ಅರ್ಧಕ್ಕರ್ಧ ಬೆಲೆಗೆ VW 40 ಇಂಚಿನ ಸ್ಮಾರ್ಟ್‌ಟಿವಿ; Netflix, Prime Video ಜೊತೆಗೆ ಹಲವು ಫೀಚರ್ಸ್
VW Spectra Series 40 ಇಂಚಿನ Full HD Smart QLED TV ಇದೀಗ ₹12,999 ಬೆಲೆಗೆ ಲಭ್ಯವಿದ್ದು, MRP ₹24,999ಕ್ಕೆ ಹೋಲಿಸಿದರೆ 48% ರಿಯಾಯಿತಿ ಸಿಗುತ್ತಿದೆ. 60Hz ಡಿಸ್‌ಪ್ಲೇ, 24W ಸೌಂಡ್, Netflix, Prime Video, Hotstar, Zee5 ಸೇರಿದಂತೆ ಹಲವು ಸ್ಮಾರ್ಟ್ ಫೀಚರ್ಸ್‌ಗಳನ್ನ ಈ ಟಿವಿ ಹೊಂದಿದೆ.
VW 40 Inch Smart TV: ಹೊಸ ಸ್ಮಾರ್ಟ್ ಟಿವಿ ಖರೀದಿಸಲು ಬಯಸುವವರಿಗೆ ಆನ್‌ಲೈನ್‌ನಲ್ಲಿ ಲಭ್ಯವಿರುವ ಕೆಲವು ಬಜೆಟ್ ಸ್ನೇಹಿ ಮಾದರಿಗಳು ಗಮನ ಸೆಳೆಯುತ್ತಿವೆ. ಇದೀಗ VW ಕಂಪನಿಯ 40 ಇಂಚಿನ Spectra Series Full HD Smart QLED TV ಭಾರೀ ರಿಯಾಯಿತಿ ಬೆಲೆಗೆ ಲಭ್ಯವಿದೆ. ಇದರ ಮೂಲ ಬೆಲೆ ₹24,999 ಇದ್ದು, ಪ್ರಸ್ತುತ ₹12,999ಕ್ಕೆ ಲಭ್ಯವಿದೆ. ಅಂದರೆ ಈ ಸ್ಮಾರ್ಟ್‌ಟಿವಿ ಮೇಲೆ ಬರೋಬ್ಬರಿ 48% ರಿಯಾಯಿತಿ ದೊರೆಯುತ್ತಿದೆ.
ಕಡಿಮೆ ಬಜೆಟ್‌ನಲ್ಲಿ ದೊಡ್ಡ ಪರದೆಯ ಸ್ಮಾರ್ಟ್ ಟಿವಿ ಖರೀದಿಸಲು ಬಯಸುವವರಿಗೆ ಈ ಮಾದರಿ ಗಮನಾರ್ಹ ಆಯ್ಕೆಯಾಗಬಹುದು. QLED ಡಿಸ್‌ಪ್ಲೇ, Full HD ರೆಸಲ್ಯೂಶನ್, 60Hz ರಿಫ್ರೆಶ್ ರೇಟ್, 24W ಸೌಂಡ್ ಮತ್ತು ಹಲವು ಜನಪ್ರಿಯ OTT ಆ್ಯಪ್‌ಗಳಿಗೆ ಬೆಂಬಲ ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ.
40 ಇಂಚಿನ Full HD QLED ಡಿಸ್‌ಪ್ಲೇ
VW40AQ3 ಮಾದರಿಯ ಈ ಟಿವಿ 101 ಸೆಂ.ಮೀ ಅಥವಾ 40 ಇಂಚಿನ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇ Full HD ರೆಸಲ್ಯೂಶನ್ ಅಂದರೆ 1920x1080 ಪಿಕ್ಸೆಲ್‌ಗಳನ್ನ ಬೆಂಬಲಿಸುತ್ತದೆ. QLED ತಂತ್ರಜ್ಞಾನವನ್ನ ಒಳಗೊಂಡಿರುವುದರಿಂದ ಸಾಮಾನ್ಯ LED ಟಿವಿಗಳಿಗೆ ಹೋಲಿಸಿದರೆ ಬಣ್ಣಗಳ ಪ್ರದರ್ಶನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಟಿವಿಯಲ್ಲಿ Quantum Lucent Technology, IPE Technology ಮತ್ತು True Display ಸೇರಿದಂತೆ ವಿವಿಧ ಡಿಸ್‌ಪ್ಲೇ ವೈಶಿಷ್ಟ್ಯಗಳನ್ನ ನೀಡಲಾಗಿದೆ. Cinema Zoom ಸೌಲಭ್ಯವೂ ಇದ್ದು, ವೀಕ್ಷಕರಿಗೆ ವಿವಿಧ ರೀತಿಯ ಕಂಟೆಂಟ್‌ಗಳನ್ನ ದೊಡ್ಡ ಪರದೆಯಲ್ಲಿ ವೀಕ್ಷಿಸಲು ಅನುಕೂಲವಾಗುತ್ತದೆ. ಇದು 16.7 ಮಿಲಿಯನ್ ಬಣ್ಣಗಳನ್ನ ಬೆಂಬಲಿಸುತ್ತದೆ ಎಂದು ಉತ್ಪನ್ನದ ಮಾಹಿತಿಯಲ್ಲಿ ತಿಳಿಸಲಾಗಿದೆ. ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ಹೊಂದಿದ್ದು, ಸಾಮಾನ್ಯ ಟಿವಿ ಕಾರ್ಯಕ್ರಮಗಳು, ಸಿನಿಮಾಗಳು, ವೆಬ್ ಸೀರಿಸ್ ಮತ್ತು ವಿಡಿಯೋ ಕಂಟೆಂಟ್ ವೀಕ್ಷಣೆಗೆ ಬಳಸಬಹುದು.
Netflix, Prime Video ಸೇರಿದಂತೆ ಹಲವು OTT ಆ್ಯಪ್‌ಗಳು
VW Smart QLED TVಯಲ್ಲಿ ಹಲವು ಜನಪ್ರಿಯ OTT ಪ್ಲಾಟ್‌ಫಾರ್ಮ್‌ಗಳಿಗೆ ಬೆಂಬಲವಿದೆ. Prime Video, Hotstar, Netflix ಮತ್ತು Zee5 ಸೇರಿದಂತೆ ವಿವಿಧ ಮನರಂಜನಾ ಸೇವೆಗಳನ್ನ ಪಡೆಯಬಹುದು. ಇದರೊಂದಿಗೆ Screen Mirroring ಸೌಲಭ್ಯವೂ ನೀಡಲಾಗಿದೆ. ಇದರಿಂದ ಸ್ಮಾರ್ಟ್‌ಫೋನ್ ಅಥವಾ ಇತರ ಸಾಧನಗಳಲ್ಲಿರುವ ಕಂಟೆಂಟ್ ಅನ್ನ ಟಿವಿ ಪರದೆಯಲ್ಲಿ ಪ್ರದರ್ಶಿಸಲು ಸಾಧ್ಯವಾಗುತ್ತದೆ. PC Connectivity ಸೌಲಭ್ಯ ಇರುವುದರಿಂದ ಟಿವಿಯನ್ನ ಕಂಪ್ಯೂಟರ್ ಅಥವಾ ಇತರ ಹೊಂದಾಣಿಕೆಯ ಸಾಧನಗಳೊಂದಿಗೆ ಸಂಪರ್ಕಿಸಬಹುದು. ಇದಲ್ಲದೆ Playwall, Cloud TV ಮತ್ತು Movie Box ಸೇರಿದಂತೆ ಹೆಚ್ಚುವರಿ ಸ್ಮಾರ್ಟ್ ಫೀಚರ್ಸ್‌ಗಳನ್ನೂ ನೀಡಲಾಗಿದೆ. Quad Core Processor ಟಿವಿಯ ಸ್ಮಾರ್ಟ್ ಕಾರ್ಯಾಚರಣೆಗೆ ಬೆಂಬಲ ನೀಡುತ್ತದೆ.
24W ಸೌಂಡ್ ಔಟ್‌ಪುಟ್
ಸೌಂಡ್‌ಗಾಗಿ ಟಿವಿಯಲ್ಲಿ 24W ಔಟ್‌ಪುಟ್ ಹೊಂದಿರುವ Box Speakers ನೀಡಲಾಗಿದೆ. Stereo Surround Sound ಸೌಲಭ್ಯ ಇರುವುದರ ಜೊತೆಗೆ ಒಟ್ಟು ಐದು ಸೌಂಡ್ ಮೋಡ್‌ಗಳನ್ನ ನೀಡಲಾಗಿದೆ. ಸಿನಿಮಾ, ಸಂಗೀತ ಅಥವಾ ಸಾಮಾನ್ಯ ಟಿವಿ ವೀಕ್ಷಣೆಗೆ ಅನುಗುಣವಾಗಿ ಸೌಂಡ್ ಸೆಟ್ಟಿಂಗ್‌ಗಳನ್ನ ಬದಲಾಯಿಸಿಕೊಳ್ಳಬಹುದು.
HDMI ಮತ್ತು USB ಪೋರ್ಟ್‌ಗಳು
ಕನೆಕ್ಟಿವಿಟಿ ವಿಚಾರದಲ್ಲೂ ಈ ಟಿವಿಯಲ್ಲಿ ಹಲವು ಆಯ್ಕೆಗಳಿವೆ. ಸೆಟ್‌ಟಾಪ್ ಬಾಕ್ಸ್, Blu-ray ಪ್ಲೇಯರ್, ಗೇಮಿಂಗ್ ಕನ್ಸೋಲ್‌ಗಳಂತಹ ಸಾಧನಗಳನ್ನ ಸಂಪರ್ಕಿಸಲು ಎರಡು HDMI 2.0 ಮತ್ತು ಒಂದು HDMI 2.1 ಪೋರ್ಟ್‌ಗಳನ್ನ ನೀಡಲಾಗಿದೆ. ಇದರ ಜೊತೆಗೆ ಹಾರ್ಡ್ ಡ್ರೈವ್ ಅಥವಾ ಇತರ USB ಸಾಧನಗಳನ್ನ ಸಂಪರ್ಕಿಸಲು ಎರಡು USB 2.0 ಪೋರ್ಟ್‌ಗಳಿವೆ. ಹೀಗಾಗಿ ಟಿವಿಯನ್ನ ವಿವಿಧ ಬಾಹ್ಯ ಸಾಧನಗಳೊಂದಿಗೆ ಬಳಸಲು ಅವಕಾಶವಿದೆ.
₹12,999ಕ್ಕೆ ಖರೀದಿ ಅವಕಾಶ
VW40AQ3 40 ಇಂಚಿನ QLED Smart TVಯ MRP ₹24,999 ಆಗಿದ್ದು, ಕೇವಲ ₹12,999ಕ್ಕೆ ಲಭ್ಯವಿದೆ. ಅಂದರೆ ಗ್ರಾಹಕರಿಗೆ 48% ರಿಯಾಯಿತಿ ಸಿಗುತ್ತಿದೆ. ಆದರೆ ಆನ್‌ಲೈನ್ ಉತ್ಪನ್ನಗಳ ಬೆಲೆ, ಸ್ಟಾಕ್ ಮತ್ತು ಆಫರ್‌ಗಳು ಬದಲಾಗುವ ಸಾಧ್ಯತೆ ಇರುವುದರಿಂದ ಖರೀದಿಸುವ ಮುನ್ನ ಪ್ರಸ್ತುತ ಮಾರಾಟ ಬೆಲೆ ಮತ್ತು ಲಭ್ಯವಿರುವ ಆಫರ್‌ಗಳನ್ನ ಪರಿಶೀಲಿಸುವುದು ಸೂಕ್ತ. ಉತ್ಪನ್ನದೊಂದಿಗೆ ಬ್ರ್ಯಾಂಡ್ ವಾರಂಟಿ ಪಡೆಯಲು ಇನ್‌ವಾಯ್ಸ್ ಅಗತ್ಯವಿದೆ ಎಂದು ನೀಡಲಾದ ಮಾಹಿತಿಯಲ್ಲಿ ತಿಳಿಸಲಾಗಿದೆ. ರಿಟರ್ನ್ ಮಾಡುವ ಸಂದರ್ಭಗಳಲ್ಲಿ ಉತ್ಪನ್ನದ ಒಳ ಮತ್ತು ಹೊರ ಪ್ಯಾಕೇಜಿಂಗ್ ಸೇರಿದಂತೆ ಮೂಲ ಸ್ಥಿತಿಯನ್ನ ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಒಟ್ನಲ್ಲಿ ₹13 ಸಾವಿರದೊಳಗೆ 40 ಇಂಚಿನ QLED Smart TV ಹುಡುಕುತ್ತಿರುವವರಿಗೆ VW40AQ3 ಮಾದರಿಯು ಗಮನ ಸೆಳೆಯುವ ಉತ್ಪನ್ನವಾಗಿದೆ. Full HD ಡಿಸ್‌ಪ್ಲೇ, OTT ಆ್ಯಪ್‌ಗಳು, 24W ಸೌಂಡ್ ಮತ್ತು ವಿವಿಧ ಕನೆಕ್ಟಿವಿಟಿ ಆಯ್ಕೆಗಳು ಇದರ ಪ್ರಮುಖ ಫೀಚರ್ಸ್‌ಗಳಾಗಿವೆ.