• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /ಈ 5 ಅಭ್ಯಾಸ ಇರೋ ಹುಡುಗಿಯರಿಂದ ನೀವು ದೂರ ಇದ್ರೆ ಉತ್ತಮ.. ನಿಮ್ಮ ಸಂಗಾತಿ ಆಯ್ಕೆ ಆಗಿರಲಿ

ಈ 5 ಅಭ್ಯಾಸ ಇರೋ ಹುಡುಗಿಯರಿಂದ ನೀವು ದೂರ ಇದ್ರೆ ಉತ್ತಮ.. ನಿಮ್ಮ ಸಂಗಾತಿ ಆಯ್ಕೆ ಆಗಿರಲಿ

ಸಂಬಂಧವು ಒಳಗಿನಿಂದ ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಅದಕ್ಕಾಗಿಯೇ ಹುಡುಗಿಯ ಜೊತೆ ಡೇಟಿಂಗ್ ಮಾಡುವಾಗ ಅವಳ ಸೌಂದರ್ಯವನ್ನು ಮಾತ್ರವಲ್ಲದೆ ಸ್ವಭಾವವನ್ನ ಕೂಡ ಅರ್ಥಮಾಡಿಕೊಳ್ಳುವುದು ಮುಖ್ಯ.

Written ByBhimappa
Published: Sep 28, 2026, 08:11 PM IST|Updated: Sep 28, 2026, 08:28 PM IST
joinshare
ಈ 5 ಅಭ್ಯಾಸ ಇರೋ ಹುಡುಗಿಯರಿಂದ ನೀವು ದೂರ ಇದ್ರೆ ಉತ್ತಮ.. ನಿಮ್ಮ ಸಂಗಾತಿ ಆಯ್ಕೆ ಆಗಿರಲಿ
Image Credit: girls_habits

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Girls 5 habits: ಪ್ರತಿಯೊಬ್ಬ ಹುಡುಗನೂ ತನ್ನ ಜೀವನದಲ್ಲಿ ತುಂಬಾ ಸಂತೋಷದಿಂದ ಖುಷಿ ಖುಷಿಯಿಂದ ಇರುವ ಹುಡುಗಿಯನ್ನು ಬಯಸುತ್ತಾನೆ. ಆದರೆ ಪ್ರೀತಿಯಲ್ಲಿ ಪಳಗಿದ ಮೇಲೆ ಒಂದೇ ಒಂದೇ ಹೊಸ ಅವತಾರಗಳು ಹೊರ ಬರುತ್ತವೆ. ಆರಂಭದಲ್ಲಿ, ಸಂಬಂಧದಲ್ಲಿ ಎಲ್ಲವೂ ಚೆನ್ನಾಗಿಯೇ ಕಾಣುತ್ತದೆ. ಆದರೆ ಸಂಬಂಧ ಮುಂದುವರೆದಂತೆ, ಕೆಲವು ಅಭ್ಯಾಸ, ಸ್ವಭಾವಗಳು ಮನಸ್ಸಿಗೆ ಬೇರೆ ತೀರಿ ಕಾಣುತ್ತವೆ. ಇದರಿಂದ ಸಂಬಂಧವು ಒಳಗಿನಿಂದ ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಅದಕ್ಕಾಗಿಯೇ ಹುಡುಗಿಯ ಜೊತೆ ಡೇಟಿಂಗ್ ಮಾಡುವಾಗ ಅವಳ ಸೌಂದರ್ಯವನ್ನು ಮಾತ್ರವಲ್ಲದೆ ಸ್ವಭಾವವನ್ನ ಕೂಡ ಅರ್ಥಮಾಡಿಕೊಳ್ಳುವುದು ಮುಖ್ಯ. ನೀವು ವ್ಯಕ್ತಿಯೊಂದಿಗೆ ಸಂಬಂಧದಲ್ಲಿದ್ದರೆ..

ನಿಮ್ಮ ಮೇಲೆ ಅನುಮಾನ; ನಿಮ್ಮ ಸಂಗಾತಿ ಯಾವುದೇ ಕಾರಣವಿಲ್ಲದೆ ನಿಮ್ಮ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದರೆ ಅಥವಾ ನಿರಂತರವಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದರೆ ಜಾಗರೂಕರಾಗಿರುವುದು ಮುಖ್ಯ. ನಿಮ್ಮ ಸಂಗಾತಿ ಇಂತವುಗಳನ್ನು ಕೇಳುತ್ತಿದ್ರೆ ನೀವು ಇದನ್ನು ನಿರ್ಲಕ್ಷಿಸಬೇಡಿ. ಈ ಸಮಸ್ಯೆ ಅಭದ್ರತೆಯಿಂದ ಉಂಟಾಗುತ್ತದೆ. ಸಂಬಂಧದಲ್ಲಿ ಕೇವಲ ವಾದವಿರುತ್ತದೆ. ಅಂದರೆ ಮಾತುಗಳು ಹೆಚ್ಚಾಗುತ್ತವೆ. ಆದ್ದರಿಂದ ಸಂಗಾತಿಯನ್ನು ಆಯ್ಕೆ ಮಾಡುವಾಗ‌ ಹುಷಾರ್. ನೀವು ಸಂಗಾತಿಗಾಗಿ ಎಷ್ಟೇ ಒಳ್ಳೆಯದು ಮಾಡಿದರೂ ಅದರಲ್ಲಿ ತಪ್ಪು ಮಾಡುವುದು. ಜೊತೆಗೆ ನಿಮ್ಮ ಕೆಲಸದಲ್ಲಿ ತಪ್ಪು ಹುಡುಕಿ ಟೀಕೆ ಮಾಡುವುದು.

ನಿಮ್ಮ ಪ್ರವೇಟ್‌ ಲೈಫ್‌ ಗೌರವಿಸದೇ ಇರುವುದು; ಸಂಬಂಧ ಎಷ್ಟೇ ಮುಖ್ಯವಾಗಿದ್ದರೂ, ಪ್ರತಿಯೊಬ್ಬರಿಗೂ ಖಾಸಗಿ ಜೀವನವಿರುತ್ತದೆ. ನಿಮ್ಮ ಸಂಗಾತಿ ನಿಮ್ಮ ಜಾಗದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರೆ. ಉದಾಹರಣೆಗೆ ನಿಮ್ಮ ಫೋನ್ ಪರಿಶೀಲಿಸುವುದು, ನಿರಂತರವಾಗಿ ನಿಮ್ಮೊಂದಿಗೆ ಬರುವುದು, ನಿಮ್ಮ ಗೌಪ್ಯತೆಯನ್ನು ಗೌರವಿಸದಿರುವುದು ಆಗ ಜಾಗರೂಕರಾಗಿರಿ. ಏಕೆಂದರೆ ಇದು ನಿಮ್ಮ ವೈಯಕ್ತಿಕ ಜೀವನವನ್ನು ತೊಂದರೆಗೊಳಿಸುತ್ತಿದೆ. ನಿಮ್ಮನ್ನು ಇತರರೊಂದಿಗೆ ಹೋಲಿಕೆ ಮಾಡುವುದು. ಅಂದರೆ ನಿಮ್ಮ ಆದಾಯ, ಶಕ್ತಿ, ಆರ್ಥಿಕ ಶಕ್ತಿಯನ್ನು ಇತರರೊಂದಿಗೆ ಹೋಲಿಸುವುದು. ನಿಮ್ಮನ್ನು ಕೆಳಮಟ್ಟದಲ್ಲಿ ನೋಡುವುದು. 

ಯಾವಾಗಲೂ ನಿಮಗೆ ಸುಳ್ಳು ಹೇಳುವುದು; ಯಾವುದೇ ಸಂಬಂಧದಲ್ಲಿ ನಂಬಿಕೆ ಬಹಳ ಮುಖ್ಯ. ಸುಳ್ಳು ಹೇಳುವುದರಿಂದ ಅಂತರ ಉಂಟಾಗಬಹುದು. ಯಾರಾದರೂ ನಿಮಗೆ ಸುಳ್ಳು ಹೇಳುತ್ತಿದ್ದರೆ, ಆ ಸಂಬಂಧವನ್ನು ನಿಲ್ಲಿಸುವುದು ಬಹಳ ಮುಖ್ಯ. ಏಕೆಂದರೆ ಒಮ್ಮೆ ನಂಬಿಕೆ ಮುರಿದುಹೋದರೆ, ಆ ಸಂಬಂಧದಲ್ಲಿ ಅಂತರ ಸೃಷ್ಟಿಯಾಗುತ್ತದೆ. ನಿಮ್ಮ ಸಾಧನೆಯನ್ನು ಪ್ರೋತ್ಸಾಹ ಮಾಡದೇ ಸದಾ ತಪ್ಪುಗಳನ್ನು ಹುಡುಕುವುದು. ನಿಮ್ಮ ಕೊರತೆಗಳನ್ನು ಸಾಧನೆಗಿಂತ ದೊಡ್ಡದಾಗಿ ಹೇಳಿ ಕುಗ್ಗಿಸುವುದು. ನೀವು ಸಂಗಾತಿಗಾಗಿ ಏನೇ ಮಾಡಿದರು ಅದಕ್ಕೆ ಕೃತಜ್ಞತೆ ಸಲ್ಲಿಸುವುದೇ ಇರದೇ ಇರುವುದು. ಸಂಬಂಧ ಎನ್ನುವುದು ಇಬ್ಬರ ಕಡೆಯಿಂದಲೂ ಇರಬೇಕು. ಉತ್ತಮವಾದ ಬಾಡಿಂಗ್‌ ಇರಬೇಕು. ಒಬ್ಬರಿಗೊಬ್ಬರನ್ನು ಗೌರವಿಸುವಂತಹ ಮನೋಭಾವ ಇರಬೇಕು. ಬದುಕಲ್ಲಿ ಒಬ್ಬರೇ ತ್ಯಾಗ, ಖರ್ಚು ಮಾಡುತ್ತಿದ್ರೆ ಅದಕ್ಕೆ ಬೆಲೆ ಇರುವುದಿಲ್ಲ.

ನಿರಂತರ ಅವಲಂಬನೆ; ಕೆಲವು ಸಂಬಂಧಗಳು ಎಷ್ಟು ಅಂಟಿಕೊಂಡಿರುತ್ತವೆ ಎಂದರೆ, ಅವು ಇನ್ನೊಬ್ಬ ವ್ಯಕ್ತಿಯ ಮೇಲೆ ನಿರಂತರವಾಗಿ ಅವಲಂಬನೆಯನ್ನು ಒಳಗೊಂಡಿರುತ್ತವೆ. ಅಂತಹ ಸಂದರ್ಭದಲ್ಲಿ, ನೀವು ಇನ್ನೊಬ್ಬ ವ್ಯಕ್ತಿಯಿಂದ ಬೆಂಬಲವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ನೀವು ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿರ್ಧಾರ ನಿಮಗೆ ಸಂತೋಷವಾಗುವಂತೆ ಇರಬೇಕು. ಪ್ರತಿ ಸಣ್ಣ ವಿಚಾರಕ್ಕೂ ದೊಡ್ಡ ರಂಪಾಟ ಮಾಡಿ ಅದನ್ನು ದೊಡ್ಡದಾಗಿ ಬಿಂಬಿಸುವುದು. ನಿಮ್ಮನ್ನು ಭಾವನಾತ್ಮಕವಾಗಿ ಹೊಡೆದು ಹಾಕುವುದು. ಅಂದರೆ ಕುಗ್ಗಿಸುವುದು. ಇದರಿಂದ ನಿಮ್ಮ ನಡುವಿನ ನೆಮ್ಮದಿ ಹಾಳಾಗಿ ಹೋಗುತ್ತದೆ. ಇಂತಹ ನಡವಳಿಕೆ ನಿಮ್ಮ ಜೀವನದಲ್ಲಿ ನೆಮ್ಮದಿಯನ್ನು ಸಂಪೂರ್ಣವಾಗಿ ಹಾಳು ಮಾಡುತ್ತದೆ. 

ನಿಮ್ಮ ಸಂಗಾತಿ ಇತರರೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದರೆ ಜಾಗರೂಕರಾಗಿರಿ. ಏಕೆಂದರೆ ಈ ರೀತಿಯ ನಡವಳಿಕೆಯು ನಿಮ್ಮ ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು. ಇತರ ವ್ಯಕ್ತಿಗೆ ಕೀಳರಿಮೆ ತೋರಿಸುವುದು ಹಲವರ ಸ್ವಭಾವ. ಆದರೆ ಅಂತಹ ಸಂದರ್ಭದಲ್ಲಿ, ನೀವು ಜಾಗರೂಕರಾಗಿರಬೇಕು. ಇಬ್ಬರು ಗೌರವ, ಪರಸ್ಪರ ಅರ್ಥ ಮಾಡಿಕೊಳ್ಳುವಿಕೆ ಮೇಲೆ ಸಂಬಂಧ ನಿಂತಿರುತ್ತದೆ. ನಿಮಗೆ ಗೌರವ ಇಲ್ಲದ ಕಡೆ ದೂರ ಇದ್ರೆ ಅದು ನಿಮ್ಮ ಬುದ್ಧಿವಂತಿಕೆ.
 

Add Zee News as a Preferred Source
TAGS:
Health Tips