• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /ಸ್ನಾನ ಮಾಡಿದ ಕೂಡಲೇ ದೇಹ ದುರ್ವಾಸನೆ ಬೀರುತ್ತಾ.. ಅದ್ಕೆ ನೀವು ಮಾಡಬೇಕಾಗಿದ್ದು ಇಷ್ಟೇ!

ಸ್ನಾನ ಮಾಡಿದ ಕೂಡಲೇ ದೇಹ ದುರ್ವಾಸನೆ ಬೀರುತ್ತಾ.. ಅದ್ಕೆ ನೀವು ಮಾಡಬೇಕಾಗಿದ್ದು ಇಷ್ಟೇ!

ಸ್ನಾನ ಮಾಡಿದ ಕೆಲವೇ ನಿಮಿಷಗಳಲ್ಲಿ ಬೆವರಿನ ವಾಸನೆ ಹೊರಬರಲು ಚರ್ಮದಲ್ಲಿರುವ ಬ್ಯಾಕ್ಟೀರಿಯಾಗಳು ಕಾರಣ ಆಗಿರಬಹುದು. ಬೆವರು ಮತ್ತು ಬ್ಯಾಕ್ಟೀರಿಯಾಗಳ ನಡುವೆ ನಡೆಯುವ ಪ್ರಕ್ರಿಯೆಯಿಂದಾಗಿ ದೇಹವು ಕೆಟ್ಟ ವಾಸನೆಯನ್ನು ಬೀರುತ್ತದೆ.

Written ByBhimappa
Published: Sep 21, 2026, 08:02 PM IST|Updated: Sep 21, 2026, 08:09 PM IST
joinshare
ಸ್ನಾನ ಮಾಡಿದ ಕೂಡಲೇ ದೇಹ ದುರ್ವಾಸನೆ ಬೀರುತ್ತಾ.. ಅದ್ಕೆ ನೀವು ಮಾಡಬೇಕಾಗಿದ್ದು ಇಷ್ಟೇ!
Image Credit: Body_Odor_cause

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Top Causes and Solutions for Body Odor: ಯಾರೇ ಆಗಲಿ ಸ್ನಾನ ಅಥವಾ ಜಳಕ ಮಾಡಿದ ಕೂಡಲೇ ಫ್ರೆಶ್‌ ಅನುಭವ ಆಗುತ್ತದೆ. ಎಲ್ಲವನ್ನು ಗೆದ್ದೇ ಎನ್ನುವಂತಹ ಮನದ ಭಾವನೆ ಉಲ್ಲಾಸದಿಂದ ಕೂಡಿರುತ್ತದೆ. ಸ್ನಾನ ದಿನದಿಂದ ದಿನಕ್ಕೆ ನಿಮ್ಮನ್ನು ಫ್ರೆಶ್‌ ಮೂಡ್‌ನಲ್ಲಿ ಇರುವಂತೆ ಮಾಡುತ್ತದೆ. ಇದರಿಂದ ನಿಮ್ಮ ನಿತ್ಯದ ಕೆಲಸ ಕಾರ್ಯಗಳಲ್ಲಿ ಶುಚಿತ್ವ, ನೀವು ಮಾಡುವ ಪ್ರತಿಯೊಂದು ಪರಿಶುದ್ಧತೆಯಿಂದ ಯಶಸ್ಸು ಆಗುತ್ತದೆ. ಎಲ್ಲವೂ ಆಗಿಲ್ಲ ಎಂದರೂ ಕೆಲವೊಂದು ಮಾತ್ರ ಆಗೇ ಆಗುತ್ತವೆ. ಅದು ನಿಮ್ಮ ಅನುಭವಕ್ಕೆ ಬರೋದಿಲ್ಲ ಅಷ್ಟೇ. ಈಗ ಈ ಸ್ನಾನ ಮಾಡುವುದು ಯಾಕೆ ಎಂದು ಅಂತೀರಾ.. ಸ್ನಾನ ಮಾಡಿದರೂ ದೇಹ ವಾಸನೆ ಬರುತ್ತದೆಯೇ?, ಅದಕ್ಕೆ ಕಾರಣ, ಪರಿಹಾರಗಳು ಇಲ್ಲಿ ನೀಡಲಾಗಿದೆ.  

ಸ್ನಾನ ಮಾಡಿದ ಕೂಡಲೇ ದೇಹವು ಬೆವರಿನ ವಾಸನೆಯನ್ನು ಬರುತ್ತದೆಯೇ, ಇಂತಹ ಸಮಸ್ಯೆಗಳು ನಿಮ್ಮನ್ನು ಸಭೆ, ಸಮಾರಂಭಗಳಲ್ಲಿ, ಕಚೇರಿಗಳಲ್ಲಿ ಮುಜುಗರಕ್ಕೀಡು ಮಾಡುತ್ತದೆ. ಅನೇಕ ಜನರಿಗೆ ಈ ಸಮಸ್ಯೆ ಇರುತ್ತದೆ. ಸ್ನಾನ ಮಾಡಿದ ತಕ್ಷಣ ಅವರ ದೇಹದಿಂದ ಬೆವರು ಬರಲು ಪ್ರಾರಂಭಿಸುತ್ತದೆ. ಅಂತಹವರು ಸ್ನಾನ ಮಾಡಿದ ನಂತರ ಡಿಯೋಡರೆಂಟ್ ಅಥವಾ ಸುಗಂಧ ದ್ರವ್ಯವನ್ನು ಹಚ್ಚುವ ಮೂಲಕ ಬೆವರಿನ ವಾಸನೆಯನ್ನು ಇಲ್ಲದಂತೆ ಮಾಡಲು ಪ್ರಯತ್ನ ಮಾಡುತ್ತಾರೆ. ಆದರೆ ಇಂತಹ ಸುಗಂಧ ದ್ರವ್ಯಗಳು ಇಂತಹ ಸಮಸ್ಯೆಗೆ ಸೂಕ್ತ ಪರಿಹಾರ ಅಲ್ಲವೇ ಅಲ್ಲ.

ದೇಹದ ವಾಸನೆಯೂ ಪುರುಷರು ಮತ್ತು ಮಹಿಳೆಯರು ಇಬ್ಬರಲ್ಲೂ ಸಾಮಾನ್ಯವಾದ ಸಮಸ್ಯೆ ಆಗಿದೆ. ಇದರಿಂದ ಕೆಲವರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಾರೆ. ಚರ್ಮದ ಮೇಲಿನ ಬ್ಯಾಕ್ಟೀರಿಯಾಗಳು ಬೆವರಿನೊಂದಿಗೆ ಸಂಪರ್ಕಕ್ಕೆ ಬಂದಾಗ ಇದು ಸಂಭವಿಸುತ್ತದೆ. ನಮ್ಮ ಚರ್ಮವು ನೈಸರ್ಗಿಕವಾಗಿ ಬ್ಯಾಕ್ಟೀರಿಯಾದಿಂದ ಆವೃತವಾಗಿರುತ್ತದೆ. ಇದು ಮಾನವ ದೇಹಕ್ಕೆ ಜೈವಿಕ ಅಂಶವಾಗಿದೆ. ಚರ್ಮದಲ್ಲಿ ವಾಸಿಸುವ ಬ್ಯಾಕ್ಟೀರಿಯಾಗಳು ಬೆವರನ್ನು ಆಮ್ಲಗಳು ಆಗಿ ಬೇರ ಬೇರೆ ಆಗಿ ದೇಹದ ವಾಸನೆ ಬರುತ್ತದೆ.

ದೇಹದಿಂದ ಬರುವ ಬೆವರಿನ ಬಲವಾದ ವಾಸನೆಗೆ ವಿಭಿನ್ನ ಕಾರಣಗಳಿವೆ. ಆದರೆ ಸ್ನಾನ ಮಾಡಿದ ಕೆಲವೇ ನಿಮಿಷಗಳಲ್ಲಿ ಬೆವರಿನ ವಾಸನೆ ಹೊರಬರಲು ಚರ್ಮದಲ್ಲಿರುವ ಬ್ಯಾಕ್ಟೀರಿಯಾಗಳು ಕಾರಣ ಆಗಿರಬಹುದು. ಬೆವರು ಮತ್ತು ಬ್ಯಾಕ್ಟೀರಿಯಾಗಳ ನಡುವೆ ನಡೆಯುವ ಪ್ರಕ್ರಿಯೆಯಿಂದಾಗಿ ದೇಹವು ಕೆಟ್ಟ ವಾಸನೆಯನ್ನು ಬೀರುತ್ತದೆ. ಸ್ನಾನದ ನಂತರ ದೇಹದಿಂದ ಬರುವ ಕೆಟ್ಟ ವಾಸನೆಯನ್ನು ತಡೆಯಲು ನೀವು ಇಲ್ಲಿರುವ ಕೆಲವೊಂದು ಪರಿಹಾರವನ್ನು ನಿತ್ಯ ಅಳವಡಿಸಿಕೊಳ್ಳಬಹುದು. ಸ್ನಾನ ಮಾಡಿದ ಕೆಲವೇ ನಿಮಿಷಗಳಲ್ಲಿ ಬೆವರಿನ ವಾಸನೆ ಹೊರಬರಲು ಚರ್ಮದಲ್ಲಿರುವ ಬ್ಯಾಕ್ಟೀರಿಯಾಗಳು ಕಾರಣ ಆಗಿರಬಹುದು. ಬೆವರು ಮತ್ತು ಬ್ಯಾಕ್ಟೀರಿಯಾಗಳ ನಡುವೆ ನಡೆಯುವ ಪ್ರಕ್ರಿಯೆಯಿಂದಾಗಿ ದೇಹವು ಕೆಟ್ಟ ವಾಸನೆಯನ್ನು ಬೀರುತ್ತದೆ.

ಸ್ನಾನದ ನಂತರ ಆತುರದಿಂದ ಬಟ್ಟೆ ಧರಿಸುವುದನ್ನು ತಪ್ಪಿಸಿ. ದೇಹವು ಸಂಪೂರ್ಣವಾಗಿ ಒಣಗಿದ ಮೇಲೆಯೇ ಬಟ್ಟೆಗಳನ್ನು ಧರಿಸಿ
ಅತಿಯಾದ ಬೆವರು ಸಂಭವಿಸುವ ದೇಹದ ಭಾಗಗಳನ್ನು ಸರಿಯಾಗಿ ಸ್ವಚ್ಛಗೊಳಿಸಿ
ಕಾಲ್ಬೆರಳುಗಳು, ಆರ್ಮ್ಪಿಟ್ಗಳು, ಮೊಣಕಾಲುಗಳು ಮತ್ತು ಮೊಣಕೈಗಳು ಒದ್ದೆಯಾಗಿ ಇರಬಾರದು 
ಸ್ನಾನದ ನಂತರ ಆಂಟಿಪೆರ್ಸ್ಪಿರಂಟ್ Antiperspirant ಉಪಯುಕ್ತವಾಗಿದೆ. ಇದನ್ನು ಚರ್ಮಕ್ಕೆ ಹಚ್ಚಬೇಕು. 
ಸ್ನಾನದ ನಂತರ ಈಗಾಗಲೇ ಧರಿಸಿದ ಬೆವರಿನ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು 
ಒದ್ದೆಯಾದ ಸಾಕ್ಸ್ ಮತ್ತು ಬನಿಯನ್‌ಗಳನ್ನು ಧರಿಸುವುದರಿಂದ ವಾಸನೆ ಹೆಚ್ಚಾಗುತ್ತದೆ
ನಿಮಗೆ ಹೆಚ್ಚು ಬೆವರು ಬರುತ್ತಿದ್ದರೇ, ದೇಹಕ್ಕೆ ಬಿಗಿಯಾಗುವ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು
ಕಳಪೆ ನೈರ್ಮಲ್ಯವು ದೇಹದ ವಾಸನೆಗೆ ಕಾರಣವಾಗಬಹುದು. ನಿಮಗೆ ಹೆಚ್ಚು ಬೆವರು ಬರುತ್ತಿದ್ರೆ ನಿಮ್ಮ ನೈರ್ಮಲ್ಯವನ್ನು ನೋಡಿಕೊಳ್ಳಿ
ದೇಹದ ವಾಸನೆ ಅಧಿಕವಾಗುತ್ತಿದ್ರೆ ದಿನಕ್ಕೆ ಎರಡು ಬಾರಿ ಸ್ನಾನ ಮಾಡಬೇಕು
ಸ್ನಾನದ ನಂತರ ನಿಮ್ಮ ಬಟ್ಟೆಗಳನ್ನು ಕೂಡ ಬದಲಾಯಿಸಬಹುದು. ಹೀಗೆ ಮಾಡುವುದರಿಂದ, ಬೆವರು ವಾಸನೆಯ ಸಮಸ್ಯೆ ಕಡಿಮೆ ಆಗುತ್ತೆ

ಈ ಪರಿಹಾರಗಳನ್ನು ಪ್ರಯತ್ನಿಸಿದ ನಂತರವೂ ಬೆವರು ವಾಸನೆಯ ಸಮಸ್ಯೆ ದೂರವಾಗದಿದ್ದರೆ, ಅಥವಾ ಸಮಸ್ಯೆ ದೀರ್ಘಕಾಲದವರೆಗೆ ನಡೆಯುತ್ತಿದ್ದರೆ ಡಾಕ್ಟರ್‌ ಅನ್ನು ಸಂಪರ್ಕಿಸಿ. ಬೆವರುವಿಕೆಯಲ್ಲಿ ಹಠಾತ್ ಬದಲಾವಣೆ ಕಂಡು ಬಂದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ಚರ್ಮರೋಗ ತಜ್ಞರು ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ನೀಡಬಲ್ಲರು. 

Add Zee News as a Preferred Source
TAGS:
Health Tips