• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /6300mAh ಬ್ಯಾಟರಿ, 120Hz ಡಿಸ್‌ಪ್ಲೇ: ₹6,500 ಕಡಿಮೆ ಬೆಲೆಗೆ Poco 5G ಸ್ಮಾರ್ಟ್‌ಫೋನ್‌!

6300mAh ಬ್ಯಾಟರಿ, 120Hz ಡಿಸ್‌ಪ್ಲೇ: ₹6,500 ಕಡಿಮೆ ಬೆಲೆಗೆ Poco 5G ಸ್ಮಾರ್ಟ್‌ಫೋನ್‌!

Poco C85x 5G ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ₹6,500ವರೆಗೆ ರಿಯಾಯಿತಿಯೊಂದಿಗೆ ₹14,499 ಆರಂಭಿಕ ಬೆಲೆಗೆ ಲಭ್ಯವಿದೆ. 6300mAh ಬ್ಯಾಟರಿ, 120Hz ಡಿಸ್‌ಪ್ಲೇ, 32MP ಕ್ಯಾಮೆರಾ ಮತ್ತು 5G ಸಂಪರ್ಕ ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ. ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ₹1,000 ವರೆಗೆ ಹೆಚ್ಚುವರಿ ರಿಯಾಯಿತಿಯೂ ಲಭ್ಯವಿದೆ.

Written ByPuttaraj K Alur
Published: Sep 28, 2026, 04:49 PM IST|Updated: Sep 28, 2026, 05:06 PM IST
joinshare
6300mAh ಬ್ಯಾಟರಿ, 120Hz ಡಿಸ್‌ಪ್ಲೇ: ₹6,500 ಕಡಿಮೆ ಬೆಲೆಗೆ Poco 5G ಸ್ಮಾರ್ಟ್‌ಫೋನ್‌!
Image Credit: Poco C85x 5G

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Poco C85x 5G Smartphone: ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರಿಗೆ ಪೊಕೊ ಕಂಪನಿಯ ಬಜೆಟ್ ಸ್ನೇಹಿ 5G ಸ್ಮಾರ್ಟ್‌ಫೋನ್ ಗಮನ ಸೆಳೆಯುತ್ತಿದೆ. ದೊಡ್ಡ ಬ್ಯಾಟರಿ, 120Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನ ಹೊಂದಿರುವ Poco C85x 5G ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಭಾರೀ ರಿಯಾಯಿತಿ ಬೆಲೆಗೆ ಲಭ್ಯವಿದೆ. ಫೋನ್‌ನ ಮೂಲ ಬೆಲೆಗೆ ಹೋಲಿಸಿದರೆ ಬರೋಬ್ಬರಿ ₹6,500 ವರೆಗೆ ಕಡಿಮೆ ಬೆಲೆಗೆ ಖರೀದಿಸುವ ಅವಕಾಶವಿದೆ. ಬ್ಯಾಂಕ್ ಆಫರ್‌ಗಳ ಮೂಲಕ ಹೆಚ್ಚುವರಿ ರಿಯಾಯಿತಿಯೂ ಸಿಗಲಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಎಷ್ಟು ಬೆಲೆಗೆ ಲಭ್ಯ?

ಪೊಕೊ C85x 5G ಸ್ಮಾರ್ಟ್‌ಫೋನ್ ಅನ್ನ ಫ್ಲಿಪ್‌ಕಾರ್ಟ್‌ನಲ್ಲಿ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಪಟ್ಟಿ ಮಾಡಲಾಗಿದೆ. 4GB RAM ಮತ್ತು 64GB ಸ್ಟೋರೇಜ್ ಮಾದರಿಯ ಪಟ್ಟಿ ಬೆಲೆ ₹20,999 ಆಗಿದ್ದರೆ, 4GB RAM ಮತ್ತು 128GB ಸ್ಟೋರೇಜ್ ಮಾದರಿಯ ಬೆಲೆ ₹21,999 ಆಗಿದೆ. ಆದರೆ ಆನ್‌ಲೈನ್ ಮಾರಾಟದಲ್ಲಿ ಈ ಫೋನ್ ₹14,499 ಆರಂಭಿಕ ಬೆಲೆಗೆ ಲಭ್ಯವಿದೆ. ಅಂದರೆ ಮೂಲ ಬೆಲೆಗೆ ಹೋಲಿಸಿದರೆ ₹6,500ವರೆಗೆ ಬೆಲೆ ಕಡಿತವಾಗಿದ್ದು, ಗ್ರಾಹಕರು ಕಡಿಮೆ ದರದಲ್ಲಿ ಫೋನ್ ಖರೀದಿಸಬಹುದು.

ಇದರ ಜೊತೆಗೆ ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸುವ ಗ್ರಾಹಕರಿಗೆ ₹1,000ವರೆಗೆ ಹೆಚ್ಚುವರಿ ಬ್ಯಾಂಕ್ ರಿಯಾಯಿತಿ ಸಿಗುವ ಸಾಧ್ಯತೆಯಿದೆ. ಇದರಿಂದ ಫೋನ್ ಖರೀದಿಯ ಒಟ್ಟು ವೆಚ್ಚ ಮತ್ತಷ್ಟು ಕಡಿಮೆಯಾಗಬಹುದು. ಆದರೆ ಬ್ಯಾಂಕ್ ಆಫರ್‌ಗಳು, ಲಭ್ಯವಿರುವ ಬಣ್ಣಗಳು, ಸ್ಟಾಕ್ ಮತ್ತು ಅಂತಿಮ ಮಾರಾಟದ ಬೆಲೆಗಳು ಖರೀದಿಸುವ ಸಮಯದಲ್ಲಿ ಬದಲಾಗಬಹುದು. ಆದ್ದರಿಂದ ಆರ್ಡರ್ ಮಾಡುವ ಮೊದಲು ಫ್ಲಿಪ್‌ಕಾರ್ಟ್‌ನಲ್ಲಿ ತೋರಿಸುವ ಅಂತಿಮ ಬೆಲೆಯನ್ನ ಪರಿಶೀಲಿಸುವುದು ಅಗತ್ಯ.

6.9 ಇಂಚಿನ ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್

Poco C85x 5G ಫೋನ್‌ನ ಪ್ರಮುಖ ವೈಶಿಷ್ಟ್ಯಗಳಲ್ಲಿ ಅದರ ದೊಡ್ಡ ಡಿಸ್‌ಪ್ಲೇ ಕೂಡ ಒಂದು. ಈ ಸ್ಮಾರ್ಟ್‌ಫೋನ್ 6.9 ಇಂಚಿನ LCD ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್‌ಗೆ ಬೆಂಬಲ ನೀಡುತ್ತದೆ. 120Hz ರಿಫ್ರೆಶ್ ರೇಟ್‌ನಿಂದ ಸ್ಕ್ರೋಲಿಂಗ್, ಮೆನುಗಳ ನಡುವೆ ಚಲಿಸುವುದು ಮತ್ತು ಬೆಂಬಲಿತ ಗೇಮ್‌ಗಳನ್ನ ಆಡುವಾಗ ಪರದೆಯ ಚಲನೆ ಹೆಚ್ಚು ಸರಾಗವಾಗಿ ಕಾಣಿಸಬಹುದು. 

ದೊಡ್ಡ ಪರದೆಯ ಕಾರಣದಿಂದ ವಿಡಿಯೋ ವೀಕ್ಷಣೆ, ಸಾಮಾಜಿಕ ಜಾಲತಾಣಗಳ ಬಳಕೆ ಮತ್ತು ಆನ್‌ಲೈನ್ ವಿಷಯಗಳನ್ನ ಓದಲು ಅನುಕೂಲವಾಗಲಿದೆ. ಈ ಫೋನ್‌ನಲ್ಲಿ Unisoc T8300 ಪ್ರೊಸೆಸರ್ ನೀಡಲಾಗಿದೆ. 4GB RAM ಜೊತೆಗೆ 128GB ವರೆಗೆ ಆಂತರಿಕ ಸ್ಟೋರೇಜ್ ಆಯ್ಕೆ ಲಭ್ಯವಿದೆ. ದಿನನಿತ್ಯದ ಕರೆ, ಮೆಸೇಜ್, ಇಂಟರ್‌ನೆಟ್ ಬ್ರೌಸಿಂಗ್ ಮತ್ತು ಸಾಮಾನ್ಯ ಆ್ಯಪ್‌ಗಳ ಬಳಕೆಗೆ ಅಗತ್ಯವಿರುವ ಹಾರ್ಡ್‌ವೇರ್ ವೈಶಿಷ್ಟ್ಯಗಳನ್ನ ಇದು ಹೊಂದಿದೆ.

6300mAh ಬ್ಯಾಟರಿ, 18W ಫಾಸ್ಟ್ ಚಾರ್ಜಿಂಗ್

ಈ ಸ್ಮಾರ್ಟ್‌ಫೋನ್‌ನ ಮತ್ತೊಂದು ಪ್ರಮುಖ ಆಕರ್ಷಣೆ 6300mAh ಸಾಮರ್ಥ್ಯದ ಬ್ಯಾಟರಿ. ಹೆಚ್ಚು ಸಮಯ ಫೋನ್ ಬಳಸುವವರಿಗೆ ದೊಡ್ಡ ಬ್ಯಾಟರಿ ಅನುಕೂಲವಾಗಲಿದೆ. ವಿಡಿಯೋ ವೀಕ್ಷಣೆ, ಇಂಟರ್‌ನೆಟ್ ಬ್ರೌಸಿಂಗ್ ಮತ್ತು ದಿನನಿತ್ಯದ ಬಳಕೆಯಲ್ಲಿ ಬ್ಯಾಟರಿ ಬ್ಯಾಕಪ್ ಮುಖ್ಯವಾಗಿರುವವರಿಗೆ ಈ ವೈಶಿಷ್ಟ್ಯ ಗಮನಾರ್ಹವಾಗಿದೆ.

ಫೋನ್ 18W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದ್ದು, 7.5W ರಿವರ್ಸ್ ಚಾರ್ಜಿಂಗ್ ಸೌಲಭ್ಯವನ್ನೂ ನೀಡುತ್ತದೆ. ರಿವರ್ಸ್ ಚಾರ್ಜಿಂಗ್ ಮೂಲಕ ಹೊಂದಾಣಿಕೆಯ ಇತರ ಸಾಧನಗಳಿಗೆ ಫೋನ್‌ನಿಂದಲೇ ವಿದ್ಯುತ್ ಪೂರೈಸಬಹುದು.

ಆಂಡ್ರಾಯ್ಡ್ 16 ಆಧಾರಿತ HyperOS

Poco C85x 5G ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 16 ಆಧಾರಿತ HyperOS ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಬಳಕೆದಾರರಿಗೆ ವೈಯಕ್ತಿಕಗೊಳಿಸಿದ ಹಲವು ಸಾಫ್ಟ್‌ವೇರ್ ವೈಶಿಷ್ಟ್ಯಗಳು ಲಭ್ಯವಾಗುತ್ತವೆ. ಕಂಪನಿಯು ಈ ಫೋನ್‌ಗೆ ಎರಡು ವರ್ಷಗಳ ಆಪರೇಟಿಂಗ್ ಸಿಸ್ಟಮ್ ಅಪ್‌ಡೇಟ್‌ಗಳು ಮತ್ತು ಮೂರು ವರ್ಷಗಳ ಭದ್ರತಾ ಅಪ್‌ಡೇಟ್‌ಗಳನ್ನ ಒದಗಿಸುವುದಾಗಿ ತಿಳಿಸಿದೆ. ಇದರಿಂದ ಫೋನ್ ಖರೀದಿಸಿದ ನಂತರವೂ ನಿರ್ದಿಷ್ಟ ಅವಧಿಯವರೆಗೆ ಸಾಫ್ಟ್‌ವೇರ್ ಮತ್ತು ಭದ್ರತಾ ಬೆಂಬಲ ಸಿಗಲಿದೆ.

32MP ಕ್ಯಾಮೆರಾ, 8MP ಸೆಲ್ಫಿ ಕ್ಯಾಮೆರಾ

ಫೋಟೋಗ್ರಫಿಗಾಗಿ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 32MP ಮುಖ್ಯ ಕ್ಯಾಮೆರಾ ನೀಡಲಾಗಿದೆ. ಇದರೊಂದಿಗೆ ಸೆಕೆಂಡರಿ ಕ್ಯಾಮೆರಾ ಮತ್ತು LED ಫ್ಲ್ಯಾಷ್ ಸೌಲಭ್ಯವಿದೆ. ಕ್ಯಾಮೆರಾದಲ್ಲಿ AI ಆಧಾರಿತ ವೈಶಿಷ್ಟ್ಯಗಳಿದ್ದು, ಫೋಟೋಗಳನ್ನ ಸೆರೆಹಿಡಿಯಲು ಸಹಾಯ ಮಾಡುತ್ತವೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ನೀಡಲಾಗಿದೆ.

ಖರೀದಿಸುವ ಮುನ್ನ ಗಮನಿಸಿ

ಒಟ್ನಲ್ಲಿ Poco C85x 5G ಫೋನ್ ದೊಡ್ಡ ಬ್ಯಾಟರಿ, 120Hz ಡಿಸ್‌ಪ್ಲೇ ಮತ್ತು 5G ಸಂಪರ್ಕದಂತಹ ವೈಶಿಷ್ಟ್ಯಗಳನ್ನ ಒಳಗೊಂಡಿದೆ. ₹14,499 ಆರಂಭಿಕ ಬೆಲೆ ಮತ್ತು ಬ್ಯಾಂಕ್ ರಿಯಾಯಿತಿ ಲಭ್ಯವಿದ್ದರೆ, ಬಜೆಟ್‌ನಲ್ಲಿ 5G ಫೋನ್ ಹುಡುಕುತ್ತಿರುವ ಗ್ರಾಹಕರಿಗೆ ಇದು ಗಮನಿಸಬಹುದಾದ ಆಯ್ಕೆಯಾಗಿದೆ. ಆದರೆ ಖರೀದಿಸುವ ಮುನ್ನ ಫ್ಲಿಪ್‌ಕಾರ್ಟ್‌ನಲ್ಲಿನ ಇತ್ತೀಚಿನ ಬೆಲೆ, ಬ್ಯಾಂಕ್ ಆಫರ್‌ಗಳ ನಿಯಮಗಳು ಮತ್ತು ಫೋನ್‌ನ ನಿಖರವಾದ ಸ್ಟೋರೇಜ್ ರೂಪಾಂತರವನ್ನ ಪರಿಶೀಲಿಸಬೇಕು.

Add Zee News as a Preferred Source
TAGS:
Tech
Kannada News