SOCIAL MEDIA

Newsletter

PARTNER SITES
Select Language Select State

₹7.84 ಲಕ್ಷಕ್ಕೆ ಹೊಸ 7-ಸೀಟರ್ ಕಾರು! ಟರ್ಬೋ ಎಂಜಿನ್‌ನೊಂದಿಗೆ Renault Triber; ಏನೇನು ಫೀಚರ್ಸ್‌?

ರೆನೋ ಕಂಪನಿ ಹೊಸ Triber Turbo 7-ಸೀಟರ್ ಕಾರನ್ನ ₹7.84 ಲಕ್ಷ ಎಕ್ಸ್‌-ಶೋರೂಂ ಆರಂಭಿಕ ಬೆಲೆಗೆ ಬಿಡುಗಡೆ ಮಾಡಿದೆ. ಇದರಲ್ಲಿ 1.0 ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್‌ 100 PS ಪವರ್ ಮತ್ತು 180 Nm ಟಾರ್ಕ್ ನೀಡುತ್ತದೆ. 5-ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್‌, 8-ಇಂಚಿನ ಟಚ್‌ಸ್ಕ್ರೀನ್‌, 6 ಏರ್‌ಬ್ಯಾಗ್‌ಗಳು ಸೇರಿದಂತೆ ಹಲವು ಫೀಚರ್ಸ್‌ ಹೊಂದಿದೆ. ಹೊಸ Triber Turboವನ್ನ ಮೂರು ವೇರಿಯಂಟ್‌ಗಳಲ್ಲಿ ಪರಿಚಯಿಸಲಾಗಿದೆ.

Written By Puttaraj K Alur
Published: Sep 30, 2026, 04:56 PM IST | Updated: Sep 30, 2026, 07:01 PM IST
Image Credit: Renault Triber Turbo
Join

Renault Triber Turbo Price: ಕಡಿಮೆ ಬೆಲೆಯಲ್ಲಿ 7 ಸೀಟರ್‌ ಕಾರು ಖರೀದಿಸಲು ಬಯಸುವವರಿಗೆ ರೆನೋ ಕಂಪನಿ ಹೊಸ ಆಯ್ಕೆಯನ್ನ ಪರಿಚಯಿಸಿದೆ. ತನ್ನ ಜನಪ್ರಿಯ Renault Triber ಕಾರಿನ ಟರ್ಬೋ-ಪೆಟ್ರೋಲ್ ಆವೃತ್ತಿಯನ್ನ ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ Triber Turbo ಕಾರಿನ ಆರಂಭಿಕ ಎಕ್ಸ್‌-ಶೋರೂಂ ಬೆಲೆ ₹7.84 ಲಕ್ಷ ಎಂದು ನಿಗದಿಪಡಿಸಲಾಗಿದೆ. ಟರ್ಬೋ ಎಂಜಿನ್‌ನೊಂದಿಗೆ ಕಾರಿನ ಕಾರ್ಯಕ್ಷಮತೆಯನ್ನ ಹೆಚ್ಚಿಸುವುದು ಈ ಹೊಸ ಆವೃತ್ತಿಯ ಪ್ರಮುಖ ಬದಲಾವಣೆಯಾಗಿದೆ.  

ಮೂರು ವೇರಿಯಂಟ್‌ಗಳಲ್ಲಿ ಟರ್ಬೋ ಎಂಜಿನ್

Renault Triber Turboವನ್ನ ಕಂಪನಿಯು Evolution, Techno ಮತ್ತು Emotion ವೇರಿಯಂಟ್‌ಗಳಲ್ಲಿ ನೀಡುತ್ತಿದೆ. ಮೂಲ Authentic ವೇರಿಯಂಟ್‌ನಲ್ಲಿ ಟರ್ಬೋ ಎಂಜಿನ್ ಆಯ್ಕೆ ಲಭ್ಯವಿಲ್ಲ. ಟರ್ಬೋ ಮಾದರಿಗಳ ಬೆಲೆ ಕ್ರಮವಾಗಿ ₹7.84 ಲಕ್ಷದಿಂದ ಆರಂಭವಾಗಿ ಗರಿಷ್ಠ ₹8.99 ಲಕ್ಷ ಎಕ್ಸ್‌-ಶೋರೂಂವರೆಗೆ ಇದೆ. ಕಂಪನಿಯು ₹11,000 ಟೋಕನ್ ಮೊತ್ತಕ್ಕೆ ಬುಕ್ಕಿಂಗ್‌ ಆರಂಭಿಸಿದೆ ಎಂದು ವರದಿಯಾಗಿದೆ. Triber Turbo Evolution ಬೆಲೆ ₹7.84 ಲಕ್ಷ, Techno Turbo ₹8.53 ಲಕ್ಷ ಮತ್ತು Emotion Turbo ₹8.99 ಲಕ್ಷ ಎಂದು ತಿಳಿಸಲಾಗಿದೆ. ಇವು ಪರಿಚಯಾತ್ಮಕ ಎಕ್ಸ್‌-ಶೋರೂಂ ಬೆಲೆಗಳಾಗಿವೆ.  

1.0 ಲೀಟರ್ ಟರ್ಬೋ ಎಂಜಿನ್

ಹೊಸ Renault Triber Turboನಲ್ಲಿ 1.0 ಲೀಟರ್, ಮೂರು ಸಿಲಿಂಡರ್ ಟರ್ಬೋ-ಪೆಟ್ರೋಲ್ ಎಂಜಿನ್ ನೀಡಲಾಗಿದೆ. ಈ ಎಂಜಿನ್ ಗರಿಷ್ಠ 100 PS ಪವರ್ ಮತ್ತು 180 Nm ಟಾರ್ಕ್ ಉತ್ಪಾದಿಸುತ್ತದೆ. ಇದು ಈಗಿರುವ 1.0 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ಗಿಂತ ಹೆಚ್ಚು ಪವರ್ ಮತ್ತು ಟಾರ್ಕ್ ಹೊಂದಿದೆ. ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ 72 PS ಪವರ್ ಮತ್ತು 96 Nm ಟಾರ್ಕ್ ನೀಡುತ್ತದೆ. ಹೊಸ ಟರ್ಬೋ ಎಂಜಿನ್‌ಗೆ ಸದ್ಯ 5-ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ. ಆಟೋಮ್ಯಾಟಿಕ್ ಆವೃತ್ತಿಯ ಕುರಿತು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಬರಬಹುದು ಎಂದು ವರದಿಗಳು ತಿಳಿಸಿವೆ.

7 ಜನರ ಪ್ರಯಾಣಕ್ಕೆ ಸೂಕ್ತ

Triberನ ಪ್ರಮುಖ ಆಕರ್ಷಣೆ ಅದರ 7-ಸೀಟರ್ ಲೇಔಟ್ ಮತ್ತು ಫ್ಲೆಕ್ಸಿಬಲ್ ಕ್ಯಾಬಿನ್. ಕುಟುಂಬದ ಪ್ರಯಾಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಒಳಾಂಗಣ ವಿನ್ಯಾಸ ಮಾಡಲಾಗಿದೆ. ಟರ್ಬೋ ಮಾದರಿಯಲ್ಲೂ ಇದೇ 7-ಸೀಟರ್ ವ್ಯವಸ್ಥೆ ಮುಂದುವರಿದಿದೆ. ಕಾರಿನ ವಿನ್ಯಾಸ ಮತ್ತು ಒಳಾಂಗಣದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿಲ್ಲ. ಬದಲಾಗಿ ಹೊಸ ಎಂಜಿನ್ ಮೂಲಕ ಕಾರ್ಯಕ್ಷಮತೆಯನ್ನ ಹೆಚ್ಚಿಸುವತ್ತ ಕಂಪನಿ ಗಮನಹರಿಸಿದೆ. ವಿಶೇಷವಾಗಿ ಕಾರಿನಲ್ಲಿ ಏಳು ಜನರು ಪ್ರಯಾಣಿಸುವಾಗ ಅಥವಾ ಹೆದ್ದಾರಿಯಲ್ಲಿ ಚಾಲನೆ ಮಾಡುವಾಗ ಹೆಚ್ಚಿನ ಟಾರ್ಕ್ ನೆರವಾಗುವ ನಿರೀಕ್ಷೆಯಿದೆ.  

ಆಧುನಿಕ ಫೀಚರ್ಸ್‌ಗಳೇನು?

Renault Triber Turboನಲ್ಲಿ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ವೈರ್‌ಲೆಸ್ Android Auto ಮತ್ತು Apple CarPlay, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 7 ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್ ಸೇರಿದಂತೆ ಹಲವು ಫೀಚರ್ಸ್‌ಗಳಿವೆ. ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ಆರ್ಮ್‌ರೆಸ್ಟ್ ಕೂಡ ಲಭ್ಯವಿದೆ.

ಸುರಕ್ಷತೆಗೂ ಆದ್ಯತೆ

ಸುರಕ್ಷತಾ ಫೀಚರ್ಸ್‌ಗಳಲ್ಲೂ Triber Turbo ಗಮನ ಸೆಳೆಯುತ್ತದೆ. ಕಾರಿನಲ್ಲಿ 6 ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು, ರೇನ್‌ ಸೆನ್ಸಿಂಗ್ ವೈಪರ್‌ಗಳು, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು ಹಾಗೂ ISOFIX ಚೈಲ್ಡ್ ಸೀಟ್ ಮೌಂಟ್‌ಗಳನ್ನ ನೀಡಲಾಗಿದೆ. ನ್ಯಾಚುರಲಿ ಆಸ್ಪಿರೇಟೆಡ್ Triberನಲ್ಲಿ ಡೀಲರ್-ಫಿಟೆಡ್ CNG ಕಿಟ್ ಆಯ್ಕೆ ಇರುವುದಾದರೂ, ಟರ್ಬೋ ಆವೃತ್ತಿಯಲ್ಲಿ ಸದ್ಯ CNG ಆಯ್ಕೆ ಲಭ್ಯವಿಲ್ಲವೆಂದು ವರದಿಯಾಗಿದೆ.  

ಒಟ್ನಲ್ಲಿ 7 ಜನರ ಕುಟುಂಬ ಪ್ರಯಾಣಕ್ಕೆ ಹೆಚ್ಚು ಸ್ಥಳಾವಕಾಶದ ಜೊತೆಗೆ ಹೆಚ್ಚಿನ ಪವರ್ ಬಯಸುವ ಗ್ರಾಹಕರನ್ನ ಗಮನದಲ್ಲಿಟ್ಟುಕೊಂಡು Renault Triber Turbo ಪರಿಚಯಿಸಲಾಗಿದೆ. ₹7.84 ಲಕ್ಷ ಆರಂಭಿಕ ಎಕ್ಸ್‌-ಶೋರೂಂ ಬೆಲೆಯೊಂದಿಗೆ ಈ ಕಾರು ಮಾರುಕಟ್ಟೆಯಲ್ಲಿ ಹೊಸ ಆಯ್ಕೆಯಾಗಿ ಕಾಣಿಸಿಕೊಂಡಿದೆ.  

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES