• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /ನೀವು 30 ರಿಂದ 40 ವರ್ಷದ ಒಳಗಿನವರು ಆಗಿದ್ರೆ ಹುಷಾರ್‌.. ನಿಮ್ಮಲ್ಲಿದೆ ಈ ಗಂಭೀರ ಸಮಸ್ಯೆ

ನೀವು 30 ರಿಂದ 40 ವರ್ಷದ ಒಳಗಿನವರು ಆಗಿದ್ರೆ ಹುಷಾರ್‌.. ನಿಮ್ಮಲ್ಲಿದೆ ಈ ಗಂಭೀರ ಸಮಸ್ಯೆ

ವಿಶೇಷವಾಗಿ ಕಾರ್ಮಿಕ ವರ್ಗದವರು, ವಿವಿಧ ವೃತ್ತಿಪರರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಗಲಿರುಳು ಸಿದ್ಧತೆ ನಡೆಸುತ್ತಿರುವ ಯುವಕರು ಈ ಮರೆವಿನ ಸಮಸ್ಯೆಯಿಂದ ಹೆಚ್ಚು ಬಳಲುತ್ತಿದ್ದಾರೆ

Written ByBhimappa
Published: Sep 27, 2026, 07:43 PM IST|Updated: Sep 27, 2026, 07:50 PM IST
joinshare
ನೀವು 30 ರಿಂದ 40 ವರ್ಷದ ಒಳಗಿನವರು ಆಗಿದ್ರೆ ಹುಷಾರ್‌.. ನಿಮ್ಮಲ್ಲಿದೆ ಈ ಗಂಭೀರ ಸಮಸ್ಯೆ
Image Credit: health_news

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

suffering from forgetfulness: ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುತ್ತಿದ್ದ ಮರೆವಿನ ಸಮಸ್ಯೆ, ಈಗ ಯುವಜನರು ಮತ್ತು ಮಧ್ಯವಯಸ್ಕರಲ್ಲೂ ಅತ್ಯಂತ ವೇಗವಾಗಿ ಹೆಚ್ಚುತ್ತಿರುವುದು ವೈದ್ಯಕೀಯ ಲೋಕದಲ್ಲಿ ಕಳವಳ ಮೂಡಿಸಿದೆ. ಸರ್ಕಾರಿ ಆಸ್ಪತ್ರೆಗಳು ಹಾಗೂ ಖಾಸಗಿ ನರವಿಜ್ಞಾನ ಚಿಕಿತ್ಸಾಲಯಗಳಿಗೆ ಭೇಟಿ ನೀಡುತ್ತಿರುವ ರೋಗಿಗಳನ್ನು ಗಮನಿಸಿದರೆ, ಪ್ರಸ್ತುತ 30 ರಿಂದ 45 ವರ್ಷದೊಳಗಿನ ಯುವ ರೋಗಿಗಳ ಸಂಖ್ಯೆ ಗಣನೀಯವಾಗಿ ಗಮನಾರ್ಹ ಹೆಚ್ಚಾಗುತ್ತಿರುವುದು ಅಚ್ಚರಿ ಮೂಡಿಸಿದೆ.

ಈ ಯುವ ರೋಗಿಗಳು ದೈನಂದಿನ ಜೀವನದಲ್ಲಿ ಸಣ್ಣಪುಟ್ಟ ವಿಷಯಗಳನ್ನು ಮರೆತುಬಿಡುವುದು, ಯಾವುದರ ಮೇಲೂ ಸರಿಯಾಗಿ ಗಮನಹರಿಸಲು ಸಾಧ್ಯವಾಗದಿರುವುದು, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತೀವ್ರ ತೊಂದರೆ ಹಾಗೂ ಸದಾ ಕಾಲ ಮಾನಸಿಕ ಆಯಾಸದ ದೂರುಗಳೊಂದಿಗೆ ವೈದ್ಯರನ್ನು ಸಂಪರ್ಕ ಮಾಡುತ್ತಿದ್ದಾರೆ. ವಿಶೇಷವಾಗಿ ಕಾರ್ಮಿಕ ವರ್ಗದವರು, ವಿವಿಧ ವೃತ್ತಿಪರರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಗಲಿರುಳು ಸಿದ್ಧತೆ ನಡೆಸುತ್ತಿರುವ ಯುವಕರು ಈ ಮರೆವಿನ ಸಮಸ್ಯೆಯಿಂದ ಹೆಚ್ಚು ಬಳಲುತ್ತಿರುವುದು ಮನೋವೈದ್ಯರ ತನಿಖೆಯಿಂದ ತಿಳಿದುಬಂದಿದೆ. ಜನರ ಹೆಸರುಗಳು, ಪ್ರಮುಖ ಫೋನ್ ಸಂಖ್ಯೆಗಳು, ದೈನಂದಿನ ಕೆಲಸಗಳು ಅಥವಾ ಪ್ರಮುಖ ಘಟನೆ ನೆನಪಿನಲ್ಲಿಟ್ಟುಕೊಳ್ಳಲು ಇವರು ಕಷ್ಟ ಪಡುತ್ತಿದ್ದಾರೆ.

ಈ ಗಂಭೀರ ಸಮಸ್ಯೆ ಹೆಚ್ಚಾಗಲು ಆಧುನಿಕ ಜೀವನಶೈಲಿಯೇ ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅತಿಯಾದ ಮಾನಸಿಕ ಒತ್ತಡ, ಮೊಬೈಲ್ ಹಾಗೂ ಇತ್ಯಾದಿ ಡಿಜಿಟಲ್ ಸಾಧನಗಳ ಅತಿಯಾದ ಪರದೆಯ ಸಮಯ Screen Time, ಸಾಕಷ್ಟು ನಿದ್ರೆ ಸಿಗದಿರುವುದು, ದೈಹಿಕ ನಿಷ್ಕ್ರಿಯತೆ ಮತ್ತು ಅನಿಯಮಿತ ದಿನಚರಿ ಮೆದುಳಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಅನೇಕ ಸಂದರ್ಭಗಳಲ್ಲಿ ನಡೆಸಿದ ತಪಾಸಣೆಯ ನಂತರ, ಮಾನಸಿಕ ಒತ್ತಡ, ಆತಂಕ, ಖಿನ್ನತೆ ಮತ್ತು ನಿದ್ರೆಗೆ ಸಂಬಂಧಿಸಿದ ಅಸ್ವಸ್ಥತೆಗಳು ಈ ಮರೆವಿಗೆ ಮೂಲ ಕಾರಣ ಆಗಿರುವುದು ಎಂದು ಹೇಳಲಾಗುತ್ತಿದೆ.

ಅದರಲ್ಲೂ ಮೊಬೈಲ್ ಮೇಲಿನ ಅತಿಯಾದ ಅವಲಂಬನೆಯು ಮಾನವನ ಮೆದುಳಿನ ಸ್ಮರಣಶಕ್ತಿಯ ಮೇಲೆ ತೀವ್ರವಾಗಿ ಅಪ್ಪಳಿಸುತ್ತಿದೆ. ಪ್ರತಿಯೊಂದು ಚಿಕ್ಕಪುಟ್ಟ ಮಾಹಿತಿಗೂ ಕೂಡ ಮೊಬೈಲ್ ಅಥವಾ ಇಂಟರ್ನೆಟ್ ಅನ್ನು ನೆಚ್ಚಿಕೊಳ್ಳುವುದರಿಂದ, ಮೆದುಳಿನ ಸ್ವಂತ ಸಾಮರ್ಥ್ಯ ಹಾಗೂ ಯೋಚಿಸಿ ಮಾಹಿತಿಯನ್ನು ಸಂಸ್ಕರಿಸುವ ಮತ್ತು ನೆನಪಿಟ್ಟುಕೊಳ್ಳುವ ಸ್ವಾಭಾವಿಕ ಅಭ್ಯಾಸ ಕುಂಠಿತಗೊಳ್ಳುತ್ತಿದೆ. ಡಿಜಿಟಲ್ ಸಾಧನಗಳ ನಿರಂತರ ಬಳಕೆಯಿಂದ ಮೆದುಳಿಗೆ ಬೇಕಾದಷ್ಟು ವಿಶ್ರಾಂತಿ ಸಿಗುತ್ತಿಲ್ಲ. ಮೊಬೈಲ್‌ನಲ್ಲಿ ಬರುವ ನಿರಂತರ ಅಧಿಸೂಚನೆಗಳು ಹಾಗೂ ಬಹುಕಾರ್ಯಕ Multitasking ಅಭ್ಯಾಸಗಳು ಯುವಕರ ಏಕಾಗ್ರತೆಯನ್ನು ಸಂಪೂರ್ಣವಾಗಿ ಹಾದಿತಪ್ಪಿಸುತ್ತಿವೆ. ಇದರೊಂದಿಗೆ ತಡರಾತ್ರಿವರೆಗೆ ಎಚ್ಚರವಾಗಿರುವುದು ಮತ್ತು ಅಗತ್ಯವಿರುವಷ್ಟು ನಿದ್ರೆ ಮಾಡದಿರುವುದು ಮೆದುಳಿನ ಕೋಶಗಳ ಮೇಲೆ ತೀವ್ರವಾದ ಕೆಟ್ಟ ಪರಿಣಾಮ ಬೀರುತ್ತಿದೆ.

ಹಾಗಂದ ಮಾತ್ರಕ್ಕೆ ಎಲ್ಲವನ್ನೂ ಮರೆತುಬಿಡುವುದು ಬುದ್ಧಿಮಾಂದ್ಯತೆ Dementia ಅಥವಾ ಆಲ್ಝೈಮ್ನರ್ಸ್ Alzheimers ಲಕ್ಷಣವಲ್ಲ ಎಂದು ನರವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ಈ ಸಮಸ್ಯೆ ಹೀಗೆಯೇ ಮುಂದುವರಿದರೆ ನಿರ್ಲಕ್ಷ್ಯ ಮಾಡದೆ, ಸಮಯಕ್ಕೆ ಸರಿಯಾಗಿ ಸೂಕ್ತ ವೈದ್ಯಕೀಯ ಸಲಹೆ ಹಾಗೂ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯವಾಗಿದೆ. ಡಿಜಿಟಲ್ ವ್ಯಸನವನ್ನು ಕಡಿಮೆ ಮಾಡಿ, ಉತ್ತಮ ನಿದ್ರೆ, ಆರೋಗ್ಯಕರ ಆಹಾರ ಹಾಗೂ ಸಮತೋಲಿತ ದಿನಚರಿಯನ್ನು ರೂಢಿಸಿಕೊಳ್ಳುವುದರಿಂದ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಯುವಕರು ಮತ್ತು ಮಧ್ಯ ವಯಸ್ಕರು ಮೊಬೈಲ್‌ ಮತ್ತು ಕಂಪ್ಯೂಟರ್‌ ಸ್ಕ್ರೀನ್‌ ನೋಡುವುದು ಕಡಿಮೆ ಮಾಡಿದರೆ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಏಕೆಂದರೆ ಇವುಗಳಿಂದಲೇ ಇತ್ತೀಚೆಗೆ ಇವರಲ್ಲಿ ಮರೆವು ಅಧಿಕ ಆಗುತ್ತಿದೆ. ಹೀಗಾಗಿ ಕಡಿಮೆ ಮಾಡಬೇಕು ಅಥವಾ ಈ ಸಮಸ್ಯೆಯಿಂದ ಹೊರ ಬರಬೇಕು ಎಂದರೆ ಸಂಪೂರ್ಣವಾಗಿ ಮೊಬೈಲ್‌ ಮತ್ತು ಕಂಪ್ಯೂಟರ್‌ಗಳಿಂದ ದೂರ ಇರುವುದು ನಿಮಗೆ ಉತ್ತಮ. ಯಾವುದೇ ಸಮಸ್ಯೆ ಇರಲಿ ಅದರಿಂದ ಹೊರ ಬರಬೇಕು ಎಂದರೆ ಸುಲಭ ದಾರಿ ಕಂಡುಕೊಳ್ಳುವುದು ನಿಮಗೆ ಬಿಟ್ಟಿದ್ದು.
 

Add Zee News as a Preferred Source
TAGS:
Health Tips