SOCIAL MEDIA

Newsletter

PARTNER SITES
Select Language Select State

ದಿನ ಭವಿಷ್ಯ 06-10-2026: ಮಂಗಳವಾರದಂದು ಸಿದ್ಧ ಯೋಗ.. ಈ ರಾಶಿಯವರಿಗೆ ಕಂಡ ಕನಸೆಲ್ಲಾ ನನಸಾಗುವ ದಿನ

Today Horoscope 06th October 2026: 06 ಅಕ್ಟೋಬರ್ 2026ರಂದು ಸಿದ್ಧ ಯೋಗವು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

Written By Yashaswini V
Published: Oct 06, 2026, 08:06 AM IST | Updated: Oct 06, 2026, 08:08 AM IST
Join

Mangalvara 06th October 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಮಂಗಳವಾರದ ಈ ದಿನ ಆಶ್ಲೇಷಾ ನಕ್ಷತ್ರ, ಸಿದ್ಧ ಯೋಗ, ಬವ ಕರಣ ಇರಲಿದೆ.

ಮೇಷ ರಾಶಿ:
ಮೇಷ ರಾಶಿಯ ಜನರಿಗೆ ಇಂದಿನ ದಿನವು ಅನುಕೂಲಕರವಾಗಿದೆ. ಇಂದು ಶುಭ ಯೋಗಗಳ ಪ್ರಭಾವದಿಂದ ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಪೋಷಕರಿಂದ ಅಗತ್ಯ ಸಲಹೆ, ಸಹಕಾರ ಸಿಗಲಿದೆ. ವೈವಾಹಿಕ ಬದುಕು ಆನಂದಮಯವಾಗಿರಲಿದೆ. ಕೆಲಸಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದ್ದು ಬಡ್ತಿ ಸೂಚನೆಗಳಿವೆ.

ವೃಷಭ ರಾಶಿ: 
ಮಂಗಳವಾರದಂದು ಸಿದ್ಧ ಯೋಗವು ವೃಷಭ ರಾಶಿಯ ಜನರಿಗೆ ಮಿಶ್ರ ಫಲಗಳನ್ನು ನೀಡಲಿದೆ. ಇಂದು ನಿಮ್ಮ ಆದಾಯದ ಮೂಲಗಳು ಹೆಚ್ಚಾಗಲಿವೆ ಆದರೂ ಅನಗತ್ಯ ಖರ್ಚುಗಳು ನಿಮ್ಮ ಬಜೆಟ್‌ ಹಾಳು ಮಾಡಬಹುದು. ಹೊರಗಿನ ಆಹಾರದ ಬಗ್ಗೆ ಜಾಗರೂಕರಾಗಿರಿ, ಇಲ್ಲವೇ ಆರೋಗ್ಯ ಏರುಪೇರಾಗಬಹುದು.

ಮಿಥುನ ರಾಶಿ: 
ಮಿಥುನ ರಾಶಿಯ ಜನರಿಗೆ ಹಲವು ರೀತಿಯಲ್ಲಿ ಇಂದು ಪ್ರಯೋಜನಕಾರಿ ಆದ ದಿನವಾಗಿರುತ್ತದೆ. ಕೆಲಸದಲ್ಲಿ ನಿಮ್ಮ ಶಕ್ತಿ, ಸಾಮರ್ಥ್ಯಗಳು ಹೆಚ್ಚಾಗಲಿವೆ. ನೀವು ಮಾಡುವ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಲಿದೆ. ಕುಟುಂಬ ಜೀವನವು ಸಂತೋಷದಿಂದ ಕೂಡಿದರಲಿದೆ. ಸಂವಹನ ಕೌಶಲ್ಯದಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಾಣಬಹುದು.

ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯ ಜನರಿಗೆ ಇಂದು ಆಂಜನೇಯನ ವಿಶೇಷ ಆಶೀರ್ವಾದ ಸಿಗಲಿದೆ. ಮಾಡುವ ಕೆಲಸಗಳಲ್ಲಿ ಉತ್ತಮ ಫಲ ಸಿಗುವ ನಿರೀಕ್ಷೆ ಇದೆ. ಕುಟುಂಬದಲ್ಲಿ ಉತ್ತಮ ವಾತಾವರಣ ಇರಲಿದೆ. ಸಂಬಂಧಗಳು ಬಲಗೊಳ್ಳಲಿವೆ. ಕಚೇರಿಯಲ್ಲಿ ಪರಿಸ್ಥಿತಿ ನಿಮಗೆ ಅನುಕೂಲಕರವಾಗಿರಲಿದೆ. ಉದ್ಯಮಿಗಳಿಗೆ ನಿರೀಕ್ಷೆಯಂತೆ ಲಾಭ ಸಿಗಬಹುದು.

ಸಿಂಹ ರಾಶಿ:
ಸಿದ್ಧ ಯೋಗವು ಇಂದು ಸಿಂಹ ರಾಶಿಯ ಜನರಿಗೆ ಶುಭ ದಿನ ಎಂದು ಸಾಬೀತುಪಡಿಸಲಿದೆ. ಇಂದು ಕೆಲಸಗಳಲ್ಲಿ ಫಲಿತಾಂಶ ಉತ್ತಮವಾಗಿರಲಿದೆ. ಉದ್ಯಮಿಗಳಿಗೆ ನಿರೀಕ್ಷೆಗೂ ಮೀರಿದ ಲಾಭ ಸಿಗುವ ನಿರೀಕ್ಷೆ ಇದೆ. ಆದಾಯ ಉತ್ತಮವಾಗಿದ್ದರೂ ಸಹ ನೀವು ಬಜೆಟ್‌ ಅನ್ನು ಸರಿಯಾಗಿ ನಿರ್ವಹಿಸದಿದ್ದರೆ ಹಣಕಾಸಿನ ಪರಿಸ್ಥಿತಿ ಹದಗೆಡುವ ಸಾಧ್ಯತೆ ಇದೆ.

ಕನ್ಯಾ ರಾಶಿ:
ಕನ್ಯಾ ರಾಶಿಯ ಜನರಿಗೆ ಇಂದು ಲಾಭದಾಯಕವಾದ ದಿನವಾಗಿರುತ್ತದೆ. ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ನೀವು ಹಲವು ಕ್ಷೇತ್ರಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಉದ್ಯಮಿಗಳು ನಿರೀಕ್ಷೆಗಿಂತ ಉತ್ತಮ ಲಾಭವನ್ನು ನಿರೀಕ್ಷಿಸಬಹುದು.

ತುಲಾ ರಾಶಿ: 
ತುಲಾ ರಾಶಿಯವರಿಗೆ ಇಂದು ಮಿಶ್ರ ಫಲಗಳು ಸಿಗುವ ನಿರೀಕ್ಷೆ ಇದೆ. ನೀವಿಂದು ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುವಿರಿ. ಹೊಸ ಆಸ್ತಿ ಖರೀದಿಸುವ ಬಗ್ಗೆ ಯೋಚಿಸುವವರಿಗೆ ಇಂದಿನ ದಿನವು ಆಹ್ಲಾದಕರವಾಗಿರುತ್ತದೆ. ಆದಾಯದ ಮೂಲಗಳು ಹೆಚ್ಚಾಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರಿಗೆ ಇಂದು ಕೆಲವು ವಿಚಾರಗಳಲ್ಲಿ ಗೊಂದಲ ಇರಬಹುದು. ಆದರೆ, ತಾಳ್ಮೆಯಿಂದ ವರ್ತಿಸುವುದು ಲಾಭದಾಯಕವಾಗಿರಲಿದೆ. ಉದ್ಯೋಗಿಗಳಿಗೆ ಕೆಲಸದಲ್ಲಿ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ಸಿಗಲಿದೆ. ಕುಟುಂಬದವರೊಂದಿಗೆ ಗುಣಮಟ್ಟದ ಸಮಯ ಕಳೆಯುವಿರಿ. ಹೊಸ ವ್ಯವಹಾರ ಆರಂಭಿಸಲು ತುಂಬಾ ಪ್ರಾಶಸ್ತ್ಯವಾದ ದಿನ.

ಧನು ರಾಶಿ:
ಧನು ರಾಶಿಯವರಿಗೆ ಸಿದ್ಧ ಯೋಗವು ಇಂದು ಲಾಭದಾಯವಾಗಿರಲಿದೆ. ಉದ್ಯಮಿಗಳು ಭಾರೀ ಲಾಭ ಗಳಿಸುವ ನಿರೀಕ್ಷೆ ಇದೆ. ನಿಮ್ಮ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಸಂಗಾತಿಯೊಂದಿಗೆ ಆಹ್ಲಾದಕರ ಸಮಯ ಕಳೆಯುವಿರಿ. ವ್ಯವಹಾರದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂದಿನ ದಿನ ಉತ್ತಮವಾಗಿದೆ.

ಮಕರ ರಾಶಿ:
ಮಕರ ರಾಶಿಯ ಜನರಿಗೆ ಇಂದು ಮಿಶ್ರ ಫಲಗಳು ಸಿಗುವ ಸೂಚನೆಗಳಿವೆ. ಕೆಲಸದ ನಿಮಿತ್ತ ದೂರ ಪ್ರಯಾಣ ಕೈಗೊಳ್ಳಬೇಕಾಗಬಹುದು. ಈ ಸಮಯದಲ್ಲಿ ಜಾಗರೂಕರಾಗಿರುವುದನ್ನು ಪರಿಗಣಿಸಿ. ಉದ್ಯಮಿಗಳಿಗೆ ನಿರೀಕ್ಷಿತ ಲಾಭ ಸಿಗಲಿದೆ. ನಿಮ್ಮ ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ದೂರವಾಗಲಿವೆ.

ಕುಂಭ ರಾಶಿ:
ಕುಂಭ ರಾಶಿಯವರಿಗೆ ಇಂದು ಸಿದ್ಧ ಯೋಗವು ಶುಭದಾಯಕವಾಗಿರುತ್ತದೆ. ಇಂದು ಕೆಲಸಗಳಲ್ಲಿ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಆರ್ಥಿಕ ಪರಿಸ್ಥಿತಿಗಳು ಬಲಗೊಳ್ಳುತ್ತವೆ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ಪ್ರೀತಿಪಾತ್ರರೊಂದಿಗೆ ಪ್ರವಾಸಕ್ಕೆ ಯೋಜಿಸಬಹುದು.

ಮೀನ ರಾಶಿ:
ಮೀನ ರಾಶಿಯವರಿಗೆ ಇಂದು ಸಕಾರಾತ್ಮಕ ಫಲಗಳು ಹೆಚ್ಚಾಗಲಿವೆ. ಕೆಲಸದಲ್ಲಿ ಶುಭ ಸುದ್ದಿಯನ್ನು ಕೇಳುವ ನಿರೀಕ್ಷೆ ಇದೆ. ಉದ್ಯೋಗಸ್ಥರಿಗೆ ಪ್ರಮೋಷನ್‌ ಸೂಚನೆಗಳಿವೆ. ಪ್ರೀತಿ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.

ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES