• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /490 KM ರೇಂಜ್, 7 ಸೀಟರ್‌ಗಳ ಸಾಮರ್ಥ್ಯ! ಹ್ಯುಂಡೈನಿಂದ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆ

490 KM ರೇಂಜ್, 7 ಸೀಟರ್‌ಗಳ ಸಾಮರ್ಥ್ಯ! ಹ್ಯುಂಡೈನಿಂದ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆ

ಹ್ಯುಂಡೈ ತನ್ನ ಹೊಸ ಎಲೆಕ್ಟ್ರಿಕ್ ಎಂಪಿವಿ 'ನೀರಾ' (Neira) ಕಾರನ್ನ ಅನಾವರಣಗೊಳಿಸಲು ಸಿದ್ಧವಾಗಿದೆ. 360 ಡಿಗ್ರಿ ಕ್ಯಾಮೆರಾ, ಲೆವೆಲ್-2 ADAS ತಂತ್ರಜ್ಞಾನ ಹೊಂದಿರುವ ಈ ಕಾರು ಎರಡು ಬ್ಯಾಟರಿ ಆಯ್ಕೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. 2027ರಲ್ಲಿ ಭಾರತಕ್ಕೂ ಎಂಟ್ರಿ ನೀಡುವ ಸಾಧ್ಯತೆಯಿದ್ದು, ಪೆಟ್ರೋಲ್ ಆವೃತ್ತಿಯಲ್ಲೂ ಲಭ್ಯವಾಗಬಹುದು ಎಂದು ವರದಿಯಾಗಿದೆ.

Written ByPuttaraj K Alur
Published: Nov 18, 2026, 17:58 IST|Updated: Nov 18, 2026, 18:13 IST
joinshare
490 KM ರೇಂಜ್, 7 ಸೀಟರ್‌ಗಳ ಸಾಮರ್ಥ್ಯ! ಹ್ಯುಂಡೈನಿಂದ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆ
Image Credit: Hyundai Electric Car

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Hyundai Electric Car: ದಕ್ಷಿಣ ಕೊರಿಯಾದ ಪ್ರಮುಖ ವಾಹನ ತಯಾರಕ ಕಂಪನಿ ಹ್ಯುಂಡೈ (Hyundai), ತನ್ನ ಹೊಸ 7 ಸೀಟರ್‌ಗಳ ಎಲೆಕ್ಟ್ರಿಕ್ ಎಂಪಿವಿ (Electric MPV) 'ಹ್ಯುಂಡೈ ನೀರಾ' (Hyundai Neira) ಕಾರಿನ ಪ್ರೊಡಕ್ಷನ್ ಮಾದರಿಯ ಮೊದಲ ನೋಟವನ್ನ ಅನಾವರಣಗೊಳಿಸಿದೆ. ಒಂದೇ ಚಾರ್ಜ್‌ನಲ್ಲಿ ಗರಿಷ್ಠ 490 ಕಿಲೋಮೀಟರ್‌ವರೆಗೆ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿರುವ ಈ ಹೊಸ ಕಾರು ಇದೀಗ ವಾಹನ ಪ್ರಿಯರ ಗಮನ ಸೆಳೆದಿದೆ. ವಿಶೇಷವೆಂದರೆ ಈ ಕಾರನ್ನ 2027ರಲ್ಲಿ ಭಾರತೀಯ ಮಾರುಕಟ್ಟೆಗೂ ಪರಿಚಯಿಸುವ ಸಾಧ್ಯತೆಯಿದೆ.

ಮಾಹಿತಿಯ ಪ್ರಕಾರ, ಹ್ಯುಂಡೈ ಕಂಪನಿಯು ನವೆಂಬರ್ 20ರಂದು ನೀರಾ ಕಾರನ್ನ ಅಧಿಕೃತವಾಗಿ ಅನಾವರಣಗೊಳಿಸಲು ಸಿದ್ಧತೆ ನಡೆಸಿದೆ. ಸದ್ಯಕ್ಕೆ ಕಾರಿನ ಪ್ರೊಡಕ್ಷನ್ ಮಾದರಿಯ ಮೊದಲ ಚಿತ್ರಗಳನ್ನ ಮಾತ್ರ ಬಹಿರಂಗಪಡಿಸಲಾಗಿದೆ. ಈ ಮೂಲಕ ಕಂಪನಿಯು ತನ್ನ ಹೊಸ ಎಲೆಕ್ಟ್ರಿಕ್ ಎಂಪಿವಿಯ ವಿನ್ಯಾಸದ ಕುರಿತು ಮೊದಲ ಮಾಹಿತಿ ನೀಡಿದೆ.

7 ಸೀಟರ್ ಸಾಮರ್ಥ್ಯದ ಹೊಸ ಎಲೆಕ್ಟ್ರಿಕ್ ಎಂಪಿವಿ

ಹ್ಯುಂಡೈ ನೀರಾ ಏಳು ಆಸನಗಳ ಸಾಮರ್ಥ್ಯ ಹೊಂದಿರುವ ಎಲೆಕ್ಟ್ರಿಕ್ ಎಂಪಿವಿಯಾಗಿದೆ. ಕುಟುಂಬದ ಬಳಕೆಯನ್ನ ಗಮನದಲ್ಲಿಟ್ಟುಕೊಂಡು ರೂಪಿಸಲಾಗಿರುವ ಈ ವಾಹನವು ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಹ್ಯುಂಡೈನ ಹೊಸ ಪ್ರಯತ್ನವಾಗಿದೆ. ಒಂದೇ ಚಾರ್ಜ್‌ನಲ್ಲಿ ಗರಿಷ್ಠ 490 ಕಿಲೋಮೀಟರ್ ರೇಂಜ್ ನೀಡುವ ನಿರೀಕ್ಷೆಯಿದ್ದು, ಈ ವಿಭಾಗದಲ್ಲಿ ಗಮನ ಸೆಳೆಯುವ ಸಾಧ್ಯತೆಯಿದೆ.

ಈ ಕಾರು ಮಾರುಕಟ್ಟೆಯಲ್ಲಿ ಕಿಯಾ ಕಂಪನಿಯ ಕ್ಯಾರೆನ್ಸ್ ಕ್ಲಾವಿಸ್ ಇವಿ (Kia Carens Clavis EV)ಗೆ ನೇರ ಪೈಪೋಟಿ ನೀಡುವ ನಿರೀಕ್ಷೆಯಿದೆ. ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಇವಿಯಲ್ಲಿ ಲಭ್ಯವಿರುವ ಹಲವು ವೈಶಿಷ್ಟ್ಯಗಳು, ತಂತ್ರಜ್ಞಾನ ಮತ್ತು ಪವರ್‌ಟ್ರೇನ್ ಆಯ್ಕೆಗಳನ್ನು ಹೋಲುವ ವ್ಯವಸ್ಥೆಗಳು ಹ್ಯುಂಡೈ ನೀರಾದಲ್ಲಿಯೂ ಇರಬಹುದು ಎಂದು ಅಂದಾಜಿಸಲಾಗಿದೆ.

ವಿನ್ಯಾಸದಲ್ಲಿ ಏನೆಲ್ಲ ವಿಶೇಷತೆ?

ಸದ್ಯ ಬಹಿರಂಗಗೊಂಡಿರುವ ಚಿತ್ರಗಳನ್ನ ಗಮನಿಸಿದರೆ, ಹ್ಯುಂಡೈ ನೀರಾ ಕಾರಿನ ವಿನ್ಯಾಸವು ಈ ಹಿಂದೆ ಪ್ರದರ್ಶಿಸಲಾಗಿದ್ದ ಕಾನ್ಸೆಪ್ಟ್ ಮಾದರಿಯನ್ನ ಹೋಲುತ್ತದೆ. ಕಾರಿನ ಮುಂಭಾಗದ ಗ್ರಿಲ್, ಹೆಡ್‌ಲ್ಯಾಂಪ್‌ಗಳು ಮತ್ತು ಅಲಾಯ್ ವೀಲ್‌ಗಳ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳನ್ನ ಮಾಡಿರುವುದು ಕಂಡುಬಂದಿಲ್ಲ. ಕಾನ್ಸೆಪ್ಟ್ ಮಾದರಿಯಲ್ಲಿ ತೋರಿಸಲಾಗಿದ್ದ ವಿನ್ಯಾಸದ ಪ್ರಮುಖ ಅಂಶಗಳನ್ನ ಪ್ರೊಡಕ್ಷನ್ ಮಾದರಿಯಲ್ಲಿಯೂ ಮುಂದುವರಿಸಲಾಗಿದೆ. ಆದರೆ ಕಂಪನಿಯು ಇನ್ನೂ ಕಾರಿನ ಒಳಾಂಗಣದ ಚಿತ್ರಗಳನ್ನ ಬಿಡುಗಡೆ ಮಾಡಿಲ್ಲ. ಹೀಗಾಗಿ ಕ್ಯಾಬಿನ್ ವಿನ್ಯಾಸದ ಕುರಿತು ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಆದರೂ ಇದರ ಒಳಾಂಗಣವು ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಇವಿಯ ವಿನ್ಯಾಸವನ್ನ ಹೋಲುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಡ್ಯಾಶ್‌ಬೋರ್ಡ್ ವಿನ್ಯಾಸ ಹಾಗೂ ಒಳಾಂಗಣದ ಕೆಲವು ವೈಶಿಷ್ಟ್ಯಗಳು ಕೂಡ ಕಿಯಾ ಮಾದರಿಯನ್ನ ಹೋಲಬಹುದು ಎಂಬ ನಿರೀಕ್ಷೆಯಿದೆ.

360 ಡಿಗ್ರಿ ಕ್ಯಾಮೆರಾ, ಲೆವೆಲ್-2 ADAS ತಂತ್ರಜ್ಞಾನ

ವೈಶಿಷ್ಟ್ಯಗಳ ವಿಚಾರದಲ್ಲೂ ಹ್ಯುಂಡೈ ನೀರಾ ಗಮನ ಸೆಳೆಯುತ್ತಿದೆ. ಈ ಕಾರಿನಲ್ಲಿ 360 ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್-2 ADAS (Advanced Driver Assistance Systems) ಸುರಕ್ಷತಾ ತಂತ್ರಜ್ಞಾನ ಇರಲಿದೆ ಎಂಬುದನ್ನ ಹ್ಯುಂಡೈ ಖಚಿತಪಡಿಸಿದೆ. ಇದರ ಜೊತೆಗೆ ಮೂರು ವೇರಿಯಂಟ್‌ಗಳು ಹಾಗೂ ಎರಡು ವಿಭಿನ್ನ ಬ್ಯಾಟರಿ ಪ್ಯಾಕ್ ಆಯ್ಕೆಗಳಲ್ಲಿ ಈ ಕಾರನ್ನ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆಯಿದೆ. ಆದರೆ ಬ್ಯಾಟರಿ ಸಾಮರ್ಥ್ಯ, ಬೆಲೆ ಮತ್ತು ಇತರ ಸಂಪೂರ್ಣ ತಾಂತ್ರಿಕ ವಿವರಗಳನ್ನ ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.

ಇಂಡೋನೇಷ್ಯಾದ ಹೆಸರಿನಲ್ಲಿದೆ ಕಾರಿನ ವಿಶೇಷತೆ

ಈ ಹೊಸ ಎಲೆಕ್ಟ್ರಿಕ್ ಎಂಪಿವಿಗೆ ಇಂಡೋನೇಷ್ಯಾದ 'ನೀರಾ' ಪ್ರದೇಶದ ಹೆಸರನ್ನ ಇಡಲಾಗಿದೆ. ಇಂಡೋನೇಷ್ಯಾದ ಮಾರುಕಟ್ಟೆಯಲ್ಲಿ ಇದು ಹ್ಯುಂಡೈ ಕಂಪನಿಯ ಅತ್ಯಂತ ಚಿಕ್ಕ ಎಲೆಕ್ಟ್ರಿಕ್ ಕಾರಾಗಿರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಧಿಕೃತ ಬಿಡುಗಡೆಗೂ ಮುನ್ನ ಕಂಪನಿಯು ಇಂಡೋನೇಷ್ಯಾದ ವಿವಿಧ ಭಾಗಗಳಲ್ಲಿ ಈ ಕಾರಿನ ಪ್ರದರ್ಶನವನ್ನೂ ನಡೆಸುತ್ತಿದೆ.

2027ರಲ್ಲಿ ಭಾರತಕ್ಕೆ ಬರಲಿದೆಯೇ ಹ್ಯುಂಡೈ ನೀರಾ?

ಭಾರತೀಯ ಮಾರುಕಟ್ಟೆಗೆ ಸಂಬಂಧಿಸಿದಂತೆ ಹ್ಯುಂಡೈ ನೀರಾ ಮಹತ್ವದ ಮಾದರಿಯಾಗುವ ನಿರೀಕ್ಷೆಯಿದೆ. 2027ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲು ಕಂಪನಿ ಯೋಜಿಸಿರುವ ಎಲೆಕ್ಟ್ರಿಕ್ ಕಾರುಗಳ ಪಟ್ಟಿಯಲ್ಲಿ ನೀರಾ ಕೂಡ ಸೇರಿದೆ ಎಂದು ವರದಿಯಾಗಿದೆ. ಇನ್ನೊಂದು ವಿಶೇಷ ಸಂಗತಿಯೆಂದರೆ, ಭಾರತದಲ್ಲಿ ಈ ಕಾರನ್ನ ಕೇವಲ ಎಲೆಕ್ಟ್ರಿಕ್ ಮಾದರಿಯಾಗಿ ಮಾತ್ರವಲ್ಲದೆ, ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೂ ಪರಿಚಯಿಸುವ ಸಾಧ್ಯತೆಯಿದೆ. ಈ ಮೂಲಕ ಭಾರತೀಯ ಎಂಪಿವಿ ವಿಭಾಗದಲ್ಲಿ ತನ್ನ ಸ್ಥಾನವನ್ನ ಮತ್ತಷ್ಟು ಬಲಪಡಿಸಲು ಹ್ಯುಂಡೈ ಮುಂದಾಗಿದೆ.

ಭಾರತದಲ್ಲಿ ಬಿಡುಗಡೆಯಾದರೆ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga), ಟೊಯೊಟಾ ರೂಮಿಯನ್ (Toyota Rumion) ಮತ್ತು ಕಿಯಾ ಕ್ಯಾರೆನ್ಸ್ (Kia Carens) ಕಾರುಗಳಿಗೆ ಹ್ಯುಂಡೈ ನೀರಾ ಪೈಪೋಟಿ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಎಲೆಕ್ಟ್ರಿಕ್ ಮಾದರಿಯಲ್ಲಿ ಲಭ್ಯವಿದೆ. ಇದರೊಂದಿಗೆ 2027ರಲ್ಲಿ ಮಾರುತಿ ಸುಜುಕಿಯ YMC ಕೋಡ್‌ನೇಮ್ ಹೊಂದಿರುವ ಹೊಸ ಎಂಪಿವಿ ಕೂಡ ಮಾರುಕಟ್ಟೆಗೆ ಪ್ರವೇಶಿಸುವ ನಿರೀಕ್ಷೆಯಿದೆ. ಒಟ್ನಲ್ಲಿ 490 ಕಿಲೋಮೀಟರ್ ರೇಂಜ್, ಏಳು ಆಸನಗಳ ಸಾಮರ್ಥ್ಯ ಮತ್ತು ಆಧುನಿಕ ಸುರಕ್ಷತಾ ತಂತ್ರಜ್ಞಾನ ಹೊಂದಿರುವ ಹ್ಯುಂಡೈ ನೀರಾ ಕಾರಿನ ಅಧಿಕೃತ ಅನಾವರಣದತ್ತ ವಾಹನ ಮಾರುಕಟ್ಟೆಯ ಗಮನ ನೆಟ್ಟಿದೆ.

Add Zee News as a Preferred Source
TAGS:
Tech
Kannada News