• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /ಅರ್ಧಕ್ಕರ್ಧ ಬೆಲೆಗೆ VW 40 ಇಂಚಿನ ಸ್ಮಾರ್ಟ್‌ಟಿವಿ; Netflix, Prime Video ಜೊತೆಗೆ ಹಲವು ಫೀಚರ್ಸ್

ಅರ್ಧಕ್ಕರ್ಧ ಬೆಲೆಗೆ VW 40 ಇಂಚಿನ ಸ್ಮಾರ್ಟ್‌ಟಿವಿ; Netflix, Prime Video ಜೊತೆಗೆ ಹಲವು ಫೀಚರ್ಸ್

VW Spectra Series 40 ಇಂಚಿನ Full HD Smart QLED TV ಇದೀಗ ₹12,999 ಬೆಲೆಗೆ ಲಭ್ಯವಿದ್ದು, MRP ₹24,999ಕ್ಕೆ ಹೋಲಿಸಿದರೆ 48% ರಿಯಾಯಿತಿ ಸಿಗುತ್ತಿದೆ. 60Hz ಡಿಸ್‌ಪ್ಲೇ, 24W ಸೌಂಡ್, Netflix, Prime Video, Hotstar, Zee5 ಸೇರಿದಂತೆ ಹಲವು ಸ್ಮಾರ್ಟ್ ಫೀಚರ್ಸ್‌ಗಳನ್ನ ಈ ಟಿವಿ ಹೊಂದಿದೆ.

Written ByPuttaraj K Alur
Published: Sep 28, 2026, 06:35 PM IST|Updated: Sep 28, 2026, 06:53 PM IST
joinshare
ಅರ್ಧಕ್ಕರ್ಧ ಬೆಲೆಗೆ VW 40 ಇಂಚಿನ ಸ್ಮಾರ್ಟ್‌ಟಿವಿ; Netflix, Prime Video ಜೊತೆಗೆ ಹಲವು ಫೀಚರ್ಸ್
Image Credit: QLED Smart TV

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

VW 40 Inch Smart TV: ಹೊಸ ಸ್ಮಾರ್ಟ್ ಟಿವಿ ಖರೀದಿಸಲು ಬಯಸುವವರಿಗೆ ಆನ್‌ಲೈನ್‌ನಲ್ಲಿ ಲಭ್ಯವಿರುವ ಕೆಲವು ಬಜೆಟ್ ಸ್ನೇಹಿ ಮಾದರಿಗಳು ಗಮನ ಸೆಳೆಯುತ್ತಿವೆ. ಇದೀಗ VW ಕಂಪನಿಯ 40 ಇಂಚಿನ Spectra Series Full HD Smart QLED TV ಭಾರೀ ರಿಯಾಯಿತಿ ಬೆಲೆಗೆ ಲಭ್ಯವಿದೆ. ಇದರ ಮೂಲ ಬೆಲೆ ₹24,999 ಇದ್ದು, ಪ್ರಸ್ತುತ ₹12,999ಕ್ಕೆ ಲಭ್ಯವಿದೆ. ಅಂದರೆ ಈ ಸ್ಮಾರ್ಟ್‌ಟಿವಿ ಮೇಲೆ ಬರೋಬ್ಬರಿ 48% ರಿಯಾಯಿತಿ ದೊರೆಯುತ್ತಿದೆ.

ಕಡಿಮೆ ಬಜೆಟ್‌ನಲ್ಲಿ ದೊಡ್ಡ ಪರದೆಯ ಸ್ಮಾರ್ಟ್ ಟಿವಿ ಖರೀದಿಸಲು ಬಯಸುವವರಿಗೆ ಈ ಮಾದರಿ ಗಮನಾರ್ಹ ಆಯ್ಕೆಯಾಗಬಹುದು. QLED ಡಿಸ್‌ಪ್ಲೇ, Full HD ರೆಸಲ್ಯೂಶನ್, 60Hz ರಿಫ್ರೆಶ್ ರೇಟ್, 24W ಸೌಂಡ್ ಮತ್ತು ಹಲವು ಜನಪ್ರಿಯ OTT ಆ್ಯಪ್‌ಗಳಿಗೆ ಬೆಂಬಲ ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ.

40 ಇಂಚಿನ Full HD QLED ಡಿಸ್‌ಪ್ಲೇ

VW40AQ3 ಮಾದರಿಯ ಈ ಟಿವಿ 101 ಸೆಂ.ಮೀ ಅಥವಾ 40 ಇಂಚಿನ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇ Full HD ರೆಸಲ್ಯೂಶನ್ ಅಂದರೆ 1920x1080 ಪಿಕ್ಸೆಲ್‌ಗಳನ್ನ ಬೆಂಬಲಿಸುತ್ತದೆ. QLED ತಂತ್ರಜ್ಞಾನವನ್ನ ಒಳಗೊಂಡಿರುವುದರಿಂದ ಸಾಮಾನ್ಯ LED ಟಿವಿಗಳಿಗೆ ಹೋಲಿಸಿದರೆ ಬಣ್ಣಗಳ ಪ್ರದರ್ಶನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಟಿವಿಯಲ್ಲಿ Quantum Lucent Technology, IPE Technology ಮತ್ತು True Display ಸೇರಿದಂತೆ ವಿವಿಧ ಡಿಸ್‌ಪ್ಲೇ ವೈಶಿಷ್ಟ್ಯಗಳನ್ನ ನೀಡಲಾಗಿದೆ. Cinema Zoom ಸೌಲಭ್ಯವೂ ಇದ್ದು, ವೀಕ್ಷಕರಿಗೆ ವಿವಿಧ ರೀತಿಯ ಕಂಟೆಂಟ್‌ಗಳನ್ನ ದೊಡ್ಡ ಪರದೆಯಲ್ಲಿ ವೀಕ್ಷಿಸಲು ಅನುಕೂಲವಾಗುತ್ತದೆ. ಇದು 16.7 ಮಿಲಿಯನ್ ಬಣ್ಣಗಳನ್ನ ಬೆಂಬಲಿಸುತ್ತದೆ ಎಂದು ಉತ್ಪನ್ನದ ಮಾಹಿತಿಯಲ್ಲಿ ತಿಳಿಸಲಾಗಿದೆ. ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ಹೊಂದಿದ್ದು, ಸಾಮಾನ್ಯ ಟಿವಿ ಕಾರ್ಯಕ್ರಮಗಳು, ಸಿನಿಮಾಗಳು, ವೆಬ್ ಸೀರಿಸ್ ಮತ್ತು ವಿಡಿಯೋ ಕಂಟೆಂಟ್ ವೀಕ್ಷಣೆಗೆ ಬಳಸಬಹುದು.

Netflix, Prime Video ಸೇರಿದಂತೆ ಹಲವು OTT ಆ್ಯಪ್‌ಗಳು

VW Smart QLED TVಯಲ್ಲಿ ಹಲವು ಜನಪ್ರಿಯ OTT ಪ್ಲಾಟ್‌ಫಾರ್ಮ್‌ಗಳಿಗೆ ಬೆಂಬಲವಿದೆ. Prime Video, Hotstar, Netflix ಮತ್ತು Zee5 ಸೇರಿದಂತೆ ವಿವಿಧ ಮನರಂಜನಾ ಸೇವೆಗಳನ್ನ ಪಡೆಯಬಹುದು. ಇದರೊಂದಿಗೆ Screen Mirroring ಸೌಲಭ್ಯವೂ ನೀಡಲಾಗಿದೆ. ಇದರಿಂದ ಸ್ಮಾರ್ಟ್‌ಫೋನ್ ಅಥವಾ ಇತರ ಸಾಧನಗಳಲ್ಲಿರುವ ಕಂಟೆಂಟ್‌ ಅನ್ನ ಟಿವಿ ಪರದೆಯಲ್ಲಿ ಪ್ರದರ್ಶಿಸಲು ಸಾಧ್ಯವಾಗುತ್ತದೆ. PC Connectivity ಸೌಲಭ್ಯ ಇರುವುದರಿಂದ ಟಿವಿಯನ್ನ ಕಂಪ್ಯೂಟರ್ ಅಥವಾ ಇತರ ಹೊಂದಾಣಿಕೆಯ ಸಾಧನಗಳೊಂದಿಗೆ ಸಂಪರ್ಕಿಸಬಹುದು. ಇದಲ್ಲದೆ Playwall, Cloud TV ಮತ್ತು Movie Box ಸೇರಿದಂತೆ ಹೆಚ್ಚುವರಿ ಸ್ಮಾರ್ಟ್ ಫೀಚರ್ಸ್‌ಗಳನ್ನೂ ನೀಡಲಾಗಿದೆ. Quad Core Processor ಟಿವಿಯ ಸ್ಮಾರ್ಟ್ ಕಾರ್ಯಾಚರಣೆಗೆ ಬೆಂಬಲ ನೀಡುತ್ತದೆ.

24W ಸೌಂಡ್ ಔಟ್‌ಪುಟ್

ಸೌಂಡ್‌ಗಾಗಿ ಟಿವಿಯಲ್ಲಿ 24W ಔಟ್‌ಪುಟ್ ಹೊಂದಿರುವ Box Speakers ನೀಡಲಾಗಿದೆ. Stereo Surround Sound ಸೌಲಭ್ಯ ಇರುವುದರ ಜೊತೆಗೆ ಒಟ್ಟು ಐದು ಸೌಂಡ್ ಮೋಡ್‌ಗಳನ್ನ ನೀಡಲಾಗಿದೆ. ಸಿನಿಮಾ, ಸಂಗೀತ ಅಥವಾ ಸಾಮಾನ್ಯ ಟಿವಿ ವೀಕ್ಷಣೆಗೆ ಅನುಗುಣವಾಗಿ ಸೌಂಡ್ ಸೆಟ್ಟಿಂಗ್‌ಗಳನ್ನ ಬದಲಾಯಿಸಿಕೊಳ್ಳಬಹುದು.

HDMI ಮತ್ತು USB ಪೋರ್ಟ್‌ಗಳು

ಕನೆಕ್ಟಿವಿಟಿ ವಿಚಾರದಲ್ಲೂ ಈ ಟಿವಿಯಲ್ಲಿ ಹಲವು ಆಯ್ಕೆಗಳಿವೆ. ಸೆಟ್‌ಟಾಪ್ ಬಾಕ್ಸ್, Blu-ray ಪ್ಲೇಯರ್, ಗೇಮಿಂಗ್ ಕನ್ಸೋಲ್‌ಗಳಂತಹ ಸಾಧನಗಳನ್ನ ಸಂಪರ್ಕಿಸಲು ಎರಡು HDMI 2.0 ಮತ್ತು ಒಂದು HDMI 2.1 ಪೋರ್ಟ್‌ಗಳನ್ನ ನೀಡಲಾಗಿದೆ. ಇದರ ಜೊತೆಗೆ ಹಾರ್ಡ್ ಡ್ರೈವ್ ಅಥವಾ ಇತರ USB ಸಾಧನಗಳನ್ನ ಸಂಪರ್ಕಿಸಲು ಎರಡು USB 2.0 ಪೋರ್ಟ್‌ಗಳಿವೆ. ಹೀಗಾಗಿ ಟಿವಿಯನ್ನ ವಿವಿಧ ಬಾಹ್ಯ ಸಾಧನಗಳೊಂದಿಗೆ ಬಳಸಲು ಅವಕಾಶವಿದೆ.

₹12,999ಕ್ಕೆ ಖರೀದಿ ಅವಕಾಶ

VW40AQ3 40 ಇಂಚಿನ QLED Smart TVಯ MRP ₹24,999 ಆಗಿದ್ದು, ಕೇವಲ ₹12,999ಕ್ಕೆ ಲಭ್ಯವಿದೆ. ಅಂದರೆ ಗ್ರಾಹಕರಿಗೆ 48% ರಿಯಾಯಿತಿ ಸಿಗುತ್ತಿದೆ. ಆದರೆ ಆನ್‌ಲೈನ್ ಉತ್ಪನ್ನಗಳ ಬೆಲೆ, ಸ್ಟಾಕ್ ಮತ್ತು ಆಫರ್‌ಗಳು ಬದಲಾಗುವ ಸಾಧ್ಯತೆ ಇರುವುದರಿಂದ ಖರೀದಿಸುವ ಮುನ್ನ ಪ್ರಸ್ತುತ ಮಾರಾಟ ಬೆಲೆ ಮತ್ತು ಲಭ್ಯವಿರುವ ಆಫರ್‌ಗಳನ್ನ ಪರಿಶೀಲಿಸುವುದು ಸೂಕ್ತ. ಉತ್ಪನ್ನದೊಂದಿಗೆ ಬ್ರ್ಯಾಂಡ್ ವಾರಂಟಿ ಪಡೆಯಲು ಇನ್‌ವಾಯ್ಸ್ ಅಗತ್ಯವಿದೆ ಎಂದು ನೀಡಲಾದ ಮಾಹಿತಿಯಲ್ಲಿ ತಿಳಿಸಲಾಗಿದೆ. ರಿಟರ್ನ್ ಮಾಡುವ ಸಂದರ್ಭಗಳಲ್ಲಿ ಉತ್ಪನ್ನದ ಒಳ ಮತ್ತು ಹೊರ ಪ್ಯಾಕೇಜಿಂಗ್ ಸೇರಿದಂತೆ ಮೂಲ ಸ್ಥಿತಿಯನ್ನ ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಒಟ್ನಲ್ಲಿ ₹13 ಸಾವಿರದೊಳಗೆ 40 ಇಂಚಿನ QLED Smart TV ಹುಡುಕುತ್ತಿರುವವರಿಗೆ VW40AQ3 ಮಾದರಿಯು ಗಮನ ಸೆಳೆಯುವ ಉತ್ಪನ್ನವಾಗಿದೆ. Full HD ಡಿಸ್‌ಪ್ಲೇ, OTT ಆ್ಯಪ್‌ಗಳು, 24W ಸೌಂಡ್ ಮತ್ತು ವಿವಿಧ ಕನೆಕ್ಟಿವಿಟಿ ಆಯ್ಕೆಗಳು ಇದರ ಪ್ರಮುಖ ಫೀಚರ್ಸ್‌ಗಳಾಗಿವೆ.

Add Zee News as a Preferred Source
TAGS:
Tech
Kannada News