್ಯೋಗಸ್ಥರಿಗೆ ಬಡ್ತಿ ಸೂಚನೆಗಳಿವೆ. ಭೂಮಿ, ಆಸ್ತಿ ಖರೀದಿ ವಿಚಾರದಲ್ಲಿ ಅನಿರೀಕ್ಷಿತ ಲಾಭದ ನಿರೀಕ್ಷೆ ಇದೆ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳ ಬೆಂಬಲ, ಸಹಕಾರ ಸಿಗಲಿದೆ. ಸರ್ಕಾರಿ ಮಟ್ಟದಲ್ಲಿ ತಡೆಯಾಗಿದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.
ಕುಂಭ ರಾಶಿ:
ಕುಂಭ ರಾಶಿಯ ಜನರಿಗೆ ಇಂದು ಆದಾಯದ ಹೊಸ ಮೂಲಗಳು ಹೊರಹೊಮ್ಮಬಹುದು. ಕುಟುಂಬಸ್ಥರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಕೆಲಸದಲ್ಲಿ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುವ ಅವಕಾಶಗಳಿವೆ. ವ್ಯವಹಾರಸ್ಥರು ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸುವರು.
ಮೀನ ರಾಶಿ:
ಮೀನ ರಾಶಿಯವರಿಗೆ ಹುಣ್ಣಿಮೆಯಂದು ವಜ್ರ ಯೋಗವು ವೃತ್ತಿ, ವ್ಯವಹಾರದಲ್ಲಿ ಭರ್ಜರಿ ಜಾಕ್ಪಾಟ್ ತರಲಿದೆ ಎಂತಲೇ ಹೇಳಬಹುದು. ಕುಟುಂಬದಲ್ಲಿ ವಾತಾವರಣ ಸುಖಮಯವಾಗಿರುತ್ತದೆ. ಬೇರೆಡೆ ಸಿಲುಕಿರುವ ಹಣ ನಿಮ್ಮ ಕೈ ಸೇರುವ ಸೂಚನೆಗಳಿವೆ. ಮದುವೆ ಮಾತುಕತೆಗಳಲ್ಲಿ ಸಕಾರಾತ್ಮಕ ಫಲವನ್ನು ನಿರೀಕ್ಷಿಸಬಹುದು.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.