SOCIAL MEDIA

Newsletter

PARTNER SITES
Select Language Select State

ಕಿಡ್ನಿ ವೈಫಲ್ಯದಿಂದ ಸಾವು-ಬದುಕಿನ ನಡುವೆ ಹೋರಾಟ.. ಹಂದಿಯಿಂದಲೇ ವ್ಯಕ್ತಿಗೆ ಹೊಸ ಜೀವನ

ಹಂದಿಯ ಮೂತ್ರಪಿಂಡವನ್ನು ಮಾನವನ ಪ್ರತಿರಕ್ಷಣಾ ವ್ಯವಸ್ಥೆಯು ತಿರಸ್ಕರಿಸದಂತೆ ತೆಡೆಯುವುದು ಮತ್ತು ದೇಹದೊಂದಿಗೆ ಅಧಿಕ ಹೊಂದಾಣಿಕೆಯನ್ನು ಸಾಧಿಸುವುದು ಆಗಿದೆ. ಹಂದಿಯ ವೈರಸ್‌ಗಳು ಮನುಷ್ಯನಿಗೆ ಅಪಾಯ ಉಂಟು ಮಾಡುವುದು ಸಾಮಾನ್ಯ.

Reported By Bhimappa Written By Bhimappa
Published: Sep 15, 2026, 11:09 AM IST | Updated: Sep 17, 2026, 02:42 PM IST
Image Credit: File Photo
Join

ಕಿಡ್ನಿ ವೈಫಲ್ಯ ಅಥವಾ ಮೂತ್ರಪಿಂಡದ ವೈಫಲ್ಯ ಎಂದು ನಾವು ಆಗಾಗ ಕೇಳುತ್ತಿರುತ್ತವೆ. ಅದರಲ್ಲಿ ಪತ್ರಿಕೆ, ಮಾಧ್ಯಮಗಳ ಆರೋಗ್ಯದ ಕಾಲಂಗಳಲ್ಲಿ ಈ ಕಿಡ್ನಿ ವೈಫಲ್ಯ ಕುರಿತು ಅಥವಾ ಕಿಡ್ನಿ ಬಗ್ಗೆ ಮಾಹಿತಿಗಳನ್ನು ತಿಳಿದುಕೊಂಡಿರುತ್ತವೆ. ಮನುಷ್ಯನ ದೇಹದಲ್ಲಿರುವ ಈ ಕಿಡ್ನಿಗಳು ರಕ್ತದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವಗಳನ್ನು ಹೊರ ಹಾಕುವ ತಮ್ಮ ಸಾಮರ್ಥ್ಯವನ್ನು ಕಳೆದುಕೊಂಡಾಗ, ರಕ್ತದ ತ್ಯಾಜ್ಯ ಮತ್ತು ಕೆಟ್ಟ ದ್ರವಗಳನ್ನು ದೇಹದಿಂದ ಹೊರ ಹಾಕದೇ ಇದ್ದಾಗ ಗಂಭೀರವಾದ ಆರೋಗ್ಯ ಸಮಸ್ಯೆ ನಿಮಗೆ ಎದುರಾಗುತ್ತದೆ. ಸಿಂಪಲ್‌ ಆಗಿ ಹೇಳುವುದೆಂದರೆ, ರಕ್ತದ ತ್ಯಾಜ್ಯವನ್ನು ಸರಿಯಾಗಿ ಫಿಲ್ಟರ್‌ ಮಾಡಲು ಕಿಡ್ನಿಗಳು ವಿಫಲವಾದಗ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಈಗ ಈ ಮೂತ್ರಪಿಂಡಗಳ ಕುರಿತು ಯಾಕೆ ಹೇಳುತ್ತಿದ್ದೇವೆ ಎಂದರೆ, ಇಲ್ಲೊಬ್ಬರು ಮೂತ್ರಪಿಂಡಗಳ ಅನಾರೋಗ್ಯದಿಂದ ಬಳಲುವಾಗ ಹಂದಿಯಿಂದ ಜೀವ ಉಳಿಸಿಕೊಂಡಿದ್ದಾರೆ.

ಹಂದಿಯಿಂದ ಜೀವ ಹೇಗೆ ಉಳಿಸಿಕೊಂಡ ಎನ್ನುವುದು ನಿಮ್ಮ ಪ್ರಶ್ನೆ ಆಗಬಹುದು. ಈ ಕುರಿತ ವಿವರವಾದ ಮಾಹಿತಿ ಇಲ್ಲಿ ನೀಡಲಾಗಿದೆ. ಒಮ್ಮೆ ಕಣ್ಣಾಡಿಸಿ ಓದಿದರೆ ವೈಧ್ಯಕೀಯ ಕ್ರೇತ್ರ ಎಷ್ಟೊಂದು ವೇಗವಾಗಿ, ನಿಖರವಾಗಿ ಅಭಿವೃದ್ಧಿ ಹೊಂದಿದೆ ಎಂಬುದು ಇದರಿಂದ ತಿಳಿದು ಬರುತ್ತದೆ. ಮೂತ್ರಪಿಂಡಗಳು ವೈಫಲ್ಯವಾದಾಗ ಆಸ್ಪತ್ರೆಯಲ್ಲಿ ವೈದ್ಯರು ಆ ವ್ಯಕ್ತಿಯನ್ನು ಹೇಗೆ ಕಾಪಾಡಿಕೊಂಡು, ಏನೆಲ್ಲ ಮಾಡಿದರು, ಎಷ್ಟು ತಿಂಗಳುಗಳ ಕಾಲ ಬೆಡ್‌ ಮೇಲೆ ಇದ್ದರು ಎನ್ನುವ ಸಂಪೂರ್ಣವಾದ ಮಾಹಿತಿ ಇಲ್ಲಿ ಕ್ರೋಡಿಕರಿಸಲಾಗಿದೆ.

ಟಿಮ್‌ ಆಂಡ್ರ್ಯೂಸ್‌ ಎನ್ನುವ 66 ವರ್ಷದ ವೃದ್ಧ ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌ (New Hampshire) ನಿವಾಸಿ ಆಗಿದ್ದಾರೆ. ಟಿಮ್‌ ಆಂಡ್ರ್ಯೂಸ್‌ ಅವರು ಟೈಪ್‌ 2 ಮಧುಮೇಹಕ್ಕೆ ಸಂಬಂಧಿಸಿದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಟಿಮ್‌ ಆಂಡ್ರ್ಯೂಸ್‌ ಅವರಿಗೆ ಮುಂದಿನ ಐದು ವರ್ಷಗಳಲ್ಲಿ ಮನುಷ್ಯನ ಕಿಡ್ನಿ ಅಥವಾ ಮೂತ್ರಪಿಂಡ ಸಿಗುವ ಸಾಧ್ಯತೆ ಕೇವಲ ಶೇಕಡಾ 9 ರಷ್ಟು ಮಾತ್ರ ಇತ್ತು. ಇಂತಹ ಕಷ್ಟದ ಸಮಯದಲ್ಲಿ ಮ್ಯಾಸಚೂಸೆಟ್ಸ್‌ನ ಪ್ರಮುಖ ಆರೋಗ್ಯ ಸಂಸ್ಥೆಯಾದ ಮಾಸ್‌ ಜನರಲ್‌ ಬ್ರಿಗ್ಹ್ಯಾಮ್‌ (Mass General Brigham) ನ ಡಾಕ್ಟರ್‌ಗಳು ಕಳೆದ ವರ್ಷ ಅಂದರೆ 2025 ಜನವರಿಯಲ್ಲಿ ಯಶಸ್ವಿಯಾದ ಕಸಿ ಚಿಕಿತ್ಸೆಯನ್ನು ಮಾಡಿದರು.  

ಯುಕಾಟನ್‌ ಚಿಕಣಿ ಹಂದಿಯ ಮೂತ್ರಪಿಂಡವನ್ನು ಡಾಕ್ಟರ್‌ಗಳು ಪಡೆದುಕೊಂಡರು. ವಿಲ್ಮಾ ಎಂಬ ಹೆಸರಿನ ಅನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಮೂತ್ರಪಿಂಡ ಇದಾಗಿದೆ. ಇದನ್ನು ಟಿಮ್‌ ಆಂಡ್ರ್ಯೂಸ್‌ ಅವರಿಗೆ ಯಶಸ್ವಿಯಾಗಿ ಕಸಿ ಮಾಡಲಾಯಿತು. ಈ ಹಂದಿಯ ಮೂತ್ರಪಿಂಡವು ಟಿಮ್‌ ಆಂಡ್ರ್ಯೂಸ್‌ ಅವರ ದೇಹದಲ್ಲಿ ಅಂಗವು ವಿಫಲಗೊಳ್ಳಲು ಪ್ರಾರಂಭಿಸುವ ಮೊದಲು ಸತತವಾಗಿ 271 ಅಂದರೆ ಒಂಬತ್ತು ತಿಂಗಳುಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿತು.

ಒಂಬತ್ತು ತಿಂಗಳುಗಳ ನಂತರ ಆಂಡ್ರ್ಯೂಸ್‌ ಅವರಿಗೆ ಮೃತ ದಾನಿಯಿಂದ ಪಡೆದಂತಹ ಮತ್ತೊಂದು ಮೂತ್ರಪಿಂಡವನ್ನು ಯಶಸ್ವಿಯಾಗಿ ವೈದ್ಯರು ಕಸಿ ಮಾಡಿದರು. ಆಂಡ್ರ್ಯೂಸ್‌ ಅವರಿಗೆ ಹಂದಿಯ ಮೂತ್ರಪಿಂಡವನ್ನು ಕಸಿ ಮಾಡುವುದಕ್ಕೂ ಮೊದಲು ವಿಲ್ಮಾಳ್‌ ಜೀನೋಮ್‌ನಲಲಿ ಬರೋಬ್ಬರಿ 69 ಆನುವಂಶಿಕ ಸಂಪಾದನೆಗಳನ್ನು ಅಂದರೆ ಜೆನೆಟಿಕ್‌ ಎಡಿಟ್ಸ್‌ ಮಾಡಲಾಗಿತ್ತು. ಹಂದಿಯ ಮೂತ್ರಪಿಂಡವನ್ನು ಮಾನವನ ಪ್ರತಿರಕ್ಷಣಾ ವ್ಯವಸ್ಥೆಯು ತಿರಸ್ಕರಿಸದಂತೆ ತೆಡೆಯುವುದು ಮತ್ತು ದೇಹದೊಂದಿಗೆ ಅಧಿಕ ಹೊಂದಾಣಿಕೆಯನ್ನು ಸಾಧಿಸುವುದು ಆಗಿದೆ. ಹಂದಿಯ ವೈರಸ್‌ಗಳು ಮನುಷ್ಯನಿಗೆ ಅಪಾಯ ಉಂಟು ಮಾಡುವುದು ಸಾಮಾನ್ಯ. ಇದರಿಂದ ರಕ್ಷಣೆ ನೀಡುವುದನ್ನು ವೈದ್ಯರು ಮಾಡಿದ್ದರು.

ಈ ಚಿಕಿತ್ಸೆಯ ಮುಖ್ಯವಾದ ಅಂಶ ಎಂದರೆ ಯಾವುದೇ ಹಂತದಲ್ಲಿ ಹಂದಿಯ ವೈರಸ್‌, ರೋಗಗಳು ಆಡ್ರ್ಯೂಸ್‌ ದೇಹದಲ್ಲಿ ಕಾಣಿಸಲಿಲ್ಲ. ಹಂದಿಯ ಮೂತ್ರಪಿಂಡವನ್ನು ತೆಗೆದುಹಾಕಿ ನಂತರ ವೈದ್ಯರು ಪರೀಕ್ಷೆ ಮಾಡಿದಾಗ ಯಾವುದೇ ಹೊಸ ಪ್ರತಿಕಾಯಗಳು ಸೃಷ್ಟಿಯಾಗಿರಲಿಲ್ಲ. ಇದರ ಅರ್ಥ ಹಂದಿಯ ಕಿಡ್ನಿಯನ್ನು ಕಸಿ ಮಾಡಿದ್ದರಿಂದ ಮುಂದೆ ಪಡೆಯಲಾದ ಮಾನವ ಕಿಡ್ನಿಯ ಕಸಿ ಮಾಡುವಾಗ ಯಾವುದೇ ರೀತಿಯ ತೊಂದರೆ ಆಗಲಿಲ್ಲ. ಇದು ಜೀವಂತ ವ್ಯಕ್ತಿಯಲ್ಲಿ ಹಂದಿ ಮೂತ್ರಪಿಂಡವನ್ನು ಕಸಿ ಮಾಡಿ ದಾಖಲಾದ ಅತಿ ಸುದೀರ್ಘವಾದ ಡಯಾಲಿಸಿಸ್‌- ಮುಕ್ತ ಜೀವಂತ ಇರುವಂತಹ ಕೇಸ್‌ ಆಗಿದೆ. ರೋಗಿಯು ಅಂದರೆ ಆಡ್ರ್ಯೂಸ್‌ ಅವರು ಮಾನವನ ಕಿಡ್ನಿ ಪಡೆಯುವವರೆಗೆ ಹಂದಿ ಕಿಡ್ನಿಯೂ ಒಂದು ತಾತ್ಕಾಲಿಕ ಸೇತುವೆಯಾಗಿ ಕಾರ್ಯನಿರ್ವಹಿಸಿರುವುದು ದಾಖಲೆಯೇ ಎಲ್ಲನ್ನಬಹುದು.

ಹಂದಿ ಕಿಡ್ನಿಯನ್ನು ಆಡ್ರ್ಯೂಸ್‌ ಅವರಿಗೆ ಕಸಿ ಮಾಡಿದ ಮೇಲೆ ಆರು ತಿಂಗಳುಗಳ ಕಾಲ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಇದಾದ ಮೇಲೆ ದೇಹದಲ್ಲಿ ರಕ್ತನಾಳಗಳಿಗೆ ಕೆಲವೊಂದು ಹಾನಿ ಮಾಡಿತು. ಇದು ಕ್ರಮೇಣ ಅಂಗಾಂಗ ವೈಫಲ್ಯಕ್ಕೆ ಕಾರಣವಾಯಿತು. ಇದರಿಂದ ಎಚ್ಚೆತ್ತ ಡಾಕ್ಟರ್‌ಗಳು ಕೂಡಲೇ ಅಂಗವನ್ನು ತೆಗೆದು ಹಾಕಿದರು. ಇದೇ ವೇಳೆ ಆಡ್ರ್ಯೂಸ್‌ ಅವರಿಗೆ ಮೃತ ವ್ಯಕ್ತಿಯ ಕಿಡ್ನಿ ಸಿಕ್ಕಿದ್ದರಿಂದ ಕಸಿ ಮಾಡಲಾಯಿತು. ಈಗ ಆಡ್ರ್ಯೂಸ್‌ ಅವರ ದೇಹದಲ್ಲಿರುವ ಮೃತ್ಯ ವ್ಯಕ್ತಿಯ ಕಿಡ್ನಿಯೂ ಉತ್ತಮವಾಗಿ ಕೆಲಸ ಮಾಡುತ್ತಿದೆ.  

ಹಂದಿ ಕಿಡ್ನಿಯನ್ನು ಕಸಿ ಮಾಡುವುದು ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಕವಾಗಿ ಜಾರಿಗೆ ತರುವ ಮೊದಲು ಇನ್ನು ಹೆಚ್ಚಿನ ಮಟ್ಟದಲ್ಲಿ ಕ್ಲಿನಿಕಲ್‌ ಪ್ರಯೋಗಗಳು ಆಗಬೇಕು. ತಳೀಯ ಮಾರ್ಪಡಿಸಿದ ಹಂದಿಯ ಮೂತ್ರಪಿಂಡವು ಮಾನವ ದಾನಿಗಾಗಿ ಕಾಯುತ್ತಿರುವ ಅಪಾರ ಸಂಖ್ಯೆಯ ರೋಗಿಗಳಿಗೆ ತಾತ್ಕಾಲಿಕ ಜೀವ ರಕ್ಷಕ ಸೇತುವೆಯಾಗಿ ಕೆಲಸ ಮಾಡಬಲ್ಲದು ಎನ್ನುವುದು ಆಡ್ರ್ಯೂಸ್‌ ಪ್ರಕರಣ ದೃಢವಾಗಿ ಸಾಬೀತು ಮಾಡಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೀಗೆ ಮಾಡುವುದನ್ನು ಕ್ಸೆನೋಟ್ರಾನ್ಸ್‌ಪ್ಲಾಂಟೇಶನ್ (Xenotransplantation‌) ಅಂದರೆ ಪ್ರಾಣಿಗಳ ಅಂಗಗಳನ್ನು ಮಾನವರಿಗೆ ಕಸಿ ಮಾಡುವ ವಿಧಾನವಾಗಿದೆ. ಇದೊಂದು ತಂತ್ರಜ್ಞಾನಕ್ಕೆ ಸಿಕ್ಕಿರುವ ಅತ್ಯಂತ ಮಹತ್ವದ, ಐತಿಹಾಸಿಕ ಮೈಲಿಗಲ್ಲು ಆಗಿದೆ. ಕಿಡ್ನಿ ವೈಫಲ್ಯದಿಂದ ಬಳಲುವವರಿಗೆ ಇದೊಂದು ಆಶಾಕಿರಣ ಎನ್ನಬಹುದು.  

ವಿಶ್ವದಲ್ಲಿ ಮಾನವ ಅಂಗಾಂಗಗಳ ತೀವ್ರ ಅಭಾವವಿದೆ. ಅಂಗಾಂಗ ಅಗತ್ಯ ಇರುವ ರೋಗಿಗಳ ಸಂಖ್ಯೆ ಹೆಚ್ಚಿದೆ. ಅಂಗಾಂಗಗಳ ದಾನ ಮಾಡುವವರ ಸಂಖ್ಯೆ ಕಡಿಮೆ ಇದೆ. ದಾನಿಗಳ ಸಂಖ್ಯೆ ಕಡಿಮೆ ಇದೆ. ಅಂಗಾಂಗಗಳ ವೈಫಲ್ಯದಿಂದ ಬಳಲುವವರ ಸಂಖ್ಯೆ ಹೆಚ್ಚಿದೆ. ಇದರಿಂದಾಗಿ ವರ್ಷಗಟ್ಟಲೇ ರೋಗಿಗಳು ಕಾಯುವ ಅನಿವಾರ್ಯತೆ ಇದೆ. ಮನುಷ್ಯ ತನ್ನಲ್ಲಿ ಇರುವ ಏನಾನ್ನಾದರೂ ದಾನ ಮಾಡಬಲ್ಲನು. ಆದರೆ ಬದುಕಿರುವಾಗಲೇ ಅಂಗಾಂಗಗಳ ದಾನ ಮಾಡುವುದಕ್ಕೆ ಮುಂದಾಗುವುದಿಲ್ಲ. ಬದುಕಿರುವಾಗ ದಾನ ಮಾಡಬಹುದು. ಆದರೆ ಆತ ಮೃತಪಟ್ಟ ಮೇಲೆ ಅಂಗಾಂಗಗಳನ್ನು ಪಡೆಯಬಹುದು.

ಆಸ್ಪತ್ರೆಯ ವೈದ್ಯರು ಮಾತನಾಡಿದ್ದು ಏನು?

ಮ್ಯಾಸಚೂಸೆಟ್ಸ್‌ನ ಮಾಸ್‌ ಜನರಲ್‌ ಬ್ರಿಗ್ಯಾಮ್‌ನ ಸೆಂಟರ್‌ ಫಾರ್‌ ಟ್ರಾನ್ಸ್‌ಪ್ಲಾಂಟೇಶನ್‌ ಸೈನ್ಸಸ್‌ ಮತ್ತು ನೆಫ್ರಾಲಜಿ ವಿಭಾಗದ ಡಾ. ಲಿಯೊನಾರ್ಡೊ ರಿಯೆಲ್ಲಾ ನೇತೃತ್ವದಲ್ಲಿ ಈ ಕಸಿಯು ನಡೆಯಿತು. ಈ ಸಂಬಂಧ ಮಾತನಾಡಿದ ಅವರು, ಅಂಗಾಗಂಗಳ ಕೊರತೆಯನ್ನು ನಾವು ಎದುರಿಸುತ್ತಿರುವ ದೊಡ್ಡ ಬಿಕ್ಕಟ್ಟು ಆಗಿದೆ. ಈ ಅಂತರವನ್ನು ನೀಗಿಸಲು ಈ ವಿಧಾನ ಸಹಾಯ ಆಗುತ್ತದೆ. ಆರಂಭದಲ್ಲಿ ರೋಗಿಗಗಳು ಮಾನವ ದಾನಿಗಾಗಿ ಕಾಯುತ್ತಿದ್ದರು. ಆದರೆ ಈ ವಿಧಾನ ಡಯಾಲಿಸಿಸ್‌ನಿಂದ ಹೊರ ಬರಲು ಸೇತುವೆ ಎಂದು ಹೇಳಿದ್ದಾರೆ. 
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES