SOCIAL MEDIA

Newsletter

PARTNER SITES
Select Language Select State

ದಿನ ಭವಿಷ್ಯ 14-10-2026: ಇಂದು ಆಯುಷ್ಮಾನ್‌ ಯೋಗ.. ಈ ರಾಶಿಯವರಿಗೆ ಹಠಾತ್‌ ಧನಲಾಭ

Today Horoscope 14th October 2026: 14 ಅಕ್ಟೋಬರ್ 2026ರಂದು ಅನುರಾಧ ನಕ್ಷತ್ರದಲ್ಲಿ ಆಯುಷ್ಮಾನ್‌ ಯೋಗ ಇರಲಿದ್ದು, ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

Written By Yashaswini V
Published: Oct 14, 2026, 08:39 AM IST | Updated: Oct 14, 2026, 08:41 AM IST
Join

Budhvara 14th October 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಬುಧವಾರದ ಈ ದಿನ ಅನುರಾಧ ನಕ್ಷತ್ರ, ಆಯುಷ್ಮಾನ್ ಯೋಗ, ವಣಿಜ ಕರಣ ಇರಲಿದೆ.

ಮೇಷ ರಾಶಿ:
ಆಯುಷ್ಮಾನ್‌ ಯೋಗವು ಮೇಷ ರಾಶಿಯ ಜನರಿಗೆ ಮಿಶ್ರ ಫಲಗಳನ್ನು ನೀಡಲಿದೆ. ಈ ದಿನ ನಿಮ್ಮ ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಆದಾಯವು ಗಮನಾರ್ಹವಾಗಿ ಹೆಚ್ಚಾಗಲಿದೆ. ಈ ದಿನ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲವನ್ನು ಪಡೆಯುವಿರಿ. ಸಂಗಾತಿಯೊಂದಿಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಿ.

ವೃಷಭ ರಾಶಿ: 
ಆಯುಷ್ಮಾನ್‌ ಯೋಗವು ವೃಷಭ ರಾಶಿಯ ಜನರಿಗೆ ಆಹ್ಲಾದಕರವಾಗಿರುತ್ತದೆ. ಇಂದು ಆದಾಯದ ಮೂಲಗಳು ಹೆಚ್ಚಾಗಲಿವೆ. ಈ ದಿನ ನಿಮ್ಮ ಬಹುದಿನಗಳ ಆಸೆ ಈಡೇರಲಿದೆ. ಕುಟುಂಬದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ.

ಮಿಥುನ ರಾಶಿ: 
ಮಿಥುನ ರಾಶಿಯ ಜನರಿಗೆ ಇಂದು ಆಯುಷ್ಮಾನ್‌ ಯೋಗದ ಪರಿಣಾಮವಾಗಿ ಮಿಶ್ರ ಫಲಗಳು ಸಿಗಲಿವೆ. ವ್ಯವಹಾರಸ್ಥರು ನಿಮ್ಮ ವಿರೋಧಿಗಳ ಬಗ್ಗೆ ಜಾಗರೂಕರಾಗಿರಿ. ಕುಟುಂಬದಲ್ಲಿ ಒಡಕುಂಟಾಗುವ ಸನ್ನಿವೇಶಗಳು ನಿರ್ಮಾಣವಾಗಬಹುದು. ಈ ಸಮಯದಲ್ಲಿ ತಾಳ್ಮೆಯಿಂದ ವರ್ತಿಸುವುದು ಒಳ್ಳೆಯದು.

ಕರ್ಕಾಟಕ ರಾಶಿ:
ಆಯುಷ್ಮಾನ್‌ ಯೋಗವು ಕರ್ಕಾಟಕ ರಾಶಿಯ ಜನರಿಗೆ ಉತ್ತಮ ಫಲಿತಾಂಶಗಳನ್ನು ತರಲಿದೆ. ಉದ್ಯಮಿಗಳು ನಿರೀಕ್ಷೆಗೂ ಮೀರಿದ ಲಾಭವನ್ನು ಪಡೆಯಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸಾಧಿಸುವಿರಿ. ಕೌಟುಂಬಿಕ ಜೀವನದಲ್ಲಿ ಸಂತೋಷದ ವಾತಾವರಣ ಇರಲಿದೆ. ಪ್ರೀತಿಯ ಜೀವನವು ಆನಂದದಾಯಕವಾಗಿರಲಿದೆ.

ಸಿಂಹ ರಾಶಿ:
ಸಿಂಹ ರಾಶಿಯ ಜನರಿಗೆ ಆಯುಷ್ಮಾನ್‌ ಯೋಗವು ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಲಿದೆ. ಉದ್ಯೋಗದಲ್ಲಿ ಪ್ರಗತಿಯ ಅವಕಾಶಗಳು ಸಿಗಬಹುದು. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳಿಂದ ಅಗತ್ಯ ಬೆಂಬಲ ಸಿಗಲಿದೆ. ಪ್ರಯಾಣವು ಆಹ್ಲಾದಕರವಾಗಿರಲಿದೆ. ವೈವಾಹಿಕ ಜೀವನವು ಸಂತೋಷದಾಯಕವಾಗಿರಲಿದೆ.

ಕನ್ಯಾ ರಾಶಿ:
ಕನ್ಯಾ ರಾಶಿಯ ಜನರಿಗೆ ಆಯುಷ್ಮಾನ್‌ ಯೋಗವು ಶುಭ ದಿನ ಎಂದು ಸಾಬೀತುಪಡಿಸಲಿದ.ೆ ಇಂದು ಕೆಲಸದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಬೆಂಬಲ ಸಿಗಲಿದೆ. ಕುಟುಂಬದಲ್ಲಿ ವಾತಾವರಣವು ಸಂತೋಷದಾಯಕವಾಗಿರಲಿದೆ. ಆರೋಗದಲ್ಲೂ ಸುಧಾರಣೆಯನ್ನು ಕಾಣಬಹುದು.

ತುಲಾ ರಾಶಿ: 
ಆಯುಷ್ಮಾನ್‌ ಯೋಗವು ತುಲಾ ರಾಶಿಯವರಿಗೆ ಸಮಾಜದಲ್ಲಿ ಕೀರ್ತಿ, ಗೌರವವನ್ನು ಹೆಚ್ಚಿಸಲಿದೆ. ಇಂದು ನಿಮ್ಮ ಬೆಲೆ ಬಾಳುವ ವಸ್ತುಗಳು ಕಳೆದು ಹೋಗುವ ಸಾಧ್ಯತೆ ಇರುವುದರಿಂದ ವಸ್ತುಗಳ ಬಗ್ಗೆ ಜಾಗರೂಕರಾಗಿರಿ. ಕುಟುಂಬ ಜೀವನದಲ್ಲಿ ಆಹ್ಲಾದಕರ ವಾತಾವರಣ ಇರಲಿದೆ.

ವೃಶ್ಚಿಕ ರಾಶಿ:
ಆಯುಷ್ಮಾನ್‌ ಯೋಗವು ವೃಶ್ಚಿಕ ರಾಶಿಯ ಜನರಿಗೆ ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಿದೆ. ಮಾನಸಿಕವಾಗಿ ಇಂದು ಸಂತೋಷದಿಂದ ಇರಲಿದ್ದೀರಿ. ಕುಟುಂಬದಲ್ಲಿ ಆಹ್ಲಾದಕರ ವಾತಾವರಣ ಇರಲಿದೆ. ವೈವಾಹಿಕ ಜೀವನದಲ್ಲಿ ಸುಖ ಸಂತೋಷ ಹೆಚ್ಚಾಗಲಿದೆ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯೋಚಿಸಿ ನಿರ್ಧರಿಸಿ.

ಧನು ರಾಶಿ:
ಧನು ರಾಶಿಯವರಿಗೆ ಆಯುಷ್ಮಾನ್‌ ಯೋಗವು ಮಿಶ್ರ ಫಲಗಳನ್ನು ನೀಡಲಿದೆ. ಇಂದು ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಈ ದಿನ ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗಬಹುದು. ಕುಟುಂಬದಲ್ಲಿ ಕೆಲವು ವಿಚಾರಗಳು ನಿಮ್ಮ ಚಿಂತೆಯನ್ನು ಹೆಚ್ಚಿಸಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮಕರ ರಾಶಿ:
ಮಕರ ರಾಶಿಯವರಿಗೆ ಆಯುಷ್ಮಾನ್‌ ಯೋಗವು ಶುಭದಾಯಕವಾಗಿರುತ್ತದೆ. ನಿಮ್ಮ ಕುಟುಂಬ ಜೀವನದಲ್ಲಿ ಸಂತೋಷ ಇಮ್ಮಡಿಗೊಳ್ಳಲಿದೆ. ಕೆಲಸದಲ್ಲಿ ನಿಮ್ಮ ಶಕ್ತಿ ಸಾಮರ್ಥ್ಯ ಹೆಚ್ಚಾಗಲಿದೆ. ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಉತ್ತಮಗೊಳ್ಳಲಿದೆ. ವಿದೇಶ ವ್ಯವಹಾರಗಳಲ್ಲಿ ಲಾಭಾಂಶಗಳು ಅಧಿಕಗೊಳ್ಳಲಿವೆ.

ಕುಂಭ ರಾಶಿ:
ಆಯುಷ್ಮಾನ್‌ ಯೋಗವು ಕುಂಭ ರಾಶಿಯ ಜನರಿಗೆ ಹಲವು ರೀತಿಯಲ್ಲಿ ಲಾಭದಾಯಕವಾಗಿರಲಿದೆ. ಹಿಂದೆ ಮಾಡಿರುವ ಹೂಡಿಕೆಗಳು ಇಂದು ನಿಮಗೆ ಉತ್ತಮ ಲಾಭವನ್ನು ತರಬಹುದು. ಆದಾಯದ ಮೂಲಗಳು ಹೆಚ್ಚಾಗುವುದರ ಜೊತೆಗೆ ನೀವು ನಿಮ್ಮ ಕುಟುಂಬಕ್ಕಾಗಿ ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು.

ಮೀನ ರಾಶಿ:
ಆಯುಷ್ಮಾನ್‌ ಯೋಗವು ಮೀನ ರಾಶಿಯ ಜನರಿಗೆ ಬಹುದಿನದ ಆಸೆಗಳನ್ನು ಈಡೇರಿಸಲಿದೆ. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸಮಾಚಾರ ಸಿಗುವ ನಿರೀಕ್ಷೆ ಇದೆ. ಕುಟುಂಬ ಜೀವನದಲ್ಲಿ ಪ್ರೀತಿ, ಸಾಮರಸ್ಯ ಹೆಚ್ಚಾಗಲಿದೆ. ಹಳೆಯ ನೆಟ್‌ವರ್ಕ್‌ನಿಂದ ಉತ್ತಮ ಲಾಭವನ್ನು ಗಳಿಸುವ ನಿರೀಕ್ಷಿಸಲಾಗಿದೆ.

ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES