• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /ಟೀ ಕಪ್‌ ಮೇಲಿನ ಕಲೆ ಹೋಗ್ತಿಲ್ವಾ? ಗಂಟೆಗಟ್ಟಲೆ ಉಜ್ಜಬೇಕಿಲ್ಲ, ಈ ಸುಲಭ ಟ್ರಿಕ್ಸ್‌ ಟ್ರೈ ಮಾಡಿ!

ಟೀ ಕಪ್‌ ಮೇಲಿನ ಕಲೆ ಹೋಗ್ತಿಲ್ವಾ? ಗಂಟೆಗಟ್ಟಲೆ ಉಜ್ಜಬೇಕಿಲ್ಲ, ಈ ಸುಲಭ ಟ್ರಿಕ್ಸ್‌ ಟ್ರೈ ಮಾಡಿ!

ಚಹಾ ಕಪ್‌ನಲ್ಲಿರುವ ಹಠಮಾರಿ ಕಂದು ಕಲೆಗಳನ್ನ ಗಂಟೆಗಟ್ಟಲೆ ಉಜ್ಜುವ ಅಗತ್ಯವಿಲ್ಲ. ಬೇಕಿಂಗ್‌ ಸೋಡಾ, ಬಿಳಿ ವಿನೆಗರ್‌, ನಿಂಬೆ ಸಿಪ್ಪೆ ಅಥವಾ ಉಪ್ಪು-ನಿಂಬೆ ಮಿಶ್ರಣ ಬಳಸಿ ಕಪ್‌ಗಳನ್ನ ಸುಲಭವಾಗಿ ಸ್ವಚ್ಛಗೊಳಿಸಬಹುದು. ಚಹಾ ಕುಡಿದ ಬಳಿಕ ಕಪ್‌ ಅನ್ನ ತಕ್ಷಣ ತೊಳೆಯುವುದರಿಂದ ಕಲೆ ಗಟ್ಟಿಯಾಗುವುದನ್ನೂ ತಡೆಯಬಹುದು.

Reported ByPuttaraj K AlurEdited ByPuttaraj K Alur
Published: Sep 23, 2026, 08:50 PM IST|Updated: Sep 23, 2026, 09:00 PM IST
joinshare
ಟೀ ಕಪ್‌ ಮೇಲಿನ ಕಲೆ ಹೋಗ್ತಿಲ್ವಾ? ಗಂಟೆಗಟ್ಟಲೆ ಉಜ್ಜಬೇಕಿಲ್ಲ, ಈ ಸುಲಭ ಟ್ರಿಕ್ಸ್‌ ಟ್ರೈ ಮಾಡಿ!
Image Credit: Tea Stains Cleaning Tips

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Tea Stains Cleaning Tips: ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ಒಂದು ಕಪ್‌ ಚಹಾ ಕುಡಿಯುವುದು ಹಲವರ ದಿನಚರಿಯ ಭಾಗ. ಆದರೆ ಪದೇಪದೆ ಚಹಾ ಕುಡಿಯಲು ಬಳಸುವ ಕಪ್‌ಗಳನ್ನ ಎಷ್ಟೇ ಬಾರಿ ತೊಳೆದರೂ ಅದರ ಒಳಭಾಗದಲ್ಲಿ ಕಂದು ಬಣ್ಣದ ಕಲೆ ಅಥವಾ ಪದರ ಉಳಿದುಕೊಳ್ಳುವುದು ಸಾಮಾನ್ಯ. ವಿಶೇಷವಾಗಿ ಬಿಳಿ ಅಥವಾ ತಿಳಿ ಬಣ್ಣದ ಕಪ್‌ಗಳಲ್ಲಿ ಈ ಕಲೆಗಳು ಹೆಚ್ಚು ಸ್ಪಷ್ಟವಾಗಿ ಕಾಣುತ್ತವೆ. ಅತಿಥಿಗಳು ಮನೆಗೆ ಬಂದಾಗ ಇಂತಹ ಕಪ್‌ಗಳಲ್ಲಿ ಚಹಾ ನೀಡಲು ಮುಜುಗರವಾಗಬಹುದು. ಸಾಮಾನ್ಯವಾಗಿ ಸಾಬೂನು ಮತ್ತು ಸ್ಪಾಂಜ್‌ನಿಂದ ತೊಳೆದರೂ ಹಳೆಯ ಚಹಾ ಕಲೆಗಳು ಸುಲಭವಾಗಿ ಹೋಗುವುದಿಲ್ಲ.  

ಹಾಗಂತ ಕಪ್‌ಗಳನ್ನ ಗಂಟೆಗಟ್ಟಲೆ ಉಜ್ಜುವ ಅಗತ್ಯವಿಲ್ಲ. ಮನೆಯಲ್ಲೇ ಸಾಮಾನ್ಯವಾಗಿ ಸಿಗುವ ಕೆಲವು ವಸ್ತುಗಳನ್ನ ಬಳಸಿ ಚಹಾ ಕಲೆಗಳನ್ನ ಸ್ವಚ್ಛಗೊಳಿಸಬಹುದು. ಬೇಕಿಂಗ್‌ ಸೋಡಾ, ಬಿಳಿ ವಿನೆಗರ್‌, ನಿಂಬೆ ಸಿಪ್ಪೆ ಹಾಗೂ ಉಪ್ಪು-ನಿಂಬೆ ಮಿಶ್ರಣವನ್ನ ಬಳಸುವ ಕೆಲವು ಸರಳ ವಿಧಾನಗಳು ಕಪ್‌ ಸ್ವಚ್ಛಗೊಳಿಸಲು ಸಹಾಯ ಮಾಡಬಹುದು.

ಬೇಕಿಂಗ್‌ ಸೋಡಾದಿಂದ ಕಲೆ ತೆಗೆಯಿರಿ

ಚಹಾ ಕಪ್‌ನ ಒಳಭಾಗದಲ್ಲಿ ಕಂದು ಬಣ್ಣದ ಗಟ್ಟಿಯಾದ ಪದರ ಕಂಡುಬಂದರೆ ಬೇಕಿಂಗ್‌ ಸೋಡಾ ಬಳಸಬಹುದು. ಇದಕ್ಕಾಗಿ ಒಂದು ಅಥವಾ ಎರಡು ಟೀ ಚಮಚ ಅಡಿಗೆ ಸೋಡಾವನ್ನ ಸ್ವಲ್ಪ ನೀರಿನೊಂದಿಗೆ ಬೆರೆಸಿ ದಪ್ಪ ಪೇಸ್ಟ್‌ ತಯಾರಿಸಿಕೊಳ್ಳಿ. ಈ ಪೇಸ್ಟ್‌ ಅನ್ನ ಕಪ್‌ನ ಕಲೆ ಇರುವ ಭಾಗಕ್ಕೆ ಹಚ್ಚಿ ಕೆಲವು ಸಮಯ ಹಾಗೆಯೇ ಬಿಡಿ. ನಂತರ ಮೃದುವಾದ ಸ್ಪಾಂಜ್‌ ಬಳಸಿ ನಿಧಾನವಾಗಿ ಉಜ್ಜಿ. ಬಳಿಕ ಸ್ವಚ್ಛ ನೀರಿನಿಂದ ಕಪ್‌ ಅನ್ನ ಚೆನ್ನಾಗಿ ತೊಳೆಯಿರಿ. ಕಪ್‌ನ ಮೇಲ್ಮೈಗೆ ಗೀರು ಬೀಳದಂತೆ ಒರಟಾದ ಸ್ಕ್ರಬ್ಬರ್‌ ಬಳಸುವುದನ್ನ ತಪ್ಪಿಸುವುದು ಉತ್ತಮ.  

ಬಿಳಿ ವಿನೆಗರ್‌ ಕೂಡ ಉಪಯುಕ್ತ

ಕಪ್‌ನಲ್ಲಿರುವ ಹಳೆಯ ಕಲೆಗಳನ್ನ ತೆಗೆಯಲು ಬಿಳಿ ವಿನೆಗರ್‌ ಬಳಸಬಹುದು. ಸ್ವಲ್ಪ ಬಿಳಿ ವಿನೆಗರ್‌ ಮತ್ತು ಅದೇ ಪ್ರಮಾಣದ ನೀರನ್ನ ಕಪ್‌ಗೆ ಹಾಕಿ ಸುಮಾರು 10ರಿಂದ 20 ನಿಮಿಷಗಳ ಕಾಲ ಬಿಡಿ. ನಂತರ ಕಪ್‌ ಅನ್ನ ಚೆನ್ನಾಗಿ ತೊಳೆಯಿರಿ. ವಿನೆಗರ್‌ನ ವಾಸನೆ ಉಳಿಯದಂತೆ ನೀರಿನಿಂದ ಹಲವು ಬಾರಿ ತೊಳೆಯುವುದು ಸೂಕ್ತ. ಕಲೆ ಹೆಚ್ಚು ಗಟ್ಟಿಯಾಗಿದ್ದರೆ ಮೃದುವಾದ ಸ್ಪಾಂಜ್‌ನಿಂದ ನಿಧಾನವಾಗಿ ಸ್ವಚ್ಛಗೊಳಿಸಬಹುದು.  

ನಿಂಬೆ ಸಿಪ್ಪೆಯಿಂದಲೂ ಸ್ವಚ್ಛಗೊಳಿಸಬಹುದು

ಚಹಾ ಕುಡಿದ ನಂತರ ಉಳಿಯುವ ನಿಂಬೆ ಸಿಪ್ಪೆಯನ್ನ ಕೂಡ ಕಪ್‌ ಸ್ವಚ್ಛಗೊಳಿಸಲು ಬಳಸಬಹುದು. ನಿಂಬೆ ಸಿಪ್ಪೆಯ ಒಳಭಾಗವನ್ನ ಕಪ್‌ನ ಒಳಭಾಗದಲ್ಲಿರುವ ಕಲೆ ಮೇಲೆ ನಿಧಾನವಾಗಿ ಉಜ್ಜಬಹುದು. ಕಲೆ ಹಳೆಯದಾಗಿದ್ದರೆ ಮೊದಲು ಕಪ್‌ಗೆ ಸ್ವಲ್ಪ ನೀರು ಹಾಕಿ ಕಲೆ ಮೃದುವಾಗುವಂತೆ ಮಾಡಿ. ನಂತರ ನಿಂಬೆ ಸಿಪ್ಪೆಯಿಂದ ನಿಧಾನವಾಗಿ ಉಜ್ಜಿ, ಬಳಿಕ ನೀರಿನಿಂದ ತೊಳೆಯಿರಿ. ಹಗುರವಾದ ಅಥವಾ ಹೊಸದಾಗಿ ಬಿದ್ದಿರುವ ಕಲೆಗಳಿಗೆ ಈ ವಿಧಾನ ಪ್ರಯತ್ನಿಸಬಹುದು.  

ಉಪ್ಪು ಮತ್ತು ನಿಂಬೆ ಮಿಶ್ರಣ

ಇನ್ನೊಂದು ಸರಳ ವಿಧಾನವೆಂದರೆ ಉಪ್ಪು ಮತ್ತು ನಿಂಬೆ ರಸ. ಕೆಲವು ಹನಿ ನಿಂಬೆ ರಸಕ್ಕೆ ಸ್ವಲ್ಪ ಉಪ್ಪು ಸೇರಿಸಿ ಪೇಸ್ಟ್‌ ಮಾಡಿಕೊಳ್ಳಿ. ಈ ಮಿಶ್ರಣವನ್ನ ಕಪ್‌ನ ಕಲೆ ಇರುವ ಜಾಗಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಡಿ. ನಂತರ ಮೃದುವಾದ ಸ್ಪಾಂಜ್‌ನಿಂದ ನಿಧಾನವಾಗಿ ಉಜ್ಜಿ ಸ್ವಚ್ಛ ನೀರಿನಿಂದ ತೊಳೆಯಿರಿ. ಈ ಸಂದರ್ಭದಲ್ಲಿ ಹೆಚ್ಚು ಬಲವಾಗಿ ಉಜ್ಜುವ ಬದಲು ನಿಧಾನವಾಗಿ ಸ್ವಚ್ಛಗೊಳಿಸುವುದು ಉತ್ತಮ.  

ಕಪ್‌ನಲ್ಲಿ ಚಹಾ ಉಳಿಸಬೇಡಿ

ಚಹಾ ಕಲೆಗಳು ಪದೇಪದೆ ಗಟ್ಟಿಯಾಗದಂತೆ ಕೆಲವು ಮುನ್ನೆಚ್ಚರಿಕೆ ವಹಿಸುವುದು ಮುಖ್ಯ. ಚಹಾ ಕುಡಿದ ಬಳಿಕ ಕಪ್‌ನಲ್ಲಿ ಉಳಿದಿರುವ ಚಹಾವನ್ನ ಹೆಚ್ಚು ಸಮಯ ಹಾಗೆಯೇ ಬಿಡಬೇಡಿ. ಸಾಧ್ಯವಾದಷ್ಟು ಬೇಗ ಕಪ್‌ ಅನ್ನ ತೊಳೆದು ಒಣಗಿಸಿ. ಅದೇ ರೀತಿ ಕಪ್‌ ಸ್ವಚ್ಛಗೊಳಿಸುವಾಗ ಒರಟಾದ ತಂತಿಯ ಸ್ಕ್ರಬ್ಬರ್‌ ಬಳಸುವುದನ್ನ ತಪ್ಪಿಸಿ. ಇವು ಕಪ್‌ನ ಮೇಲ್ಮೈಗೆ ಗೀರು ಉಂಟುಮಾಡಬಹುದು. ಮೃದುವಾದ ಸ್ಪಾಂಜ್‌ ಬಳಸಿ ಸ್ವಚ್ಛಗೊಳಿಸುವುದು ಉತ್ತಮ.  

ಹೀಗೆ ಮನೆಯಲ್ಲೇ ಸಿಗುವ ಸರಳ ಪದಾರ್ಥಗಳನ್ನ ಬಳಸಿ ಚಹಾ ಕಪ್‌ಗಳಲ್ಲಿನ ಕಲೆಗಳನ್ನ ಸ್ವಚ್ಛಗೊಳಿಸಲು ಪ್ರಯತ್ನಿಸಬಹುದು. ಕಪ್‌ನ ವಸ್ತು ಮತ್ತು ಮೇಲ್ಮೈಗೆ ಸೂಕ್ತವಾದ ವಿಧಾನವನ್ನೇ ಆಯ್ಕೆ ಮಾಡುವುದು ಮುಖ್ಯ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ತಜ್ಞ ಮೂಲಗಳ ಮಾಹಿತಿಯನ್ನ ಆಧರಿಸಿದೆ. ಇದನ್ನ Zee Kannada News ದೃಢಪಡಿಸುವುದಿಲ್ಲ. ಇಲ್ಲಿನ ಸಲಹೆಗಳನ್ನ ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ.)

Add Zee News as a Preferred Source
TAGS:
Health Tips
Kannada News