• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /ಹೀರೋ ಮೊದಲ ಎಲೆಕ್ಟ್ರಿಕ್ ಬೈಕ್ ಟೆಸ್ಟಿಂಗ್ ಶುರು! ಶೀಘ್ರವೇ UBX 06 ಮಾರುಕಟ್ಟೆಗೆ ಎಂಟ್ರಿ!

ಹೀರೋ ಮೊದಲ ಎಲೆಕ್ಟ್ರಿಕ್ ಬೈಕ್ ಟೆಸ್ಟಿಂಗ್ ಶುರು! ಶೀಘ್ರವೇ UBX 06 ಮಾರುಕಟ್ಟೆಗೆ ಎಂಟ್ರಿ!

ಹೀರೋ ಮೋಟೋಕಾರ್ಪ್ ತನ್ನ ವಿಡಾ ಬ್ರ್ಯಾಂಡ್ ಅಡಿಯಲ್ಲಿ ಮೊದಲ ಎಲೆಕ್ಟ್ರಿಕ್ ಬೈಕ್ UBX 06 ಅನ್ನ ಭಾರತೀಯ ರಸ್ತೆಗಳಲ್ಲಿ ಪರೀಕ್ಷಿಸುತ್ತಿದೆ. ಸೂಪರ್‌ಮೋಟೋ ವಿನ್ಯಾಸ ಹೊಂದಿರುವ ಈ ಬೈಕ್‌ನಲ್ಲಿ ಮಿಡ್-ಡ್ರೈವ್ ಮೋಟಾರ್, ಕ್ರೂಸ್ ಕಂಟ್ರೋಲ್, TFT ಡಿಸ್‌ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನ ನಿರೀಕ್ಷಿಸಲಾಗಿದೆ. ಪ್ರಸ್ತುತ ಪರೀಕ್ಷಾ ಹಂತದಲ್ಲಿರುವ ಈ ಎಲೆಕ್ಟ್ರಿಕ್ ಬೈಕ್ 2027ರ ವೇಳೆಗೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

Written ByPuttaraj K Alur
Published: Nov 16, 2026, 19:58 IST|Updated: Nov 16, 2026, 20:18 IST
joinshare
ಹೀರೋ ಮೊದಲ ಎಲೆಕ್ಟ್ರಿಕ್ ಬೈಕ್ ಟೆಸ್ಟಿಂಗ್ ಶುರು! ಶೀಘ್ರವೇ UBX 06 ಮಾರುಕಟ್ಟೆಗೆ ಎಂಟ್ರಿ!
Image Credit: Vida UBX 06

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Vida UBX 06 Electric Motorcycle: ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಹೀರೋ ಮೋಟೋಕಾರ್ಪ್ ತನ್ನ ಎಲೆಕ್ಟ್ರಿಕ್ ವಾಹನ ಬ್ರ್ಯಾಂಡ್ 'VIDA' ಅಡಿಯಲ್ಲಿ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ 'UBX 06' ಎಲೆಕ್ಟ್ರಿಕ್ ಬೈಕ್ ಭಾರತೀಯ ರಸ್ತೆಗಳಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುತ್ತಿರುವುದು ಕಂಡುಬಂದಿದೆ. ಈಗಾಗಲೇ ಅಂತಾರಾಷ್ಟ್ರೀಯ ಆಟೋ ಶೋನಲ್ಲಿ ಪ್ರದರ್ಶನಗೊಂಡಿದ್ದ ಈ ಬೈಕ್ ಇದೀಗ ಭಾರತದ ರಸ್ತೆಗಳಲ್ಲಿ ಕಾಣಿಸಿಕೊಂಡಿರುವುದು ವಾಹನ ಪ್ರಿಯರ ಗಮನ ಸೆಳೆದಿದೆ. ಸೂಪರ್‌ಮೋಟೋ ವಿನ್ಯಾಸ, ಮಿಡ್-ಡ್ರೈವ್ ಮೋಟಾರ್ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳು ಈ ಬೈಕ್‌ನ ಪ್ರಮುಖ ಆಕರ್ಷಣೆಗಳಾಗಿವೆ.

ಭಾರತದ ರಸ್ತೆಗಳಲ್ಲಿ UBX 06 ಟೆಸ್ಟಿಂಗ್

ಹೀರೋ ಮೋಟೋಕಾರ್ಪ್‌ನ ಎಲೆಕ್ಟ್ರಿಕ್ ವಾಹನ ವಿಭಾಗವಾದ ವಿಡಾ ಇದುವರೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಇದೀಗ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ವಿಭಾಗಕ್ಕೂ ಪ್ರವೇಶಿಸಲು ಮುಂದಾಗಿದೆ. ಅದರ ಮೊದಲ ಪ್ರಯತ್ನವೇ UBX 06 ಬೈಕ್. ಇತ್ತೀಚೆಗೆ ನಡೆದ EICMA 2026 ಅಂತಾರಾಷ್ಟ್ರೀಯ ಆಟೋ ಪ್ರದರ್ಶನದಲ್ಲಿ ಈ ಬೈಕ್‌ನ ಮಾದರಿಯನ್ನ ಪ್ರದರ್ಶಿಸಲಾಗಿತ್ತು. ಇದರ ಬೆನ್ನಲ್ಲೇ ಭಾರತೀಯ ರಸ್ತೆಗಳಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುತ್ತಿರುವುದು ಕಂಡುಬಂದಿದೆ. ಪರೀಕ್ಷೆಯ ವೇಳೆ ಬೈಕ್‌ನ ಬಹುತೇಕ ಭಾಗಗಳನ್ನ ವಿಶೇಷ ಕವರ್‌ನಿಂದ ಮುಚ್ಚಲಾಗಿತ್ತು. ಆದರೂ ಅದರ ಒಟ್ಟಾರೆ ವಿನ್ಯಾಸ ಮತ್ತು ಆಕಾರವು ಆಟೋ ಶೋನಲ್ಲಿ ಪ್ರದರ್ಶಿಸಿದ ಮಾದರಿಯನ್ನ ಹೋಲುತ್ತದೆ. ಈ ಮೂಲಕ ಕಂಪನಿಯು ಬೈಕ್‌ನ ಅಭಿವೃದ್ಧಿ ಮತ್ತು ಪರೀಕ್ಷಾ ಕಾರ್ಯಗಳನ್ನ ಮುಂದುವರಿಸಿರುವುದು ಸ್ಪಷ್ಟವಾಗಿದೆ.

ಸೂಪರ್‌ಮೋಟೋ ವಿನ್ಯಾಸದಲ್ಲಿ ಹೊಸ ಲುಕ್

UBX 06 ಬೈಕ್‌ನ ಪ್ರಮುಖ ಆಕರ್ಷಣೆ ಅದರ ವಿನ್ಯಾಸ. ಸಾಮಾನ್ಯ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಿಂತ ಭಿನ್ನವಾಗಿ, ಈ ಮೋಟಾರ್‌ಸೈಕಲ್ ಸೂಪರ್‌ಮೋಟೋ ಶೈಲಿಯ ವಿನ್ಯಾಸವನ್ನ ಹೊಂದಿದೆ. ಬೈಕ್‌ನ ಮುಂಭಾಗ ಎತ್ತರವಾಗಿದ್ದು, ಸವಾರರು ನೇರವಾಗಿ ಕುಳಿತುಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಹ್ಯಾಂಡಲ್‌ಬಾರ್ ವಿನ್ಯಾಸ ಮಾಡಲಾಗಿದೆ. ಹಿಂಭಾಗವನ್ನ ಚಿಕ್ಕದಾಗಿ ಮತ್ತು ಸ್ಪೋರ್ಟಿ ಲುಕ್‌ನಲ್ಲಿ ರೂಪಿಸಲಾಗಿದೆ. ಮುಂಭಾಗದಲ್ಲಿ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್ ಹಾಗೂ ಡಿಆರ್‌ಎಲ್ ಲೈಟಿಂಗ್ ನೀಡಲಾಗಿದೆ. ಬೈಕ್‌ನ ವಿನ್ಯಾಸಕ್ಕೆ ಹೊಂದುವ ವಿಶೇಷ ಫ್ರೇಮ್‌ನಲ್ಲಿರುವ ಹೆಡ್‌ಲೈಟ್ ಗಮನ ಸೆಳೆಯುತ್ತದೆ. ಹಿಂಭಾಗದ ವಿನ್ಯಾಸವೂ ಸ್ಪೋರ್ಟಿ ಶೈಲಿಯಲ್ಲಿದೆ. ಪರೀಕ್ಷಾರ್ಥ ವಾಹನದಲ್ಲಿ ಸವಾರರ ಜೊತೆಗೆ ಮತ್ತೊಬ್ಬರು ಕುಳಿತುಕೊಂಡಿರುವುದು ಕಂಡುಬಂದಿದ್ದು, ಹಿಂಬದಿ ಆಸನದ ವಿನ್ಯಾಸದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.

ಕ್ರೂಸ್ ಕಂಟ್ರೋಲ್, TFT ಡಿಸ್‌ಪ್ಲೇ ವಿಶೇಷತೆ

ವೈಶಿಷ್ಟ್ಯಗಳ ವಿಚಾರದಲ್ಲಿಯೂ UBX 06 ಗಮನ ಸೆಳೆಯುವ ನಿರೀಕ್ಷೆಯಿದೆ. ಇದರಲ್ಲಿ ದೊಡ್ಡದಾದ ಡಿಜಿಟಲ್ TFT ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೇ ನೀಡಲಾಗಿದೆ. ಬೈಕ್‌ನ ವಿವಿಧ ಕಾರ್ಯಗಳನ್ನ ನಿಯಂತ್ರಿಸಲು ಹ್ಯಾಂಡಲ್‌ಬಾರ್‌ನಲ್ಲಿಯೇ ಸ್ವಿಚ್‌ಗಳು ಮತ್ತು ಕಂಟ್ರೋಲ್ ಬಟನ್‌ಗಳನ್ನ ಅಳವಡಿಸಲಾಗಿದೆ. ಇದರ ಮತ್ತೊಂದು ಪ್ರಮುಖ ವೈಶಿಷ್ಟ್ಯ ಕ್ರೂಸ್ ಕಂಟ್ರೋಲ್. ದೂರ ಪ್ರಯಾಣದ ವೇಳೆ ನಿರ್ದಿಷ್ಟ ವೇಗವನ್ನು ಕಾಯ್ದುಕೊಳ್ಳಲು ನೆರವಾಗುವ ಈ ಫೀಚರ್ ಬೈಕ್‌ನಲ್ಲಿ ಇರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇವುಗಳ ಜೊತೆಗೆ ಆಧುನಿಕ ಡಿಜಿಟಲ್ ವ್ಯವಸ್ಥೆಯನ್ನೂ ಬೈಕ್‌ನಲ್ಲಿ ನಿರೀಕ್ಷಿಸಲಾಗಿದೆ.

ಮಿಡ್-ಡ್ರೈವ್ ಮೋಟಾರ್, ಫಿಕ್ಸ್‌ಡ್ ಬ್ಯಾಟರಿ

UBX 06 ಬೈಕ್‌ನಲ್ಲಿ ಮಿಡ್-ಡ್ರೈವ್ ಎಲೆಕ್ಟ್ರಿಕ್ ಮೋಟಾರ್ ನೀಡಲಾಗುತ್ತದೆ. ಸಾಮಾನ್ಯವಾಗಿ ಕೆಲವು ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಕಾಣಿಸುವ ಹಬ್ ಮೋಟಾರ್ ವ್ಯವಸ್ಥೆಗಿಂತ ಇದು ವಿಭಿನ್ನವಾಗಿದೆ. ಬೈಕ್‌ನ ಮಧ್ಯಭಾಗದಲ್ಲಿ ಮೋಟಾರ್ ಅಳವಡಿಸಲಾಗಿದ್ದು, ಚೈನ್ ಡ್ರೈವ್ ಮೂಲಕ ಹಿಂಬದಿ ಚಕ್ರಕ್ಕೆ ಶಕ್ತಿ ರವಾನೆಯಾಗಲಿದೆ. ಬ್ಯಾಟರಿಯನ್ನ ಕೂಡ ಬೈಕ್‌ನ ಮಧ್ಯಭಾಗದಲ್ಲಿ ಅಳವಡಿಸುವ ನಿರೀಕ್ಷೆಯಿದೆ. ಹಾರ್ಡ್‌ವೇರ್ ವಿಭಾಗದಲ್ಲಿ ಮುಂಭಾಗದಲ್ಲಿ USD ಫೋರ್ಕ್ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ವ್ಯವಸ್ಥೆ ಇರಲಿದೆ.

ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನ ನೀಡಲಾಗಿದೆ. ಸುರಕ್ಷತೆಗಾಗಿ ABS ವ್ಯವಸ್ಥೆಯೂ ನಿರೀಕ್ಷಿತ ವೈಶಿಷ್ಟ್ಯಗಳ ಪಟ್ಟಿಯಲ್ಲಿದೆ. ಆದರೆ ಬ್ಯಾಟರಿ ಸಾಮರ್ಥ್ಯ, ಮೋಟಾರ್‌ನ ಶಕ್ತಿ, ಟಾರ್ಕ್, ಗರಿಷ್ಠ ವೇಗ ಹಾಗೂ ಒಂದು ಬಾರಿ ಚಾರ್ಜ್ ಮಾಡಿದರೆ ಕ್ರಮಿಸಬಹುದಾದ ದೂರದ ಬಗ್ಗೆ ಹೀರೋ ಮೋಟೋಕಾರ್ಪ್ ಇನ್ನೂ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.

2027ರಲ್ಲಿ ಮಾರುಕಟ್ಟೆಗೆ ಬರಲಿದೆಯೇ?

ಪ್ರಸ್ತುತ UBX 06 ಭಾರತೀಯ ರಸ್ತೆಗಳಲ್ಲಿ ಪರೀಕ್ಷಾರ್ಥ ಹಂತದಲ್ಲಿದೆ. ಕಂಪನಿಯು ಬಿಡುಗಡೆ ದಿನಾಂಕವನ್ನ ಅಧಿಕೃತವಾಗಿ ಘೋಷಿಸಿಲ್ಲ. ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ 2027ರ ಮಧ್ಯಭಾಗದಲ್ಲಿ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುವ ನಿರೀಕ್ಷೆಯಿದೆ. ಒಟ್ನಲ್ಲಿ ವಿಡಾ ಬ್ರ್ಯಾಂಡ್‌ನ ಮೊದಲ ಎಲೆಕ್ಟ್ರಿಕ್ ಬೈಕ್ ಆಗಿರುವ UBX 06 ಸೂಪರ್‌ಮೋಟೋ ವಿನ್ಯಾಸ, ಕ್ರೂಸ್ ಕಂಟ್ರೋಲ್, TFT ಡಿಸ್‌ಪ್ಲೇ ಮತ್ತು ಮಿಡ್-ಡ್ರೈವ್ ಮೋಟಾರ್‌ನಂತಹ ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆಯುತ್ತಿದೆ. ಸದ್ಯ ಪರೀಕ್ಷಾ ಹಂತದಲ್ಲಿರುವ ಈ ಬೈಕ್‌ನ ಅಧಿಕೃತ ತಾಂತ್ರಿಕ ವಿವರಗಳು ಮತ್ತು ಬಿಡುಗಡೆ ದಿನಾಂಕಕ್ಕಾಗಿ ಕಾಯಬೇಕಿದೆ.

Add Zee News as a Preferred Source
TAGS:
Tech