• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /ಹೈ ಬ್ಲಡ್‌ ಪ್ರಸೆರ್‌ ಇರುವವರಿಗೆ ಇದೊಂದು ಹಣ್ಣು ಜೀವ ಉಳಿಸುವ ಅಮೃತ.. ತಿನ್ನುವ ಸಮಯ ಮಾತ್ರ ಇದು!

ಹೈ ಬ್ಲಡ್‌ ಪ್ರಸೆರ್‌ ಇರುವವರಿಗೆ ಇದೊಂದು ಹಣ್ಣು ಜೀವ ಉಳಿಸುವ ಅಮೃತ.. ತಿನ್ನುವ ಸಮಯ ಮಾತ್ರ ಇದು!

ಅಧಿಕ ರಕ್ತದೊತ್ತಡವನ್ನು ನಿರ್ಲಕ್ಷ್ಯವನ್ನು ಮಾಡಿದರೆ ಗಂಭೀರವಾದ ಸಮಸ್ಯೆಗಳು ನಿಮಗೆ ಬರುವ ಸಾಧ್ಯತೆ ಇದೆ. ಗಂಭೀರ ಎಂದರೆ ಇವು ನಿಮ್ಮ ಜೀವಕ್ಕೆ ಹಾನಿಯುಂಟು ಮಾಡುವ ಸಾಧ್ಯತೆ ಇದೆ.

Written ByBhimappa
Published: Sep 22, 2026, 08:03 PM IST|Updated: Sep 22, 2026, 08:08 PM IST
joinshare
ಹೈ ಬ್ಲಡ್‌ ಪ್ರಸೆರ್‌ ಇರುವವರಿಗೆ ಇದೊಂದು ಹಣ್ಣು ಜೀವ ಉಳಿಸುವ ಅಮೃತ.. ತಿನ್ನುವ ಸಮಯ ಮಾತ್ರ ಇದು!
Image Credit: blood_pressure

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

banana benefits in kannada: ಇಂದಿನ ಬ್ಯುಸಿ ಲೈಫ್‌ಸ್ಟೈಲ್‌ನಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಯಾರಿಗೆ ಯಾವಾಗ ಏನು ಆಗುತ್ತದೆ ಎಂದು ತಿಳಿಯುವುದಿಲ್ಲ. ಅದರಲ್ಲಿ ಈಗೀಗ ಬಹುತೇಕ ಜನರಲ್ಲಿ ಅಧಿಕ ರಕ್ತದೊತ್ತಡ ಅಥವಾ High Blood Pressure ಜಾಸ್ತಿ ಆಗುತ್ತಿದೆ. ಇದನ್ನು ನಿಯಂತ್ರಣ ಮಾಡಲು ನಿಮ್ಮಲ್ಲಿಯೇ ಒಂದು ಪರಿಹಾರ ಇದೆ. ಅಧಿಕ ರಕ್ತದೊತ್ತಡ ಎಂದರೆ ರಕ್ತನಾಳಗಳಲ್ಲಿ ರಕ್ತದ ಹರಿವಿನ ಒತ್ತಡವು ಸಾಮಾನ್ಯಕ್ಕಿಂತ ಹೆಚ್ಚಿರುವುದು ಆಗಿದೆ. ಸಾಮಾನ್ಯವಾಗಿ ಯಾರದ್ದೇ ಆಗಲಿ ರಕ್ತದೊತ್ತಡವೂ 140/90 mmHg ಅಥವಾ ಅದಕ್ಕಿಂತ ಹೆಚ್ಚಿದ್ದರೆ ಅದನ್ನು ಅಧಿಕ ರಕ್ತದೊತ್ತಡ ಎಂದು ಕರೆಯಲಾಗುತ್ತದೆ.

ಕಳಪೆ ಜೀವನಶೈಲಿಯಿಂದ ಅಧಿಕ ರಕ್ತದೊತ್ತಡ ಇಂದಿನ ದಿನಗಳಲ್ಲಿ ಗಂಭೀರ ಮತ್ತು ಸಾಮಾನ್ಯ ಸಮಸ್ಯೆಯಾಗಿದೆ. ಇದರ ಲಕ್ಷಣಗಳು ಯಾವಾಗಲೂ ತಡವಾಗಿ ಕಾಣಿಸಿಕೊಳ್ಳುವುದರಿಂದ ಇದನ್ನು ಮೂಕ ಕೊಲೆಗಾರ ಎಂದೂ ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಯುವಜನರು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಯುವಕರಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಸೂಕ್ತವಾದ ವೈದ್ಯರನ್ನು ರೋಗಿಗಳು ಸಂಪರ್ಕ ಮಾಡಬೇಕಾಗುತ್ತದೆ.

ಅಧಿಕ ರಕ್ತದೊತ್ತಡ ಇರುವವರು ಯಾವ ಹಣ್ಣು ತಿನ್ನುವುದು ಎಂದು ಮೊದಲು ತಿಳಿದುಕೊಳ್ಳಬೇಕು. ಅಧಿಕ ರಕ್ತದೊತ್ತಡವನ್ನು ನಿರ್ಲಕ್ಷ್ಯವನ್ನು ಮಾಡಿದರೆ ಗಂಭೀರವಾದ ಸಮಸ್ಯೆಗಳು ನಿಮಗೆ ಬರುವ ಸಾಧ್ಯತೆ ಇದೆ. ಗಂಭೀರ ಎಂದರೆ ಇವು ನಿಮ್ಮ ಜೀವಕ್ಕೆ ಹಾನಿಯುಂಟು ಮಾಡುವ ಸಾಧ್ಯತೆ ಇದೆ. ಅಧಿಕ ರಕ್ತದೊತ್ತಡವನ್ನು ನಿರ್ಲಕ್ಷಿಸುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಗಂಭೀರವಾದ ಸಮಸ್ಯೆಗಳು ನಿಮ್ಮಲ್ಲಿ ಉಂಟಾಗಬಹುದು. ಈ ಅಧಿಕ ರಕ್ತದೊತ್ತಡವನ್ನು ವಿಶ್ವ ಆರೋಗ್ಯ ಸಂಸ್ಥೆ ಡಬ್ಲುಹೆಚ್‌ಒ ಸೈಲೆಂಟ್‌ ಕಿಲ್ಲರ್‌ ಎಂದು ಕರೆಯಲಾಗುತ್ತದೆ. ಏಕೆಂದರೆ ಆರಂಭದಲ್ಲಿ ಇದರ ಲಕ್ಷಣಗಳು ಏನು ಎಂಬುದೇ ನಿಮಗೆ ಗೊತ್ತಾಗುವುದಿಲ್ಲ. 

ಅಧಿಕ ರಕ್ತದೊತ್ತಡ ಇರುವವರು ಬಾಳೆಹಣ್ಣು ತಿನ್ನುವುದು ಸೂಕ್ತವಾಗಿದೆ. ಅಧಿಕ ಬಿಪಿ ರೋಗಿಗಳಿಗೆ ಬಿಪಿಯನ್ನು ನಿಯಂತ್ರಿಸಲು ಬಾಳೆಹಣ್ಣು ನೈಸರ್ಗಿಕ ಮಾರ್ಗವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಬಾಳೆಹಣ್ಣು ಅಧಿಕ ರಕ್ತದೊತ್ತಡವನ್ನು ಹೇಗೆ ನಿಯಂತ್ರಿಸುತ್ತದೆ ಎಂದರೆ.. ಬಾಳೆಹಣ್ಣಿನಲ್ಲಿ ಇರುವ ಪೋಷಕಾಂಶಗಳು ರಕ್ತದೊತ್ತಡವನ್ನು ನಿಯಂತ್ರಿಸಲು ನೇರವಾಗಿ ಸಹಾಯ ಮಾಡುತ್ತವೆ. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ದೇಹದಲ್ಲಿನ ಹೆಚ್ಚುವರಿ ಸೋಡಿಯಂ ಅಧಿಕ ರಕ್ತದೊತ್ತಡಕ್ಕೆ ಮುಖ್ಯ ಕಾರಣವಾಗಿದೆ.

ಪೊಟ್ಯಾಸಿಯಮ್ ದೇಹದಲ್ಲಿನ ಸೋಡಿಯಂನ ಹಾನಿಕಾರಕ ಪರಿಣಾಮಗಳನ್ನು ತಟಸ್ಥಗೊಳಿಸುತ್ತದೆ. ಇದು ಮೂತ್ರದ ಮೂಲಕ ಹೆಚ್ಚುವರಿ ಸೋಡಿಯಂ ಅನ್ನು ತೆಗೆದುಹಾಕಲು ಕೆಲಸ ಮಾಡುತ್ತದೆ. ಇದಲ್ಲದೆ, ಪೊಟ್ಯಾಸಿಯಮ್ ರಕ್ತನಾಳಗಳ ಗೋಡೆಗಳಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಸರಿಯಾದ ರಕ್ತದ ಹರಿವನ್ನು ಖಚಿತಪಡಿಸುತ್ತದೆ. ಹೃದಯದ ಮೇಲೆ ಹೆಚ್ಚಿನ ಒತ್ತಡವನ್ನು ಬೀರುವುದಿಲ್ಲ. ರಕ್ತನಾಳಗಳನ್ನು ಶಾಂತವಾಗಿಡುವಲ್ಲಿ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಮೆಗ್ನೀಸಿಯಮ್ ಪ್ರಮುಖ ಪಾತ್ರ ವಹಿಸುತ್ತದೆ.

ಬಾಳೆಹಣ್ಣು ತಿನ್ನಲು ಸರಿಯಾದ ಸಮಯ ಯಾವುದು ನಿಮಗೆ ಗೊತ್ತಾ?.

ಯಾವುದೇ ಹಣ್ಣಿನ ಪ್ರಯೋಜನಗಳನ್ನು ಪಡೆಯಲು, ಅದನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ತಿನ್ನುವುದು ಅವಶ್ಯಕವಾಗಿದೆ. ಉತ್ತಮ ಸಮಯವೆಂದರೆ ಬೆಳಗಿನ ಉಪಾಹಾರದ ಸುಮಾರು 1- 2 ಗಂಟೆಗಳ ನಂತರ ಬಾಳೆಹಣ್ಣು ತಿನ್ನಬಹುದು. ಈ ಸಮಯದಲ್ಲಿ ಬಾಳೆಹಣ್ಣುಗಳನ್ನು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪೋಷಣೆ ದೊರೆಯುತ್ತದೆ. ದಿನವಿಡೀ ನಿಮಗೆ ಶಕ್ತಿ ಬರುತ್ತದೆ. ನೈಸರ್ಗಿಕವಾಗಿ ಇರುವುದರಿಂದ ಬಾಳೆಹಣ್ಣು ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾಗಿದೆ.

ಯಾವಾಗಲೇ ಆಗಲಿ ಬಾಳೆಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣುಗಳನ್ನು ತಿನ್ನವುದು ತಪ್ಪಿಸಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದನ್ನು ಮೊದಲು ನೀವು ಬಿಡಬೇಕು. ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದರಿಂದ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಮಟ್ಟಗಳು ಹಠಾತ್ ಹೆಚ್ಚಾಗಬಹುದು. ಇದು ಹೊಟ್ಟೆಯ ಸಮಸ್ಯೆಗಳು ಅಥವಾ ಸಕ್ಕರೆ ಮಟ್ಟದಲ್ಲಿ ಏರುಪೇರುಗಳಿಗೆ ಕಾರಣವಾಗಬಹುದು. ಆದ್ದರಿಂದ ಯಾರೇ ಆಗಲಿ ಖಾಲಿ ಹೊಟ್ಟೆಯಲ್ಲಿ ಇರುವಾಗ ಏನಾದರೂ ಸ್ವಲ್ಪ ಉಪಾಹಾರ ಅಥವಾ ಊಟವನ್ನು ತಿಂದ ಮೇಲೆ ಬಾಳೆಹಣ್ಣು ತಿನ್ನುವುದು ಒಳ್ಳೆಯದು. 

Add Zee News as a Preferred Source
TAGS:
Health Tips