SOCIAL MEDIA

Newsletter

PARTNER SITES
Select Language Select State

ದಿನ ಭವಿಷ್ಯ 12-10-2026: ಸೋಮವಾರದಂದು ವಿಷ್ಕಂಭ ಯೋಗ.. ಈ ರಾಶಿಯವರು ಜಾಗರೂಕರಾಗಿರಿ!

Today Horoscope 12th October 2026: 12 ಅಕ್ಟೋಬರ್ 2026ರ ಸೋಮವಾರದಂದು ವಿಷ್ಕಂಭ ಯೋಗದ ಪ್ರಭಾವ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

Written By Yashaswini V
Published: Oct 12, 2026, 09:14 AM IST | Updated: Oct 12, 2026, 09:16 AM IST
Join

Somavara 12th October 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷ, ದ್ವಿತೀಯಾ ತಿಥಿ, ಸೋಮವಾರದ ಈ ದಿನ ಸ್ವಾತಿ ನಕ್ಷತ್ರ, ವಿಷ್ಕಂಭ ಯೋಗ, ಬಾಲವ ಕರಣ ಇರಲಿದೆ.

ಮೇಷ ರಾಶಿ:
ವಿಷ್ಕಂಭ ಯೋಗವು ಮೇಷ ರಾಶಿಯ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ. ಇಂದು ವೃತ್ತಿ ವ್ಯವಹಾರದಲ್ಲಿ ಹಣಕಾಸಿನ ಸಮಸ್ಯೆಗಳನ್ನು ಸಕಾಲಿಕವಾಗಿ ಪರಿಹರಿಸಲಾಗುವುದು. ಅನಿರೀಕ್ಷಿತ ಧನಲಾಭವು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. ಆಸ್ತಿ ವಿವಾದಗಳು ಸುಗಮವಾಗಿ ಬಗೆಹರಿಯಲಿವೆ.

ವೃಷಭ ರಾಶಿ: 
ವೃಷಭ ರಾಶಿಯ ಉದ್ಯೋಗಿಗಳಿಗೆ ಅಪೇಕ್ಷಿತ ಬಡ್ತಿ ಸಿಗುವ ನಿರೀಕ್ಷೆ ಇದೆ. ವೃತ್ತಿ- ವ್ಯವಹಾರಗಳು ಲಾಭದಾಯಕವಾಗಿರಲಿವೆ. ವಿವಾಹ ಪ್ರಯತ್ನಗಳಲ್ಲಿ ನಿರೀಕ್ಷಿತ ಶುಭ ಸುದ್ದಿಗಳನ್ನು ಕೇಳುವಿರಿ. ಹಣಕಾಸಿನ ವ್ಯವಹಾರಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಅನಿರೀಕ್ಷಿತ ಶುಭ ಸಮಾಚಾರಗಳು ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸುವ ಸೂಚನೆಗಳಿವೆ.

ಮಿಥುನ ರಾಶಿ: 
ಮಿಥುನ ರಾಶಿಯವರಿಗೆ ಇಂದು ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ. ಆದಾಯದ ಹರಿವು ತೃಪ್ತಿಕರವಾಗಿರುತ್ತದೆ. ಯೋಜಿತ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಸಮಾಜದಲ್ಲಿ ನಿಮ್ಮ ಮಾತಿನ ಮೌಲ್ಯ ಹೆಚ್ಚಾಗಲಿದೆ. ಉದ್ಯೋಗಸ್ಥರಿಗೆ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಲಿವೆ. ಒಡಹುಟ್ಟಿದವರೊಂದಿಗಿನ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ.

ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯವರಿಗೆ ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಸಾಮರಸ್ಯ ಹೆಚ್ಚಾಗಲಿದೆ. ಹೆಚ್ಚುವರಿ ಜವಾಬ್ದಾರಿಗಳು ನಿಮ್ಮ ಒತ್ತಡವನ್ನು ಹೆಚ್ಚಿಸಬಹುದು. ಆದಾಗ್ಯೂ, ಉದ್ಯೋಗ ವಿಚಾರದಲ್ಲಿ ನಿಮ್ಮ ಕಾರ್ಯಕ್ಷಮತೆಗೆ ಉತ್ತಮ ಮನ್ನಣೆ ಸಿಗಲಿದೆ. ಕುಟುಂಬದ ವಿಚಾರದಲ್ಲಿ ಅನುಕೂಲಕರ ಪರಿಸ್ಥಿತಿ ಇರಲಿದೆ.

ಸಿಂಹ ರಾಶಿ:
ಸಿಂಹ ರಾಶಿಯ ಜನರಿಗೆ ವೃತ್ತಿ ಬದುಕು ತೃಪ್ತಿದಾಯಕವಾಗಿರುತ್ತದೆ. ವ್ಯವಹಾರದಲ್ಲಿ ಅಲ್ಪಮಟ್ಟದ ಲಾಭವನ್ನು ನಿರೀಕ್ಷಿಸಬಹುದು. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರಲಿದೆ. ಆದರೆ, ಅನಿರೀಕ್ಷಿತ ಖರ್ಚುಗಳು ನಿಮ್ಮನ್ನು  ತೊಂದರೆಗೊಳಿಸಬಹುದು. ಹಣಕಾಸಿನ ವಿಚಾರಗಳಲ್ಲಿ ಎಚ್ಚರಿಕೆಯಿಂದ ಮುಂದುವರೆಯುವುದನ್ನು ಪರಿಗಣಿಸಿ.

ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಇಂದು ಆದಾಯವು ಗಮನಾರ್ಹವಾಗಿ ಹೆಚ್ಚಾಗಲಿದೆ. ಹೆಚ್ಚುವರಿ ಆದಾಯವು ನಿಮ್ಮನ್ನು ಹಣಕಾಸಿನ ಸಮಸ್ಯೆಗಳಿಂದ ದೂರ ಉಳಿಸಲು ಸಹಕಾರಿ ಆಗಿದೆ. ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ. ವ್ಯವಹಾರದಲ್ಲಿ ನಿಮ್ಮ ಪ್ರತಿಸ್ಪರ್ಧಿಗಳಿಗಿಂತ ಮೇಲುಗೈ ಸಾಧಿಸುವಿರಿ. ಪ್ರಯಾಣವು ಲಾಭದಾಯಕವಾಗಿರುತ್ತದೆ.

ತುಲಾ ರಾಶಿ: 
ತುಲಾ ರಾಶಿಯವರಿಗೆ ಇಂದು ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆ ಸುಧಾರಿಸಲಿದೆ. ನಿಮ್ಮ ಪ್ರತಿಭೆಯನ್ನು ಮೇಲಧಿಕಾರಿಗಳು ಗುರುತಿಸುವರು. ಹಣಕಾಸಿನ ವಹಿವಾಟುಗಳು ವೇಗವಾಗಿ ಬಗೆಹರಿಯಲಿವೆ. ವೃತ್ತಿಪರರಿಗೆ ಇಂದು ಕಾರ್ಯನಿರತವಾದ ದಿನ. ಮನೆಯಲ್ಲಿ ಅನುಕೂಲಕರ ವಾತಾವರಣ ಇರಲಿದೆ. ಸ್ನೇಹಿತರಿಂದ ಆರ್ಥಿಕ ಒತ್ತಡಗಳನ್ನು ಬಗೆಹರಿಸುವಿರಿ.

ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರು ಉದ್ಯೋಗದಲ್ಲಿ ಮೇಲಧಿಕಾರಿಗಳ ವಿಶ್ವಾಸ ಗಳಿಸುವಿರಿ. ಇಂದು ಕೆಲಸದಲ್ಲಿ ಹೊಸ ಜವಾಬ್ದಾರಿಗಳನ್ನು ವಹಿಸಬಹುದು. ವೃತ್ತಿ-ವ್ಯವಹಾರಗಲು ಲಾಭದಾಯಕವಾಗಿರುತ್ತದೆ.  ವೈಯಕ್ತಿಕ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುವಿರಿ. ಆರ್ಥಿಕ ವಿಷಯಗಳು ಕಡಿಮೆ ಪ್ರಯತ್ನದಿಂದಲೇ ಯಶಸ್ವಿಯಾಗಲಿವೆ.

ಧನು ರಾಶಿ:
ಧನು ರಾಶಿಯವರಿಗೆ ಇಂದು ಎಲ್ಲಾ ರೀತಿಯಲ್ಲೂ ಅನುಕೂಲಕರವಾದ ದಿನವಾಗಿರುತ್ತದೆ. ಉದ್ಯೋಗದಲ್ಲಿ ನಿಮ್ಮ ಪ್ರತಿಭೆ ಸಾಮರ್ಥ್ಯಗಳು ಬೆಳಕಿಗೆ ಬರುತ್ತವೆ. ಅಧಿಕಾರಿಗಳಿಂದ ಅಪೇಕ್ಷಿತ ಪ್ರೋತ್ಸಾಹ ಸಿಗಲಿದೆ. ವ್ಯವಹಾರಗಳು ಲಾಭದಾಯಕವಾಗಿ ಮುಂದುವರೆಯಲಿವೆ. ಆಸ್ತಿ ವಿವಾದಗಳು ಸುಗಮವಾಗಿ ಬಗೆಹರಿಯಲಿವೆ.

ಮಕರ ರಾಶಿ:
ಮಕರ ರಾಶಿಯವರು ಇಂದು ಉದ್ಯೋಗದಲ್ಲಿ ಶುಭ ಸಮಾಚಾರವನ್ನು ಕೇಳುವರು. ಹಣಕಸಿನ ಪ್ರಯತ್ನಗಳು ಒಳ್ಳೆಯ ಫಲಗಳನ್ನು ನೀಡಲಿವೆ. ಆಸ್ತಿ ಖರೀದಿ ವಿಚಾರಗಳ ಬಗ್ಗೆ ಜಾಗರೂಕರಾಗಿರಿ. ವೈಯಕ್ತಿಕ ಸಮಸ್ಯೆಗಳು ಬಗೆಹರಿಯಲಿವೆ. ಪ್ರಮುಖ ವಿಷಯಗಳನ್ನು ಬಗೆಹರಿಸಲು ಸ್ನೇಹಿತರ ಸಹಕಾರ ಸಿಗಲಿದೆ.

ಕುಂಭ ರಾಶಿ:
ಕುಂಭ ರಾಶಿಯವರಿಗೆ ವೃತ್ತಿ ಬದುಕು ಇಂದು ರೋಮಾಂಚನಕಾರಿ ಆಗಿರಲಿದೆ. ವ್ಯವಹಾರದಲ್ಲಿ ಪ್ರತಿಸ್ಪರ್ಧಿಗಳ ಎದುರು ಮೇಲುಗೈ ಸಾಧಿಸುವಿರಿ. ಸಂಬಂಧಿಕರೊಂದಿಗೆ ಭೋಜನ ಕೂಟಗಳಲ್ಲಿ ಭಾಗವಹಿಸುವಿರಿ. ವೈಯಕ್ತಿಕ ಸಮಸ್ಯೆಗಳು ಬಗೆಹಿರಯಲಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

ಮೀನ ರಾಶಿ:
ಮೀನ ರಾಶಿಯವರಿಗೆ ಇಂದು ಆದಾಯದ ಮೂಲಗಳು ಹೆಚ್ಚಾಗಲಿವೆ. ಕೆಲಸದಲ್ಲಿ ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲ ಸಿಗಲಿದೆ. ವೃತ್ತಿ ಬದುಕಿನಲ್ಲಿ ಗೌರವ ಹೆಚ್ಚಾಗಲಿವೆ. ವ್ಯವಹಾರವು ಲಾಭದಾಯಕವಾಗಿರಲಿದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. ಆಹಾರದ ಬಗ್ಗೆ ಜಾಗರೂಕರಾಗಿರಿ.

ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES