SOCIAL MEDIA

Newsletter

PARTNER SITES
Select Language Select State

Infinix GT 50 Pro: ಈ ಸ್ಮಾರ್ಟ್‌ಫೋನ್‌ ಖರೀದಿಸಿದ್ರೆ ₹24,999 ಮೌಲ್ಯದ ಗೇಮಿಂಗ್ ಕಿಟ್ ಉಚಿತ!

ಇನ್ಫಿನಿಕ್ಸ್ ತನ್ನ ಹೊಸ GT 50 Pro ಗೇಮಿಂಗ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. 6500mAh ಬ್ಯಾಟರಿ, 144Hz AMOLED ಡಿಸ್ಪ್ಲೇ, 12GB RAM, 50MP ಕ್ಯಾಮೆರಾ ಹಾಗೂ ಲಿಕ್ವಿಡ್ ಕೂಲಿಂಗ್ ಸಿಸ್ಟಮ್ ಇದರ ಪ್ರಮುಖ ವೈಶಿಷ್ಟ್ಯಗಳು. ₹69,999 ಬೆಲೆಯ ಈ ಫೋನ್ ಖರೀದಿಗೆ ₹24,999 ಮೌಲ್ಯದ ಉಚಿತ ಗೇಮಿಂಗ್ ಕಿಟ್ ಮತ್ತು ₹5,000 ಬ್ಯಾಂಕ್ ಆಫರ್ ನೀಡಲಾಗುತ್ತಿದೆ.

Written By Puttaraj K Alur
Published: Oct 27, 2026, 06:44 PM IST | Updated: Oct 27, 2026, 06:55 PM IST
Image Credit: Infinix GT 50 Pro
Join

Infinix GT 50 Pro Smartphone: ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಇನ್ಫಿನಿಕ್ಸ್ ತನ್ನ GT ಸರಣಿಯಲ್ಲಿ ಮತ್ತೊಂದು ಶಕ್ತಿಶಾಲಿ ಗೇಮಿಂಗ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಇನ್ಫಿನಿಕ್ಸ್ ಜಿಟಿ 50 ಪ್ರೊ (Infinix GT 50 Pro) ಹೆಸರಿನ ಈ ಫೋನ್ 6500mAh ಸಾಮರ್ಥ್ಯದ ಬ್ಯಾಟರಿ, 144Hz AMOLED ಡಿಸ್ಪ್ಲೇ ಹಾಗೂ ಮೀಡಿಯಾಟೆಕ್ ಡೈಮೆನ್ಸಿಟಿ 8400 ಅಲ್ಟಿಮೇಟ್ ಪ್ರೊಸೆಸರ್ ಹೊಂದಿದೆ. ವಿಶೇಷವಾಗಿ ಗೇಮಿಂಗ್‌ಗಾಗಿ ಹೈಡ್ರೋಫ್ಲೋ ಲಿಕ್ವಿಡ್ ಕೂಲಿಂಗ್ ಸಿಸ್ಟಮ್ ನೀಡಲಾಗಿದೆ. ಈ ಫೋನ್ ಖರೀದಿಸುವ ಗ್ರಾಹಕರಿಗೆ ₹24,999 ಮೌಲ್ಯದ ಗೇಮಿಂಗ್ ಕಿಟ್ ಉಚಿತವಾಗಿ ನೀಡುವುದಾಗಿ ಕಂಪನಿ ತಿಳಿಸಿದೆ.

ಇನ್ಫಿನಿಕ್ಸ್ ಜಿಟಿ 50 ಪ್ರೊ ಬೆಲೆ ಎಷ್ಟು?

ಇನ್ಫಿನಿಕ್ಸ್ ಜಿಟಿ 50 ಪ್ರೊ ಸ್ಮಾರ್ಟ್‌ಫೋನ್ ಒಂದೇ ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆಯಾಗಿದೆ. 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಫೋನ್ ಬೆಲೆ ₹69,999 ಆಗಿದೆ. ಗ್ರಾಹಕರು ಬ್ಲಾಕ್ ಅಬಿಸ್ (Black Abyss) ಮತ್ತು ರೆಡ್ ಬ್ಲೇಜ್ (Red Blaze) ಎಂಬ ಎರಡು ಬಣ್ಣಗಳಲ್ಲಿ ಈ ಸ್ಮಾರ್ಟ್‌ಫೋನ್ ಖರೀದಿಸಬಹುದು. ಕಂಪನಿಯು ಫ್ಲಿಪ್‌ಕಾರ್ಟ್ ಮೂಲಕ ಫೋನ್ ಮಾರಾಟಕ್ಕೆ ಲಭ್ಯವಾಗುವಂತೆ ಮಾಡಲಿದೆ. ಇದರೊಂದಿಗೆ ₹5,000 ಬ್ಯಾಂಕ್ ಆಫರ್ ಕೂಡ ನೀಡಲಾಗುತ್ತಿದೆ. ಅಲ್ಲದೆ ಫೋನ್ ಖರೀದಿಸುವವರಿಗೆ ₹24,999 ಮೌಲ್ಯದ ವಿಶೇಷ ಗೇಮಿಂಗ್ ಕಿಟ್ ಉಚಿತವಾಗಿ ದೊರೆಯಲಿದೆ.

₹24,999 ಮೌಲ್ಯದ ಗೇಮಿಂಗ್ ಕಿಟ್ ಉಚಿತ

ಇನ್ಫಿನಿಕ್ಸ್ ತನ್ನ ಹೊಸ ಗೇಮಿಂಗ್ ಫೋನ್ ಖರೀದಿಸುವ ಗ್ರಾಹಕರಿಗೆ ವಿಶೇಷ ಉಡುಗೊರೆಯನ್ನ ಘೋಷಿಸಿದೆ. ಈ ಗೇಮಿಂಗ್ ಕಿಟ್‌ನಲ್ಲಿ GT NX ಸ್ಟೇಷನ್, GT NX ಕಂಟ್ರೋಲರ್, GT ಕೂಲಿಂಗ್ ಫ್ಯಾನ್ ಕಮ್ ಚಾರ್ಜರ್ ಹಾಗೂ GT 50 Pro MagSafe ಕವರ್ ಸೇರಿದಂತೆ ಗೇಮಿಂಗ್‌ಗೆ ಸಂಬಂಧಿಸಿದ ಪರಿಕರಗಳು ಇರಲಿವೆ. ಈ ಕಿಟ್‌ನ ಒಟ್ಟು ಮೌಲ್ಯ ₹24,999 ಎಂದು ಕಂಪನಿ ತಿಳಿಸಿದೆ. ಇದರ ಜೊತೆಗೆ ₹5,000 ಬ್ಯಾಂಕ್ ಆಫರ್ ಕೂಡ ಲಭ್ಯವಿರುವುದರಿಂದ ಖರೀದಿದಾರರಿಗೆ ಹೆಚ್ಚುವರಿ ಪ್ರಯೋಜನ ಸಿಗಲಿದೆ.

144Hz AMOLED ಡಿಸ್ಪ್ಲೇ ವಿಶೇಷತೆ

ಇನ್ಫಿನಿಕ್ಸ್ ಜಿಟಿ 50 ಪ್ರೊ ಸ್ಮಾರ್ಟ್‌ಫೋನ್ 6.78 ಇಂಚಿನ LTPS AMOLED ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 144Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ಫೋನ್‌ನ ಗರಿಷ್ಠ ಬ್ರೈಟ್‌ನೆಸ್ 4500 ನಿಟ್ಸ್ ಆಗಿದ್ದು, ಡಿಸ್ಪ್ಲೇ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ನೀಡಲಾಗಿದೆ. ಗೇಮಿಂಗ್ ಮತ್ತು ಮಲ್ಟಿಮೀಡಿಯಾ ಬಳಕೆಗೆ ಅನುಗುಣವಾಗಿ ಈ ಡಿಸ್ಪ್ಲೇ ವೈಶಿಷ್ಟ್ಯಗಳನ್ನ ಒದಗಿಸಲಾಗಿದೆ.

ಡೈಮೆನ್ಸಿಟಿ 8400 ಅಲ್ಟಿಮೇಟ್ ಪ್ರೊಸೆಸರ್

ಹೊಸ ಇನ್ಫಿನಿಕ್ಸ್ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 8400 ಅಲ್ಟಿಮೇಟ್ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ 12GB RAM ಹಾಗೂ 256GB ಸ್ಟೋರೇಜ್ ನೀಡಲಾಗಿದೆ. ಗೇಮಿಂಗ್ ಸಮಯದಲ್ಲಿ ಫೋನ್ ಬಿಸಿಯಾಗುವುದನ್ನ ನಿಯಂತ್ರಿಸಲು ಹೈಡ್ರೋಫ್ಲೋ ಲಿಕ್ವಿಡ್ ಕೂಲಿಂಗ್ ಆರ್ಕಿಟೆಕ್ಚರ್ ಅಳವಡಿಸಲಾಗಿದೆ. ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್ ಸಂದರ್ಭದಲ್ಲಿ ಫೋನ್ ತಂಪಾಗಿರಲು ಈ ತಂತ್ರಜ್ಞಾನ ನೆರವಾಗುತ್ತದೆ ಎಂದು ಕಂಪನಿ ತಿಳಿಸಿದೆ. ಇದರ ಜೊತೆಗೆ ಗೇಮಿಂಗ್ ನಿಯಂತ್ರಣಕ್ಕಾಗಿ ಓಪನ್-ಕಟ್ ಪ್ರೆಶರ್-ಸೆನ್ಸ್ ಜಿಟಿ ಟ್ರಿಗ್ಗರ್‌ಗಳನ್ನ ನೀಡಲಾಗಿದೆ.

50MP ಕ್ಯಾಮೆರಾ, 13MP ಸೆಲ್ಫಿ ಕ್ಯಾಮೆರಾ

ಇನ್ಫಿನಿಕ್ಸ್ ಜಿಟಿ 50 ಪ್ರೊ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲವಿರುವ 50MP ಮುಖ್ಯ ಕ್ಯಾಮೆರಾ ಹಾಗೂ 8MP ಅಲ್ಟ್ರಾ-ವೈಡ್ ಕ್ಯಾಮೆರಾ ಸೇರಿವೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 13MP ಕ್ಯಾಮೆರಾ ನೀಡಲಾಗಿದೆ.

6500mAh ಬ್ಯಾಟರಿ, ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ

ಈ ಗೇಮಿಂಗ್ ಸ್ಮಾರ್ಟ್‌ಫೋನ್‌ನ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ 6500mAh ಸಾಮರ್ಥ್ಯದ ಬ್ಯಾಟರಿ. ಫೋನ್ 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 30W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತದೆ. ಇದರ ಜೊತೆಗೆ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್, ವೈಫೈ 6, ಬ್ಲೂಟೂತ್ 5.4 ಮತ್ತು NFC ಸಂಪರ್ಕ ಸೌಲಭ್ಯಗಳನ್ನ ಒದಗಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 17 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಇನ್ಫಿನಿಕ್ಸ್ ಜಿಟಿ 50 ಪ್ರೊ ಪ್ರಮುಖ ವೈಶಿಷ್ಟ್ಯಗಳು

ವೈಶಿಷ್ಟ್ಯ   ವಿವರ
ಡಿಸ್ಪ್ಲೇ 6.78 ಇಂಚಿನ LTPS AMOLED   
ರಿಫ್ರೆಶ್ ರೇಟ್   144Hz  
ಪ್ರೊಸೆಸರ್       MediaTek Dimensity 8400 Ultimate 
RAM ಮತ್ತು ಸ್ಟೋರೇಜ್12GB + 256GB       
ಮುಖ್ಯ ಕ್ಯಾಮೆರಾ 50MP OIS + 8MP
ಸೆಲ್ಫಿ ಕ್ಯಾಮೆರಾ 13MP
ಬ್ಯಾಟರಿ6500mAh   
ಚಾರ್ಜಿಂಗ್   45W ವೈರ್ಡ್, 30W ವೈರ್‌ಲೆಸ್
ಆಪರೇಟಿಂಗ್ ಸಿಸ್ಟಮ್ Android 17 

ಇನ್ಫಿನಿಕ್ಸ್ ಜಿಟಿ 50 ಪ್ರೊ ಗೇಮಿಂಗ್ ಸ್ಮಾರ್ಟ್‌ಫೋನ್ 144Hz AMOLED ಡಿಸ್ಪ್ಲೇ, ಲಿಕ್ವಿಡ್ ಕೂಲಿಂಗ್ ವ್ಯವಸ್ಥೆ, ದೊಡ್ಡ ಬ್ಯಾಟರಿ ಹಾಗೂ ವಿಶೇಷ ಗೇಮಿಂಗ್ ಟ್ರಿಗ್ಗರ್‌ಗಳೊಂದಿಗೆ ಬಿಡುಗಡೆಯಾಗಿದೆ. ಕಂಪನಿಯು ₹24,999 ಮೌಲ್ಯದ ಉಚಿತ ಗೇಮಿಂಗ್ ಕಿಟ್ ಮತ್ತು ₹5,000 ಬ್ಯಾಂಕ್ ಆಫರ್ ನೀಡುವುದಾಗಿ ತಿಳಿಸಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES