SOCIAL MEDIA

Newsletter

PARTNER SITES
Select Language Select State

ಗುರು ಮಂಗಳ ಯುತಿಯಿಂದ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ.. ಭೂಮಿ ಖರೀದಿ ಯೋಗ

ಜ್ಯೋತಿಷ್ಯದ ಪ್ರಕಾರ, ಗುರು ಮಂಗಳ ಯುತಿಯನ್ನು ಶುಭಕರ ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಕೆಲವು ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ ಎನ್ನಲಾಗುತ್ತಿದೆ.

Written By Yashaswini V
Published: Oct 07, 2026, 10:19 AM IST | Updated: Oct 07, 2026, 10:20 AM IST
Join

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವಗುರು ಬೃಹಸ್ಪತಿ ಹಾಗೂ ಕಮಾಂಡರ್‌ ಗ್ರಹ ಎನ್ನಲಾಗುವ ಮಂಗಳ ಎರಡೂ ಗ್ರಹಗಳು ಕೂಡ 2027ರ ಜನವರಿ 25 ರವರೆಗೆ ಕರ್ಕಾಟಕ ಹಾಗೂ ಸಿಂಹ ರಾಶಿಯಲ್ಲಿ ಒಟ್ಟೊಟ್ಟಿಗೆ ಸಂಚರಿಸಲಿವೆ. ಸಂಪತ್ತಿನ ಗ್ರಹದೊಂದಿಗೆ ಸೇನಾಧಿಪತಿಯ ಈ ಸಂಚಾರವು ಕೆಲವು ರಾಶಿಯವರಿಗೆ ಭೂಮಿ, ಮನೆ ಖರೀದಿ ಯೋಗವಿದೆ. ಪಿತ್ರಾರ್ಜಿತ ಆಸ್ತಿ ವಿವಾದಗಳು ಬಗೆಹರಿಯಲಿದ್ದು ಭಾರೀ ಅದೃಷ್ಟದ ಸಮಯ ಎನ್ನಲಾಗುತ್ತಿದೆ.

ಗುರು ಮಂಗಳ ಯುತಿಯಿಂದ ಯಾವೆಲ್ಲಾ ರಾಶಿಯವರಿಗೆ ಅನುಕೂಲವಾಗಲಿದೆ. ಈ ಸಮಯದಲ್ಲಿ ಯಾವ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ ಎಂದು ತಿಳಿಯೋಣ...

ಮೇಷ ರಾಶಿ:
ಮೇಷ ರಾಶಿಯ ಜನರ ನಾಲ್ಕನೇ ಮತ್ತು ಐದನೇ ಮನೆಯಲ್ಲಿ ಗುರು ಮಂಗಳ ಯುತಿಯಿಂದಾಗಿ ಈ ರಾಶಿಯವರ ಅದೃಷ್ಟ ಬದಲಾಗಲಿದ್ದು ಈ ಸಮಯದಲ್ಲಿ ಸ್ವಂತ ಮನೆ ಕೊಳ್ಳುವ ನಿಮ್ಮ ಕನಸು ನನಸಾಗುವ ನಿರೀಕ್ಷೆ ಇದೆ. ಭೂಮಿ ವಿವಾದಗಳು ಸುಲಭವಾಗಿ ಬಗೆಹರಿಯಲಿವೆ. ಹಿಂದೆ ಮಾಡಿರುವ ಹೂಡಿಕೆಗಳಿಗೆ ಭರ್ಜರಿ ಲಾಭವನ್ನು ಗಳಿಸುವಿರಿ. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಹಠಾತ್‌ ಧನಲಾಭವನ್ನು ನಿರೀಕ್ಷಿಸಬಹುದು. ವ್ಯವಹಾರಸ್ಥರಿಗೆ ಇದು ಅನುಕೂಲಕರವಾದ ಸಮಯ.  

ವೃಷಭ ರಾಶಿ: 
ವೃಷಭ ರಾಶಿಯ ಮೂರನೇ ಮತ್ತು ನಾಲ್ಕನೇ ಮನೆಗಳಲ್ಲಿ ಗುರು ಮತ್ತು ಮಂಗಳ ಸಂಚಾರದಿಂದ 
ಈ ಅವಧಿಯಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಭರ್ಜರಿ ಲಾಭ ಗಳಿಸುವ ಅವಕಾಶಗಳಿವೆ. ದೀರ್ಘಾವಧಿಯಿಂದ ಮನೆ ಖರೀದಿಸಲು ಯೋಚಿಸುತ್ತಿರುವವರಿಗೆ ಇದು ಅನುಕೂಲಕರ ಸಮಯ ಎಮದು ಸಾಬೀತುಪಡಿಸಲಿದೆ. ಹಿಂದೆ ಮಾಡಿರುವ ಹೂಡಿಕೆಗಳಿಂದ ಉತ್ತಮ ಆದಾಯವನ್ನು ಗಳಿಸುವಿರಿ. ಪಿತ್ರಾರ್ಜಿತ ಆಸ್ತಿ ಸಂಬಂಧಿತ ನ್ಯಾಯಾಲಯ ಪ್ರಕರಣಗಳಲ್ಲಿ ಜಯ ಸಾಧಿಸುವಿರಿ.

ಕರ್ಕಾಟಕ ರಾಶಿ: 
ಸ್ವ ರಾಶಿಯಲ್ಲಿ ಗುರು ಮಂಗಳ ಯುತಿ ಏರ್ಪಟ್ಟಿದ್ದು ನವೆಂಬರ್‌ನಲ್ಲಿ ಧನ ಸಂಪತ್ತಿನ ಮನೆಯಲ್ಲಿ ಗ್ರಹಗಳು ಸಂಚರಿಸುವುದರಿಂದ ಈ ರಾಶಿಯವರು ಹೆಚ್ಚಿನ ಶ್ರಮವಿಲ್ಲದೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಭರ್ಜರಿ ಲಾಭವನ್ನು ತರಲಿದೆ. ಈ ಅವಧಿಯಲ್ಲಿ ಭೂಮಿ, ಫ್ಲಾಟ್‌ ಖರೀದಿ ಯೋಗವಿದ್ದು ಸ್ವಂತ ಮನೆ ಖರೀದಿಸಲು ಯೋಚಿಸುತ್ತಿರುವವರಿಗೆ ಅತ್ಯುತ್ತಮವಾದ ಸಮಯ ಎಂದು ಸಾಬೀತುಪಡಿಸಲಿದೆ. ತಾಯಿಯ ವಿಶೇಷ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದೆ.

ಸಿಂಹ ರಾಶಿ:
ನವೆಂಬರ್‌ ಬಳಿಕ ನಿಮ್ಮ ರಾಶಿಯಲ್ಲೇ ಗುರು ಮಂಗಳ ಗ್ರಹಗಳ ಯುತಿಯಿಂದ ಜನವರಿ ವರೆಗೆ ಸಿಂಹ ರಾಶೀಯವರಿಗೆ ರಾಜವೈಭೋಗದ ಸಮಯ ಎನ್ನಲಾಗುತ್ತಿದೆ. ಈ ಸಮಯದಲ್ಲಿ ಭೂಮಿಯಂತಹ ಆಸ್ತಿಯಲ್ಲಿ ಹೆಚ್ಚು ಹೂಡಿಕೆ ಮಾಡುವುದು ಉತ್ತಮವಾಗಿರಲಿದೆ. ಹಣಕಾಸಿನ ದಿಢೀರ್‌ ಲಾಭವು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು. ಇನ್ನೂ ಮದುವೆ ಆಗದವರಿಗೆ ವಿವಾಹ ಯೋಗವಿದೆ.

ತುಲಾ ರಾಶಿ:
ತುಲಾ ರಾಶಿಯ ಜನರಿಗೆ ಹತ್ತನೇ ಮತ್ತು ಲಾಭ ಸ್ಥಾನದಲ್ಲಿ ಗುರು ಮಂಗಳ ಗ್ರಹಗಳು ಒಟ್ಟಿಗೆ ಸಂಚರಿಸುವುದರಿಂ ಈ ಅವಧಿಯಲ್ಲಿ ಮನೆ, ಹೊಸ ಆಸ್ತಿ ಖರೀದಿಯ ಯೋಗವಿದೆ. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿರುವವರಿಗೆ ಈ ಸಮಯವು ಸುವರ್ಣ ಯುಗ ಎಂದು ಸಾಬೀತುಪಡಿಸಲಿದೆ. ಕೌಟುಂಬಿಕ ವ್ಯವಹಾರದಲ್ಲಿ ಅಧಿಕ ಲಾಭವನ್ನು ಗಳಿಸುವ ನಿರೀಕ್ಷೆ ಇದೆ. ಕುಟುಂಬದಲ್ಲಿ ಸುಖ ಸಂತೋಷ ಹೆಚ್ಚಾಗಲಿದೆ.

ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರಿಗೆ ರಾಶಿಯಾಧಿಪತಿ ಮಂಗಳನು ಹತ್ತನೇ ಮನೆಯಲ್ಲಿ ಗುರುವಿನೊಂದಿಗೆ ಸಂಪತ್ತನ್ನು ಕರುಣಿಸಲಿದ್ದಾನೆ. ನೀವು ಭೂಮಿ ಖರೀದಿಸಲು, ಹೊಸ ಮನೆ ಖರೀದಿಸಲು ಯೋಚಿಸುತ್ತಿದ್ದರೆ ಈ ನಿಟ್ಟಿನಲ್ಲಿ ಸ್ವಲ್ಪ ಪ್ರಯತ್ನಿಸಿದರೂ ಕೂಡ ಅದೃಷ್ಟ ಕೈ ಹಿಡಿಯಲಿದ್ದು ಇದು ನಿಮಗೆ ಸುವರ್ಣ ಅವಧಿ ಎಂದು ಸಾಬೀತುಪಡಿಸಲಿದೆ. ಉದ್ಯೋಗದಲ್ಲಿ ನಿಮ್ಮ ಎದುರಾಳಿಗಳ ವಿರುದ್ಧ ನೀವು ಜಯ ಸಾಧಿಸುವಿರಿ. ಮೌಲ್ಯಯುತವಾದ ಆಸ್ತಿಗಳನ್ನು ಖರೀದಿಸುವ ಯೋಗವಿದೆ. ಮಕ್ಕಳಿಂದ ಸಂತೋಷದ ಸುದ್ದಿಯನ್ನು ನಿರೀಕ್ಷಿಸಬಹುದು.

ಧನು ರಾಶಿ:
ಪ್ರಸ್ತುತ ಧನು ರಾಶಿಯ ಅಧಿಪತಿಯಾದ ಗುರು ತನ್ನ ಉತ್ಕೃಷ್ಟ ರಾಶಿಯಲ್ಲಿ ವಿರಾಜಮಾನನಾಗಿದ್ದು ಮಂಗಳನೊಂದಿಗೆ ಮೈತ್ರಿ ಹೊಂದಿರುವುದರಿಂದ ಹಾಗೂ ನವೆಂಬರ್‌ನಲ್ಲಿ ಅದೃಷ್ಟದ ಮನೆಯಲ್ಲಿ ಗುರು ಮಂಗಳ ಯುತಿಯು ಈ ರಾಶಿಯವರಿಗೆ ಅಪಾರ ಧನ ಸಂಪತ್ತನ್ನು ತರಲಿದೆ. ಈ ಸಮಯದಲ್ಲಿ ಆಸ್ತಿ ವಿವಾದಗಳು ಸುಗಮವಾಗಿ ಬಗೆಹರಿಯಲಿವೆ. ಭೂಮಿ ಖರೀದಿಗಾಗಿ ಪ್ರಯತ್ನಿಸುತ್ತಿರುವವರಿಗೆ ಇದು ಅನುಕೂಲಕರವಾದ ಸಮಯವಾಗಿದೆ. ಹಿಂದೆ ಮಾಡಿರುವ ಹೂಡಿಕೆಗಳಿಗೆ ಭರ್ಜರಿ ಲಾಭವಾಗಲಿದೆ.  

ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES