Guruvara 08th October 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಗುರುವಾರದ ಈ ದಿನ ಪೂರ್ವಾ ನಕ್ಷತ್ರ, ಶುಕ್ಲ ಯೋಗ, ಗರಜ ಕರಣ ಇರಲಿದೆ.
ಮೇಷ ರಾಶಿ:
ಗುರುವಾರದಂದು ಶುಕ್ಲ ಯೋಗವು ಮೇಷ ರಾಶಿಯ ಜನರಿಗೆ ಅತ್ಯುತ್ತಮವಾದ ಫಲಿತಾಂಶವನ್ನು ನೀಡಲಿದೆ. ಇಂದು ಕುಟುಂಬದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ಹಣಕಾಸಿನ ಪರಿಸ್ಥಿತಿ ಬಲಗೊಳ್ಳುವ ಸೂಚನೆಗಳಿವೆ. ಉದ್ಯಮಿಗಳಿಗೆ ಲಾಭಾಂಶ ಹೆಚ್ಚಾಗಲಿದೆ. ಆದರೆ, ವಾಹನ ಚಾಲನೆ ಮಾಡುವಾಗ ಜಾಗರೂಕರಾಗಿರಿ.
ವೃಷಭ ರಾಶಿ:
ವೃಷಭ ರಾಶಿಯ ಜನರು ಇಂದು ತಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ಸಾಧ್ಯತೆ ಇದೆ. ಉದ್ಯಮಿಗಳಿಗೆ ಪ್ರಮುಖ ಜವಾಬ್ದಾರಿಗಳು ಸಿಗುವ ಸಾಧ್ಯತೆ ಇದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಆದರೆ, ಯಾವುದಾದರು ದೊಡ್ಡ ವಹಿವಾಟುಗಳನ್ನು ನಡೆಸುವ ಬಗ್ಗೆ ಜಾಗರೂಕರಾಗಿರಿ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ.
ಮಿಥುನ ರಾಶಿ:
ಶುಕ್ಲ ಯೋಗವು ಇಂದು ಮಿಥುನ ರಾಶಿಯವರಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಉದ್ಯೋಗ ಹುಡುಕುತ್ತಿರುವವರಿಗೆ ಶುಭ ಸುದ್ದಿ ಸಿಗುವ ನಿರೀಕ್ಷೆ ಇದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ಕೆಲಸದಲ್ಲಿ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲ ಸಿಗುವ ಸೂಚನೆಗಳಿವೆ. ಉದ್ಯಮಿಗಳು ಉತ್ತಮ ಲಾಭವನ್ನು ನಿರೀಕ್ಷಿಸಬಹುದು.
ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯವರಿಗೆ ಇಂದು ಎಲ್ಲಾ ರೀತಿಯಲ್ಲಿಯೂ ದಿನ ಅತ್ಯುತ್ತಮವಾಗಿದೆ. ಕೆಲಸದಲ್ಲಿ ಮೇಲಧಿಕಾರಿಗಳು ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುವರು. ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಹೊಸ ಆದಾಯದ ಮೂಲಗಳು ಸಿಗಬಹುದು. ಪ್ರೀತಿ ಜೀವನವು ಸಾಮರಸ್ಯದಿಂದ ಕೂಡಿರಲಿದೆ. ವೃತ್ತಿಯಲ್ಲಿ ಬಡ್ತಿ ಸೂಚನೆಗಳಿವೆ.
ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಶುಕ್ಲ ಯೋಗವು ಕೆಲಸದಲ್ಲಿ ಉತ್ತಮ ಫಲಿತಾಂಶವನ್ನು ನೀಡಲಿದೆ. ಪೋಷಕರ ಸಹಾಯದಿಂದ ಬಾಕಿ ಉಳಿದಿರುವ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ. ಹಣಕಾಸಿನ ವಿಚಾರದಲ್ಲಿ ಬೇರೆಯವರನ್ನು ಕುರುಡಾಗಿ ನಂಬುವುದನ್ನು ತಪ್ಪಿಸಿ.
ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಇಂದು ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನವಾಗಿರುತ್ತದೆ. ಕೆಲಸದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು. ಕುಟುಂಬ ಸದಸ್ಯರೊಂದಿಗೆ ಗುಣಮಟ್ಟದ ಸಮಯ ಕಳೆಯುವ ಅವಕಾಶಗಳು ಸಿಗಲಿವೆ. ಸಮಾಜದಲ್ಲಿ ನಿಮ್ಮ ಕೀರ್ತಿ, ಗೌರವ ಹೆಚ್ಚಾಗಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿ ಆಗಲಿವೆ.
ತುಲಾ ರಾಶಿ:
ತುಲಾ ರಾಶಿಯ ಜನರಿಗೆ ಇಂದಿನ ದಿನವು ಸಕಾರಾತ್ಮಕತೆಯಿಂದ ಕೂಡಿರಲಿವೆ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ, ಪರಿಶ್ರಮಕ್ಕೆ ಸೂಕ್ತ ಮನ್ನಣೆ ಸಿಗಲಿದೆ. ವ್ಯವಹಾರ ವಿಸ್ತರಣೆಗೆ ಇದು ಅನುಕೂಲಕರವಾದ ಸಮಯ. ಉದ್ಯಮಿಗಳು ನಿರೀಕ್ಷೆಯಂತೆ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವರು. ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ.
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯ ಜನರಿಗೆ ಇಂದು ಅದೃಷ್ಟದ ಬಾಗಿಲುಗಳು ತೆರೆದುಕೊಳ್ಳಲಿವೆ. ವೃತ್ತಿ ಬದುಕಿನಲ್ಲಿ ಪ್ರಗತಿಯನ್ನು ಕಾಣುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶವನ್ನು ಪಡೆಯುವಿರಿ. ಹೊಸ ಜನರೊಂದಿಗೆ ನೆಟ್‌ವರ್ಕ್ ಬೆಳೆಯಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.
ಧನು ರಾಶಿ:
ಶುಕ್ಲ ಯೋಗವು ಇಂದು ಧನು ರಾಶಿಯ ಜನರಿಗೆ ಶುಭಪ್ರದವಾಗಿರುತ್ತದೆ. ಕೆಲಸದಲ್ಲಿ ಒಳ್ಳೆಯ ಫಲಿತಾಂಶಗಳನ್ನು ಪಡೆಯುವಿರಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಉದ್ಯಮಿಗಳು ಸ್ವಲ್ಪ ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡುವುದು ಲಾಭದಾಯಕವಾಗಿರಲಿದೆ. ಹೊರಗಿನ ಆಹಾರ ಸೇವಿಸುವುದನ್ನು ತಪ್ಪಿಸಿ.
ಮಕರ ರಾಶಿ:
ಮಕರ ರಾಶಿಯವರಿಗೆ ಇಂದು ಸಾಕಾರಾತ್ಮಕ ಫಲಿತಾಂಶಗಳು ಹೆಚ್ಚಾಗಲಿವೆ. ಉದ್ಯೋಗಿಗಳು ಹೊಸ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವರು. ವೈವಾಹಿಕ ಜೀವನವು ಸಂತೋಷದಿಂದ ಕೂಡಿರಲಿವೆ. ಕೆಲಸಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದರಿಂದ ಉತ್ತಮ ಫಲಗಳನ್ನು ಪಡೆಯುವಿರಿ. ವೃತ್ತಿಯಲ್ಲಿ ಬಡ್ತಿ ಅವಕಾಶಗಳಿವೆ.
ಕುಂಭ ರಾಶಿ:
ಕುಂಭ ರಾಶಿಯ ಜನರು ಇಂದು ಸ್ವಲ್ಪ ತಾಳ್ಮೆಯಿಂದ ಇರುವುದು ಒಳ್ಳೆಯದು. ಅನಿರೀಕ್ಷಿತ ಖರ್ಚುಗಳು ನಿಮ್ಮ ಹಣಕಾಸಿನ ಸ್ಥಿತಿಯನ್ನು ಹದಗೆಡಿಸಬಹುದು. ಪೂರ್ವಿಕರ ಆಸ್ತಿಗೆ ಸಂಬಂಧಿಸಿದಂತೆ ಒಡಹುಟ್ಟಿದವರೊಂದಿಗೆ ವಿವಾದ ಸಾಧ್ಯತೆ ಇದೆ. ಯಾವುದೇ ರೀತಿಯ ಹೂಡಿಕೆಗಳನ್ನು ತಪ್ಪಿಸುವುದು ಒಳ್ಳೆಯದು.
ಮೀನ ರಾಶಿ:
ಮೀನ ರಾಶಿಯ ಜನರಿಗೆ ಇಂದು ಅನುಕೂಲಕರವಾದ ಸಮಯ. ಹೊಸ ವ್ಯವಹಾರಗಳು ಶುಭ ಫಲಗಳನ್ನು ನೀಡಬಹುದು. ಸಂಗಾತಿಯೊಂದಿಗೆ ಹೊರ ಹೋಗಲು ಯೋಜಿಸಬಹುದು. ನೀವು ಮಾತನಾಡುವಾಗ ಬೇರೆಯವರ ಭಾವನೆಗಳಿಗೆ ಧಕ್ಕೆ ಬರದಂತೆ ನಿಗಾವಹಿಸಿ. ಆಧ್ಯಾತ್ಮಿಕತೆ ಕಡೆಗೆ ಒಲವು ಹೆಚ್ಚಾಗಬಹುದು.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.