SOCIAL MEDIA

Newsletter

PARTNER SITES
Select Language Select State

3D ಕರ್ವ್ಡ್ ಡಿಸ್ಪ್ಲೇ, 6000mAh ಬ್ಯಾಟರಿ, 45W ಫಾಸ್ಟ್ ಚಾರ್ಜಿಂಗ್‌! ಹೊಸ Lava Curve 5G ಬಿಡುಗಡೆ

ದೇಶೀಯ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಲಾವಾ ಹೊಸ Curve 5G ಫೋನ್‌ ಬಿಡುಗಡೆ ಮಾಡಿದೆ. 6.67 ಇಂಚಿನ 3D ಕರ್ವ್ಡ್ AMOLED ಡಿಸ್ಪ್ಲೇ, MediaTek Dimensity 7100 ಪ್ರೊಸೆಸರ್‌, 6000mAh ಬ್ಯಾಟರಿ, 45W ಫಾಸ್ಟ್‌ ಚಾರ್ಜಿಂಗ್‌ ಮತ್ತು 50MP ಕ್ಯಾಮೆರಾ ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ. ಫೋನ್‌ Android 16ನಲ್ಲಿ ಕಾರ್ಯನಿರ್ವಹಿಸಲಿದ್ದು, ಸೆಪ್ಟೆಂಬರ್‌ 28ರಿಂದ Flipkartನಲ್ಲಿ ಮಾರಾಟ ಆರಂಭವಾಗಲಿದೆ.

Reported By Puttaraj K Alur Written By Puttaraj K Alur
Published: Sep 21, 2026, 06:36 PM IST | Updated: Sep 21, 2026, 06:51 PM IST
Image Credit: Lava Curve 5G
Join

Lava Curve 5G Smartphone: ದೇಶೀಯ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಲಾವಾ (Lava) ತನ್ನ ಹೊಸ Lava Curve 5G ಸ್ಮಾರ್ಟ್‌ಫೋನ್‌ ಅನ್ನ ಮಾರುಕಟ್ಟೆಗೆ ಪರಿಚಯಿಸಿದೆ. 3D ಕರ್ವ್ಡ್ ಡಿಸ್ಪ್ಲೇ, 5G ಸಂಪರ್ಕ, ದೊಡ್ಡ ಬ್ಯಾಟರಿ ಹಾಗೂ ವೇಗದ ಚಾರ್ಜಿಂಗ್‌ ಸೇರಿದಂತೆ ಹಲವು ಫೀಚರ್‌ಗಳೊಂದಿಗೆ ಈ ಹೊಸ ಫೋನ್‌ ಗ್ರಾಹಕರ ಗಮನ ಸೆಳೆಯಲು ಸಜ್ಜಾಗಿದೆ. ಲಾವಾದ ವಿರಾಟ್ ಸರಣಿಯ ಭಾಗವಾಗಿರುವ ಈ ಮಾದರಿ, ವಿನ್ಯಾಸದ ಜೊತೆಗೆ ಕಾರ್ಯಕ್ಷಮತೆಗೂ ಆದ್ಯತೆ ನೀಡುತ್ತದೆ. ಈ ಹಿಂದೆ ಬಿಡುಗಡೆಯಾದ ಲಾವಾ ಬೋಲ್ಡ್ N4 ಪ್ರೊ ಮಾದರಿಯಲ್ಲಿಯೂ ಕರ್ವ್ಡ್ ಡಿಸ್ಪ್ಲೇ ನೀಡಲಾಗಿತ್ತು. ಇದೀಗ Lava Curve 5G ಮೂಲಕ ಕಂಪನಿ ಇದೇ ರೀತಿಯ 3D ಕರ್ವ್ಡ್ ಸ್ಕ್ರೀನ್‌ ಅನುಭವವನ್ನ 5G ಸ್ಮಾರ್ಟ್‌ಫೋನ್‌ನಲ್ಲಿ ನೀಡುತ್ತಿದೆ.

Lava Curve 5G ಬೆಲೆ ಮತ್ತು ಮಾರಾಟ

Lava Curve 5G ಅನ್ನ 6GB RAM + 128GB ಸ್ಟೋರೇಜ್‌ ಹೊಂದಿರುವ ಒಂದೇ ವೇರಿಯಂಟ್‌ನಲ್ಲಿ ಪರಿಚಯಿಸಲಾಗಿದೆ. ಫೋನ್‌ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. Heritage Indigo, Makrana Ivory ಮತ್ತು Ellora Slate ಬಣ್ಣಗಳಲ್ಲಿ ಗ್ರಾಹಕರು ಫೋನ್‌ ಖರೀದಿಸಬಹುದು. ಈ ಫೋನ್‌ನ ಮಾರಾಟ ಸೆಪ್ಟೆಂಬರ್‌ 28ರಂದು ಸಂಜೆ 7 ಗಂಟೆಗೆ ಆರಂಭವಾಗಲಿದೆ. ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ Flipkart ಮೂಲಕ ಮಾರಾಟ ನಡೆಯಲಿದೆ.

6.67 ಇಂಚಿನ 3D ಕರ್ವ್ಡ್ AMOLED ಡಿಸ್ಪ್ಲೇ

Lava Curve 5Gಯ ಪ್ರಮುಖ ಆಕರ್ಷಣೆ ಅದರ ಡಿಸ್ಪ್ಲೇ. ಫೋನ್‌ನಲ್ಲಿ 6.67 ಇಂಚಿನ Full HD+ 3D ಕರ್ವ್ಡ್ AMOLED ಡಿಸ್ಪ್ಲೇ ನೀಡಲಾಗಿದೆ. ಇದು 2400 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದ್ದು, 120Hz ರಿಫ್ರೆಶ್‌ ರೇಟ್‌ ಅನ್ನ ಬೆಂಬಲಿಸುತ್ತದೆ. ಡಿಸ್ಪ್ಲೇ ಗರಿಷ್ಠ 1,100 ನಿಟ್ಸ್‌ ಬ್ರೈಟ್‌ನೆಸ್‌ ನೀಡುತ್ತದೆ. ಸೆಂಟರ್‌ ಅಲೈನ್ಡ್ ಪಂಚ್‌-ಹೋಲ್ ವಿನ್ಯಾಸದ ಜೊತೆಗೆ ಇನ್‌-ಡಿಸ್ಪ್ಲೇ ಫಿಂಗರ್‌ಪ್ರಿಂಟ್‌ ಸೆನ್ಸಾರ್‌ ಕೂಡ ನೀಡಲಾಗಿದೆ. ಹೀಗಾಗಿ ವಿಡಿಯೋ ವೀಕ್ಷಣೆ, ಗೇಮಿಂಗ್‌ ಹಾಗೂ ದಿನನಿತ್ಯದ ಬಳಕೆಯಲ್ಲಿ ಉತ್ತಮ ಸ್ಕ್ರೀನ್‌ ಅನುಭವ ನೀಡುವ ಗುರಿಯನ್ನ ಫೋನ್ ಹೊಂದಿದೆ.

MediaTek Dimensity 7100 ಪ್ರೊಸೆಸರ್‌

ಕಾರ್ಯಕ್ಷಮತೆಗಾಗಿ Lava Curve 5Gಯಲ್ಲಿ MediaTek Dimensity 7100 ಚಿಪ್‌ಸೆಟ್‌ ಅಳವಡಿಸಲಾಗಿದೆ. ಫೋನ್‌ 6GB RAM ಮತ್ತು 128GB ಇಂಟರ್ನಲ್‌ ಸ್ಟೋರೇಜ್‌ನೊಂದಿಗೆ ಬರುತ್ತದೆ. ಸ್ಟೋರೇಜ್‌ ಅನ್ನ ಮೈಕ್ರೋSD ಕಾರ್ಡ್‌ ಮೂಲಕ ಮತ್ತಷ್ಟು ವಿಸ್ತರಿಸಬಹುದಾಗಿದೆ.

6000mAh ಬ್ಯಾಟರಿ, 45W ಫಾಸ್ಟ್‌ ಚಾರ್ಜಿಂಗ್‌

ಬ್ಯಾಟರಿ ವಿಭಾಗದಲ್ಲಿಯೂ Lava Curve 5G ಗಮನ ಸೆಳೆಯುತ್ತದೆ. ಫೋನ್‌ನಲ್ಲಿ 6000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಇದು 45W ವೈರ್ಡ್‌ ಫಾಸ್ಟ್‌ ಚಾರ್ಜಿಂಗ್‌ ಅನ್ನ ಬೆಂಬಲಿಸುತ್ತದೆ. ಹೆಚ್ಚು ಸಮಯ ಫೋನ್‌ ಬಳಸುವವರಿಗೆ ದೊಡ್ಡ ಬ್ಯಾಟರಿ ಉಪಯುಕ್ತವಾಗಬಹುದು. ಇದರೊಂದಿಗೆ ಫೋನ್‌ Android 16 ಆಪರೇಟಿಂಗ್‌ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿಯು ಎರಡು ವರ್ಷಗಳ ಆಪರೇಟಿಂಗ್‌ ಸಿಸ್ಟಂ ಅಪ್‌ಡೇಟ್‌ ಹಾಗೂ ಮೂರು ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್‌ಗಳನ್ನು ನೀಡುವುದಾಗಿ ತಿಳಿಸಿದೆ.

50MP ಕ್ಯಾಮೆರಾ, 13MP ಸೆಲ್ಫಿ ಕ್ಯಾಮೆರಾ

ಫೋಟೋಗ್ರಫಿಗಾಗಿ ಫೋನ್‌ನ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ಸೆಟಪ್‌ ನೀಡಲಾಗಿದೆ. ಇದರಲ್ಲಿ 50MP ಮುಖ್ಯ ಕ್ಯಾಮೆರಾ ಪ್ರಮುಖವಾಗಿದೆ. ಇದರ ಜೊತೆಗೆ ಸೆಕೆಂಡರಿ ಕ್ಯಾಮೆರಾವನ್ನೂ ನೀಡಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗಾಗಿ ಮುಂಭಾಗದಲ್ಲಿ 13MP ಫ್ರಂಟ್‌ ಕ್ಯಾಮೆರಾ ನೀಡಲಾಗಿದೆ.

MIL-STD-810H ಮತ್ತು IP64 ರೇಟಿಂಗ್‌

ಬಾಳಿಕೆ ವಿಚಾರದಲ್ಲಿಯೂ Lava Curve 5G ಕೆಲವು ವಿಶೇಷತೆಗಳನ್ನ ಹೊಂದಿದೆ. ಫೋನ್‌ MIL-STD-810H ಮಿಲಿಟರಿ-ಗ್ರೇಡ್‌ ಡ್ಯುರಬಿಲಿಟಿ ಮಾನದಂಡವನ್ನ ಬೆಂಬಲಿಸುತ್ತದೆ. ಜೊತೆಗೆ IP64 ರೇಟಿಂಗ್‌ ಕೂಡ ಇದೆ. ಕನೆಕ್ಟಿವಿಟಿ ವಿಚಾರದಲ್ಲಿ Wi-Fi, Bluetooth ಹಾಗೂ IR Blaster ಸೇರಿದಂತೆ ಹಲವು ಆಯ್ಕೆಗಳನ್ನ ಫೋನ್‌ ಹೊಂದಿದೆ.

Lava Curve 5G ಪ್ರಮುಖ ವಿಶೇಷತೆಗಳು

ಲಾವಾ ಕರ್ವ್ 5Gವೈಶಿಷ್ಟ್ಯಗಳು
ಡಿಸ್ಲ್ಪೇ6.67 ಇಂಚುಗಳು, 120Hz
ಪ್ರೊಸೆಸರ್ಮೀಡಿಯಾ ಟೆಕ್ ಡೈಮೆನ್ಸಿಟಿ 7100
ಸ್ಟೋರೇಜ್6 GB, 128 GB
ಬ್ಯಾಟರಿ6000mAh, 45W
ಕ್ಯಾಮೆರಾ50 MP, 13 MP
OSಆಂಡ್ರಾಯ್ಡ್ 16

ಒಟ್ನಲ್ಲಿ 3D ಕರ್ವ್ಡ್ AMOLED ಡಿಸ್ಪ್ಲೇ, 6000mAh ಬ್ಯಾಟರಿ, 45W ಫಾಸ್ಟ್‌ ಚಾರ್ಜಿಂಗ್‌, 50MP ಕ್ಯಾಮೆರಾ ಮತ್ತು Android 16ನಂತಹ ಫೀಚರ್‌ಗಳೊಂದಿಗೆ Lava Curve 5G ಮಾರುಕಟ್ಟೆಗೆ ಪ್ರವೇಶಿಸಿದೆ. ದೇಶೀಯ ಬ್ರ್ಯಾಂಡ್‌ನಿಂದ ಬಂದಿರುವ ಈ ಹೊಸ 5G ಫೋನ್‌ ಗ್ರಾಹಕರಿಗೆ ಮತ್ತೊಂದು ಆಯ್ಕೆಯನ್ನ ನೀಡಲಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES