• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಸರ್ಕಾರಿ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ವಂಚನೆ.. ಅಕ್ರಮವಾಗಿ ಖಾಯಂಗೊಂಡ ಪೌರ ಕಾರ್ಮಿಕರು

ಸರ್ಕಾರಿ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ವಂಚನೆ.. ಅಕ್ರಮವಾಗಿ ಖಾಯಂಗೊಂಡ ಪೌರ ಕಾರ್ಮಿಕರು

ಪ್ರತಿ ತಿಂಗಳು ಸರ್ಕಾರದ ಹತ್ತಾರು ಲಕ್ಷ ರೂಪಾಯಿಗಳಷ್ಟು ಹಣವನ್ನು ಲೂಟಿ ಮಾಡಿರುತ್ತಾನೆ. ಈ ರೀತಿ ಐದಾರು ವರ್ಷಗಳ ಕಾಲ ಮಾಡುವ ಮೂಲಕ ಕೋಟ್ಯಾಂತರ ರೂಪಾಯಿಗಳಷ್ಟು ಹಣ ಸರ್ಕಾರದ ಬೊಕ್ಕಸಕ್ಕೆ ವಂಚಿಸಿರುತ್ತಾನೆ.

Written ByBhimappa
Published: Oct 07, 2026, 11:45 AM IST|Updated: Oct 07, 2026, 11:50 AM IST
joinshare
ಸರ್ಕಾರಿ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ವಂಚನೆ.. ಅಕ್ರಮವಾಗಿ ಖಾಯಂಗೊಂಡ ಪೌರ ಕಾರ್ಮಿಕರು
Image Credit: bbmp

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಸಚಿವರ ದಿಢೀರ್‌ ಭೇಟಿ ಎಫೆಕ್ಟ್‌.. ಪಾಲಿಕೆ ಕಾಮಗಾರಿಗಳ ಪರಿಶೀಲನೆಗೆ ಇಳಿದ ಲೋಖಂಡೆ ಸ್ನೇಹಲ್‌ ಸುಧಾಕರ್‌

ಸಚಿವರ ದಿಢೀರ್‌ ಭೇಟಿ ಎಫೆಕ್ಟ್‌.. ಪಾಲಿಕೆ ಕಾಮಗಾರಿಗಳ ಪರಿಶೀಲನೆಗೆ ಇಳಿದ ಲೋಖಂಡೆ ಸ್ನೇಹಲ್‌ ಸುಧಾಕರ್‌

2

ಸರ್ಕಾರಿ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ವಂಚನೆ.. ಅಕ್ರಮವಾಗಿ ಖಾಯಂಗೊಂಡ ಪೌರ ಕಾರ್ಮಿಕರು

3

RBI MPC: ಮೂರೂವರೆ ವರ್ಷಗಳ ಬಳಿಕ ರೆಪೋ ರೇಟ್‌ ಹೆಚ್ಚಿಸಿದ ಆರ್‌ಬಿಐ.. ಬ್ಯಾಂಕ್‌ ಗ್ರಾಹಕರ ಮೇಲೆ ನೇರ ಪರಿಣಾಮ!

4

ಗುರು ಮಂಗಳ ಯುತಿಯಿಂದ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ.. ಭೂಮಿ ಖರೀದಿ ಯೋಗ

5

ದೀಪಾವಳಿಗೆ ಚಿನ್ನ ಕೊಳ್ಳುವವರಿಗೆ ಗುಡ್‌ನ್ಯೂಸ್? ₹10 ಸಾವಿರ ಅಗ್ಗವಾಗುವ ಸಾಧ್ಯತೆ, 1 ತೊಲ ಬೆಲೆ ಎಷ್ಟು?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

GBA Chief Commissioner: ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ 13 ಮಂದಿ ದಿನಗೂಲಿ ಪೌರ ಕಾರ್ಮಿಕರನ್ನು ಖಾಯಂಗೊಳಿಸಿರುವ ಬಗ್ಗೆ ದೂರು ನೀಡಲಾಗಿದೆ. ಈ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪಶ್ಚಿಮ ವಲಯದ ವಾರ್ಡ್ ಸಂಖ್ಯೆ 65 ರಲ್ಲಿ ದಿನಗೂಲಿ ನೌಕರ (Nominal Muster Roll - NMR) ರಾಗಿ ಕಾರ್ಯ ನಿರ್ವಹಿಸುತ್ತಿದ್ದ 13 ಮಂದಿ ದಿನಗೂಲಿ ಪೌರಕಾರ್ಮಿಕರಿಗೆ ಖಾಯಂ ಮಾಡಲಾಗಿತ್ತು. 2020-21 ರ ಸಾಲಿನಲ್ಲಿ ಆಗಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪಶ್ಚಿಮ ವಲಯದ ಜಂಟಿ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪರಮ ಭ್ರಷ್ಟ ಅಧಿಕಾರಿ ಚಿದಾನಂದ್ ಎಂಬುವವರು ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ 13 ಮಂದಿಯನ್ನು ಖಾಯಂ ನೌಕರರಾಗಿ ಸಕ್ರಮಗೊಳಿಸಿ ಆದೇಶ ನೀಡಿದ್ದರು.

ಈ 13 ಮಂದಿ ಯಾರು ಯಾರು ಎಂದರೆ ರಾಜ ಬಿನ್ ಮಾರಪ್ಪ, ಜಯಮ್ಮ ಬಿನ್ ಕೃಷ್ಣ, ರಾಮಯ್ಯ ಆರ್. ಬಿನ್ ತಿರುಪಾಲ್, ರಂಗಪ್ಪ ಬಿನ್ ಅಂಕಪ್ಪ, ನಾರಾಯಣಪ್ಪ ಬಿನ್ ನಾರಾಯಣ, ಕೆಂಪಯ್ಯ ಬಿನ್ ತಿಮ್ಮಯ್ಯ, ತಿಮ್ಮಯ್ಯ ಬಿನ್ ರಂಗಪ್ಪ, ಸಾಕಮ್ಮ ಬಿನ್ ಹುಚ್ಚಪ್ಪ,  ಲಲಿತ ಬಿನ್ ಚಿಕ್ಕಣ್ಣ, ನರಸಿಂಹಮೂರ್ತಿ ಬಿನ್ ನರಸಪ್ಪ, ಗೌರಮ್ಮ ಬಿನ್ ರಾಮಣ್ಣ, ಕೃಷ್ಣ ಬಿನ್ ಬಾಲಯ್ಯ ಮತ್ತು ರಮೇಶ್ ಬಿನ್ ನಾರಯ್ಯ ಈ ಎಲ್ಲರನ್ನು ಕಾನೂನು ಬಾಹಿರವಾಗಿ ಉದ್ಯೋಗಕ್ಕೆ ಖಾಯಂಗೊಳಿಸಿ ದಿನಾಂಕ 03/09/2020 ರಂದು ಕಚೇರಿಯಲ್ಲಿ ಆದೇಶವನ್ನು ಹೊರಡಿಸಿರುತ್ತಾರೆ. ಆದರೆ ಈಗ ಇದು ಅಕ್ರಮ ಎಂದು ತಿಳಿದು ಬಂದಿದೆ.

ಇವರ ಪೈಕಿ, ಕೃಷ್ಣ ಎಂಬಾತನ ವಿರುದ್ಧ ಈಗಾಗಲೇ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಹಿಂದಿನ ಪಶ್ಚಿಮ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹತ್ತಾರು ಅದಿಕಾರಿಗಳ ವಿರುದ್ಧ ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸಿ ಬೆದರಿಕೆ ತಂತ್ರಗಳನ್ನು ಅನುಸರಿಸುವ ಮೂಲಕ ತನ್ನ ವ್ಯಾಪಕ ಪ್ರಮಾಣದ ಭ್ರಷ್ಟಾಚಾರ ಕಾರ್ಯಗಳನ್ನು ನಿರಾತಂಕವಾಗಿ ನಡೆಸಿರುತ್ತಾನೆ. ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದ ಮತ್ತು ಪ್ರಸ್ತುತ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ IAS ಅಧಿಕಾರಿ ತುಷಾರ್ ಗಿರಿನಾಥ್ ಅವರಿಗೂ ಸಹ ಮುಖ್ಯ ಆಯುಕ್ತರ ಕಚೇರಿಯಲ್ಲಿಯೇ ಎಲ್ಲರ ಸಮಕ್ಷಮದಲ್ಲಿ ನಿಮ್ಮ ವಿರುದ್ಧ ಜಾತಿ ನಿಂದನೆ ಪ್ರಕರಣವನ್ನು ದಾಖಲಿಸುತ್ತೇನೆಎಂದು ಬೆದರಿಕೆ ಹಾಕಿರುವುದು ಇದೆ.

ಪಾಲಿಕೆ ನೌಕರನಾಗಿದ್ದರೂ ಕೂಡ ಕಾನೂನು ಬಾಹಿರವಾಗಿ ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತನ್ನ ಪತ್ನಿ ಸುನಿತಾ E.K. ಮತ್ತು ತನ್ನ ಬಾವಮೈದುನ ಚಂದ್ರಶೇಖರ್ E.K. ಇವರ ಹೆಸರಿನಲ್ಲಿ ಮಧ್ಯಾಹ್ನ ಮತ್ತು ರಾತ್ರಿಯ ಪಾಳಿಗಳಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ನಿರ್ವಹಿಸುತ್ತಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದನು. ಪ್ರತಿ ತಿಂಗಳು ಸರ್ಕಾರದ ಹತ್ತಾರು ಲಕ್ಷ ರೂಪಾಯಿಗಳಷ್ಟು ಹಣವನ್ನು ಲೂಟಿ ಮಾಡಿರುತ್ತಾನೆ. ಈ ರೀತಿ ಐದಾರು ವರ್ಷಗಳ ಕಾಲ ಮಾಡುವ ಮೂಲಕ ಕೋಟ್ಯಾಂತರ ರೂಪಾಯಿಗಳಷ್ಟು ಹಣ ಸರ್ಕಾರದ ಬೊಕ್ಕಸಕ್ಕೆ ವಂಚಿಸಿರುತ್ತಾನೆ.

ಈ ಸಂಬಂಧ ಅಂದಿನ ಬಿಬಿಎಂಪಿ ಮುಖ್ಯ ಆಯುಕ್ತರಾಗಿದ್ದ ತುಷಾರ್ ಗಿರಿನಾಥ್ ರವರ ಆದೇಶದಂತೆ  ಮತ್ತೋರ್ವ ಹಿರಿಯ IAS ಅಧಿಕಾರಿ ಮತ್ತು ಬಿಬಿಎಂಪಿಯ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತರಾಗಿದ್ದ ವಿಕಾಸ್ ಸುರಾಳ್ಕರ್ ಅವರು, ಅವರ ನೇತೃತ್ವದಲ್ಲಿ ಪಶ್ಚಿಮ ವಲಯದ ಎಲ್ಲ ಅಧಿಕಾರಿಗಳ ವಿಚಾರಣೆ ನಡೆಸಿ ಅವರುಗಳಿಂದ ಹೇಳಿಕೆ ಪಡೆದು ಕೃಷ್ಣ ಎಂಬ ಪರಮ ಭ್ರಷ್ಟನ ಬೆದರಿಕೆ ತಂತ್ರಗಳು ಮತ್ತು ವಂಚನೆ ಪ್ರಕರಣಗಳನ್ನು ಸ್ಪಷ್ಟವಾಗಿ ದಾಖಲಿಸಿ ವರದಿಯನ್ನು ನೀಡಿರುತ್ತಾರೆ.

ಸದರಿ ವರದಿಯನ್ನಾಧರಿಸಿ ಕೃಷ್ಣ ಬಿನ್ ಬಾಲಯ್ಯ ರವರನ್ನು ಪಾಲಿಕೆಯ ಸೇವೆಯಿಂದ ವಜಾ ಮಾಡಲಾಗಿದೆ. ಅಲ್ಲದೇ ಕಾನೂನು ಬಾಹಿರವಾಗಿ ಆತನಿಗೆ ನೀಡಲಾಗಿದ್ದ ಕಿರಿಯ ಆರೋಗ್ಯ ಪರಿವೀಕ್ಷಕರ JHI ಹುದ್ದೆಯನ್ನು ತೆಗೆದು ಹಾಕಿ ಅಮಾನತು ಅವಧಿ ಮುಗಿದ ನಂತರ ಯಲಹಂಕ ವಲಯದಲ್ಲಿ ಸಾಮಾನ್ಯ ಪೌರಕಾರ್ಮಿಕನಾಗಿ ಕಾರ್ಯ ನಿರ್ವಹಿಸಬೇಕು ಎಂದು ಕೂಡ ಆದೇಶ ನೀಡಲಾಗಿರುತ್ತದೆ. ಹೀಗೆ ಮಾಡಿದ್ದರೂ ಕೂಡ ಈಗಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರು ಮತ್ತೊಮ್ಮೆ ಕೃಷ್ಣ ಬಿನ್ ಬಾಲಯ್ಯ ಎಂಬಾತನ ಬ್ಲಾಕ್ ಮೇಲ್ ತಂತ್ರಗಾರಿಕೆಗೆ ಹೆದರಿ ಆತನಿಗೆ Junior Health Inspector JHI ಹುದ್ದೆಯನ್ನು ಕಾನೂನು ಬಾಹಿರವಾಗಿ ನೀಡಿರುವುದು ಎಷ್ಟು ಸರಿ.

ಇಷ್ಟಕ್ಕೇ ತೃಪ್ತನಾಗದ ಆತ ಪ್ರಸ್ತುತ ತನಗೆ ಹಿರಿಯ ಆರೋಗ್ಯ ಪರಿವೀಕ್ಷಕ Senior Health Inspector ಹುದ್ದೆಯನ್ನು ನೀಡಬೇಕೆಂದು ಒತ್ತಡಗಳನ್ನು ಹೇರುತ್ತಿರುತ್ತಾನೆ. ಇದೀಗ ಇನ್ನುಳಿದ 12 ಮಂದಿ ದಿನಗೂಲಿ ನೌಕರರೂ ಸಹ ತಮ್ಮಗಳಿಗೆ JHI ಹುದ್ದೆಗಳಿಗೆ ಪದೋನ್ನತಿ ನೀಡುವ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿರುತ್ತಾರೆ. ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪಶ್ಚಿಮ ವಲಯದ ಜಂಟಿ ಆಯುಕ್ತರಾಗಿದ್ದ ಚಿದಾನಂದ್ ಎಂಬ ಭ್ರಷ್ಟ ಅಧಿಕಾರಿಯು ದಿನಾಂಕ 03/09/2020 ರಂದು ದಿನಗೂಲಿ ನೌಕರರಾಗಿದ್ದ 13 ಮಂದಿ NMR ನೌಕರರನ್ನು ಖಾಯಂಗೊಳಿಸಿರುವ ಕಾನೂನು ಬಾಹಿರ ಆದೇಶವನ್ನು ಕೂಡಲೇ ಹಿಂಪಡೆದು, ಕಾನೂನು ರೀತ್ಯಾ ದಿನಗೂಲಿ ನೌಕರರ ಹುದ್ದೆಯಲ್ಲಿ ಮುಂದುವರೆಸಬೇಕು.

ಕಳೆದ 06 ವರ್ಷಗಳಿಂದ ಈ 13 ಮಂದಿಗೆ ಕಾನೂನು ಬಾಹಿರವಾಗಿ ನೀಡಿರುವ ಎಲ್ಲ ಭತ್ಯೆಗಳನ್ನು ಅವರಿಂದಲೇ ವಸೂಲಿ ಮಾಡುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹಾಗೂ ಬೃಹತ್ ಪ್ರಮಾಣದ ಭ್ರಷ್ಟಾಚಾರ ನಡೆಸಿ ಕಾನೂನು ಬಾಹಿರವಾಗಿ 13 ಮಂದಿ ದಿನಗೂಲಿ ನೌಕರರನ್ನು ಸಕ್ರಮಗೊಳಿಸಿ ಆದೇಶಿಸಿರುವ ಹಿಂದಿನ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಮತ್ತು ಪ್ರಸ್ತುತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅರಣ್ಯ ವಿಭಾಗದ ಉಪ ನಿರ್ದೇಶಕ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಿದಾನಂದ್ ಅವರ ವಿರುದ್ಧವೂ ಸಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಂಪೂರ್ಣ ದಾಖಲೆಗಳ ಸಹಿತ GBA ಮುಖ್ಯ ಆಯುಕ್ತರನ್ನು ಹಾಗೂ ವಿಶೇಷ ಆಯುಕ್ತರು ಆಡಳಿತ ಅವರನ್ನು ಆಗ್ರಹಿಸಲಾಗಿದೆ. 

Add Zee News as a Preferred Source
TAGS:
Kannada News