• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /ಈ ವಯಸ್ಸಿನ ಬಳಿಕ ಮಹಿಳೆಯರಲ್ಲಿ ಪ್ರಮುಖ 2 ಬದಲಾಣೆ.. ಇವುಗಳ ಬಗ್ಗೆ ನಿರ್ಲಕ್ಷ್ಯ ಬೇಡವೇ ಬೇಡ

ಈ ವಯಸ್ಸಿನ ಬಳಿಕ ಮಹಿಳೆಯರಲ್ಲಿ ಪ್ರಮುಖ 2 ಬದಲಾಣೆ.. ಇವುಗಳ ಬಗ್ಗೆ ನಿರ್ಲಕ್ಷ್ಯ ಬೇಡವೇ ಬೇಡ

ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡುವುದಿಲ್ಲ. ಮನೆಯಲ್ಲಿರುವ ಕುಟುಂಬಸ್ಥರ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳುವ ಮನೆಯ ಮಹಿಳೆಯರು ತಮ್ಮ ಬಗ್ಗೆ ತಾವು ಯಾವುದೇ ಆರೋಗ್ಯ ಕಡೆ ನೋಡಿಕೊಳ್ಳುವುದಿಲ್ಲ.

Reported ByBhimappaEdited ByBhimappa
Published: Sep 18, 2026, 02:53 PM IST|Updated: Sep 18, 2026, 03:01 PM IST
joinshare
ಈ ವಯಸ್ಸಿನ ಬಳಿಕ ಮಹಿಳೆಯರಲ್ಲಿ ಪ್ರಮುಖ 2 ಬದಲಾಣೆ.. ಇವುಗಳ ಬಗ್ಗೆ ನಿರ್ಲಕ್ಷ್ಯ ಬೇಡವೇ ಬೇಡ
Image Credit: File Photo

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡುವುದಿಲ್ಲ. ಮನೆಯಲ್ಲಿರುವ ಕುಟುಂಬಸ್ಥರ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳುವ ಮನೆಯ ಮಹಿಳೆಯರು ತಮ್ಮ ಬಗ್ಗೆ ತಾವು ಯಾವುದೇ ಆರೋಗ್ಯ ಕಡೆ ನೋಡಿಕೊಳ್ಳುವುದಿಲ್ಲ. ದಿನದಿಂದ ದಿನಕ್ಕೆ ಮಹಿಳೆಯರು ತಿಂಡಿ, ಊಟ ಮಾಡುವ ಕಡೆಗೆ ಗಮನ ಕೊಡುವುದಿಲ್ಲ. ಇದರಿಂದ ಅವರ ಆರೋಗ್ಯದಲ್ಲಿ ತುಂಬಾ ಸಮಸ್ಯೆಗಳು ಆಗುತ್ತವೆ. ಮನೆ, ಗಂಡ, ಮಕ್ಕಳು ಅಂತ ಫುಲ್‌ ಬ್ಯುಸಿ ಆಗುವ ಮಹಿಳೆಯರು 30 ರಿಂದ 40 ವರ್ಷದ ಬಳಿಕ ತೀವ್ರ ಆರೋಗ್ಯ ತೊಂದರೆಗಳಿಂದ ಬಳಲುತ್ತಾರೆ. 
  
ಮಹಿಳೆಯರ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಗಳಿಂದಾಗಿ ಅವರು ತೂಕ ಹೆಚ್ಚಾಗುವುದು, ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಹೃದಯ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಈ ಸಮಸ್ಯೆಗಳ ಲಕ್ಷಣಗಳು ಕೂಡ ಗೋಚರಿಸುತ್ತವೆ. ಆದರೆ ಮಹಿಳೆಯರು ಅವುಗಳ ಬಗ್ಗೆ ಗಮನ ಹರಿಸುವುದಿಲ್ಲ. ಮಹಿಳೆಯರಿಗೆ ಬಹುತೇಕ ಗೊತ್ತಿಲ್ಲದಂತೆ ಈ ಸಮಸ್ಯೆಗಳು ಎದುರಾಗುವುದರಿಂದ ಅವರು ತೀವ್ರವಾದ ತೊಂದರೆಗಳನ್ನು ಅನುಭವಿಸುತ್ತಾರೆ.  

ಮಹಿಳೆಯರಿಗೆ ವಯಸ್ಸಾದಂತೆ ಅವರ ಹೃದಯದ ಅಪಧಮನಿಗಳ ಸ್ಥಿತಿಸ್ಥಾಪಕತ್ವ ಕಡಿಮೆಯಾಗುತ್ತದೆ. ಅಪಧಮನಿಗಳು ಗಟ್ಟಿಯಾಗಲು ಪ್ರಾರಂಭಿಸುತ್ತವೆ. ಇದರಿಂದ ಹೃದಯದಿಂದ ಪಂಪ್ ಮಾಡಲ್ಪಟ್ಟ ರಕ್ತದ ಒತ್ತಡವನ್ನು ನಿಭಾಯಿಸುವುದು ಕಷ್ಟಕರವಾಗುತ್ತದೆ. ಇದರೊಂದಿಗೆ ರಕ್ತದೊತ್ತಡವೂ ಬದಲಾಗಲು ಪ್ರಾರಂಭಿಸುತ್ತದೆ. ದೇಹದಲ್ಲಿ ರಕ್ತದೊತ್ತಡ ಆಗುವುದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಹೀಗಾಗಿ ನೀವು ರಕ್ತದೊತ್ತಡ ಸಮಸ್ಯೆ ಬರದಂತೆ ಮಹಿಳೆಯರು ಆರೋಗ್ಯ ಕಾಪಾಡಿಕೊಳ್ಳಬೇಕು.  

30 ವರ್ಷದ ನಂತರ ಮಹಿಳೆಯ ದೇಹದಲ್ಲಿ ಸಂಭವಿಸುವ ಹಾರ್ಮೋನುಗಳ ಬದಲಾವಣೆಗಳು ಹೃದಯ ಮತ್ತು ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತವೆ. 30 ರಿಂದ 40 ವರ್ಷ ವಯಸ್ಸಿನವರು ಪೆರಿಮೆನೋಪಾಸ್ ಮತ್ತು ಋತುಬಂಧದ ಸಮಯ. ಈ ಸಮಯದಲ್ಲಿ ಮಹಿಳೆಯರು ತೂಕ ಹೆಚ್ಚಾಗುವುದು, ನಿದ್ರಾ ಭಂಗ, ಒತ್ತಡ ಮತ್ತು ದೈಹಿಕ ಚಟುವಟಿಕೆ ಕಡಿಮೆಯಾಗುವಂತಹ ಬದಲಾವಣೆಗಳನ್ನು ಅನುಭವಿಸುತ್ತಾರೆ. ಇದು ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

30 ವರ್ಷ ವಯಸ್ಸಿನ ನಂತರ ಮಹಿಳೆಯರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಏಕೆಂದರೆ ಅವರು ವಿವಿಧ ಕೆಲಸಗಳಿಂದ ಊಟ, ನೀರು ಕುಡಿಯುವುದು ಮರೆತೇ ಬಿಡುತ್ತಾರೆ. ಇದರಿಂದ ರಕ್ತದೊತ್ತಡ, ಕೊಲೆಸ್ಟ್ರಾಲ್, ತೂಕ ಮತ್ತು ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಾಗಿ ಸಮಸ್ಯೆಗಳು ಹೆಚ್ಚಾಗುತ್ತವೆ. ಯಾವುದೇ ಲಕ್ಷಣಗಳು ಇಲ್ಲದಿದ್ದರೂ ಕೂಡ ಬೆಳೆಯುತ್ತಿರುವ ಸಮಸ್ಯೆಯ ಬಗ್ಗೆ ಸರಿಯಾದ ಸಮಯದಲ್ಲಿ ಮಾಹಿತಿಯನ್ನು ಪಡೆಯಲು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯದ ದೃಷ್ಟಿಯಲ್ಲಿ ಮಹಿಳೆಯರು ಜಾಗೃತಿಯಿಂದ ಇರಬೇಕು.  

ರಕ್ತದೊತ್ತಡ ಮತ್ತು ಅಪಧಮನಿ ಸಂಬಂಧಿತ ಸಮಸ್ಯೆಗಳನ್ನು ತಪ್ಪಿಸಲು ಸಮತೋಲಿತ ಆಹಾರವನ್ನು ಸೇವಿಸಬೇಕು. ಸಾಕಷ್ಟು ನಿದ್ರೆ ಮಾಡಬೇಕು. ಜೀರ್ಣಕ್ರಿಯೆಯ ಸಮಸ್ಯೆಗಳು ಕೂಡ ಹೆಚ್ಚಾಗುತ್ತವೆ. ನಿಯಮಿತವಾಗಿ ವ್ಯಾಯಾಮ ಮಾಡಿ ಮತ್ತು ಒತ್ತಡವನ್ನು ನಿರ್ವಹಿಸಿಕೊಂಡು ಆರೋಗ್ಯದ ಕಡೆಗೆ ಗಮನ ಇರಲೇಬೇಕು. ಇದಲ್ಲದೆ, ನಿಯತಕಾಲಿಕವಾಗಿ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳಬೇಕು.

ರಕ್ತದೊತ್ತಡ ಮತ್ತು ಅಪಧಮನಿ ಸಮಸ್ಯೆಗಳನ್ನು ನಿಯಂತ್ರಿಸಲು ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ನಿರ್ಲಕ್ಷಿಸಿದರೆ ಇದು ಹೃದಯಾಘಾತ ಅಥವ ಸ್ಟ್ರೋಕ್‌ಗೆ ಕಾರಣವಾಗಬಹುದು. ಯಾರೇ ಆಗಲಿ ಉಪ್ಪಿನ ಪ್ರಮಾಣ ಕಡಿಮೆ ಮಾಡಿ. ಆಹಾರದಲ್ಲಿ ಸೋಡಿಯಂ ಅಥವಾ ಉಪ್ಪಿನ ಬಳಕೆಯನ್ನು ದಿನದಲ್ಲಿ ಕಡಿಮೆ ಮಾಡಬೇಕು. ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ತಿನ್ನಬೇಕು. ಹಪ್ಪಳ, ಬೇಕರಿ ತಿಂಡಿಗಳು, ಉಪ್ಪಿನಕಾಯಿ ಸಂಸ್ಕರಿಸಿದ ಆಹಾರಗಳನ್ನು ಸಂಪೂರ್ಣವಾಗಿ ತಿನ್ನುವುದು ನಿಲ್ಲಿಸಬೇಕು.  

ಬಾಳೆಹಣ್ಣು, ಪಾಲಕ್‌, ಸೊಪ್ಪು, ಕಿತ್ತಳೆ ಮತ್ತು ಒಣದ್ರಾಕ್ಷಿ ಅಂತಹ ಪೊಟ್ಯಾಸಿಯಂ ಭರಿತ ಆಹಾರಗಳನ್ನು ತಿನ್ನಬೇಕು. ಇವೆಲ್ಲ ದೇಹದಿಂದ ಸೋಡಿಯಂ ಅನ್ನು ಹೊರ ಹಾಕಲು ನೆರವಾಗುತ್ತವೆ. ಇದರ ಜೊತೆಗೆ ಬಾಳೆಹಣ್ಣು, ಪಾಲಕ್‌, ಸೊಪ್ಪು, ಕಿತ್ತಳೆ ತಿನ್ನುವುದರಿಂದ ದೇಹಕ್ಕೆ ಪ್ರೋಟಿನ್‌ ಲಭ್ಯವಾಗುತ್ತದೆ. ಪ್ರೋಟಿನ್‌ನಿಂದ ದೇಹವೂ ಸಾಕಷ್ಟು ಉಲ್ಲಸಕರವಾಗಿರುತ್ತದೆ. ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್‌ ಬ್ಲಾಕ್‌ ಆಗುವುದನ್ನು ತಡೆಯಲು ಮಾಂಸ, ಕರಿದ ಮದಾರ್ಥಗಳು ಹಾಗೂ ಕೊಬ್ಬು ಇರುವ ಆಹಾರಗಳನ್ನು ಕಡಿಮೆ ಮಾಡಬೇಕು. 

Add Zee News as a Preferred Source
TAGS:
Health Tips