• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /ಹಾಸಿಗೆಯಿಂದ ಎದ್ದ ತಕ್ಷಣ 10 ನಿಮಿಷ ಭಾರೀ ಮುಖ್ಯ.. ಈ ತಪ್ಪುಗಳನ್ನು ಮಾಡಿದರೆ, ಹೃದಯಾಘಾತ ಪಕ್ಕಾ!

ಹಾಸಿಗೆಯಿಂದ ಎದ್ದ ತಕ್ಷಣ 10 ನಿಮಿಷ ಭಾರೀ ಮುಖ್ಯ.. ಈ ತಪ್ಪುಗಳನ್ನು ಮಾಡಿದರೆ, ಹೃದಯಾಘಾತ ಪಕ್ಕಾ!

ವಯಸ್ಕರದಲ್ಲಿ ಹೃದಯದ ಗಾತ್ರ 250 ರಿಂದ 350 ಗ್ರಾಂ ತೂಕ ಇರುತ್ತದೆ. ಹೃದಯವೂ ನಮ್ಮ ಮುಷ್ಟಿಯ ಗಾತ್ರದಷ್ಟು ಇರುತ್ತದೆ. ದೇಹದ ಎಲ್ಲ ಭಾಗಗಳಿಗೆ ಆಮ್ಲಜನಕಯುಕ್ತ ರಕ್ತವನ್ನು ಪಂಪ್‌ ಮಾಡುತ್ತದೆ.

Written ByBhimappa
Published: Sep 20, 2026, 11:56 AM IST|Updated: Sep 20, 2026, 12:08 PM IST
joinshare
ಹಾಸಿಗೆಯಿಂದ ಎದ್ದ ತಕ್ಷಣ 10 ನಿಮಿಷ ಭಾರೀ ಮುಖ್ಯ.. ಈ ತಪ್ಪುಗಳನ್ನು ಮಾಡಿದರೆ, ಹೃದಯಾಘಾತ ಪಕ್ಕಾ!
Image Credit: File Photo

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಹೆಚ್ಚಿನ ಹೃದಯಾಘಾತಗಳು ಬೆಳಿಗ್ಗೆ ಸಂಭವಿಸುತ್ತವೆ ಎಂದು ವಿವಿಧ ವೈದ್ಯಕೀಯ ಸಂಶೋಧನೆಗಳಲ್ಲಿ ಹಲವು ಬಾರಿ ಹೇಳಲಾಗಿದೆ. ನಾವು ನಿದ್ರೆಯಿಂದ ಎದ್ದಾಗ ನಮ್ಮ ರಕ್ತವು ದಪ್ಪ ಅಂದರೆ ಹೆಪ್ಪುಗಟ್ಟಿದಂತೆ ಇರುತ್ತದೆ. ವೈದ್ಯಕೀಯ ಸಂಶೋಧನೆಯ ಪ್ರಕಾರ, ಬೆಳಿಗ್ಗೆ ಆರು ರಿಂದ ಎಂಟು ಗಂಟೆಯ ನಡುವೆ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ. ಬೆಳಗ್ಗೆ ಎದ್ದ ನಂತರದ 10 ನಿಮಿಷಗಳು ಅತ್ಯಂತ ಮುಖ್ಯವೆಂದು ಸಂಶೋಧನೆ ಹೇಳುತ್ತದೆ. ಈ ಸಮಯದಲ್ಲಿ ನಾವು ಮಾಡುವ ಚಟುವಟಿಕೆಗಳು ನಮ್ಮ ಹೃದಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. ಬೆಳಗಿನ ಉದ್ದೇಶಪೂರ್ವಕ ಅಲ್ಲದ ಕೆಲವೊಂದು ತಪ್ಪು ನಿಮ್ಮನ್ನು ಹೃದಯಾಘಾತಕ್ಕೆ ತಳ್ಳಬಹುದು. ಈ ತಪ್ಪು ಏನು ಮತ್ತು ಬೆಳಗ್ಗೆ ಎದ್ದ ನಂತರ ಏನು ಮಾಡಬಾರದು ಎನ್ನುವ ಮಾಹಿತಿ ಇಲ್ಲಿ ನೀಡಲಾಗಿದೆ.

ಯಾರೇ ಆಗಲಿ ಬೆಳಗ್ಗೆ ಎದ್ದ ಕೂಡಲೇ ನಮ್ಮ ಹೃದಯವು ವಿಶ್ರಾಂತಿ ಸ್ಥಿತಿಯಲ್ಲಿರುತ್ತದೆ. ಬೆಳಗ್ಗೆ 10 ನಿಮಿಷಗಳು ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿಯೇ ಬೆಳಿಗ್ಗೆ 10 ನಿಮಿಷಗಳ ಅವಧಿಯಲ್ಲಿ ಕೆಲವು ಕೆಲಸಗಳನ್ನು ತಪ್ಪಿಸಬೇಕು. ಈ ಕೆಲಸವು ಹೃದಯವನ್ನು ಅಪಾಯಕ್ಕೆ ಸಿಲುಕಿಸಬಹುದು.

ನಮ್ಮ ದೇಹದಲ್ಲಿ ಅತಿ ಮುಖ್ಯವಾದ ಅಂಗ ಎಂದರೆ ಅದು ಹೃದಯವಾಗಿದೆ. ಹೃದಯವೂ ನಾವು ಏನೇ ಮಾಡಿದರು ಅತ್ಯಂತ ಮುಖ್ಯವಾದ ಕೆಲಸ ನಿರ್ವಹಿಸುತ್ತದೆ. ದೇಹದಲ್ಲಿ ಇಂಜಿನ್‌ ಮಾದರಿಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಲೇ ಇರುತ್ತದೆ. ರಕ್ತದ ಶುದ್ಧತೆ, ಗಾಳಿಯ ಸಂಚಲನ ಸೇರಿದಂತೆ ಇಡೀ ದೇಹಕ್ಕೆ ರಕ್ತ ಪರಿಚಲನೆಯನ್ನು ಹೃದಯವೇ ನೋಡಿಕೊಳ್ಳುತ್ತದೆ. ರಕ್ತವನ್ನು ನಿರಂತರವಾಗಿ ಪಂಪ್‌ ಮಾಡುವುದರಿಂದ ಶುದ್ಧತೆ ಮತ್ತು ಪರಿಚಲನೆಯಲ್ಲಿ ಪ್ರಮುಖವಾಗಿದೆ. ವಯಸ್ಕರದಲ್ಲಿ ಹೃದಯದ ಗಾತ್ರ 250 ರಿಂದ 350 ಗ್ರಾಂ ತೂಕ ಇರುತ್ತದೆ. ಹೃದಯವೂ ನಮ್ಮ ಮುಷ್ಟಿಯ ಗಾತ್ರದಷ್ಟು ಇರುತ್ತದೆ. ದೇಹದ ಎಲ್ಲ ಭಾಗಗಳಿಗೆ ಆಮ್ಲಜನಕಯುಕ್ತ ರಕ್ತವನ್ನು ಪಂಪ್‌ ಮಾಡುತ್ತದೆ. ಆಮ್ಲಜನಕರಹಿತ ರಕ್ತವನ್ನು ಸ್ವೀಕರಿಸಿ ಶುದ್ಧಿಕರಣಕ್ಕಾಗಿ ಶ್ವಾಸಕೋ಼ಕ್ಕೆ ಕಳುಹಿಸುತ್ತದೆ.

ಸಾಮಾನ್ಯವಾಗಿ ಆರೋಗ್ಯವಂತೆ ಮನುಷ್ಯನ ಹೃದಯ ಬಡಿತವು ಪ್ರತಿ ನಿಮಿಷಕ್ಕೆ 60 ರಿಂದ 80 ಬಾರಿ ಬಡಿಯುತ್ತದೆ. ಮಕ್ಕಳಲ್ಲಿ ಹೃದಯ ಬಡಿತವು ಹೆಚ್ಚಾಗಿರುತ್ತದೆ. ಮಕ್ಕಳು ಬೆಳೆಯುತ್ತ.. ಬೆಳೆಯುತ್ತ ಹೃದಯ ಬಡಿತ ಕಡಿಮೆ ಆಗುತ್ತದೆ. ಮಾನವನ ಹೃದಯವನ್ನು ನಾಲ್ಕು ಕೋಣೆಗಳಾಗಿ ವಿಂಗಡಣೆ ಮಾಡಲಾಗಿದೆ. ಮೇಲಿನ ಎಡ ಮತ್ತು ಬಲ ಹೃತ್ಕರ್ಣ ಮತ್ತು ಕೆಳಗಿನ ಎಡ ಮತ್ತು ಬಲ ಹೃತ್ಕರ್ಣ ಎಂದು ಇವೆ. ಹೃದಯರಕ್ತನಾಳದ ಕಾಯಿಲೆಗಳು ಮಾನವನ ಸಾವಿಗೆ ಸಾಮಾನ್ಯ ಕಾರಣಗಳು ಆಗಿವೆ.

ಬೆಳಿಗ್ಗೆ 10 ನಿಮಿಷಗಳು ಏಕೆ ಮುಖ್ಯ; ನಾವು ಮಲಗಿದಾಗ, ನಮ್ಮ ರಕ್ತವು ಹಗಲಿಗಿಂತ ದಪ್ಪ ಅಥವಾ ಹೆಪ್ಪುಗಟ್ಟಿದಂತೆ ಇರುತ್ತದೆ. ರಾತ್ರಿಯ ಸಮಯದಲ್ಲಿ ನಮ್ಮ ದೇಹವು ನೀರನ್ನು ಕಳೆದುಕೊಳ್ಳುತ್ತದೆ. ಇದರಿಂದಾಗಿ ಬೆಳಿಗ್ಗೆ ನಮ್ಮ ರಕ್ತ ದಪ್ಪವಾಗಿರುತ್ತದೆ. ನಾವು ಎದ್ದಾಗ, ರಕ್ತ ನಿಧಾನವಾಗಿ ಹರಿಯಲು ಪ್ರಾರಂಭಿಸುತ್ತದೆ. ದೇಹವು ಕಾರ್ಯನಿರ್ವಹಿಸಲು ಪ್ರಾರಂಭಿಸಿದಾಗ, ರಕ್ತದ ಹರಿವು ಸಾಮಾನ್ಯವಾಗುತ್ತದೆ, ಆದರೆ ಬೆಳಿಗ್ಗೆ ಮೊದಲ 10 ನಿಮಿಷಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವು ಹೆಚ್ಚು.

ಬೆಳಗಿನ ಸಮಯ ಏಕೆ ಅಪಾಯಕಾರಿ; ಬೆಳಗಿನ ಸ್ಥಿತಿಯನ್ನು ಅತ್ಯಂತ ಅಪಾಯಕಾರಿ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ರಕ್ತ ದಪ್ಪವಾಗಿರುತ್ತದೆ ಮತ್ತು ರಕ್ತದೊತ್ತಡ ಹೆಚ್ಚಾದರೆ, ರಕ್ತನಾಳಗಳು ಹೆಚ್ಚು ಸಂಕುಚಿತಗೊಳ್ಳುತ್ತವೆ. ಹೃದಯದ ಮೇಲೆ ಒತ್ತಡವು ಬೇಗನೆ ಹೆಚ್ಚಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಗಳಿರುವ ಜನರಿಗೆ ಹೃದಯಾಘಾತದ ಅಪಾಯವೂ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಬೆಳಿಗ್ಗೆ ಕಣ್ಣು ತೆರೆದ ನಂತರ 10 ನಿಮಿಷಗಳ ಕಾಲ ಈ ಕೆಳಗಿನ ಕೆಲಸಗಳನ್ನು ಮಾಡುವುದನ್ನು ತಪ್ಪಿಸಿ.

ಬೆಳಗ್ಗೆ ಎದ್ದ ಕೂಡಲೇ 10 ನಿಮಿಷಗಳಲ್ಲಿ ಇವುಗಳನ್ನು ಮಾಡಬಾರದು?

ಅಲಾರಾಂ ಶಬ್ದ ಕೇಳಿದ ತಕ್ಷಣ ಹಾಸಿಗೆಯಿಂದ ಎದ್ದಳಬೇಡಿ. ಅಂದರೆ ಕೂಡಲೇ ಎದ್ದೇಳಬಾಳರದು
ಹಾಸಿಗೆಯಿಂದ ಎದ್ದ ತಕ್ಷಣ ಓಡಾಡಬೇಡಿ. ಎದ್ದ ತಕ್ಷಣ ಕೆಲಸಗಳನ್ನು ಪ್ರಾರಂಭಿಸಬೇಡಿ 
ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿಯುವುದು ನಿಮ್ಮ ಹೃದಯಕ್ಕೆ ಅಪಾಯವಾಗಿದೆ
ಎಚ್ಚರವಾದ ತಕ್ಷಣ ಸ್ನಾನಗೃಹಕ್ಕೆ ಹೋಗಬೇಡಿ. ನಂತರ ಸ್ನಾನ ಮಾಡಿದರೆ ಉತ್ತಮ  
ಕಣ್ಣು ತೆರೆದ ತಕ್ಷಣ ಫೋನ್ ಎತ್ತಬೇಡಿ. ಬೆಳಗ್ಗೆ ಫೋನ್‌ ಬೇಡವೇ ಬೇಡ

ಬೆಳಿಗ್ಗೆ ಎದ್ದ ಕೂಡಲೇ ಇವುಗಳನ್ನು ಮಾಡುವುದು ಹೃದಯಕ್ಕೆ ಉತ್ತಮ

ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಮತ್ತು ದಿನವನ್ನು ಶಾಂತಿಯುತವಾಗಿ ಪ್ರಾರಂಭಿಸಲು, ಬೆಳಿಗ್ಗೆ ಎದ್ದ ಕೂಡಲೇ 60 ಸೆಕೆಂಡುಗಳ ಕಾಲ ಮಲಗಿ.

ಹಾಸಿಗೆಯಿಂದ ಎದ್ದ ನಂತರ, ಮೊದಲನೆಯದಾಗಿ ನಿಧಾನವಾಗಿ ಒಂದು ಲೋಟ ನೀರು ಕುಡಿಯಿರಿ. ನೀರು ದೇಹವನ್ನು ಪ್ರವೇಶಿಸುತ್ತಿದ್ದಂತೆ, ರಕ್ತದ ಹರಿವು ಸಾಮಾನ್ಯವಾಗಿ ಹೆಚ್ಚಾಗುತ್ತದೆ ಮತ್ತು ದೇಹವು ಸಹ ಹೈಡ್ರೀಕರಿಸಲ್ಪಡುತ್ತದೆ.

ಬೆಳಿಗ್ಗೆ ಎದ್ದ ನಂತರ ಒಂದರ ನಂತರ ಒಂದರಂತೆ ಕೆಲಸ ಮಾಡಲು ಪ್ರಾರಂಭಿಸಬೇಡಿ. ನಿಮ್ಮ ದೇಹಕ್ಕೆ ಒಂದರಿಂದ ಎರಡು ನಿಮಿಷಗಳ ಕಾಲ ವಿಶ್ರಾಂತಿ ನೀಡಿ ಮತ್ತು ಕ್ರಮೇಣ ನಿಮ್ಮ ಸಾಮಾನ್ಯ ಚಟುವಟಿಕೆಯನ್ನು ಹೆಚ್ಚಿಸಿ.

ಖಾಲಿ ಹೊಟ್ಟೆಯಲ್ಲಿ ಟೀ ಅಥವಾ ಕಾಫಿ ಕುಡಿಯುವ ಬದಲು, ಏನಾದರೂ ತಿಂದ ನಂತರ ಟೀ ಅಥವಾ ಕಾಫಿ ಕುಡಿಯಿರಿ. ಬೆಳಿಗ್ಗೆ ಬೇಗನೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಕಾರ್ಟಿಸೋಲ್ ಮಟ್ಟ ಹೆಚ್ಚಾಗುತ್ತದೆ. ಇದರಿಂದ ಹೃದಯವೂ ಆರೋಗ್ಯವಾಗಿರುತ್ತದೆ. ಅದರ ಆಯಸ್ಸು ಹೆಚ್ಚುತ್ತದೆ. ಹೃದಯ ಕಾಯಿಲೆಗಳು ಇರುವವರು ಇವುಗಳನ್ನು ಪಾಲನೆ ಮಾಡುವುದು ಸೂಕ್ತವಾಗಿದೆ. ಇತ್ತೀಚೆಗೆ ಹೃದಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಏನು ಸಮಸ್ಯೆ ಇಲ್ಲದವರು ತೊಂದರೆಗಳು ಬಾರತದಂತೆ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇನ್ನು ಹೃದಯದ ಆರೋಗ್ಯ ಕಾಪಾಡಿಕೊಳ್ಳಬೇಕು ಅಂದ್ರೆ ಏನು ಮಾಡಬೇಕು; ದಿನನಿತ್ಯ ದೈಹಿಕ ಚಟುವಟಿಕೆಗಳು ಅಥವಾ ವ್ಯಾಯಾಮ ಮಾಡುವುದರಿಂದ ಹೃದಯದ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಆರೋಗ್ಯಕತ ಆಹಾರ ಸೇವನೆ ಮಾಡಬೇಕು. ತಾಜಾವಾದ ಆಹಾರ, ಹಣ್ಣುಗಳು, ತರಕಾರಿಗಳು ಮತ್ತು ನಾರುಯುಕ್ತ ಆಹಾರನವನ್ನು ನೀವು ತಿನ್ನಬೇಕು ಆಗುತ್ತದೆ. ಹೃದಯದ ಕಾಯಿಲೆಗಳು ಬಾರದಂತೆ ಮೊದಲೇ ಅದರ ಬಗ್ಗೆ ತಿಳಿದುಕೊಳ್ಳೇಕು. ಇದರಿಂದ ಹೃದಯವೂ ಆರೋಗ್ಯವಾಗಿರುತ್ತದೆ.  

ಶ್ವಾಸಕೋಶದಲ್ಲಿ ದ್ರವದ ಸಂಗ್ರಹದಿಂದಾಗಿ ಉಸಿರಾಟದ ತೊಂದರೆ ಅಥವಾ ಉಸಿರಾಟದ ಅಹಿತಕರ ಅರಿವು. ಇದು ಶುಷ್ಕ, ಹ್ಯಾಕಿಂಗ್‌ ಕೆಮ್ಮು ಅಥವಾ ಉಬ್ಬಸವಾಗಿಯೂ ಕಾಣಿಸಿಕೊಳ್ಳಬಹುದು. ಮೂತ್ರಪಿಂಡಗಳಿಗೆ ಕಡಿಮೆ ರಕ್ತವು ದ್ರವ ಮತ್ತು ನೀರಿನ ಧಾರಣವನ್ನು ಉಂಟು ಮಾಡುತ್ತದೆ. ಇದರ ಪರಿಣಾಮವಾಗಿ ಕಣಕಾಲುಗಳು, ಕಾಲುಗಳು, ಹೊಟ್ಟೆ ಮತ್ತು ತೂಕ ಹೆಚ್ಚು ಆಗುತ್ತದೆ. ಈ ಹೃದಯಾಘಾತದ ಲಕ್ಷಣಗಳು ಮೂತ್ರ ವಿಸರ್ಜನೆಯ ಅಗತ್ಯವನ್ನು ಹೆಚ್ಚಿಸುತ್ತದೆ. ಹೊಟ್ಟೆ ಉಬ್ಬುವುದು, ಹಸಿವು, ವಾಕರಿಕೆ ಇಂತವುಗಳಿಗೆ ಕಾರಣವಾಗಬಹುದು. 
 

Add Zee News as a Preferred Source
TAGS:
Health Tips