• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /WhatsApp ಹೊಸ ವೈಶಿಷ್ಟ್ಯ.. ಇನ್ಮುಂದೆ ಪೋಷಕರು ತಮ್ಮ ಮಕ್ಕಳ ವಾಟ್ಸಾಪ್‌ ಖಾತೆ ಮೇಲೆ ಸುಲಭವಾಗಿ ಕಣ್ಣಿಡಬಹುದು!

WhatsApp ಹೊಸ ವೈಶಿಷ್ಟ್ಯ.. ಇನ್ಮುಂದೆ ಪೋಷಕರು ತಮ್ಮ ಮಕ್ಕಳ ವಾಟ್ಸಾಪ್‌ ಖಾತೆ ಮೇಲೆ ಸುಲಭವಾಗಿ ಕಣ್ಣಿಡಬಹುದು!

ಹದಿಹರೆಯದ ಮಕ್ಕಳ ವಾಟ್ಸಾಪ್‌ ಖಾತೆಗಳ ಮೇಲೆ ಕಣ್ಣಿಡುವುದು ಇನ್ನು ಮುಂದೆ ತುಂಬಾ ಸುಲಭ. ಇದಕ್ಕಾಗಿ, ಮೆಟಾ ಕಂಪನಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ.

Written ByYashaswini V
Published: Oct 01, 2026, 04:41 PM IST|Updated: Oct 01, 2026, 04:43 PM IST
joinshare
WhatsApp ಹೊಸ ವೈಶಿಷ್ಟ್ಯ.. ಇನ್ಮುಂದೆ ಪೋಷಕರು ತಮ್ಮ ಮಕ್ಕಳ ವಾಟ್ಸಾಪ್‌ ಖಾತೆ ಮೇಲೆ ಸುಲಭವಾಗಿ ಕಣ್ಣಿಡಬಹುದು!

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಹದಿಹರೆಯದ ಮಕ್ಕಳ ಪೋಷಕರ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಾಟ್ಸಾಪ್‌ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ವಾಟ್ಸಾಪ್‌ ಹೊಸ ಅಪ್‌ಡೇಟ್‌ ಪ್ರಕಾರ, ಇನ್ಮುಂದೆ, ಹದಿಹರೆಯದವರ ವಾಟ್ಸಾಪ್‌ ಖಾತೆಯನ್ನು ಅವರ ಪೋಷಕರು ನಿಯಂತ್ರಿಸಬಹುದಾಗಿದೆ.

ಹೌದು, ವಾಟ್ಸಾಪ್‌ ಇತ್ತೀಚೆಗೆ ಮಕ್ಕಳ ಪೋಷಕರಿಗಾಗಿ ಹೊಸ ವೈಶಿಷ್ಟ್ಯವನ್ನು ಬಿಡುಗಡೆಗೊಳಿಸಿದ್ದು, ಇದು ಪೋಷಕರಿಗೆ ತಮ್ಮ ಮಕ್ಕಳ ವಾಟ್ಸಾಪ್ ಬಳಕೆಯ ಮೇಲೆ ನಿಗಾವಹಿಸಲು ಅನುಕೂಲವಾಗುವಂತೆ ಕೆಲವು ಅಗತ್ಯ ನಿಯಂತ್ರಣವನ್ನು ಒದಗಿಸುತ್ತದೆ. ಜೊತೆಗೆ ಅವರ ವೈಯಕ್ತಿಕ ಚಾಟ್‌ಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳಲೂ ಕೂಡ ಅನುವು ಮಾಡಿಕೊಡುತ್ತದೆ. ವಾಟ್ಸಾಪ್ ಪೋಷಕರಿಗಾಗಿ ಯಾವೆಲ್ಲಾ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಯಾವೆಲ್ಲಾ ಸೆಟ್ಟಿಂಗ್‌ಗಳನ್ನು ನಿರ್ಬಂಧಿಸಬಹುದು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಪೋಷಕರು ಮಕ್ಕಳ ವಾಟ್ಸಾಪ್‌ನಲ್ಲಿ ಯಾವೆಲ್ಲದರ ಮೇಲೆ ನಿಗಾವಹಿಸಬಹುದು?
ವಾಟ್ಸಾಪ್‌ ಹೊಸ ವೈಶಿಷ್ಟ್ಯದ ಸಹಾಯದಿಂದ ಇನ್ಮುಂದೆ ಪೋಷಕರು ತಮ್ಮ ಮಕ್ಕಳ ವಾಟ್ಸಾಪ್ ಪ್ರೊಫೈಲ್ ಫೋಟೋಗಳು, ಗ್ರೂಪ್ಸ್‌, ಸ್ಟೇಟಸ್‌, ಚಾನಲ್‌ಗಳು ಮತ್ತು ಮೆಟಾ AI ನಂತಹ ಸೆಟ್ಟಿಂಗ್‌ಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ಹೌದು, ವಾಟ್ಸಾಪ್‌ ಹೊಸ ವೈಶಿಷ್ಟ್ಯಗಳಡಿಯಲ್ಲಿ, ಮಗುವಿನ ಪ್ರೊಫೈಲ್ ಫೋಟೋವನ್ನು ಯಾರು ನೋಡಬಹುದು, ಅವರನ್ನು ವಾಟ್ಸಾಪ್ ಗ್ರೂಪ್‌ಗಳಿಗೆ ಯಾರು ಸೇರಿಸಬಹುದು ಮತ್ತು ಮಕ್ಕಳ ವಾಟ್ಸಾಪ್‌ ಸ್ಟೇಟಸ್ ಮತ್ತು ಚಾನೆಲ್‌ಗಳನ್ನು ಹೇಗೆ ಬಳಸಬಹುದು ಎಂಬುದನ್ನು ಪೋಷಕರು ನಿರ್ವಹಿಸಬಹುದು. ‌

ಇದಲ್ಲದೆ, ಮೆಟಾ AI ಬಗ್ಗೆ ಪೋಷಕರಿಗೆ ಪ್ರತ್ಯೇಕ ನಿಯಂತ್ರಣವನ್ನೂ ಸಹ ಒದಗಿಸುತ್ತದೆ. ಇದರ ಮೂಲಕ ಪೋಷಕರು, ತಮ್ಮ ಹದಿಹರೆಯದವರಿಗೆ ಸಾಮಾನ್ಯ 13+ ಸೆಟ್ಟಿಂಗ್ ಅಥವಾ ಹೆಚ್ಚು ಸೀಮಿತ ವಿಷಯದ ಆಯ್ಕೆಯನ್ನು ಮಾಡಬಹುದು.

ಕಾಣಿಸಲ್ಲ ವೈಯಕ್ತಿಕ ಚಾಟ್‌ಗಳು, ಕರೆಗಳು:
ಆದಾಗ್ಯೂ, ಅತ್ಯಂತ ಮುಖ್ಯವಾದ ವಿಷಯವೆಂದರೆ ವಾಟ್ಸಾಪ್‌ ಹೊಸ ವೈಶಿಷ್ಟ್ಯದ ಸಹಾಯದಿಂದ ಪೋಷಕರು ಮಕ್ಕಳ ವಾಟ್ಸಾಪ್‌ ಖಾತೆಯನ್ನು ನಿಯಂತ್ರಿಸಬಹುದಾದರೂ, ಅವರಿಗೆ ಮಗುವಿನ ವೈಯಕ್ತಿಕ ಚಾಟ್‌ಗಳು ಮತ್ತು ಕರೆಗಳು ಗೋಚರಿಸುವುದಿಲ್ಲ. ಆದಾಗ್ಯೂ, ಮಗು ಹೊಸ ಗ್ರೂಪ್‌ಗೆ ಸೇರಿದರೆ ಅಥವಾ ಗ್ರೂಪ್‌ನ ಗಾತ್ರವು ಗಮನಾರ್ಹವಾಗಿ ಹೆಚ್ಚಾದರೆ, ಪೋಷಕರು ಚಟುವಟಿಕೆ ಬಗ್ಗೆ ಅಲರ್ಟ್‌ ಪಡೆಯಬಹುದು.

ಮಗು ಹೊಸ ಗ್ರೂಪ್‌ಗೆ ಸೇರಿದಾಗ ಬರುತ್ತೆ ಅಲರ್ಟ್:
ವಾಟ್ಸಾಪ್‌ ಹೊಸ ವೈಶಿಷ್ಟ್ಯದ ಅತ್ಯಂತ ಗಮನಾರ್ಹ ವೈಶಿಷ್ಟ್ಯವೆಂದರೆ ಗ್ರೂಪ್‌ ಚಟುವಟಿಕೆ ಎಚ್ಚರಿಕೆಗಳು. ತಮ್ಮ ಹದಿಹರೆಯದ ಮಗು ಹೊಸ WhatsApp ಗ್ರೂಪ್‌ಗೆ ಸೇರಿದರೆ ಅಥವಾ ತೊರೆದರೆ ಪೋಷಕರು ಅಧಿಸೂಚನೆಗಳನ್ನು ಸ್ವೀಕರಿಸಬಹುದು. ತಮ್ಮ ಹದಿಹರೆಯದ ಮಗು ಈಗಾಗಲೇ ಇರುವ ಗುಂಪಿನಲ್ಲಿ ಸದಸ್ಯರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾದರೆ ಅದರ ಬಗ್ಗೆಯೂ ಸಹ ಅಲರ್ಟ್‌ ಸಿಗುತ್ತದೆ.

ಸ್ಟೇಟಸ್ ಮತ್ತು ಚಾನಲ್‌ಗಳಲ್ಲಿಯೂ ನಿಯಂತ್ರಣ:
ಪೋಷಕರು ತಮ್ಮ ಹದಿಹರೆಯದ ಮಕ್ಕಳ ಸ್ಟೇಟಸ್ ಅಪ್‌ಡೇಟ್‌ಗಳನ್ನು ಯಾರು ನೋಡಬಹುದು ಮತ್ತು ತಮ್ಮ ಸ್ವಂತದ್ದನ್ನು ಯಾರು ನೋಡಬಹುದು ಎಂಬುದನ್ನು ಸಹ ನಿಯಂತ್ರಿಸಬಹುದು. ಅಲ್ಲದೆ, ಇದರಲ್ಲಿ ಚಾನೆಲ್ ನಿಯಂತ್ರಣಗಳು ಸಹ ಲಭ್ಯವಿದೆ. ಇದು ಪೋಷಕರು ತಮ್ಮ ಮಗುವಿನ WhatsApp ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸದೆ ಅಗತ್ಯವಿರುವಂತೆ ಕೆಲವು ಗೌಪ್ಯತೆ ಮತ್ತು ವಿಷಯ ಸೆಟ್ಟಿಂಗ್‌ಗಳನ್ನು ನಿರ್ಬಂಧಿಸಲು ಅನುಮತಿಸುತ್ತದೆ.

ವಾಟ್ಸಾಪ್‌ನ ಹೊಸ ವೈಶಿಷ್ಟ್ಯಗಳು ಯಾವಾಗ ಜಾರಿಗೆ ಬರಲಿವೆ?
ವಾಟ್ಸಾಪ್‌ನ ಹೊಸ ವೈಶಿಷ್ಟ್ಯವಾದ ಹದಿಹರೆಯದವರ ಖಾತೆಗಳಿಗೆ ಪೋಷಕರ ನಿಯಂತ್ರಣದಂತಹ ಸೌಲಭ್ಯಗಳು, ಸೆಪ್ಟೆಂಬರ್ 30, 2026 ರಿಂದ ಜಾರಿಗೆ ಬರುವಂತೆ ಹದಿಹರೆಯದ ಖಾತೆಗಳಿಗೆ ವಾಟ್ಸಾಪ್ ಹೊಸ ಪೋಷಕರ ನಿಯಂತ್ರಣಗಳನ್ನು ಘೋಷಿಸಿದೆ. ಈ ಪರಿಕರಗಳನ್ನು ಪೋಷಕರು ಮತ್ತು ಹದಿಹರೆಯದವರು ಜಂಟಿಯಾಗಿ ಹೊಂದಿಸಬಹುದಾಗಿದ್ದು, ಅವು ಸಂಪೂರ್ಣವಾಗಿ ಐಚ್ಛಿಕವಾಗಿವೆ, ಅಂದರೆ ಪ್ರತಿ ಕುಟುಂಬವು ಅವರ ಅಗತ್ಯಗಳಿಗೆ ಅನುಗುಣವಾಗಿ ಅವುಗಳನ್ನು ಕಸ್ಟಮೈಸ್ ಮಾಡಬಹುದು ಎಂದು ಕಂಪನಿ ಹೇಳುತ್ತದೆ.

ಪೋಷಕರು ಹೊಂದಿಸುವ ಪಿನ್‌ ನಿರ್ಣಾಯಕ:
ಹೊಸ ವ್ಯವಸ್ಥೆಯಲ್ಲಿ ಪೋಷಕರು ಹೊಂದಿಸಿದ ಪಿನ್ ನಿರ್ಣಾಯಕವಾಗಿದೆ. ಹದಿಹರೆಯದವರು ನಂತರ ಪೋಷಕರು ಲಾಕ್ ಮಾಡಿದ ಸೆಟ್ಟಿಂಗ್ ಅನ್ನು ಬದಲಾಯಿಸಲು ಬಯಸಿದರೆ, ಅವರಿಗೆ ಪೋಷಕರ ಪಿನ್ ಅಗತ್ಯವಿರುತ್ತದೆ. ಪೋಷಕರು ಬಯಸಿದರೆ ಈ ನಿಯಂತ್ರಣಗಳನ್ನು ನಂತರ ಬದಲಾಯಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು.
 

Add Zee News as a Preferred Source
TAGS:
Tech