SOCIAL MEDIA

Newsletter

PARTNER SITES
Select Language Select State

9000mAh ಬ್ಯಾಟರಿಯೊಂದಿಗೆ ಹೊಸ Vivo V80 FE ಸ್ಮಾರ್ಟ್‌ಫೋನ್‌ ಎಂಟ್ರಿ! ಬೆಲೆ ಎಷ್ಟಿರಬಹುದು?

ವಿವೋ ಕಂಪನಿಯ ಹೊಸ Vivo V80 FE ಸ್ಮಾರ್ಟ್‌ಫೋನ್ ಇಂಡೋನೇಷ್ಯಾದ SDPPI ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ V2624 ಮಾಡೆಲ್ ಸಂಖ್ಯೆಯೊಂದಿಗೆ ಕಾಣಿಸಿಕೊಂಡಿದೆ. ಈ ಫೋನ್ 9000mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಬಹುದು ಎಂಬ ವದಂತಿಗಳಿವೆ. ಭಾರತದಲ್ಲಿ ಇದರ ಸಂಭಾವ್ಯ ಬೆಲೆ ₹45,000ರಿಂದ ₹50,000 ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಬ್ಯಾಟರಿ, ಬೆಲೆ ಮತ್ತು ಬಿಡುಗಡೆ ದಿನಾಂಕವನ್ನ ಕಂಪನಿ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.

Written By Puttaraj K Alur
Published: Oct 11, 2026, 11:02 AM IST | Updated: Oct 11, 2026, 11:11 AM IST
Image Credit: Vivo V80 FE
Join

Vivo V80 FE 5G Smartphone: ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇಯಾದ ಗ್ರಾಹಕ ವರ್ಗವನ್ನ ಹೊಂದಿರುವ ವಿವೋ (Vivo) ಕಂಪನಿ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ಧತೆ ನಡೆಸುತ್ತಿರುವ ಸುಳಿವು ಸಿಕ್ಕಿದೆ. ಕಂಪನಿಯ ಜನಪ್ರಿಯ V ಸರಣಿಗೆ Vivo V80 FE ಎಂಬ ಹೊಸ ಮಾದರಿ ಸೇರ್ಪಡೆಯಾಗುವ ಸಾಧ್ಯತೆಯಿದೆ. ವಿಶೇಷವೆಂದರೆ ಈ ಫೋನ್‌ನಲ್ಲಿ 9000mAh ಸಾಮರ್ಥ್ಯದ ಬೃಹತ್ ಬ್ಯಾಟರಿ ನೀಡಬಹುದು ಎಂಬ ವದಂತಿಗಳು ಹರಿದಾಡುತ್ತಿವೆ.

ಆದರೆ ಈ ಬ್ಯಾಟರಿ ಸಾಮರ್ಥ್ಯವನ್ನ ಕಂಪನಿ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಇತ್ತೀಚೆಗೆ Vivo V80 FE ಸ್ಮಾರ್ಟ್‌ಫೋನ್ ಇಂಡೋನೇಷ್ಯಾದ SDPPI ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ. ಇದರಿಂದ ಹೊಸ ಫೋನ್ ಬಿಡುಗಡೆ ಕುರಿತು ನಿರೀಕ್ಷೆಗಳು ಹೆಚ್ಚಾಗಿವೆ. ಭಾರತದಲ್ಲಿಯೂ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆಯಾದರೂ, ಕಂಪನಿಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ Vivo V80 FE ಪತ್ತೆ!

ವರದಿಗಳ ಪ್ರಕಾರ, Vivo V80 FE ಸ್ಮಾರ್ಟ್‌ಫೋನ್ ಇಂಡೋನೇಷ್ಯಾದ SDPPI ಪ್ರಮಾಣೀಕರಣ ಡೇಟಾಬೇಸ್‌ನಲ್ಲಿ V2624 ಎಂಬ ಮಾಡೆಲ್ ಸಂಖ್ಯೆಯೊಂದಿಗೆ ಕಾಣಿಸಿಕೊಂಡಿದೆ. ಅಕ್ಟೋಬರ್ 8ರಂದು ಟಿಪ್‌ಸ್ಟರ್ ಅನ್ವಿನ್ ಈ ಮಾಹಿತಿಯನ್ನ ಸಾಮಾಜಿಕ ಜಾಲತಾಣ Xನಲ್ಲಿ ಹಂಚಿಕೊಂಡಿದ್ದಾರೆ. ಪ್ರಮಾಣೀಕರಣ ಪಟ್ಟಿಯಲ್ಲಿ ಫೋನ್‌ನ ಹೆಸರು ಮತ್ತು ಮಾಡೆಲ್ ಸಂಖ್ಯೆ ಬಹಿರಂಗವಾಗಿವೆ. ಆದರೆ ಡಿಸ್‌ಪ್ಲೇ, ಪ್ರೊಸೆಸರ್, ಕ್ಯಾಮೆರಾ, ಬ್ಯಾಟರಿ ಹಾಗೂ ಚಾರ್ಜಿಂಗ್ ಸಾಮರ್ಥ್ಯಕ್ಕೆ ಸಂಬಂಧಿಸಿದ ಯಾವುದೇ ತಾಂತ್ರಿಕ ವಿವರಗಳನ್ನ ಪ್ರಕಟಿಸಿಲ್ಲ. ಈ ಪ್ರಮಾಣೀಕರಣವು ವಿವೋ ಕಂಪನಿ ಹೊಸ ಸಾಧನವನ್ನ ಮಾರುಕಟ್ಟೆಗೆ ಪರಿಚಯಿಸುವ ಪ್ರಕ್ರಿಯೆಯಲ್ಲಿ ತೊಡಗಿರುವುದಕ್ಕೆ ಸುಳಿವು ನೀಡುತ್ತದೆ. 

9000mAh ಬ್ಯಾಟರಿ ಸಿಗಲಿದೆಯೇ?

Vivo V80 FE ಕುರಿತು ಹೆಚ್ಚಿನ ಕುತೂಹಲ ಮೂಡಿಸಿರುವ ವಿಚಾರವೆಂದರೆ ಅದರ ಸಂಭಾವ್ಯ ಬ್ಯಾಟರಿ ಸಾಮರ್ಥ್ಯ. ಕೆಲವು ವರದಿಗಳಲ್ಲಿ ಈ ಸ್ಮಾರ್ಟ್‌ಫೋನ್ 9000mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ. ಒಂದು ವೇಳೆ ಈ ಮಾಹಿತಿ ನಿಜವಾದರೆ, ಹೆಚ್ಚು ಸಮಯ ಫೋನ್ ಬಳಸುವ ಗ್ರಾಹಕರಿಗೆ ಇದು ಆಕರ್ಷಕ ಆಯ್ಕೆಯಾಗಬಹುದು. ವಿಶೇಷವಾಗಿ ವಿಡಿಯೋ ವೀಕ್ಷಣೆ, ಗೇಮಿಂಗ್, ಸಾಮಾಜಿಕ ಜಾಲತಾಣಗಳ ಬಳಕೆ ಹಾಗೂ ಪ್ರಯಾಣದ ಸಂದರ್ಭದಲ್ಲಿ ದೊಡ್ಡ ಬ್ಯಾಟರಿ ಅನುಕೂಲವಾಗಬಹುದು. ಆದರೆ 9000mAh ಬ್ಯಾಟರಿ ಕುರಿತು ಅಧಿಕೃತ ದೃಢೀಕರಣ ಲಭ್ಯವಿಲ್ಲ. SDPPI ಪ್ರಮಾಣೀಕರಣದಲ್ಲಿಯೂ ಬ್ಯಾಟರಿ ಸಾಮರ್ಥ್ಯವನ್ನ ಉಲ್ಲೇಖಿಸಿಲ್ಲ. 

ಹಿಂದಿನ Vivo V70 FE ಫೋನ್‌ನಲ್ಲಿ ಯಾವ ಫೀಚರ್ಸ್ ಇವೆ?

ಹೊಸ Vivo V80 FE ಸ್ಮಾರ್ಟ್‌ಫೋನ್‌ನ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳಲು ಹಿಂದಿನ Vivo V70 FE ಮಾದರಿಯನ್ನ ಗಮನಿಸಬಹುದು. Vivo V70 FE ಸ್ಮಾರ್ಟ್‌ಫೋನ್‌ನಲ್ಲಿ 6.83 ಇಂಚಿನ AMOLED ಡಿಸ್‌ಪ್ಲೇ ನೀಡಲಾಗಿದೆ. ಇದು 120Hz ರಿಫ್ರೆಶ್ ರೇಟ್ ಹೊಂದಿದೆ. ಕಾರ್ಯಕ್ಷಮತೆಗಾಗಿ MediaTek Dimensity 7360 Turbo ಪ್ರೊಸೆಸರ್ ಬಳಸಲಾಗಿದೆ. ಫೋಟೋಗ್ರಫಿಗಾಗಿ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ನೀಡಲಾಗಿದೆ. 

ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗೂ ಮುಂಭಾಗದ ಕ್ಯಾಮೆರಾ ವ್ಯವಸ್ಥೆಯಿದೆ. ಇದರ ಮತ್ತೊಂದು ಪ್ರಮುಖ ಆಕರ್ಷಣೆ 7000mAh ಬ್ಯಾಟರಿ ಹಾಗೂ 90W ವೇಗದ ಚಾರ್ಜಿಂಗ್ ಸೌಲಭ್ಯವಾಗಿದೆ. ಹೊಸ Vivo V80 FE ಮಾದರಿಯಲ್ಲಿ ಇದಕ್ಕಿಂತ ಹೆಚ್ಚಿನ ಬ್ಯಾಟರಿ ಸಾಮರ್ಥ್ಯ ನೀಡುವ ಸಾಧ್ಯತೆಗಳ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ಹಿಂದಿನ ಮಾದರಿಯ ವಿಶೇಷತೆಗಳು ಹೊಸ ಫೋನ್‌ನಲ್ಲಿಯೂ ಇರಲಿವೆ ಎಂಬುದು ಖಚಿತವಲ್ಲ.

ಕ್ಯಾಮೆರಾ ಮತ್ತು ಡಿಸ್‌ಪ್ಲೇ ಹೇಗಿರಬಹುದು?

ವಿವೋ ಕಂಪನಿಯ V ಸರಣಿಯ ಸ್ಮಾರ್ಟ್‌ಫೋನ್‌ಗಳು ಕ್ಯಾಮೆರಾ ಹಾಗೂ ವಿನ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡುತ್ತವೆ. ಇದೇ ಹಿನ್ನೆಲೆಯಲ್ಲಿ Vivo V80 FE ಮಾದರಿಯಲ್ಲಿಯೂ ಉತ್ತಮ ಡಿಸ್‌ಪ್ಲೇ ಮತ್ತು ಕ್ಯಾಮೆರಾ ವ್ಯವಸ್ಥೆಯನ್ನ ನಿರೀಕ್ಷಿಸಲಾಗುತ್ತಿದೆ. ಹೊಸ ಫೋನ್‌ನಲ್ಲಿ AMOLED ಡಿಸ್‌ಪ್ಲೇ ಹಾಗೂ ಹೆಚ್ಚಿನ ರಿಫ್ರೆಶ್ ರೇಟ್ ಸೌಲಭ್ಯ ನೀಡಬಹುದು ಎಂಬ ಊಹೆಗಳಿವೆ. ಕ್ಯಾಮೆರಾ ವಿಭಾಗದಲ್ಲಿಯೂ ಹೊಸ ಬದಲಾವಣೆಗಳನ್ನ ನಿರೀಕ್ಷಿಸಲಾಗುತ್ತಿದೆ. ಆದರೆ ಫೋನ್‌ನ ಕ್ಯಾಮೆರಾ ರೆಸಲ್ಯೂಶನ್, ಪ್ರೊಸೆಸರ್, RAM, ಸ್ಟೋರೇಜ್ ಹಾಗೂ ಚಾರ್ಜಿಂಗ್ ವೇಗದ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಭಾರತದಲ್ಲಿ Vivo V80 FE ಬೆಲೆ ಎಷ್ಟಿರಬಹುದು?

Vivo V80 FE ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಬಂದರೆ ಮಧ್ಯಮದಿಂದ ಪ್ರೀಮಿಯಂ ಬೆಲೆ ವಿಭಾಗದಲ್ಲಿ ಸ್ಥಾನ ಪಡೆಯಬಹುದು ಎಂದು ತಂತ್ರಜ್ಞಾನ ವರದಿಗಳು ಅಂದಾಜಿಸಿವೆ. ಕೆಲವು ವರದಿಗಳ ಪ್ರಕಾರ, ಇದರ ಸಂಭಾವ್ಯ ಬೆಲೆ ₹45,000ರಿಂದ ₹50,000ದ ನಡುವೆ ಇರಬಹುದು. ಆದರೆ ಇದು ಕೇವಲ ಮಾರುಕಟ್ಟೆಯ ಅಂದಾಜಾಗಿದ್ದು, ವಿವೋ ಕಂಪನಿ ಯಾವುದೇ ಅಧಿಕೃತ ಬೆಲೆಯನ್ನು ಪ್ರಕಟಿಸಿಲ್ಲ.

Vivo V80 FE ಯಾವಾಗ ಬಿಡುಗಡೆಯಾಗಲಿದೆ?

ಇಂಡೋನೇಷ್ಯಾದ ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ Vivo V80 FE ಶೀಘ್ರದಲ್ಲೇ ಮಾರುಕಟ್ಟೆಗೆ ಬರಬಹುದು ಎಂಬ ನಿರೀಕ್ಷೆಯಿದೆ. ಆದರೆ ಫೋನ್‌ನ ಅಧಿಕೃತ ಬಿಡುಗಡೆ ದಿನಾಂಕ, ಭಾರತದಲ್ಲಿ ಲಭ್ಯತೆ ಹಾಗೂ ಮಾರಾಟ ಆರಂಭವಾಗುವ ಸಮಯದ ಕುರಿತು ಕಂಪನಿ ಇನ್ನೂ ಮಾಹಿತಿ ನೀಡಿಲ್ಲ. ಒಟ್ನಲ್ಲಿ Vivo V80 FE ಸ್ಮಾರ್ಟ್‌ಫೋನ್ ದೊಡ್ಡ ಬ್ಯಾಟರಿ ಮತ್ತು ಹೊಸ ಫೀಚರ್ಸ್‌ಗಳ ನಿರೀಕ್ಷೆಯಿಂದ ಗಮನ ಸೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಕಂಪನಿಯಿಂದ ಅಧಿಕೃತ ಪ್ರಕಟಣೆ ಹೊರಬಂದ ನಂತರವೇ ಈ ಫೋನ್‌ನ ಸಂಪೂರ್ಣ ವಿಶೇಷತೆಗಳು ಸ್ಪಷ್ಟವಾಗಲಿವೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES