OPPO A7 Pro 5G: ಸ್ಮಾರ್ಟ್‌ಫೋನ್ ಪ್ರಿಯರಿಗೆ OPPO ಹೊಸ ಸ್ಮಾರ್ಟ್‌ಫೋನ್‌ವೊಂದನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಕಂಪನಿಯ A ಸರಣಿಯ ಹೊಸ ಸ್ಮಾರ್ಟ್‌ಫೋನ್ OPPO A7 Pro 5G ಚೀನಾದಲ್ಲಿ ಬಿಡುಗಡೆಯಾಗಿದೆ. ದೊಡ್ಡ ಬ್ಯಾಟರಿ, ಅದ್ಭುತ ಡಿಸ್‌ಪ್ಲೇ, 50MP ಕ್ಯಾಮೆರಾ ಮತ್ತು ಬಲಿಷ್ಠ ಬಾಡಿ ಸೇರಿದಂತೆ ಹಲವು ಫೀಚರ್‌ಗಳನ್ನ ಹೊಂದಿರುವ ಈ ಫೋನ್ ಇದೀಗ ಟೆಕ್ ವಲಯದಲ್ಲಿ ಗಮನ ಸೆಳೆಯುತ್ತಿದೆ.
OPPO A7 Proನ ಪ್ರಮುಖ ಆಕರ್ಷಣೆ ಎಂದರೆ ಇದರ 8,000mAh ಬ್ಯಾಟರಿ. ಸಾಮಾನ್ಯವಾಗಿ ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ 5,000mAh ಅಥವಾ 6,000mAh ಬ್ಯಾಟರಿ ಕಾಣಸಿಗುತ್ತದೆ. ಆದರೆ OPPO ಈ ಫೋನ್‌ನಲ್ಲಿ 8,000mAh ಸಾಮರ್ಥ್ಯದ ಬ್ಯಾಟರಿ ನೀಡಿದೆ. ಇದರಿಂದ ದೀರ್ಘ ಸಮಯ ಫೋನ್ ಬಳಸುವವರಿಗೆ ಬ್ಯಾಟರಿ ಬ್ಯಾಕಪ್ ಪ್ರಮುಖ ಪ್ರಯೋಜನವಾಗಬಹುದು. ಬ್ಯಾಟರಿಗೆ 45W SUPERVOOC ಫಾಸ್ಟ್ ಚಾರ್ಜಿಂಗ್ ಬೆಂಬಲವೂ ಇದೆ.
120Hz AMOLED ಡಿಸ್‌ಪ್ಲೇ
OPPO A7 Proನಲ್ಲಿ 6.57 ಇಂಚಿನ Full HD+ AMOLED ಡಿಸ್‌ಪ್ಲೇ ನೀಡಲಾಗಿದೆ. ಇದರ ಸ್ಕ್ರೀನ್ ರೆಸಲ್ಯೂಶನ್ 2,372 × 1,080 ಪಿಕ್ಸೆಲ್‌ಗಳಾಗಿದ್ದು, ಗರಿಷ್ಠ 120Hz ರಿಫ್ರೆಶ್ ರೇಟ್ ಹೊಂದಿದೆ. ಹೆಚ್ಚಿನ ರಿಫ್ರೆಶ್ ರೇಟ್‌ನಿಂದ ಸ್ಕ್ರೋಲಿಂಗ್, ಆ್ಯನಿಮೇಷನ್ ಮತ್ತು ಹೊಂದಾಣಿಕೆಯ ಗೇಮಿಂಗ್ ಅನುಭವ ಹೆಚ್ಚು ಸ್ಮೂತ್ ಆಗಿರಬಹುದು. ಡಿಸ್‌ಪ್ಲೇ 800 ನಿಟ್ಸ್ ಸಾಮಾನ್ಯ ಗ್ಲೋಬಲ್ ಬ್ರೈಟ್‌ನೆಸ್ ಮತ್ತು 1,400 ನಿಟ್ಸ್‌ವರೆಗೆ ಪೀಕ್ ಬ್ರೈಟ್‌ನೆಸ್ ನೀಡುತ್ತದೆ. ಇದರಿಂದ ಹೊರಾಂಗಣದಲ್ಲಿ ಸ್ಕ್ರೀನ್ ನೋಡಲು ಸಹಾಯವಾಗಬಹುದು.
50MP ಕ್ಯಾಮೆರಾ
ಕ್ಯಾಮೆರಾ ವಿಭಾಗದಲ್ಲೂ OPPO A7 Pro ಗಮನ ಸೆಳೆಯುತ್ತದೆ. ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ ನೀಡಲಾಗಿದೆ. f/1.9 ಅಪರ್ಚರ್ ಹೊಂದಿರುವ ಈ ಕ್ಯಾಮೆರಾದಲ್ಲಿ ಆಟೋಫೋಕಸ್ ಬೆಂಬಲವಿದೆ. 10x ವರೆಗೆ ಡಿಜಿಟಲ್ ಜೂಮ್ ಕೂಡ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ನೀಡಲಾಗಿದೆ ಎಂದು ಚೀನಾದ ಲಾಂಚ್ ಸ್ಪೆಸಿಫಿಕೇಷನ್‌ಗಳು ತಿಳಿಸುತ್ತವೆ. ಆದರೆ ಜಾಗತಿಕ OPPO A7 Pro 5G ಮಾದರಿಯ ಅಧಿಕೃತ ಸ್ಪೆಸಿಫಿಕೇಷನ್ ಪುಟದಲ್ಲಿ ಕೆಲವು ಮಾರುಕಟ್ಟೆಗಳಿಗೆ 50MP ಫ್ರಂಟ್ ಕ್ಯಾಮೆರಾ ಸೇರಿದಂತೆ ಭಿನ್ನ ಕ್ಯಾಮೆರಾ ಕಾನ್ಫಿಗರೇಷನ್ ಕಾಣಿಸುತ್ತದೆ. ಹೀಗಾಗಿ ಭಾರತ ಅಥವಾ ಇತರ ದೇಶಗಳಲ್ಲಿ ಬಿಡುಗಡೆಯಾದರೆ ಕ್ಯಾಮೆರಾ ಸ್ಪೆಸಿಫಿಕೇಷನ್‌ಗಳಲ್ಲಿ ಬದಲಾವಣೆ ಇರಬಹುದಾಗಿದೆ.
MediaTek ಪ್ರೊಸೆಸರ್
ಈ ಫೋನ್‌ಗೆ MediaTek Dimensity 6360 MAX ಚಿಪ್‌ಸೆಟ್ ನೀಡಲಾಗಿದೆ. ಇದರೊಂದಿಗೆ ಗರಿಷ್ಠ 8GB LPDDR4X RAM ಮತ್ತು 256GB UFS 2.2 ಸ್ಟೋರೇಜ್ ಲಭ್ಯವಿದೆ. ಚೀನಾದಲ್ಲಿ 6GB RAM + 256GB ಮತ್ತು 8GB RAM + 256GB ಎಂಬ ಎರಡು ಪ್ರಮುಖ ವೇರಿಯಂಟ್‌ಗಳಲ್ಲಿ ಫೋನ್ ಬಿಡುಗಡೆಯಾಗಿದೆ. ಆಪರೇಟಿಂಗ್ ಸಿಸ್ಟಂ ವಿಚಾರದಲ್ಲಿ ಫೋನ್ ColorOS 16ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಹೊಸ ತಲೆಮಾರಿನ ColorOS ಅನುಭವದ ಜೊತೆಗೆ ಹಲವು ಸ್ಮಾರ್ಟ್ ಫೀಚರ್‌ಗಳನ್ನ ನೀಡುತ್ತದೆ.
ನೀರು, ಧೂಳಿನಿಂದ ರಕ್ಷಣೆ
OPPO A7 Proನ ಮತ್ತೊಂದು ಪ್ರಮುಖ ವಿಶೇಷತೆ ಇದರ ಬಾಡಿ ಪ್ರೊಟೆಕ್ಷನ್. ಫೋನ್‌ಗೆ IP69K ರೇಟಿಂಗ್ ನೀಡಲಾಗಿದೆ. ಧೂಳು ಮತ್ತು ನೀರಿನ ವಿರುದ್ಧ ಹೆಚ್ಚಿನ ಮಟ್ಟದ ರಕ್ಷಣೆ ನೀಡುವ ಉದ್ದೇಶದಿಂದ ಈ ರೇಟಿಂಗ್ ಹೊಂದಿರುವ ಬಾಡಿಯನ್ನ ಬಳಸಲಾಗಿದೆ. ಈ ಫೋನ್‌ನ ದಪ್ಪ ಸುಮಾರು 8.8mm ಮತ್ತು ತೂಕ ಸುಮಾರು 205 ಗ್ರಾಂ ಇದೆ. USB Type-C ಪೋರ್ಟ್, ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್, ಫೇಸ್ ಅನ್‌ಲಾಕ್ ಸೇರಿದಂತೆ ಹಲವು ವೈಶಿಷ್ಟ್ಯಗಳೂ ಇವೆ.
ಸಂಪರ್ಕ ವೈಶಿಷ್ಟ್ಯಗಳು
OPPO A7 Pro 5G ಸಂಪರ್ಕವನ್ನ ಬೆಂಬಲಿಸುತ್ತದೆ. ಇದರೊಂದಿಗೆ Wi-Fi 5, Bluetooth 5.4, NFC, GPS, GLONASS, Galileo, QZSS ಮತ್ತು BeiDou ಸೇರಿದಂತೆ ವಿವಿಧ ಸಂಪರ್ಕ ಆಯ್ಕೆಗಳನ್ನ ನೀಡಲಾಗಿದೆ.
ಬೆಲೆ ಎಷ್ಟು?
ಚೀನಾದಲ್ಲಿ OPPO A7 Proನ 6GB RAM + 256GB ಸ್ಟೋರೇಜ್ ವೇರಿಯಂಟ್ ಬೆಲೆ CNY 2,199, ಅಂದರೆ ಭಾರತೀಯ ಕರೆನ್ಸಿಯಲ್ಲಿ ಅಂದಾಜು ₹31,000ರಷ್ಟಾಗುತ್ತದೆ. 8GB RAM + 256GB ಮಾದರಿಯ ಬೆಲೆ CNY 2,499, ಅಂದರೆ ಸುಮಾರು ₹35,000ರಷ್ಟಾಗಿದೆ. ಚೀನಾದಲ್ಲಿ ಫೋನ್ ಸೆಪ್ಟೆಂಬರ್ 11ರಿಂದ ಮಾರಾಟಕ್ಕೆ ಬಂದಿದೆ. ಆದರೆ ಭಾರತದಲ್ಲಿ OPPO A7 Pro ಯಾವಾಗ ಬಿಡುಗಡೆಯಾಗಲಿದೆ ಮತ್ತು ಅದರ ಬೆಲೆ ಎಷ್ಟಿರಲಿದೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಭಾರತಕ್ಕೆ ಬಂದರೆ ಸ್ಥಳೀಯ ತೆರಿಗೆ, ಕಾನ್ಫಿಗರೇಷನ್ ಮತ್ತು ಇತರ ಮಾರುಕಟ್ಟೆ ಅಂಶಗಳ ಆಧಾರದ ಮೇಲೆ ಬೆಲೆ ಬದಲಾಗುವ ಸಾಧ್ಯತೆಯಿದೆ.
ಒಟ್ನಲ್ಲಿ 8,000mAh ಬ್ಯಾಟರಿ, 120Hz AMOLED ಡಿಸ್‌ಪ್ಲೇ, 50MP ಮುಖ್ಯ ಕ್ಯಾಮೆರಾ, Dimensity 6360 MAX ಚಿಪ್‌ಸೆಟ್ ಮತ್ತು IP69K ರೇಟಿಂಗ್‌ನಂತಹ ಫೀಚರ್‌ಗಳೊಂದಿಗೆ OPPO A7 Pro 5G ಹೊಸ ತಲೆಮಾರಿನ A ಸರಣಿಯ ಪ್ರಮುಖ ಸ್ಮಾರ್ಟ್‌ಫೋನ್ ಆಗಿ ಗಮನ ಸೆಳೆಯುತ್ತಿದೆ. ಭಾರತದಲ್ಲಿ ಇದರ ಲಾಂಚ್ ಕುರಿತು OPPO ಅಧಿಕೃತ ಘೋಷಣೆ ಮಾಡಿದ ಬಳಿಕ ಬೆಲೆ ಮತ್ತು ಭಾರತೀಯ ವೇರಿಯಂಟ್‌ಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ.