SOCIAL MEDIA

Newsletter

PARTNER SITES
Select Language Select State

ಕರ್ಕಾಟಕ ರಾಶಿಯಲ್ಲಿ ಮಂಗಳ ಸಂಚಾರ: ಮುಂದಿನ 55 ದಿನಗಳ ಕಾಲ ಈ ರಾಶಿಯವರಿಗೆ ಅದೃಷ್ಟ, ಸುಖದ ಸುಪ್ಪತ್ತಿಗೆಯಲ್ಲೇ ಜೀವನ

ಜ್ಯೋತಿಷ್ಯದಲ್ಲಿ ಕಮಾಂಡರ್‌ ಗ್ರಹ ಎನ್ನಲಾಗುವ ಮಂಗಳ ಸೆಪ್ಟೆಂಬರ್ 18 ಚಂದ್ರನ ರಾಶಿಯಲ್ಲಿ ಪದಾರ್ಪಣೆ ಮಾಡಿದ್ದಾನೆ.

Written By Yashaswini V
Published: Sep 18, 2026, 10:45 AM IST | Updated: Sep 18, 2026, 10:47 AM IST
Join

ವೈದಿಕ ಜ್ಯೋತಿಷ್ಯದಲ್ಲಿ, ಗ್ರಹಗಳ ಸೇನಾಧಿಪತಿ ಎಂದು ಬಣ್ಣಿಸಲಾಗುವ ಮಂಗಳ ಗ್ರಹ ಭಾದ್ರಪದ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯ ಶುಭ ಶುಕ್ರವಾರದ ದಿನ ಸೆಪ್ಟೆಂಬರ್ 18, 2026ರಂದು ಮನಸ್ಸಿನ ಅಂಶ ಎನ್ನಲಾಗುವ ಚಂದ್ರನ ಕರ್ಕಾಟಕ ರಾಶಿಗೆ ಪ್ರವೇಶಿಸಲಿದ್ದಾನೆ. ಸೌರ ಮಂಡಲದಲ್ಲಿ ಅತಿ ದೊಡ್ಡ ಗ್ರಹ, ಕೆಂಪು ಗ್ರಹ ಎಂದೆಲ್ಲಾ ಪರಿಗಣಿಸಲಾಗುವ ಮಂಗಳ ಸೆಪ್ಟೆಂಬರ್ 18ರಿಂದ ಸುಮಾರು 55 ದಿನಗಳವರೆಗೆ ಕರ್ಕಾಟಕ ರಾಶಿಯಲ್ಲೇ ವಿರಾಜಮಾನನಾಗಿದ್ದಾನೆ. ಇದೇ ವೇಳೆ ತನ್ನ ಉತ್ಕೃಷ್ಟ ರಾಶಿಯಲ್ಲಿ ಉಪಸ್ಥಿತನಿರುವ ಜ್ಞಾನ, ಬುದ್ದಿ, ಮದುವೆ, ಶುಭ ಕಾರ್ಯಗಳ ಅಂಶನಾದ ಗುರುವಿನೊಂದಿಗೆ ಮಂಗಳನ ಸಂಯೋಗ ಏರ್ಪಡಲಿದೆ.

ಕರ್ಕಾಟಕ ರಾಶಿಯಲ್ಲಿ ಮಂಗಳ ದುರ್ಬಲನಾಗಲಿದ್ದು ಮಂಗಳನ ಪ್ರಭಾವ ಕಡಿಮೆ ಆಗಲಿದೆ. ಅಲ್ಲದೆ, ಇದೇ ರಾಶಿಯಲ್ಲಿ ಗುರು ಮಂಗಳ ಯುತಿಯಿಂದಾಗಿ ದ್ವಾದಶ ರಾಶಿಗಳ ಮೇಲೂ ಇದರ ಪ್ರಭಾವ ಕಂಡು ಬರಲಿದೆ.

ಮಂಗಳ ರಾಶಿ ಪರಿವರ್ತನೆ, ಗುರು ಮಂಗಳ ಯುತಿ ಪ್ರಭಾವದಿಂದ ದ್ವಾದಶ ರಾಶಿಗಳಲ್ಲಿ ನಾಲ್ಕು ರಾಶಿಯ ಜನರಿಗೆ ಈ ಅವಧಿಯು ಸುವರ್ಣ ಸಮಯವಾಗಿದ್ದು, ವೃತ್ತಿ ವ್ಯವಹಾರ, ಕೌಟುಂಬಿಕ ಜೀವನದಲ್ಲಿ ಶುಭ ಫಲಗಳು ಹೆಚ್ಚಾಗಲಿವೆ. ಉದ್ಯಮಿಗಳಿಗೆ ಎಲ್ಲಾ ಆಯಾಮಗಳಲ್ಲೂ ಅದೃಷ್ಟ ಕೈ ಹಿಡಿಯಲಿದ್ದು ಸುಖದ ಸುಪ್ಪತ್ತಿಗೆಯಲ್ಲೇ ಜೀವನ ಸಾಗಲಿದೆ. ಈ ಸಮಯದಲ್ಲಿ ಹಣಕಾಸಿಗೆ ಯಾವುದೇ ತೊಂದರೆ ಇರುವುದಿಲ್ಲ ಎನ್ನಲಾಗುತ್ತಿದೆ. ಮಂಗಳ ಸಂಚಾರದಿಂದ 55 ದಿನಗಳವರೆಗೆ ಯಾವ ರಾಶಿಯವರಿಗೆ ಅದೃಷ್ಟ ಬದಲಾಗಲಿದೆ? ಈ ಸಮಯದಲ್ಲಿ ಯಾರ ಜೀವನ ಆಹ್ಲಾದಕರವಾಗಿರಲಿದೆ ಎಂದು ತಿಳಿಯೋಣ...

ಮುಂದಿನ 55 ದಿನಗಳವರೆಗೆ ಈ ರಾಶಿಯವರಿಗೆ ಮಂಗಳ ದಯೆ:
ಕರ್ಕಾಟಕ ರಾಶಿ:
ಸ್ವ ರಾಶಿಯಲ್ಲಿ ಮಂಗಳ ಸಂಚಾರ, ಇದೇ ರಾಶಿಯಲ್ಲಿ ಗುರು ಮಂಗಳ ಸಂಯೋಗದ ಫಲವಾಗಿ ಕರ್ಕಾಟಕ ರಾಶಿಯ ಜನರು ಜೀವನದ ಪ್ರತಿ ಆಯಾಮದಲ್ಲೂ ಶುಭ ಫಲಗಳನ್ನು ನಿರೀಕ್ಷಿಸಬಹುದಾಗಿದೆ. ಈ ಅವಧಿಯು ವಿಶೇಷವಾಗಿ ಕರ್ಕ ರಾಶಿಯ ಉದ್ಯಮಿಗಳಿಗೆ ಲಾಭದಾಯಕವಾಗಿದ್ದು, ನಿರುದ್ಯೋಗಿಗಳು ಕೆಲಸಕ್ಕೆ ಸಂಬಂಧಿಸಿದಂತೆ ಶುಭ ಸಮಾಚಾರವನ್ನು ಕೇಳುವ ಸೂಚನೆಗಳಿವೆ. ವ್ಯವಹಾರಸ್ಥರಿಗೆ ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಕೆಲಸಗಳಲ್ಲಿ ಪ್ರಗತಿ ಕಂಡು ಬರಲಿದೆ. ಹಣಕಾಸಿ ಸ್ಥಿತಿ ಮೊದಲಿಗಿಂತಲೂ ಉತ್ತಮಗೊಳ್ಳಲಿದೆ. ದಿಢೀರ್‌ ಧನಲಾಭವು ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸುವಲ್ಲಿ ಪರಿಣಾಮಕಾರಿ ಆಗಿದೆ.

ಸಿಂಹ ರಾಶಿ:
ಚಂದ್ರನ ರಾಶಿಯಲ್ಲಿ ಕಮಾಂಡರ್‌ ಗ್ರಹ ಮಂಗಳನ ಸಂಚಾರವು ಸಿಂಹ ರಾಶಿಯ ಜನರಿಗೆ ಭರ್ಜರಿ ಲಾಭವನ್ನು ತರುವ ಸಮಯವಾಗಿದೆ. ಈ ಅವಧಿಯಲ್ಲಿ ನಿಮ್ಮ ಬಹುಕಾಲದ ಕಷ್ಟಗಳು ಬಗೆಹರಿಯಲಿದ್ದು, ಸ್ವಂತ ಮನೆ ಖರೀದಿಸುವ ಕನಸು ನನಸಾಗಲಿದೆ. ಉದ್ಯೋಗ ಬದಲಾಯಿಸಲು ಪ್ರಯತ್ನಿಸುತ್ತಿರುವವರಿಗೆ ಅನುಕೂಲಕರ ಸಮಯ ಇದಾಗಿರಲಿದ್ದು ನೀವು ಬಯಸಿದ ಕಂಪನಿಯಿಂದಲೇ ಒಳ್ಳೆಯ ಉದ್ಯೋಗದ ಆಫರ್‌ ಬರಬಹುದು. ಉದ್ಯಮಿಗಳು ವಿದೇಶ ವ್ಯವಹಾರಗಳಿಂದ ನಿರೀಕ್ಷೆಗೂ ಮೀರಿದ ಆದಾಯ ಗಳಿಸುವ ಸೂಚನೆಗಳಿವೆ. ದೀರ್ಘಾವಧಿಯಿಂದ ಬೇರೆಡೆ ಸಿಲುಕಿರುವ ಹಣ ನಿಮ್ಮ ಕೈ ಸೇರಲಿದೆ. ಕುಟುಂಬದಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳು ಹೆಚ್ಚಾಗಲಿದ್ದು ಸಂತೋಷದ ವಾತಾವರಣ ಇರಲಿದೆ.

ತುಲಾ ರಾಶಿ:
ಕರ್ಕ ರಾಶಿಯಲ್ಲಿ ಮಂಗಳ ಗೋಚಾರ, ಗುರು ಮಂಗಳ ಸಂಯೋಗದ ಪ್ರಭಾವದಿಧಂಅ ತುಲಾ ರಾಶಿಯ ಜನರಿಗೆ ಈ ಅವಧಿಯು ವರದಾನಕ್ಕಿಂತ ಕಡಿಮೆ ಇಲ್ಲ. ವೃತ್ತಿ ಬದುಕಿನಲ್ಲಿ ಪ್ರಗತಿಯ ಅವಕಾಶಗಳು ತೆರೆದುಕೊಳ್ಳಲಿವೆ. ನಿಮ್ಮ ಆದಾಯ ಹೆಚ್ಚಳದ ಹೊಸ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ವೃತ್ತಿಪರರಿಗೆ ಬಡ್ತಿ ಅವಕಾಶಗಳಿದ್ದು, ಉದ್ಯಮಿಗಳು ದೊಡ್ಡ ಆರ್ಡರ್‌ ನಿರೀಕ್ಷಿಸಬಹುದು. ವ್ಯವಹಾರ ವಿಸ್ತರಣೆಗಾಗಿ ಯೋಚಿಸುತ್ತಿರುವವರಿಗೆ ಇದು ತುಂಬಾ ಪ್ರಾಶಸ್ತ್ಯವಾದ ಸಮಯ ಎಂದು ಸಾಬೀತುಪಡಿಸಲಿದೆ. ಕೌಟುಂಬಿಕ ಜೀವನದಲ್ಲಿ ಎದುರಾಗಿದ್ದ ಭಿನ್ನಾಭಿಪ್ರಾಯಗಳು ಬಗೆಹರಿಯಲಿದ್ದು ಸುಖ-ಸಂತೋಷ ಹೆಚ್ಚಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ನೀವು ಮಾಡುವ ಕೆಲಸಕ್ಕೆ ಮೇಲಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಲಿದೆ. ಮಕ್ಕಳ ಕಡೆಯಿಂದ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು.

ವೃಶ್ಚಿಕ ರಾಶಿ:
ರಾಶಿಯ ಅಧಿಪತಿ ಮಂಗಳ ಗ್ರಹ ಚಂದ್ರನ ರಾಶಿಯಲ್ಲಿ ಪ್ರವೇಶಿಸಿ ಅದೇ ರಾಶಿಯಲ್ಲಿ ಗುರು ಗ್ರಹದೊಂದಿಗೆ ಸಂಯೋಗ ಹೊಂದುವುದರಿಂದ ವೃಶ್ಚಿಕ ರಾಶಿ ಜನರಿಗೆ ನಿಮ್ಮ ಬಹಳ ಸಮಯದಿಂದಲೂ ನಿಮ್ಮ ಕೆಲಸ ಕಾರ್ಯಗಳಲ್ಲಿ ಎದುರಾಗಿದ್ದ ತೊಡಕುಗಳನ್ನು ನಿವಾರಿಸಲಿದೆ. ಈ ಸಮಯದಲ್ಲಿ ಆದಾಯದ ಹೊಸ ಮೂಲಗಳು ಹೊರಹೊಮ್ಮಲಿದ್ದು ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಸಾಲದ ಸುಳಿಯಿಂದ ಹೊರಬರುವ ಲಕ್ಷಣಗಳಿವೆ. ದೀರ್ಘಾವಧಿಯಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿದ್ದು ಬೊಂಬಾಟ್‌ ಆದಾಯವನ್ನು ಸಹ ತರಲಿದೆ.  

ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES